
ಇಸ್ಲಾಮಾಬಾದ (ಪಾಕಿಸ್ತಾನ) – ಅಮೆರಿಕವು ತಾನು ನೀಡಿದ ಭರವಸೆಗಳನ್ನು ಪದೇ ಪದೇ ಮುರಿದಿದೆ ಮತ್ತು ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆ ತಂದಿದೆ. ಇದೇ ಕಾರಣಕ್ಕೆ ಇರಾನ್ ಗೆ ಅದರ ಮೇಲೆ ವಿಶ್ವಾಸವಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘಚಿ ಅವರು ಜರ್ಮನಿಯ ವಿದೇಶಾಂಗ ಸಚಿವ ಯೋಹಾನ್ ವೇಡ್ ಫುಲ್ ಅವರೊಂದಿಗೆ ದೂರವಾಣಿ ಮೂಲಕ ನಡೆಸಿದ ಚರ್ಚೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಚರ್ಚೆಯ ಮೇಲೆಯೂ ಇರಾನ್ ನಿಯೋಗಕ್ಕೆ ನಂಬಿಕೆಯಿಲ್ಲ. ಇರಾನ್ ಜನರ ಹಿತಾಸಕ್ತಿ ಮತ್ತು ಹಕ್ಕುಗಳನ್ನು ರಕ್ಷಿಸಲು ಸರಕಾರವು ತನ್ನ ಪೂರ್ಣ ಶಕ್ತಿಯೊಂದಿಗೆ ಹೋರಾಡಲಿದೆ ಎಂದು ಅರಘಚಿ ಹೇಳಿದ್ದಾರೆ.
🚨 “No Trust in America!” – Iran Before Crucial Talks
🗣️ Iran signals deep distrust ahead of negotiations, warning the US against broken promises.
⚠️ Mohammad Reza Aref:
👉 “America First” ✅
👉 “Israel First” ❌❗ Clear message:
No deal if US prioritizes Israel over its own… pic.twitter.com/MmqDhh0BvR— Sanatan Prabhat (@SanatanPrabhat) April 11, 2026
೧. ಮತ್ತೊಂದೆಡೆ, ಅಮೆರಿಕ ಮತ್ತು ಇರಾನ್ ನಿಯೋಗಗಳು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಗೆ ತಲುಪಿದ್ದು, ಸಂಜೆ ಅವರ ನಡುವೆ ಚರ್ಚೆ ಆರಂಭವಾಗಲಿದೆ.
೨. ಅಮೆರಿಕದ ನಿಯೋಗದ ನೇತೃತ್ವವನ್ನು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಹಿಸಿದ್ದರೆ, ಇರಾನ್ ನಿಯೋಗದ ನೇತೃತ್ವವನ್ನು ಸಂಸತ್ತಿನ ಅಧ್ಯಕ್ಷ ಮಹಮ್ಮದ್ ಬಾಗೇರ್ ಗಾಲಿಬಾಫ್ ವಹಿಸಿದ್ದಾರೆ.
೩. ಇಸ್ಲಾಮಾಬಾದ್ ಗೆ ತಲುಪಿದ ನಂತರ ಗಾಲಿಬಾಫ್ ಅವರು ಇನ್ ಸ್ಟಾಗ್ರಾಮ್ ನಲ್ಲಿ ಒಂದು ಛಾಯಾಚಿತ್ರವನ್ನು ಪ್ರಸಾರ ಮಾಡಿದ್ದಾರೆ. ಅದರಲ್ಲಿ ವಿಮಾನದ ಸೀಟಿನ ಮೇಲೆ ೪ ಮಕ್ಕಳ ಛಾಯಾಚಿತ್ರಗಳು, ಅವರ ರಕ್ತಸಿಕ್ತ ಶಾಲಾ ಬ್ಯಾಗ್‌ಗಳು, ಬೂಟುಗಳು ಮತ್ತು ಹೂವುಗಳು ಕಂಡುಬರುತ್ತಿವೆ.
೪. ಫೆಬ್ರವರಿ ೨೮ ರ ಯುದ್ಧದ ಮೊದಲ ದಿನದಂದು ಇರಾನ್ ನ ಮಿನಾಬ್ ನಗರದ ಪ್ರಾಥಮಿಕ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ ಮಕ್ಕಳು ಮತ್ತು ಶಾಲಾ ಸಿಬ್ಬಂದಿ ಸೇರಿದಂತೆ ೧೬೮ ಜನರು ಸಾವನ್ನಪ್ಪಿದ್ದರು.
‘ಅಮೆರಿಕ ಮೊದಲು’ ಒಳ್ಳೆಯದು, ‘ಇಸ್ರೇಲ್ ಮೊದಲು’ ಕೆಟ್ಟದ್ದು! – ಇರಾನ್
ಇಸ್ಲಾಮಾಬಾದ್ ನಲ್ಲಿ ನಡೆಯುತ್ತಿರುವ ಚರ್ಚೆಯ ಫಲಿತಾಂಶವು ಅಮೆರಿಕದ ಆದ್ಯತೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಇರಾನ್ ಉಪಾಧ್ಯಕ್ಷ ಮಹಮ್ಮದ್ ರಜಾ ಆರಿಫ್ ಹೇಳಿದ್ದಾರೆ. ಒಂದು ವೇಳೆ ಅಮೆರಿಕದ ಪ್ರತಿನಿಧಿಗಳು ‘ಅಮೆರಿಕ ಮೊದಲು’ ಹಿತಾಸಕ್ತಿಗಳ ಮೇಲೆ ಗಮನ ಹರಿಸಿದರೆ, ಪರಸ್ಪರ ಲಾಭದಾಯಕ ಒಪ್ಪಂದ ಸಾಧ್ಯವಿದೆ; ಆದರೆ ಅಮೆರಿಕವು ‘ಇಸ್ರೇಲ್ ಮೊದಲು’ ನೀತಿಯನ್ನು ಅನುಸರಿಸಿದರೆ, ಯಾವುದೇ ಒಪ್ಪಂದ ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಇರಾನ್ ಇನ್ನಷ್ಟು ಬಲವಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಮುಂದುವರಿಸುತ್ತದೆ. ಇದರ ಪರಿಣಾಮ ಇಡೀ ಜಗತ್ತಿನ ಮೇಲಾಗಲಿದ್ದು, ಅದರ ಬೆಲೆ ಅಧಿಕವಾಗಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಅಮೆರಿಕವು ಕತಾರ್ ಮತ್ತು ವಿದೇಶಿ ಬ್ಯಾಂಕ್ ಗಳಲ್ಲಿರುವ ಇರಾನ್ ನ ಆಸ್ತಿಯನ್ನು ಹಿಂದಿರುಗಿಸಲಿದೆ
ಕತಾರ್ ಮತ್ತು ಇತರ ವಿದೇಶಿ ಬ್ಯಾಂಕುಗಳಲ್ಲಿ ಇರಿಸಲಾಗಿರುವ ಇರಾನ್ ನ ಆಸ್ತಿಯನ್ನು ಬಿಡುಗಡೆ ಮಾಡಲು ಅಮೆರಿಕ ಒಪ್ಪಿಗೆ ಸೂಚಿಸಿದೆ. ಅಮೆರಿಕದ ನಿರ್ಬಂಧಗಳಿಂದಾಗಿ ಇರಾನ್ ನ ಶತಕೋಟಿ ಡಾಲರ್ ಆಸ್ತಿ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿದೆ. ಈ ಹಿಂದೆ, ಇಂತಹ ಹಣವನ್ನು (ಉದಾಹರಣೆಗೆ ಅಂದಾಜು ೬ ಬಿಲಿಯನ್ ಡಾಲರ್ – ೫ ಲಕ್ಷದ ೭೦ ಸಾವಿರ ಕೋಟಿ ರೂಪಾಯಿ) ಕತಾರ್ ನಲ್ಲಿ ಇರಿಸಲಾಗಿತ್ತು ಮತ್ತು ಅದನ್ನು ಪಡೆಯದಂತೆ ಇರಾನ್ ಅನ್ನು ನಿರ್ಬಂಧಿಸಲಾಗಿತ್ತು.
ಪ್ರಮುಖ ಬೆಳವಣಿಗೆಗಳು
೧. ಶಾಂತಿ ಒಪ್ಪಂದ ಏರ್ಪಡದಿದ್ದರೆ ಅಮೆರಿಕವು ಇರಾನ್ ಮೇಲೆ ಮತ್ತೆ ದಾಳಿ ಮಾಡಲಿದೆ. – ಡೊನಾಲ್ಡ್ ಟ್ರಂಪ್, ಅಧ್ಯಕ್ಷರು, ಅಮೆರಿಕ
೨. ಚರ್ಚೆಯಿಂದ ಧನಾತ್ಮಕ ಫಲಿತಾಂಶಗಳ ನಿರೀಕ್ಷೆಯಿದೆ; ಆದರೆ ಇರಾನ್ ಅಮೆರಿಕದ ದುರುಪಯೋಗ ಮಾಡಿಕೊಳ್ಳಬಾರದು! – ಜೆಡಿ ವ್ಯಾನ್ಸ್, ಉಪಾಧ್ಯಕ್ಷರು, ಅಮೆರಿಕ
೩. ಲೆಬನಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಚರ್ಚೆಯು ಏಪ್ರಿಲ್ ೧೪ ರಂದು ಪ್ರಾರಂಭವಾಗಲಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation