ಪ್ರಸಿದ್ಧ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಕೆಲಸವನ್ನು ಮಾಡುತ್ತಿರುವ ಇತರ ಪಂಥದ ನೌಕರರಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ !

ಭಾರತದ ಕೋಟ್ಯಾಂತರ ಹಿಂದೂಗಳ ಶ್ರದ್ಧಾಕೇಂದ್ರವಾಗಿರುವ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಇತರ ಪಂಥದ ನೌಕರರು ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ಭಗವಾನ ಬಾಲಾಜಿಯ ಮೇಲೆ ಶ್ರದ್ಧೆಯಿಲ್ಲದ ಕಾರಣ ಅವರಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗಬಹುದು. ಆದ್ದರಿಂದ ಅಂತಹ ನೌಕರರನ್ನು ಗುರುತಿಸಿ ಅವರನ್ನು ಕೆಲಸದಿಂದ ತೆಗೆದುಹಾಕಬೇಕು ಎಂದು ‘ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್’ ಹಲವು ಬಾರಿ ‘ತಿರುಮಲ ತಿರುಪತಿ ದೇವಸ್ಥಾನಮ್’ ಮಂಡಳಿಗೆ ಆಗ್ರಹಿಸಿದೆ; ಆದರೆ ಈ ಬಗ್ಗೆ ಇದುವರೆಗೆ ಯಾವುದೇ ವಿಶೇಷ ಕ್ರಮ ಕೈಕೊಂಡಿಲ್ಲ. ಈ ಕುರಿತು ಹಿಂದೂಗಳನ್ನು ಜಾಗೃತಗೊಳಿಸುವ ಲೇಖನ ಇಲ್ಲಿದೆ.

ಟಿಪ್ಪಣಿ : ‘ತಿರುಮಲ ತಿರುಪತಿ ದೇವಸ್ಥಾನಮ್’ ಎಂಬುದು ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ಅಥವಾ ಬಾಲಾಜಿ ದೇವಸ್ಥಾನದ ನಿರ್ವಹಣೆಯನ್ನು ನೋಡಿಕೊಳ್ಳುವ ಸ್ವತಂತ್ರ ಟ್ರಸ್ಟ್ ಮತ್ತು ಆಡಳಿತ ಮಂಡಳಿಯಾಗಿದೆ.

ತಿರುಪತಿ ಬಾಲಾಜಿ ದೇವಸ್ಥಾನ

೧. ಅನ್ಯಧರ್ಮೀಯ (ಪಂಥೀಯ) ನೌಕರರನ್ನು ತೆಗೆದುಹಾಕಲು ‘ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್’ನ ಬೇಡಿಕೆ

‘ತಿರುಮಲ ತಿರುಪತಿ ದೇವಸ್ಥಾನಮ್’ನಲ್ಲಿ ಅಂದಾಜು ಶೇ. ೨೦ ರಷ್ಟು ನೌಕರರು ಕ್ರೈಸ್ತರಿದ್ದಾರೆ ಎಂದು ಹೇಳಲಾಗಿದೆ. ಆದ್ದರಿಂದ ಅಂತಹ ನೌಕರರನ್ನು ಗುರುತಿಸಿ ಅವರನ್ನು ಸೇವೆಯಿಂದ ಮುಕ್ತಗೊಳಿಸಬೇಕು ಎಂದು ‘ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್’ ಬೇಡಿಕೆಯನ್ನು ಮಾಡಿದೆ. ಇದಕ್ಕಾಗಿ ಫೌಂಡೇಶನ್ ಕಳೆದ ೨೦ ವರ್ಷಗಳಲ್ಲಿ ದೇವಸ್ಥಾನದ ಅಧಿಕಾರಿಗಳು, ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಸಚಿವರು, ಮುಖ್ಯಮಂತ್ರಿಗಳು ಮತ್ತು ಇತರ ಸಂಬಂಧಿತ ಅಧಿಕಾರಿಗಳಿಗೆ ಅನೇಕ ಪತ್ರಗಳನ್ನು ಕಳುಹಿಸಿದೆ. ೨೦೦೭ ರಲ್ಲಿ ಫೌಂಡೇಶನ್ ಚಿಕಾಗೋದಲ್ಲಿ ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಅವರನ್ನು ಭೇಟಿ ಮಾಡಿತ್ತು. ಹಾಗೆಯೇ ೨೦೦೮ ರಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಅವರ ಉಪಸ್ಥಿತಿಯಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಪ್ರತ್ಯಕ್ಷ ಭೇಟಿ ಮಾಡಿತ್ತು. ಈ ಎಲ್ಲಾ ಸಭೆಗಳಲ್ಲಿ ಫೌಂಡೇಶನ್ ತನ್ನ ಬೇಡಿಕೆಯನ್ನು ಬಲವಾಗಿ ಮಂಡಿಸಿತ್ತು ಮತ್ತು ದೇವಸ್ಥಾನದ ಮಂಡಳಿಗೆ ಅನೇಕ ನೆನಪೋಲೆಗಳನ್ನು ಕಳುಹಿಸಿ ಈ ವಿಷಯವನ್ನು ಪದೇ ಪದೇ ನೆನಪಿಸಿತ್ತು.

೨. ತಿರುಮಲ ತಿರುಪತಿ ದೇವಸ್ಥಾನಮ್‌ನಲ್ಲಿರುವ ಕ್ರೈಸ್ತ ನೌಕರರ ಅಂಕಿ ಅಂಶಗಳನ್ನು ನೀಡಲು ಮಂಡಳಿಯ ಹಿಂದೇಟು

ಅ. ೨೩ ಡಿಸೆಂಬರ್ ೨೦೧೯ ರಂದು ಫೌಂಡೇಶನ್ ತಿರುಮಲ ತಿರುಪತಿ ದೇವಸ್ಥಾನಮ್ ಕಾರ್ಯನಿರ್ವಾಹಕ ಅಧಿಕಾರಿ ಅನಿಲ ಸಿಂಘಾಲ್ ಅವರನ್ನು ಭೇಟಿ ಮಾಡಿ, ದೇವಸ್ಥಾನದಲ್ಲಿ ಸುಮಾರು ಶೇ. ೨೦ ರಷ್ಟು ಕ್ರೈಸ್ತ ನೌಕರರು ಇರುವ ಸಾಧ್ಯತೆಯಿದೆ ಎಂದು ತಿಳಿಸಿತು. ಆ ಸಮಯದಲ್ಲಿ ಅವರು ಈ ಅಂಕಿಅಂಶದ ಬಗ್ಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ.

ಆ. ಆಗಸ್ಟ್ ೨೦೨೦ ರಲ್ಲಿ ಟೆಕ್ಸಾಸ್‌ನ (ಅಮೇರಿಕಾ) ಫ್ರಿಸ್ಕೋದಲ್ಲಿರುವ ಕಾರ್ಯಸಿದ್ಧಿ ಹನುಮಾನ್ ಮಂದಿರದಲ್ಲಿ ಫೌಂಡೇಶನ್ ಆಗಿನ ಅಧ್ಯಕ್ಷ ಎಸ್.ವಿ. ಸುಬ್ಬಾರೆಡ್ಡಿ ಅವರನ್ನು ಭೇಟಿ ಮಾಡಿ, ಮಂಡಳಿಯಲ್ಲಿ ಶೇ. ೨೦ ರಷ್ಟು ನೌಕರರು ಕ್ರೈಸ್ತರಿದ್ದಾರೆ ಎಂಬ ದೂರಿನ ಬಗ್ಗೆ ತನಿಖೆ ನಡೆಸುವಂತೆ ವಿನಂತಿಸಿತು. ಅವರೂ ಈ ಸಂಖ್ಯೆಯನ್ನು ವಿರೋಧಿಸಲಿಲ್ಲ.

ಇ. ಫೌಂಡೇಶನ್ ಆಂಧ್ರಪ್ರದೇಶದ ಪ್ರಸ್ತುತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ದೇವಸ್ಥಾನದ ಅಧ್ಯಕ್ಷ ಬಿ.ಆರ್. ನಾಯ್ಡು ಅವರಿಗೆ ಅನೇಕ ಪತ್ರಗಳನ್ನು ಕಳುಹಿಸಿ ‘ದೇವಸ್ಥಾನದಲ್ಲಿ ಎಷ್ಟು ಮಂದಿ ಕ್ರೈಸ್ತ ನೌಕರರಿದ್ದಾರೆ ?’ ಎಂಬ ಮಾಹಿತಿ ಕೇಳಿತು. ಆದರೆ ಈ ಬಗ್ಗೆ ಅವರು ಯಾವುದೇ ಕ್ರಮ ಕೈಕೊಳ್ಳಲಿಲ್ಲ ಅಥವಾ ಮೇಲೆ ತಿಳಿಸಿದ ಯಾರೂ ಕೂಡ ಶೇ. ೨೦ ರಷ್ಟು ನೌಕರರು ಕ್ರೈಸ್ತರಾಗಿದ್ದಾರೆ ಎಂಬ ವಾದವನ್ನು ತಿರಸ್ಕರಿಸಲಿಲ್ಲ.

೩. ನೂರಾರು ನೌಕರರ ಪೈಕಿ ಕೇವಲ ೫೦ ಮಂದಿ ನೌಕರರನ್ನು ಅಮಾನತುಗೊಳಿಸಿ ಕ್ರಮಕೈಕೊಂಡಿರುವ ನಾಟಕ

ದೇವಸ್ಥಾನದಲ್ಲಿ ಕೇವಲ ಹಿಂದೂಗಳೇ ಕೆಲಸ ಮಾಡಬೇಕು ಮತ್ತು ಇತರ ಧರ್ಮದ ನೌಕರರು ಸ್ವಯಂಪ್ರೇರಿತರಾಗಿ ಇತರ ಇಲಾಖೆಗಳಿಗೆ ವರ್ಗಾವಣೆಗೊಳ್ಳಬೇಕು ಎಂದು ಆಂಧ್ರಪ್ರದೇಶದ ಅಂದಿನ ಮುಖ್ಯ ಕಾರ್ಯದರ್ಶಿ ಎಲ್.ವಿ. ಸುಬ್ರಹ್ಮಣ್ಯಮ್, ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲರಾವ್ ಸಾರ್ವಜನಿಕವಾಗಿ ಕರೆ ನೀಡಿದ್ದರು. ಕಳೆದ ವರ್ಷದಲ್ಲಿ ಸುಮಾರು ೫೦ ನೌಕರರನ್ನು ಗುರುತಿಸಿ ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ. ಆದರೆ ಸಂಶಯಾಸ್ಪದ ಕ್ರೈಸ್ತ ನೌಕರರ ಸಂಖ್ಯೆಗೆ ಹೋಲಿಸಿದರೆ ಇದು ಶೇ. ೧ ಕ್ಕೂ ಕಡಿಮೆ ಎನ್ನಲಾಗಿದೆ.

೪. ದೇವಸ್ಥಾನದಲ್ಲಿ ಹಿಂದೂ ಹೆಸರಿನ ಅನೇಕ ಕ್ರೈಸ್ತ ನೌಕರರು

ದೇವಸ್ಥಾನದ ೧ ಸಾವಿರ ಅನ್ಯಧರ್ಮೀಯ ನೌಕರರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಭಗವಾನ್ ವೆಂಕಟೇಶ್ವರನ ಮೇಲೆ ಶ್ರದ್ಧೆಯಿಲ್ಲ ಹಾಗೂ ಅವರು ಸನಾತನ ಧರ್ಮವನ್ನು ಪಾಲಿಸುತ್ತಿಲ್ಲ ಎಂದು ೧೦.೭.೨೦೨೫ ರಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಬಂಡಿ ಸಂಜಯಕುಮಾರ ಆರೋಪಿಸಿದ್ದಾರೆ.ಅಂತಹ ನೌಕರರ ಬಗ್ಗೆ ತಕ್ಷಣ ತನಿಖೆ ನಡೆಸಿ ಅವರನ್ನು ಕೆಲಸದಿಂದ ತೆಗೆದುಹಾಕಬೇಕು ಮತ್ತು ಆ ಜಾಗದಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು ಎಂದು ಅವರು ಬಿ.ಆರ್. ನಾಯ್ಡು ಅವರಿಗೆ ಮನವಿ ಮಾಡಿದರು.

ಮಾಜಿ ಅಧ್ಯಕ್ಷ ಭುಮಾ ರೆಡ್ಡಿ ಅವರು ೧ ಸಾವಿರ ಅನ್ಯ ಧರ್ಮೀಯ ನೌಕರರಿದ್ದಾರೆ ಎಂಬ ವಾದವನ್ನು ಟೀಕಿಸಿದರು; ಆದರೆ ಅಲ್ಲಿ ಎಷ್ಟು ಕ್ರೈಸ್ತ ನೌಕರರಿದ್ದಾರೆ ಎಂದು ಹೇಳುವುದನ್ನು ಅವರು ತಪ್ಪಿಸಿದರು. ದೇವಸ್ಥಾನದ ಮಂಡಳಿಯ ಹಾಲಿ ಸದಸ್ಯ ಭಾನು ಪ್ರಕಾಶ ರೆಡ್ಡಿ ಅವರು ಸಚಿವರ ನಿಲುವನ್ನು ಬೆಂಬಲಿಸಿದ್ದಾರೆ. ಅನ್ಯಧರ್ಮೀಯ ನೌಕರರ ಸಂಖ್ಯೆ ೧ ಸಾವಿರಕ್ಕಿಂತ ಹೆಚ್ಚಿರಬಹುದು. ಕೆಲವು ನೌಕರರ ಹೆಸರುಗಳು ಹಿಂದೂ ಆಗಿದ್ದರೂ, ಅವರ ಮನೆಗಳಲ್ಲಿ ಇತರ ಧರ್ಮದ ಚಿಹ್ನೆಗಳು ಕಾಣಿಸುತ್ತವೆ ಎಂದು ಅವರು ಹೇಳಿದರು ಹಾಗೂ ಆ ಎಲ್ಲಾ ನೌಕರರ ಮನೆಗಳಿಗೆ ಹೋಗಿ ಪರಿಶೀಲನೆ (ಪರಿಶೀಲನಾ ಸಮೀಕ್ಷೆ) ನಡೆಸಬೇಕು ಎಂದು ಅವರು ಆಗ್ರಹಿಸಿದರು.

೫. ಕ್ರಮ ಕೈಗೊಳ್ಳದಿರಲು ರಾಜಕೀಯ ಲೆಕ್ಕಾಚಾರ

ಮಂಡಳಿಯ ಸದಸ್ಯ ಭಾನು ಪ್ರಕಾಶ ರೆಡ್ಡಿ ಅವರು ತಿಳಿಸಿರುವಂತೆ ಗುತ್ತಿಗೆ ಆಧಾರಿತ ಹೊರಗುತ್ತಿಗೆ (ಔಟಸೋರ್ಸ) ಮತ್ತು ಖಾಯಂ ಹೀಗೆ ಎಲ್ಲಾ ರೀತಿಯ ಒಟ್ಟು ಅಂದಾಜು ೨೨ ಸಾವಿರ ನೌಕರರು ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಅನೇಕರು ಮನೆಯಲ್ಲಿ ಅನ್ಯಧರ್ಮಗಳನ್ನು ಪಾಲಿಸುತ್ತಾರೆ. ಆದ್ದರಿಂದ ಅನ್ಯಧರ್ಮ ಪಾಲಿಸುವ ನೌಕರರ ಮಾಹಿತಿಗಾಗಿ ಮನೆಮನೆಗೆ ಹೋಗಿ ಸಮೀಕ್ಷೆ ನಡೆಸಬೇಕು ಎಂದು ಅವರು ಆಡಳಿತ ಮಂಡಳಿಗೆ ಸೂಚಿಸಿದ್ದಾರೆ. ೨೨ ಸಾವಿರ ನೌಕರರ ಶೇ. ೨೦ ರ ಪ್ರಕಾರ ೪ ಸಾವಿರದ ೪೦೦ ನೌಕರರಾಗುತ್ತಾರೆ. ಈ ನೌಕರರು ಭಗವಾನ ವೆಂಕಟೇಶ್ವರನ ಮೂರ್ತಿಯ ಮುಂದೆ ಅಥವಾ ಅವರ ಚಿತ್ರದ ಮುಂದೆ ಶ್ರದ್ಧೆಯ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದೂ ಹೇಳಲಾಗಿದೆ. ಈ ಅಂಕಿಅಂಶ ತಪ್ಪಾಗಿದ್ದರೆ ಸಂಬಂಧಿತ ಅಧಿಕಾರಿಗಳು ಅದನ್ನು ವಿರೋಧಿಸುತ್ತಿದ್ದರು. ಅಧಿಕಾರಿಗಳಿಗೆ ನೈಜ ಸಂಖ್ಯೆ ತಿಳಿದಿದ್ದರೂ ಅದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ ಎಂದು ತೋರುತ್ತದೆ. ದೇವಸ್ಥಾನವು ಮರೆಮಾಚಿರುವ ಕ್ರೈಸ್ತ ನೌಕರರನ್ನು ಗುರುತಿಸಲು ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ. ಪ್ರತಿಯೊಬ್ಬ ಮುಖ್ಯಮಂತ್ರಿ, ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗೆ ಸಹಸ್ರಾರು ಕ್ರೈಸ್ತ ನೌಕರರು ಕೆಲಸ ಮಾಡುತ್ತಿರುವ ಮಾಹಿತಿ ಇದೆ. ಆದರೆ ರಾಜಕೀಯ ಕಾರಣಗಳಿಂದಾಗಿ ಆಳವಾದ ತನಿಖೆ ನಡೆಯುತ್ತಿಲ್ಲ ಎಂಬುದು ಕಂಡುಬರುತ್ತದೆ.

೬. ತಿರುಪತಿ ಬಾಲಾಜಿ ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ಹಿಂದೂಗಳ ಸಂಘಟನೆ ಅಗತ್ಯ

ದಶಕಗಳಿಂದ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಕಾರಣ ತಿರುಪತಿ ಬಾಲಾಜಿ ಮಂದಿರದ ಪಾವಿತ್ರ್ಯ ಅಪಾಯಕ್ಕೆ ಸಿಲುಕುತ್ತಿದೆ. ದೇವಸ್ಥಾನದಲ್ಲಿ ಕೇವಲ ಹಿಂದೂಗಳೇ ಕೆಲಸ ಮಾಡಬೇಕು ಎಂದು ಅಧ್ಯಕ್ಷರು ಹೇಳುತ್ತಾರೆ. ಹಾಗಿದ್ದರೆ ನೌಕರರ ಧರ್ಮವನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಏಕೆ ಜಾರಿಗೆ ತರುತ್ತಿಲ್ಲ ? ಹಾಗೂ ಅನ್ಯಧರ್ಮೀಯರ  ಸಂಖ್ಯೆಯನ್ನು ಏಕೆ ಬಹಿರಂಗಪಡಿಸುತ್ತಿಲ್ಲ ? ಎಂಬ ಪ್ರಶ್ನೆಗಳು ಏಳುತ್ತಿವೆ. ದೇವಸ್ಥಾನದಲ್ಲಿರುವ ಭಗವಾನ ವೆಂಕಟೇಶ್ವರನ ಪಾವಿತ್ರ್ಯಕ್ಕಿಂತಲೂ ಅಲ್ಲಿ ಅಡಗಿರುವ ಕ್ರೈಸ್ತ ನೌಕರರ ರಕ್ಷಣೆ ಹೆಚ್ಚು ಮುಖ್ಯವೇ ? ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ.

– ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್, ಆಂಧ್ರಪ್ರದೇಶ (೨೦.೩.೨೦೨೬)