ಭೂಮಿಯ ನಿರ್ಮಿತಿಯ ಶೋಧವು ಶೀಘ್ರದಲ್ಲೇ ನಡೆಯುವ ಸಾಧ್ಯತೆ ! – ‘ಜೆ.ಡಬ್ಲ್ಯೂ.ಎಸ್.ಟಿ.’ ದೂರದರ್ಶಕದ ಐತಿಹಾಸಿಕ ಸಂಶೋಧನೆ

ದೂರದರ್ಶಕದಿಂದ ಶತಕೋಟಿ ವರ್ಷಗಳ ಹಿಂದಿನ ‘ಪಾಪ್ಯುಲೇಶನ್ ೩’ ನಕ್ಷತ್ರಗಳ ರಹಸ್ಯ ಬಯಲು

ನ್ಯೂಯಾರ್ಕ್ (ಅಮೆರಿಕಾ) – ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಮಹತ್ವಾಕಾಂಕ್ಷೆಯ ‘ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ ದೂರದರ್ಶಕಕ್ಕೆ ವಿಶ್ವದ ಅತ್ಯಂತ ಹಳೆಯ ನಕ್ಷತ್ರಗಳು ಪತ್ತೆಯಾಗಿವೆ ಎಂದು ‘ನಾಸಾ’ ಅಂದಾಜಿಸಿದೆ. ಹಲವಾರು ಸಂಶೋಧನಾ ತಂಡಗಳಿಂದ ಲಭ್ಯವಾದ ಸ್ವತಂತ್ರ ಪುರಾವೆಗಳ ಆಧಾರದ ಮೇಲೆ, ಭೂಮಿಯ ನಿರ್ಮಿತಿಯ ಸತ್ಯವನ್ನು ನಾವು ಶೀಘ್ರದಲ್ಲೇ ತಲುಪಲಿದ್ದೇವೆ ಎಂಬ ಭರವಸೆಯನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಈ ಮಾಹಿತಿಯನ್ನು ವಿಶ್ವವಿಖ್ಯಾತ ‘ಸ್ಪೇಸ್ ಡೈಲಿ’ ಜಾಲತಾಣದ ಲೇಖಕ ಮಾರ್ಕೊ ಮಿಲಾನೆಸಿ ಅವರು ನೀಡಿದ್ದಾರೆ.

‘ಜೆ.ಡಬ್ಲ್ಯೂ.ಎಸ್.ಟಿ.’ ದೂರದರ್ಶಕ ಎಂದರೇನು?

ಜೆ.ಡಬ್ಲ್ಯೂ.ಎಸ್.ಟಿ. ಎಂದರೆ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್. ಇದು ‘ನಾಸಾ’ ಸಂಸ್ಥೆಯ ದೂರದರ್ಶಕವಾಗಿದ್ದು, ಭೂಮಿಯಿಂದ ಲಕ್ಷಾಂತರ ಕಿಲೋಮೀಟರ್ ದೂರದಲ್ಲಿದೆ. ಇದು ವಿಶ್ವದ ಆರಂಭದ ಕುರಿತು ಶೋಧ ನಡೆಸುತ್ತಿದೆ. ೨೦೨೧ ರಲ್ಲಿ ಈ ದೂರದರ್ಶಕವನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿತ್ತು.

‘ಪಾಪ್ಯುಲೇಶನ್ ೩’ ಎಂಬ ವಿಶ್ವದ ಆರಂಭದ ನಕ್ಷತ್ರಗಳ ರಹಸ್ಯವನ್ನು ತಿಳಿದುಕೊಳ್ಳಿ!

೧. ‘ಪಾಪ್ಯುಲೇಶನ್ ೩’ ಎಂದು ಕರೆಯಲ್ಪಡುವ ನಕ್ಷತ್ರಗಳು ವಿಶ್ವದ ಆರಂಭದ ನಕ್ಷತ್ರಗಳಾಗಿವೆ ಎಂದು ಖಗೋಳ ಭೌತವಿಜ್ಞಾನಿಗಳು (‘ಆಸ್ಟ್ರೋಫಿಸಿಸಿಸ್ಟ್’) ಒಪ್ಪಿಕೊಂಡಿದ್ದಾರೆ.

೨. ಕಳೆದ ಹಲವು ದಶಕಗಳ ಪ್ರಮಾಣಿತ ವಿಶ್ವವಿಜ್ಞಾನ ಸಿದ್ಧಾಂತದ ಪ್ರಕಾರ, ಮೊದಲ ನಕ್ಷತ್ರಗಳು ಬಹುತೇಕ ಶುದ್ಧ ಹೈಡ್ರೋಜನ್ ಮತ್ತು ಹೀಲಿಯಂ ಮೂಲಧಾತುಗಳಿಂದ ಕೂಡಿದ ಮೋಡಗಳಿಂದ ಒಟ್ಟಾಗಿ ರೂಪುಗೊಂಡಿವೆ ಎಂದು ನಂಬಲಾಗಿತ್ತು. ಇಲ್ಲಿಯವರೆಗೆ ಇದು ಕೇವಲ ಒಂದು ಸಿದ್ಧಾಂತವಾಗಿತ್ತು.

೩. ವಿಶ್ವದ ಆರಂಭವು ಯಾವ ಸ್ಫೋಟದಿಂದ ಪ್ರಾರಂಭವಾಯಿತೋ, ಅದನ್ನು ‘ಬಿಗ್ ಬ್ಯಾಂಗ್’ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಹೈಡ್ರೋಜನ್ ಮತ್ತು ಹೀಲಿಯಂ ಮಾತ್ರ ಅಸ್ತಿತ್ವದಲ್ಲಿದ್ದ ಮೂಲಧಾತುಗಳಾಗಿದ್ದವು. ಈ ‘ಪಾಪ್ಯುಲೇಶನ್ ೩’ ನಕ್ಷತ್ರಗಳು ಅತಿಯಾದ ಉಷ್ಣತೆಯಿಂದ ಉರಿದು ಕೇವಲ ಕೆಲವು ಮಿಲಿಯನ್ ವರ್ಷಗಳಲ್ಲಿ ನಾಶವಾದವು. ಅವುಗಳ ಸ್ಫೋಟಕ ಅಂತ್ಯದ ಮೂಲಕ ಅವು ವಿಶ್ವದಲ್ಲಿ ಭಾರವಾದ ಮೂಲಧಾತುಗಳನ್ನು ಹರಡಿದವು.

೪. ಆದಾಗ್ಯೂ, ವಿಶ್ವದ ಆರಂಭದ ಈ ನಕ್ಷತ್ರಗಳು ಹೊಳೆಯುತ್ತಿರುವುದನ್ನು ನೋಡುವುದು ಇಲ್ಲಿಯವರೆಗೆ ಅಸಾಧ್ಯವಾಗಿತ್ತು. ಈಗ ‘ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ ಮೂಲಕ ಇದು ಸಾಧ್ಯವಾಗಿದೆ. ಈ ನಕ್ಷತ್ರಗಳು ಶತಕೋಟಿ ಪ್ರಕಾಶವರ್ಷಗಳಷ್ಟು ದೂರದಲ್ಲಿವೆ. ಇದರರ್ಥ, ಈ ದೂರದರ್ಶಕವು ಸೆರೆಹಿಡಿದ ನಕ್ಷತ್ರಗಳ ಚಿತ್ರಗಳು ಶತಕೋಟಿ ವರ್ಷಗಳ ಹಿಂದೆ ಅವುಗಳಿಂದ ಹೊರಬಂದ ಬೆಳಕನ್ನು ತೋರಿಸುತ್ತವೆ, ಅಂದರೆ ವಿಶ್ವದ ಆರಂಭದ ಕಾಲದ ವಾತಾವರಣವನ್ನು ಪ್ರತಿಬಿಂಬಿಸುತ್ತವೆ.

ಈ ಅತಿ ಪುರಾತನ ನಕ್ಷತ್ರಗಳು ದೂರದರ್ಶಕದಲ್ಲಿ ಸೆರೆಯಾಗಿದ್ದು ಹೇಗೆ?

ಈ ಹೊಸ ಪುರಾವೆಯು ‘ಜಿಎನ್-ಜೆಡ್ ೧೧’ ಎಂಬ ಗ್ಯಾಲಕ್ಸಿಯ ಸಮೀಪವಿರುವ ಒಂದು ಸಣ್ಣ ವಸ್ತುವಿನ ವೀಕ್ಷಣೆಯಿಂದ ಹೊರಬಂದಿದೆ. ಈ ಗೋಚರ ನಕ್ಷತ್ರಪುಂಜವು ವಿಶ್ವದ ಅತ್ಯಂತ ದೂರದ ನಕ್ಷತ್ರಗಳಲ್ಲಿ ಒಂದಾಗಿದೆ. ಸಂಶೋಧನಾ ತಂಡಗಳು ಆ ವಸ್ತುವಿನಿಂದ ಬರುತ್ತಿರುವ ಅಸ್ಪಷ್ಟ ಉತ್ಸರ್ಜನ ರೇಖೆಗಳನ್ನು (ಹೊರಸೂಸುವಿಕೆ ರೇಖೆಗಳನ್ನು?) ಪತ್ತೆಹಚ್ಚಿವೆ. ದೂರದರ್ಶಕದಲ್ಲಿನ ‘ಇಂಟಿಗ್ರಲ್ ಫೀಲ್ಡ್ ಯೂನಿಟ್ ಸ್ಪೆಕ್ಟ್ರೋಗ್ರಾಫ್’ ಬಳಸಿ ನಡೆಸಿದ ವೀಕ್ಷಣೆಗಳು ಆ ರೇಖೆಗಳನ್ನು ಎರಡು ವಿಭಿನ್ನ ಘಟಕಗಳಾಗಿ ವಿಂಗಡಿಸಿವೆ. ಅದರಲ್ಲಿ ಕೇವಲ ಹೈಡ್ರೋಜನ್ ಮತ್ತು ಹೀಲಿಯಂ ಮಾತ್ರ ಇರುವುದು ಕಂಡುಬಂದಿದೆ. ಯಾವುದೇ ಭಾರವಾದ ಮೂಲಧಾತುಗಳು ಅಲ್ಲಿ ಕಂಡುಬಂದಿಲ್ಲ.

ಲೋಹಗಳ (ಭಾರವಾದ ಮೂಲಧಾತುಗಳ) ಈ ಅನುಪಸ್ಥಿತಿಯೇ ಅತ್ಯಂತ ಪ್ರಮುಖ ಅಂಶವಾಗಿದೆ. ಮೊದಲ ತಲೆಮಾರಿನ ನಂತರದ ಪ್ರತಿ ತಲೆಮಾರಿನ ನಕ್ಷತ್ರಗಳು ಹಿಂದಿನ ನಕ್ಷತ್ರಗಳ ಸ್ಫೋಟದಲ್ಲಿ ತಯಾರಾದ ಭಾರವಾದ ಮೂಲಧಾತುಗಳನ್ನು ತಮ್ಮೊಳಗೆ ಸೇರಿಸಿಕೊಂಡಿವೆ. ಅಂತಹ ನಕ್ಷತ್ರಗಳನ್ನು (ಪಾಪ್ಯುಲೇಶನ್ ೩ ನಕ್ಷತ್ರಗಳು) ಮಾನವನು ಮೊದಲ ಬಾರಿಗೆ ನೋಡಲು ಸಾಧ್ಯವಾಗಿದೆ.

ಈ ಫಲಿತಾಂಶವು ಕೇವಲ ಒಂದು ತಂಡದ ಪ್ರತಿಪಾದನೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ; ಏಕೆಂದರೆ ಇದಕ್ಕೆ ಎರಡನೇ ಸಂಶೋಧನಾ ತಂಡದಿಂದಲೂ ಸ್ವತಂತ್ರ ಪುರಾವೆ ಲಭಿಸಿದೆ. ಒಂದು ತಂಡವು ಹೀಲಿಯಂ ಸಂಕೇತಗಳನ್ನು ಪತ್ತೆಹಚ್ಚಿ ಅದರ ಘಟಕಗಳನ್ನು ಪ್ರತ್ಯೇಕಿಸಿದರೆ, ಮತ್ತೊಂದು ತಂಡವು ಅದೇ ಬಾಹ್ಯಾಕಾಶ ಸ್ಥಾನದಿಂದ ಸ್ವತಂತ್ರವಾಗಿ ಹೈಡ್ರೋಜನ್ ಉತ್ಸರ್ಜನ ರೇಖೆಗಳನ್ನು (ಹೊರಸೂಸುವಿಕೆ ರೇಖೆಗಳನ್ನು?) ಗುರುತಿಸಿದೆ.

ವಿಭಿನ್ನ ವಿಶ್ಲೇಷಣಾತ್ಮಕ ಪದ್ಧತಿಗಳನ್ನು ಬಳಸುವ ಎರಡು ಅಧ್ಯಯನಗಳು ಆಕಾಶದ ಅದೇ ಸಣ್ಣ ಭಾಗದ ಮೇಲೆ ಗಮನ ಹರಿಸಿ ಅಂತಹದ್ದೇ ಲೋಹರಹಿತ ಸಂಕೇತಗಳನ್ನು ಪತ್ತೆಹಚ್ಚಿವೆ. ‘ಪಾಪ್ಯುಲೇಶನ್ ೩’ ನಕ್ಷತ್ರಗಳು ಮೂಲತಃ ಅಸ್ತಿತ್ವದಲ್ಲಿದ್ದವು ಎಂಬುದಕ್ಕೆ ಇದುವರೆಗೆ ಲಭ್ಯವಿರುವ ಅತ್ಯಂತ ಸ್ಪಷ್ಟ ಪುರಾವೆಯಾಗಿದೆ. ಶತಕೋಟಿ ಪ್ರಕಾಶವರ್ಷಗಳಷ್ಟು ದೂರದಲ್ಲಿರುವ ವಸ್ತುಗಳಿಂದ ಬರುವ ಅಸ್ಪಷ್ಟ ಉತ್ಸರ್ಜನ ರೇಖೆಗಳನ್ನು ವಿಶ್ಲೇಷಿಸಿ ಸ್ವತಂತ್ರ ತೀರ್ಮಾನಗಳು ಒಂದೇ ದಿಕ್ಕಿನತ್ತ ಬೆರಳು ತೋರಿಸುತ್ತಿರುವುದು ಐತಿಹಾಸಿಕವಾಗಿದೆ. ವಿಶ್ವದ ವಯಸ್ಸು ಕೇವಲ ಕೆಲವು ಲಕ್ಷ ವರ್ಷಗಳಿದ್ದಾಗಿನ ಘಟನೆಗಳನ್ನು ಇಂದು ಆ ದೂರದರ್ಶಕವು ನೋಡಲು ಸಾಧ್ಯವಾಗಿದೆ.