ಆಭರಣಗಳನ್ನು ಉಪಯೋಗಿಸುವ ಮಹತ್ವ

ಹಬ್ಬ ಮತ್ತು ಧಾರ್ಮಿಕ ವಿಧಿ ಮತ್ತು ಶುಭದಿನಗಳ ಸಮಯದಲ್ಲಿ ಹೊಸ ಆಭರಣಗಳನ್ನು ಧರಿಸುವುದರ ಮಹತ್ವ

ಕೆಲವೊಮ್ಮೆ ಹಬ್ಬ, ಧಾರ್ಮಿಕ ವಿಧಿ ಮತ್ತು ಶುಭದಿನಗಳ ಸಮಯದಲ್ಲಿ ದೇವತೆಗಳು ಸೂಕ್ಷ್ಮದಲ್ಲಿ ಪೃಥ್ವಿಗೆÉ ಬಂದಿರುತ್ತಾರೆ. ಇಂತಹ ದಿನ ವ್ಯಕ್ತಿಯು ವಸ್ತ್ರಾಭರಣಗಳಿಂದ ಸುಶೋಭಿತನಾದರೆ, ಅವನು ಒಂದು ರೀತಿಯಲ್ಲಿ ದೇವತೆಗಳ ಸ್ವಾಗತವನ್ನು ಮಾಡಿದಂತೆಯೇ ಆಗುತ್ತದೆ. ಇದರಿಂದ ದೇವತೆಗಳು ಪ್ರಸನ್ನರಾಗಿ ಆಶೀರ್ವಾದವನ್ನು ಕೊಡುತ್ತಾರೆ, ಅಲ್ಲದೇ ವ್ಯಕ್ತಿಗೆ ದೇವತೆ ಗಳ ಲಹರಿಗಳನ್ನು ಗ್ರಹಿಸಲು ಸುಲಭವಾಗುತ್ತದೆ

ಆರತಿ ಬೆಳಗುವಾಗ ಆಭರಣ ಉಪಯೋಗಿಸುವುದರ ಮಹತ್ವ

ಚಿನ್ನದ ಅಥವಾ ಬೆಳ್ಳಿಯ ನಾಣ್ಯಗಳನ್ನು ಅಥವಾ ಅಂತಹ ಲೋಹಗಳ ಪಟ್ಟಿಗಳನ್ನು ಉಪಯೋಗಿಸುವುದರಿಂದ ಅವುಗಳ ಚಪ್ಪಟೆ ಭಾಗದಿಂದ ಪ್ರಕ್ಷೇಪಿತವಾಗುವ ಲಹರಿಗಳು ಸತ್ತ್ವಗುಣಕ್ಕೆ (ನಿರ್ಗುಣಕ್ಕೆ) ಸಂಬಂಧಿಸಿರುತ್ತವೆ, ಇದಕ್ಕೆ ವಿರುದ್ಧವಾಗಿ ಈ ಲೋಹಗಳ ಆಭರಣಗಳನ್ನು ಉಪಯೋಗಿಸಿದರೆ ಅವುಗಳ ಮೇಲಿರುವ ವಿನ್ಯಾಸಗಳಿಂದ ರಜೋಗುಣೀ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ರಜೋಗುಣಿ ಲಹರಿ ಗಳು ಸತ್ತ್ವಗುಣಿ ಲಹರಿಗಳಿಗಿಂತ ಕನಿಷ್ಠ ಸ್ತರದವುಗಳಾಗಿರುವುದರಿಂದ ಸಾಮಾನ್ಯ ಜೀವಗಳಿಗೆ ಗ್ರಹಿಸಲು ಸಾಧ್ಯವಾಗುತ್ತದೆ. ಇದರಿಂದ ಆಯಾ ಸ್ತರದಲ್ಲಿ ಆಯಾ ಲಹರಿಗಳಿಂದ ಲಾಭವನ್ನು ಪಡೆದುಕೊಳ್ಳಲು ಸುಲಭವಾಗುತ್ತದೆ. ಆದುದರಿಂದ ಆರತಿಯನ್ನು ಬೆಳಗುವಾಗ ಆದಷ್ಟು ಆಭರಣಗಳನ್ನು ಉಪಯೋಗಿಸಬೇಕು.

ಆಭರಣಗಳಿಂದ ಚಕ್ರಗಳ ಶುದ್ಧಿ ಮತ್ತು ಚಕ್ರಗಳ ಜಾಗೃತಿಯಾಗುತ್ತದೆ

ಆಭರಣಗಳು ಶರೀರದ ವಿಶಿಷ್ಟ ಅವಯವಗಳಿಗೆ ಸಂಬಂಧಿಸಿರುತ್ತವೆ. ಪ್ರತಿಯೊಂದು ಅವಯವವು ಶರೀರದಲ್ಲಿನ ವಿಶಿಷ್ಟ ಚಕ್ರಕ್ಕೆ (ಉದಾ. ಅನಾಹತಚಕ್ರ, ಆಜ್ಞಾಚಕ್ರ) ಸಂಬಂಧಿಸಿರುತ್ತದೆ. ಆಯಾ ಅವಯವಗಳ ಮೇಲೆ ಆಭರಣಗಳನ್ನು ಧರಿಸಿದರೆ ಆಭರಣಗಳ ಮಾಧ್ಯಮದಿಂದ ಕಾರ್ಯನಿರತವಾಗುವ ಈಶ್ವರೀ ಚೈತನ್ಯವು ಆಯಾ ಅವಯವಗಳಿಗೆ ಸಂಬಂಧಿಸಿದ ಚಕ್ರಗಳಿಗೆ ತಲುಪುತ್ತದೆ. ಇದರಿಂದ ವ್ಯಕ್ತಿಯ ಚಕ್ರಗಳ ಶುದ್ಧಿಯಾಗಿ ಕೆಟ್ಟ ಶಕ್ತಿಗಳ ತೊಂದರೆಯಿರುವ ವ್ಯಕ್ತಿಗಳ ತೊಂದರೆಯು ಕಡಿಮೆಯಾಗುತ್ತದೆ. ಕೆಟ್ಟ ಶಕ್ತಿಗಳ ತೊಂದರೆಯಿಲ್ಲದ ವ್ಯಕ್ತಿಗಳ ಚಕ್ರಗಳು ಜಾಗೃತವಾಗಿ ಅವರಿಗೆ ಆಯಾ ಚಕ್ರಗಳಿಗೆ ಸಂಬಂಧಿಸಿದ ಅನುಭೂತಿಗಳು ಬರುವ ಸಾಧ್ಯತೆಯಿರುತ್ತದೆ. ಉದಾ. ಅನಾಹತಚಕ್ರವು ಜಾಗೃತವಾದರೆ ಈಶ್ವರನ ಬಗ್ಗೆ ಭಾವಜಾಗೃತಿಯಾಗುತ್ತದೆ.

ಆಭರಣಗಳಿಂದ ಬಿಂದುಒತ್ತಡ ಪದ್ಧತಿಯ ಉಪಚಾರವಾಗುತ್ತದೆ

ಶರೀರದಲ್ಲಿನ ವಿಶಿಷ್ಟ ಅವಯವಗಳಿಗೆ ಸಂಬಂಧಿಸಿದ ವಿಶಿಷ್ಟ ಬಿಂದುಗಳ ಮೇಲೆ ಒತ್ತಡವನ್ನು ನಿರ್ಮಿಸಿ ಶರೀರದಲ್ಲಿ ಹರಿಯುವ ಚೈತನ್ಯಶಕ್ತಿಯ ಪ್ರವಾಹದಲ್ಲಿನ ಕಪ್ಪು ಶಕ್ತಿಯ ಅಡಚಣೆಗಳನ್ನು ದೂರಗೊಳಿಸುವುದಕ್ಕೆ ‘ಬಿಂದುಒತ್ತಡ’ ಪದ್ಧತಿ ಎನ್ನುತ್ತಾರೆ. ‘ಬಿಂದುಒತ್ತಡ ಪದ್ಧತಿ’ಯ ಉಪಾಯದಿಂದ ವ್ಯಕ್ತಿಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ದೂರವಾಗುತ್ತವೆ.

(ಈ ವಿಷಯದ ಮಾಹಿತಿಯನ್ನು ‘ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ‘ಬಿಂದುಒತ್ತಡ’ (ಪ್ರಾಥಮಿಕ ಪರಿಚಯ), ‘ಸಾಮಾನ್ಯ ರೋಗಗಳಿಗೆ ಬಿಂದುಒತ್ತಡ ಉಪಚಾರ’ ಈ ಗ್ರಂಥಗಳಲ್ಲಿ ಕೊಡಲಾಗಿದೆ.)