ಶೇ. ೬೦ ರಷ್ಟು ವಾರಕರಿಗಳು ‘ಮತಾಂಧರು’ ಎಂಬ ವಿಚಿತ್ರ ಶೋಧನೆ!

ಮುಂಬಯಿ – ರಾಜಕಾರಣದಲ್ಲಿ ಯಾವಾಗಲೂ ತಮಗೆ ಅನುಕೂಲಕರ ನಿಲುವನ್ನು ತೆಗೆದುಕೊಳ್ಳುವ ಶರದ ಪವಾರ ಬಣದ ಅಧ್ಯಕ್ಷ ಶರದ ಪವಾರ ಅವರು ಈಗ ವಾರಕರಿ ಸಂಪ್ರದಾಯದ ಮೇಲೆ ಕೆಸರೆರಚಾಟ ನಡೆಸಿದ್ದಾರೆ. ಮಹಿಳಾ ಸರಕಾರಿ ಅಧಿಕಾರಿಯೊಬ್ಬರ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಬರೆದ ಲೇಖನದಲ್ಲಿ ಅವರು, ವಾರಕರಿ ಸಂಪ್ರದಾಯದಲ್ಲಿ ‘ಪ್ರತಿಗಾಮಿ’ ವಿಚಾರಗಳು ನುಸುಳಿವೆ ಎಂದು ಹೇಳಿಕೆ ನೀಡಿದ್ದಾರೆ. ಈ ಸಂಪ್ರದಾಯದ ಶೇ. ೬೦ ರಷ್ಟು ಜನರ ಮಂಡನೆಯು ‘ಮತಾಂಧ ಶಕ್ತಿ’ಗಳಿಗೆ (ಇಲ್ಲಿ ಅವರಿಗೆ ಹಿಂದುತ್ವನಿಷ್ಠರು ಎಂದು ಅರ್ಥವಿದೆ) ಬಲ ನೀಡುವಂತಿದೆ ಎಂಬ ಜಾತಿವಾದಿ ಹೇಳಿಕೆಗಳನ್ನು ನೀಡುವ ಮೂಲಕ ಅವರು ವಾರಕರಿ ಪರಂಪರೆಯನ್ನು ಅಪಮಾನಿಸಲು ಪ್ರಯತ್ನಿಸಿದ್ದಾರೆ. ‘ಸಮಾನತೆ ಮತ್ತು ಪ್ರಬೋಧನೆಯ ಸಂದೇಶ ನೀಡುವ ವಾರಕರಿ ಚಳವಳಿಯಲ್ಲಿ ಇಂತಹ ವಿಚಾರಗಳು ಬೆಳೆಯುವುದು ಚಿಂತಾಜನಕ ವಿಷಯವಾಗಿದೆ’ ಎಂದು ಹೇಳಲೂ ಅವರು ಮರೆತಿಲ್ಲ. (ಪವಾರ ಅವರಿಗೆ ಬಹುಶಃ ‘ಪ್ರಗತಿಪರ’ ಕೀರ್ತನಕಾರರು ಮತ್ತು ‘ರಾಜಕೀಯ’ ಪ್ರವಚನಕಾರರು ಬೇಕಿರಬಹುದು. ಅವರು ವಾರಕರಿ ಸಂಪ್ರದಾಯದ ಮೇಲೆ ಮಾಡಿರುವ ಟೀಕೆಯು ಕೇವಲ ವೈಚಾರಿಕವಾಗಿರದೆ ರಾಜಕೀಯ ಪ್ರೇರಿತವಾಗಿದೆ. ಶತಮಾನಗಳಿಂದಲೂ ‘ಭೇದಾಭೇದ ಭ್ರಮ ಅಮಂಗಲ’ ಎಂದು ಹೇಳುತ್ತಾ ಸಮಾಜವನ್ನು ಒಗ್ಗೂಡಿಸಿದ ವಾರಕರಿ ಸಂಪ್ರದಾಯವನ್ನು ‘ಪ್ರಗತಿಪರ’ ಎಂದು ಕರೆಯುವ ಧೈರ್ಯ ಪವಾರ ಅವರಿಗೆ ಹೇಗೆ ಬಂತು? – ಸಂಪಾದಕರು)
🚨 Attack on Warkari Sampraday🚨
“‘Regressionist’ thoughts have infiltrated the Warkari Sampraday!” – Sharad Pawar
❗ Shockingly, claims are being made that 60% of Warkaris are ‘bigoted’
🚩 Hindus must unite to protect the sanctity of the Warkari Sampraday and resist political… pic.twitter.com/5eIw2gN2j7
— Sanatan Prabhat (@SanatanPrabhat) April 11, 2026
ಪ್ರಗತಿಪರ ವಿಚಾರಗಳಿಗೆ ಪೂರಕ ಮಂಡನೆ ಮಾಡುವ ೪೦ ಕೀರ್ತನಕಾರರನ್ನು ಗುರುತಿಸಲಾಗಿದ್ದು, ‘ಇಂತಹ ‘ಪ್ರಗತಿಪರ’ ವಿಚಾರಗಳ ಕೀರ್ತನಕಾರರ ಸಂಖ್ಯೆ ಹೆಚ್ಚಾಗುವುದು ಅಗತ್ಯವಾಗಿದೆ’ ಎಂದು ಅವರು ಹೇಳಿದ್ದಾರೆ. ‘ವಾರಕರಿ ಚಳವಳಿಯಲ್ಲಿ ಮಹಿಳೆಯರ ಅಭಾವವಿದೆ. ಪ್ರಬೋಧನೆಯ ಈ ಪ್ರವಾಹದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಾಗಿ ಕಾಣುತ್ತಿಲ್ಲ ಎಂಬುದು ದುರದೃಷ್ಟಕರ. ಸಮಾಜದ ಎಲ್ಲಾ ಘಟಕಗಳ ಸಮತೋಲಿತ ಸಹಭಾಗಿತ್ವ ಅಗತ್ಯ’ ಎಂದೂ ಅವರು ಉಲ್ಲೇಖಿಸಿದ್ದಾರೆ. (ವಾರಕರಿ ಸಂಪ್ರದಾಯಕ್ಕೆ ಸ್ತ್ರೀ ಸಂತರ ದೊಡ್ಡ ಪರಂಪರೆಯೇ ಇದೆ. ‘ವಾರಕರಿ ಸಂಪ್ರದಾಯದಲ್ಲಿ ಮಹಿಳೆಯರ ಸಹಭಾಗಿತ್ವ ಇಲ್ಲ’ ಎನ್ನುವುದು ಉದ್ದೇಶಪೂರ್ವಕವಾಗಿ ಮಾಡಿದ ದಾರಿ ತಪ್ಪಿಸುವ ಹೇಳಿಕೆಯಾಗಿದೆ! – ಸಂಪಾದಕರು)
|

ಮುಂಬಯಿ – ಇಫ್ತಾರ್ ಕೂಟಗಳಲ್ಲಿ ಭಾಗವಹಿಸುವಾಗ ಸಂಸದ ಶರದ ಪವಾರ ಅವರಿಗೆ ಮತಾಂಧತೆ ಕಾಣಿಸುವುದಿಲ್ಲ; ಆದರೆ ‘ರಾಮ ಕೃಷ್ಣ ಹರಿ’ ಎಂದು ನಾಮಸ್ಮರಣೆ ಮಾಡುವ ವಾರಕರಿಗಳಲ್ಲಿ ಅವರಿಗೆ ಮತಾಂಧತೆ ಏಕೆ ಕಾಣಿಸುತ್ತಿದೆ? ಹಿಂದೂ ಧರ್ಮ ಮತ್ತು ವಾರಕರಿ ಸಂಪ್ರದಾಯದ ಬಗ್ಗೆ ನಕಾರಾತ್ಮಕ ನಿಲುವು ಹೊಂದಿರುವ ಪವಾರ ಅವರಿಗೆ ಈಗ ಈ ‘ಸಂಪ್ರದಾಯ’ವು ಮತಾಂಧವಾಗಿ ಕಾಣತೊಡಗಿದೆ. ಕೆಲವು ಜನರ ಪಟ್ಟಿಯನ್ನು ಸಿದ್ಧಪಡಿಸಿ ಅದರ ಮೂಲಕ ಸಂಪ್ರದಾಯವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ. ಅಂತಹ ಯಾವುದೇ ಪ್ರಯತ್ನಗಳನ್ನು ನಾವು ಬದುಕಿರುವವರೆಗೂ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಭಾಜಪ ಆಧ್ಯಾತ್ಮಿಕ ವಿಭಾಗದ ಪ್ರಮುಖರಾದ ಶ್ರೀ. ತುಷಾರ ಭೋಸಲೆ ಎಚ್ಚರಿಸಿದ್ದಾರೆ.
ನವನಾಥ ಬನ, ಮುಖ್ಯ ವಕ್ತಾರರು, ಭಾಜಪ – ವಾರಕರಿ ಸಂಪ್ರದಾಯದಲ್ಲಿ ಮತಾಂಧತೆ ಇಲ್ಲ, ಬದಲಾಗಿ ಕೆಲವು ‘ನಗರ ನಕ್ಸಲೀಯ’ ಘಟಕಗಳು ನುಸುಳಲು ಪ್ರಯತ್ನಿಸುತ್ತಿವೆ. ಈ ಬಗ್ಗೆ ಪವಾರ ಅವರು ತಮ್ಮ ಸಂಶೋಧನಾ ತಂಡದ ಮೂಲಕ ಸ್ಪಷ್ಟ ಮಾಹಿತಿ ನೀಡಲಿ. ವಿಠ್ಠಲ ಭಕ್ತಿ ಮತ್ತು ಪ್ರಬೋಧನೆಯನ್ನು ಮತಾಂಧತೆಗೆ ಜೋಡಿಸುವುದು ವಾರಕರಿ ಪರಂಪರೆಗೆ ಮಾಡಿದ ದೊಡ್ಡ ಅವಮಾನವಾಗಿದೆ.
ಹ.ಭ.ಪ. ಗಣೇಶ ಮಹಾರಾಜ ಶೇಟೆ – ವಾರಕರಿ ಪರಂಪರೆಯು ಸನಾತನ ಧರ್ಮದ ಅವಿಭಾಜ್ಯ ಅಂಗವಾಗಿದೆ. ಹಿಂದೂ ಧರ್ಮದ ಮೇಲೆ ಪ್ರಹಾರ ಮಾಡುವ ಯಾವುದೇ ವಿಷಯವನ್ನು ವಾರಕರಿ ಸಮಾಜವು ಪ್ರಾಣಪಣಕ್ಕಿಟ್ಟು ವಿರೋಧಿಸುತ್ತದೆ.
ಹ.ಭ.ಪ. ವಿಠ್ಠಲ ಪಾಟೀಲ, ಅಧ್ಯಕ್ಷರು, ವಾರಕರಿ ಸಾಹಿತ್ಯ ಪರಿಷತ್ತು – ಪವಾರ ಅವರು ಸಿದ್ಧಪಡಿಸಿರುವ ೪೦ ಕೀರ್ತನಕಾರರ ಪಟ್ಟಿಯನ್ನು ತಕ್ಷಣವೇ ಘೋಷಿಸಲಿ. ‘ಯಾರ ಕೀರ್ತನೆಯನ್ನು ಕೇಳಬೇಕು ಮತ್ತು ಯಾರದ್ದನ್ನು ಕೇಳಬಾರದು, ಯಾರನ್ನು ಕರೆಯಬೇಕು ಮತ್ತು ಯಾರನ್ನು ಕೈಬಿಡಬೇಕು’ ಎನ್ನುವುದು ಆಗ ಜನರಿಗೆ ಸ್ಪಷ್ಟವಾಗುತ್ತದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ