ನ್ಯಾಯವಾದಿ ಅಲೋಕ ಕುಮಾರ ಅವರಿಂದ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮಕ್ಕೆ ಭೇಟಿ

ರಾಮನಾಥಿ, ಫೋಂಡಾ (ಗೋವಾ), ೯ ಏಪ್ರಿಲ್ (ವಾರ್ತೆ) – ಸೂಕ್ಷ್ಮ ಜಗತ್ತಿನ ಅಧ್ಯಯನ ಮತ್ತು ಮಾರ್ಗದರ್ಶನ ನೀಡುವುದು ಸನಾತನ ಸಂಸ್ಥೆಯ ವೈಶಿಷ್ಟ್ಯವಾಗಿದೆ. ಈ ಕಾರ್ಯವನ್ನು ಮಾಡುವಾಗ ಪರಬ್ರಹ್ಮನೊಂದಿಗೆ ಏಕರೂಪವಾಗುವ ಕಲಿಕೆಯಿದೆ. ವಿಶ್ವ ಹಿಂದೂ ಪರಿಷತ್ ಪ್ರತ್ಯಕ್ಷ ಜಗತ್ತಿನಲ್ಲಿ ಕಾರ್ಯ ಮಾಡುವ ಸಂಘಟನೆಯಾದರೆ, ಸನಾತನ ಸಂಸ್ಥೆಯ ಕಾರ್ಯವು ಪರಜಗತ್ತಿನದ್ದಾಗಿದೆ (ಸೂಕ್ಷ್ಮದ್ದಾಗಿದೆ) ಎಂದು ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ಅಲೋಕ ಕುಮಾರ ಅವರು ಸನಾತನ ಸಂಸ್ಥೆಯ ಬಗ್ಗೆ ಇಲ್ಲಿ ಗೌರವದ ಉದ್ಗಾರಗಳನ್ನು ತೆಗೆದರು.

ಸನಾತನದ ಗೋವಾದ ರಾಮನಾಥಿಯಲ್ಲಿರುವ ಆಶ್ರಮಕ್ಕೆ ಅವರು ವಿಶ್ವಹಿಂದೂ ಪರಿಷತ್ತಿನ ‘ಸಂತ ದರ್ಶನ ಮತ್ತು ಸಂವಾದ’ ಈ ಉಪಕ್ರಮದ ಅಡಿಯಲ್ಲಿ ಭೇಟಿ ನೀಡಿದ ನಂತರ ಆಯೋಜಿಸಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೊಂಕಣ ಪ್ರಾಂತ್ಯದ ಪ್ರಮುಖರಾದ ಶ್ರೀ. ಪರಶುರಾಮ ದುಬೆ, ವಿಶ್ವ ಹಿಂದೂ ಪರಿಷತ್ತಿನ ಗೋವಾ ಪ್ರಮುಖರಾದ ಶ್ರೀ. ಪ್ರವಾಸ ನಾಯ್ಕ, ವಿಭಾಗಮಂತ್ರಿ ಶ್ರೀ. ಮೋಹನ ಆಮಶೇಕರ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಧಾರ್ಮಿಕ ವಿಭಾಗದ ಪ್ರಮುಖರಾದ ಶ್ರೀ. ಸಂಜಯ ಮುರದಾಳೆ, ಸನಾತನ ಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ತರಾದ ಶ್ರೀ. ವೀರೇಂದ್ರ ಮರಾಠೆ, ಸನಾತನದ ಸಂತರಾದ ಪೂ. ಪೃಥ್ವಿರಾಜ ಹಜಾರೆ, ಸನಾತನದ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಶ್ರೀ. ಚೇತನ ರಾಜಹಂಸ ಅವರು ಶ್ರೀ. ಅಲೋಕ ಕುಮಾರ ಅವರಿಗೆ ಸನಾತನದ ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮದ ಕಾರ್ಯಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
🚩A momentous confluence of Dharma and leadership!
International President of the Vishwa Hindu Parishad (@VHPDigital) and Senior Advocate of the Supreme Court, Shri. Alok Kumarji (@AlokKumarLIVE), along with senior VHP office bearers, paid a goodwill visit to the Sanatan Ashram… pic.twitter.com/kwplKv1Ry0
— Sanatan Sanstha (@SanatanSanstha) April 9, 2026
ನ್ಯಾಯವಾದಿ ಅಲೋಕ ಕುಮಾರ ಅವರು ಮುಂದುವರಿದು ಮಾತನಾಡುತ್ತಾ,
೧. ಬರುವ ಶತಮಾನವು ಹಿಂದೂಗಳದ್ದಾಗಿರಲಿದೆ. ಈ ಮೊದಲು ರಷ್ಯಾದ್ದಾಗಿತ್ತು, ಈಗ ಅಮೇರಿಕಾದ್ದಾಗಿದೆ; ಆದರೆ ಅದು ಮುಗಿಯುತ್ತಾ ಬಂದಿದೆ. ಯಾವುದೇ ಶತಮಾನದ ಪರಿವರ್ತನೆಯು ೩೦ ರಿಂದ ೪೦ ನೇ ದಶಕದಲ್ಲಿ ಆಗುತ್ತದೆ. ಅದರಂತೆ ಈಗ ಬರುವ ಶತಮಾನವು ಹಿಂದೂಗಳದ್ದು, ಭಾರತದ್ದಾಗಿರಲಿದೆ. ಅಂತಹ ಚಿತ್ರಣವೂ ಕಂಡುಬರುತ್ತಿದೆ.
೨. ದೇಶಾದ್ಯಂತ ಇರುವ ಎಲ್ಲಾ ಸಣ್ಣ-ದೊಡ್ಡ ಹಿಂದೂ ಸಂಘಟನೆಗಳು ತಮ್ಮ ತಮ್ಮ ರೀತಿಯಲ್ಲಿ ಹಿಂದೂ ಧರ್ಮಕ್ಕಾಗಿ ಕಾರ್ಯ ಮಾಡುತ್ತಿವೆ. ವಿಶ್ವ ಹಿಂದೂ ಪರಿಷತ್ತಿನಿಂದಲೂ ಘರ್ ವಾಪಸಿ (ಮತಾಂತರಗೊಂಡ ಹಿಂದೂಗಳನ್ನು ಮರಳಿ ಹಿಂದೂ ಧರ್ಮಕ್ಕೆ ತರುವುದು) ಕಾರ್ಯವು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದರೊಂದಿಗೆ ಮತಾಂತರ ತಡೆಯುವ ಕಾರ್ಯವನ್ನೂ ನಾವು ಮಾಡುತ್ತಿದ್ದೇವೆ.
🚩A truly momentous and spiritually uplifting occasion!
International President of the Vishwa Hindu Parishad (@VHPDigital) and Senior Advocate of the Supreme Court, Shri. Alok Kumarji (@AlokKumarLIVE), along with VHP office bearers, paid a goodwill visit to the Sanatan Ashram at… pic.twitter.com/LFSCuHYpAl
— Sanatan Sanstha (@SanatanSanstha) April 9, 2026
೩. ಭಾಜಪ ಆಡಳಿತವಿರುವ ರಾಜ್ಯಗಳೂ ಕೂಡ ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಮುಂತಾದ ಕಾನೂನುಗಳನ್ನು ಮಾಡಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿವೆ.
೪. ಪ್ರಸ್ತುತ ಕುಟುಂಬಗಳಲ್ಲಿ ಮೊದಲಿನಂತೆ ಸಂಸ್ಕಾರಗಳು ದೊರೆಯದಿರುವುದರಿಂದ, ಹಾಗೆಯೇ ಕುಟುಂಬದ ಸದಸ್ಯರ ನಡುವೆ ಪರಸ್ಪರ ಸಂವಾದವು ಇಲ್ಲದಿರುವುದರಿಂದ ಕೌಟುಂಬಿಕ ಹಾನಿಯಾಗುತ್ತಿದೆ. ಇದನ್ನು ಅರಿತು ವಿಶ್ವ ಹಿಂದೂ ಪರಿಷತ್ತು ಕೌಟುಂಬಿಕ ಸಂವಾದವು ಏರ್ಪಡಬೇಕು ಎನ್ನುವುದಕ್ಕಾಗಿ ಉಪಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನಾವು ವೇದಗಳ ಪ್ರಸಾರವನ್ನೂ ಮಾಡುತ್ತಿದ್ದೇವೆ.

೧೦ ವರ್ಷಗಳಲ್ಲಿ ಕಾಶಿ ಮತ್ತು ಮಥುರಾ ಮುಕ್ತವಾಗಲಿವೆ! – ನ್ಯಾಯವಾದಿ ಅಲೋಕ ಕುಮಾರ
ಈ ಸಮಯದಲ್ಲಿ ನ್ಯಾಯವಾದಿ ಅಲೋಕ ಕುಮಾರ ಅವರು ಮಾತನಾಡುತ್ತಾ, ಕಾಶಿ ಮತ್ತು ಮಥುರಾ ಈ ಧಾರ್ಮಿಕ ಸ್ಥಳಗಳ ತಥ್ಯಗಳು ಮತ್ತು ಪುರಾವೆಗಳೆಲ್ಲವೂ ನಮ್ಮ ಪರವಾಗಿವೆ. ನ್ಯಾಯಾಲಯದಲ್ಲಿ ಈ ಬಗ್ಗೆ ಹೋರಾಟ ನಡೆಯುತ್ತಿದೆ. ಒಬ್ಬ ವಕೀಲನಾಗಿ ನಾನು ಹೇಳುವುದೇನೆಂದರೆ, ಯಾವ ರೀತಿ ಅಯೋಧ್ಯೆಯ ಶ್ರೀರಾಮ ಮಂದಿರವು ಮುಕ್ತವಾಯಿತೋ, ಅದೇ ರೀತಿ ಮುಂಬರುವ ೧೦ ವರ್ಷಗಳಲ್ಲಿ ಕಾಶಿ ಮತ್ತು ಮಥುರಾಗಳೂ ಮುಕ್ತವಾಗಲಿವೆ, ಎಂದರು. |
ಈ ಸಂದರ್ಭದಲ್ಲಿ ಶ್ರೀ. ವೀರೇಂದ್ರ ಮರಾಠೆ ಅವರು ನ್ಯಾಯವಾದಿ ಅಲೋಕ ಕುಮಾರ ಅವರಿಗೆ ಶಾಲು ಹೊದಿಸಿ, ಶ್ರೀಫಲ ಮತ್ತು ಸನಾತನದ ಗ್ರಂಥಗಳನ್ನು ನೀಡಿ ಸತ್ಕರಿಸಿದರು. ಇದರೊಂದಿಗೆ ಇತರ ಗಣ್ಯರನ್ನೂ ಸತ್ಕರಿಸಲಾಯಿತು.

ಈ ಪ್ರಸಂಗದಲ್ಲಿ ಗೋವಾದ ಚಿನ್ಮಯ ಮಿಷನ್ ಪ್ರಮುಖರಾದ ಸ್ವಾಮಿ ಸುಘೋಷಾನಂದ, ವಿಶ್ವ ಹಿಂದೂ ಪರಿಷತ್ತಿನ ಕೊಂಕಣ ಪ್ರಾಂತದ ಧರ್ಮಾಚಾರ್ಯ ಸಂಪರ್ಕ ಪ್ರಮುಖರಾದ ಶ್ರೀ. ಚಂದ್ರಪ್ರಕಾಶ ಪಾಂಡೆ, ಜಿಲ್ಲಾ ಧರ್ಮಾಚಾರ್ಯ ಸಂಪರ್ಕ ಪ್ರಮುಖರಾದ ಶ್ರೀ. ಪಾಂಡುರಂಗ ಥೋರಾತ, ಶ್ರೀ. ನವಲಕಿಶೋರ ಪುರಾಣಿಕ, ವಿಭಾಗ ಸಂಘಟನಾ ಮಂತ್ರಿ ಶ್ರೀ. ಬಿಸ್ವೇಂದು ವಿಶ್ವಾಸ, ವಿಶ್ವ ಹಿಂದೂ ಪರಿಷತ್ತಿನ ಗೋವಾ ವಿಭಾಗದ ಮಠ-ಮಂದಿರ ಪ್ರಮುಖರಾದ ಶ್ರೀ. ಶ್ಯಾಮ ನಾಯ್ಕ, ಧರ್ಮಾಚಾರ್ಯ ಸಂಪ್ರದಾಯ ಪ್ರಮುಖರಾದ ಶ್ರೀ. ವಿಶ್ವಜಿ ಮೇವಾಲಾಲ, ಪ್ರಾಂತ ಸದಸ್ಯರಾದ ಶ್ರೀ. ನಿತಿನ ಭೋಸಕೆ, ಮಾಧ್ಯಮ ಪ್ರಮುಖರಾದ ಶ್ರೀ. ಬ್ರಿಜೇಶ ಶುಕ್ಲಾ, ನ್ಯಾಯವಾದಿ ಗಣೇಶ ಸುರ್ವೆ, ವಿಶ್ವ ಹಿಂದೂ ಪರಿಷತ್ತಿನ ಕೊಂಕಣ ಪ್ರಾಂತದ ಸಾಧ್ವಿ ಪ್ರಮುಖರಾದ ಶುಭಾಂಗಿ ಜೋಶಿ ಅವರು ಉಪಸ್ಥಿತರಿದ್ದರು.

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ