‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯ ಸಭೆಯಲ್ಲಿ ಉಪಸ್ಥಿತರಿದ್ದ ಪದಾಧಿಕಾರಿಗಳು

ದುರ್ಗ್ (ಛತ್ತೀಸ್‌ಗಢ) – ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ, ಗೋಮಾತೆ, ಹಿಂದೂ ಮಾತೃ-ಭಗಿನಿಯರು, ಸಂಸ್ಕೃತಿ, ದೇವಸ್ಥಾನಗಳು ಮತ್ತು ಪರಂಪರೆಗಳ ಮೇಲೆ ನಿರಂತರವಾಗಿ ಆಘಾತಗಳು ನಡೆಯುತ್ತಿವೆ. ಆದ್ದರಿಂದ ಎಲ್ಲಾ ಹಿಂದೂಗಳು ಪರಸ್ಪರ ಸಮನ್ವಯ ಸಾಧಿಸಿ, ಹಿಂದೂ ರಾಷ್ಟ್ರ ಸ್ಥಾಪನೆಯ ದಿಕ್ಕಿನಲ್ಲಿ ಒಗ್ಗಟ್ಟಿನಿಂದ ಸಾಗುವ ಅಗತ್ಯವಿದೆ. ಇದೇ ಉದ್ದೇಶಕ್ಕಾಗಿ ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯನ್ನು ಸ್ಥಾಪಿಸಲಾಗಿದೆ ಎಂದು ಸಮಿತಿಯ ರಾಷ್ಟ್ರೀಯ ಸಂಘಟಕರಾದ ಶ್ರೀ. ಸುನಿಲ್ ಘನವಟ್ ಅವರು ಮಾಹಿತಿ ನೀಡಿದರು. ದುರ್ಗ್‌ನ ಸುರಾನಾ ಕಾಲೇಜಿನ ಸಭಾಂಗಣದಲ್ಲಿ ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯ ಮಹತ್ವದ ಸಭೆ ಜರುಗಿತು. ಈ ಸಭೆಯಲ್ಲಿ ಸಮಿತಿಯ ದುರ್ಗ್-ಭಿಲಾಯಿ ಜಿಲ್ಲಾ ಸಂಯೋಜಕ ಅಡ್ವೊಕೇಟ್ ಆಶಿಶ್ ಶರ್ಮಾ, ಸರ್ವ ಸಮಾಜದ ಅಧ್ಯಕ್ಷ ಶ್ರೀ. ಮೇಘರಾಜ ಯಾದವ್, ರಾಯಪುರದ ಶ್ರೀ. ಆಶಿಶ್ ಪರಿದಾ, ದುರ್ಗ್‌ನ ಶ್ರೀ. ಪ್ರದೀಪ್ ಸಿನ್ಹಾ, ಹಾಗೂ ರಾಜನಾಂದಗಾಂವ್ ಮತ್ತು ರಾಯಪುರದ ವಿವಿಧ ಹಿಂದೂತ್ವನಿಷ್ಠ ಸಂಘಟನೆಗಳ 140ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಮಿತಿಯ ವತಿಯಿಂದ ರಾಜ್ಯಾದ್ಯಂತ ಹಿಂದೂಗಳಿಗೆ ಧರ್ಮ ಮತ್ತು ರಾಷ್ಟ್ರದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಶ್ರೀ. ಸುನಿಲ ಘನವಟ್ ಮಾತನಾಡಿ, “ಇಂದು ಜಗತ್ತಿನಲ್ಲಿ 157 ಕ್ಕೂ ಹೆಚ್ಚು ಕ್ರೈಸ್ತ ರಾಷ್ಟ್ರಗಳು, 59 ಇಸ್ಲಾಮಿಕ್ ರಾಷ್ಟ್ರಗಳು ಮತ್ತು 12 ಬೌದ್ಧ ರಾಷ್ಟ್ರಗಳಿವೆ; ಆದರೆ ಕೋಟ್ಯಂತರ ಜನಸಂಖ್ಯೆ ಇದ್ದರೂ ಹಿಂದೂಗಳಿಗೆ ಸ್ವತಂತ್ರ ರಾಷ್ಟ್ರವಿಲ್ಲದಿರುವುದು ಗಂಭೀರವಾದ ವಿಷಯವಾಗಿದೆ. ಇಂದು ನಾವು ಜಾಗೃತರಾಗಿ ಸಂಘಟಿತರಾಗದಿದ್ದರೆ, ಭವಿಷ್ಯದಲ್ಲಿ ನಮ್ಮದೇ ದೇಶದಿಂದ ಹೊರಹೋಗುವ ಪರಿಸ್ಥಿತಿ ಬರಬಹುದು. ‘ಯಾರು ಹಿಂದೂ ಹಿತಕ್ಕಾಗಿ ಕೆಲಸ ಮಾಡುತ್ತಾರೋ, ಅವರೇ ದೇಶವನ್ನು ಆಳುತ್ತಾರೆ’ ಎಂಬ ಸಂಕಲ್ಪದೊಂದಿಗೆ ಮುನ್ನಡೆಯುವ ಸಮಯ ಬಂದಿದೆ. ಚರ್ಚೆ ಮಾಡುವುದಕ್ಕಿಂತ ಈಗ ಸಾಂವಿಧಾನಿಕ ಮಾರ್ಗದ ಮೂಲಕ ನೇರ ಕೃತಿಯಲ್ಲಿ ತೊಡಗುವುದು ಅಗತ್ಯವಾಗಿದೆ” ಎಂದರು.
ಸಂಘಟನೆ ಮತ್ತು ಸಮನ್ವಯಕ್ಕೆ ಒತ್ತು
ಸರ್ವ ಸಮಾಜದ ಅಧ್ಯಕ್ಷರಾದ ಶ್ರೀ. ಮೇಘರಾಜ್ ಯಾದವ್ ಮಾತನಾಡಿ, “ಹಿಂದೂ ರಾಷ್ಟ್ರದ ಗುರಿಗಾಗಿ ಛತ್ತೀಸ್‌ಗಢದ ಎಲ್ಲಾ ಸಮಾಜಗಳು ದೃಢವಾಗಿ ಕೆಲಸ ಮಾಡುತ್ತವೆ” ಎಂದು ಹೇಳಿದರು. ಸಮಿತಿಯ ದುರ್ಗ್-ಭಿಲಾಯಿ ಸಂಯೋಜಕ ಅಡ್ವೊಕೇಟ್ ಆಶಿಶ್ ಶರ್ಮಾ ಅವರು ಸ್ಪಷ್ಟಪಡಿಸುತ್ತಾ, “ದುರ್ಗ್-ಭಿಲಾಯಿಯಿಂದ ಪ್ರಾರಂಭವಾದ ಈ ಸಮನ್ವಯದ ಚಳುವಳಿಯು ಇಡೀ ರಾಜ್ಯಕ್ಕೆ ವಿಸ್ತರಿಸಲಿದೆ. ಹಿಂದೂಗಳ ಮೇಲೆ ನಡೆಯುವ ಯಾವುದೇ ದಾಳಿಯ ವಿರುದ್ಧ ಎಲ್ಲಾ ಸಂಘಟನೆಗಳು ಒಂದಾಗಿ ಸಾಂವಿಧಾನಿಕವಾಗಿ ಹೋರಾಟ ನಡೆಸಲಿವೆ” ಎಂದರು.
ಸಭೆಯಲ್ಲಿ ಗೋರಕ್ಷಣೆಗಾಗಿ ಶ್ರಮಿಸುತ್ತಿರುವ ರಾಯಪುರದ ಶ್ರೀ. ಆಶಿಶ್ ಪರಿದಾ ಮತ್ತು ದುರ್ಗ್‌ನ ಶ್ರೀ. ಪ್ರದೀಪ್ ಸಿನ್ಹಾ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಕಮಲ ವಿಶ್ವಾಸ್ ನೆರವೇರಿಸಿದರು. ಸಭೆಯು ‘ಜೈ ಶ್ರೀರಾಮ್’ ಮತ್ತು ‘ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ’ ಎಂಬ ಘೋಷಣೆಗಳೊಂದಿಗೆ ಮುಕ್ತಾಯವಾಯಿತು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”