
ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಹಿಂದೂಗಳು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಅವರನ್ನು ರಕ್ಷಿಸಲು ‘ಹಿಂದೂ’ ಎಂದು ಯಾರೂ ಮುಂದೆ ಬರುತ್ತಿಲ್ಲ. ಇಂತಹ ಕಗ್ಗತ್ತಲೆಯ ಪರಿಸ್ಥಿತಿಯಲ್ಲಿ, ಜ್ಯೋತಿಷ್ಯಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಹಿಂದೂ ಧರ್ಮದ ಪವಿತ್ರ ತೀರ್ಥಕ್ಷೇತ್ರ ಕಾಶಿಯಲ್ಲಿ ಸಶಸ್ತ್ರ ‘ಚತುರಂಗಿಣಿ ಸೇನೆ’ಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಹಿಂದೂಗಳು ಏನನ್ನು ನಿರೀಕ್ಷಿಸುತ್ತಿದ್ದಾರೋ, ಅದನ್ನೇ ಅವರು ಮಾಡಲು ಪ್ರಯತ್ನಿಸಿದ್ದಾರೆ. ಇಂದು ದೇಶದಲ್ಲಿ ಅನೇಕ ಹಿಂದೂ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ದೊಡ್ಡ ಮಟ್ಟದ ಕೆಲಸವನ್ನೂ ಮಾಡಿವೆ; ಆದರೂ ಹಿಂದೂಗಳು ಅಸುರಕ್ಷಿತರಾಗಿದ್ದಾರೆ ಎಂಬ ವಾಸ್ತವವನ್ನು ಆ ಸಂಘಟನೆಗಳೂ ನಿರಾಕರಿಸಲಾರವು. ಇದಕ್ಕೆ ಮುಖ್ಯ ಕಾರಣವೆಂದರೆ ಹಿಂದೂಗಳಲ್ಲಿ
ವ್ಯವಸ್ಥಿತವಾಗಿ ನಶಿಸಿ ಹೋಗಿರುವ ಶೌರ್ಯ !
ಕೆಲವು ಸಂಘಟನೆಗಳು ಕೇವಲ ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರಿಗೆ ಸಾಧನೆಯ, ಅಂದರೆ ಈಶ್ವರನ ಬಲವು ಸಿಗುತ್ತಿಲ್ಲ, ಹೀಗಾಗಿ ಹಿಂದೂಗಳ ರಕ್ಷಣೆಯಲ್ಲಿ ಪೂರ್ಣ ಯಶಸ್ಸು ದೊರೆಯುತ್ತಿಲ್ಲ. ಇದೇ ಪರಿಸ್ಥಿತಿ ತೊಂದರೆಗೊಳಗಾಗುವ ಸಾಮಾನ್ಯ ಹಿಂದೂಗಳದ್ದೂ ಆಗಿದೆ. ಅವರು ಸಾಧನೆ ಮಾಡದ ಕಾರಣ, ದೇವರು ಅವರ ರಕ್ಷಣೆಗಾಗಿ ಯಾರನ್ನೂ ಕಳುಹಿಸುತ್ತಿಲ್ಲ ಅಥವಾ ಇತರ ಹಿಂದೂಗಳಿಗೆ ‘ಇವರ ರಕ್ಷಣೆಗಾಗಿ ಏನಾದರೂ ಮಾಡಬೇಕು’ ಎಂಬ ಆಲೋಚನೆ ಬರುತ್ತಿಲ್ಲ ಅಥವಾ ಅವರು ಭಯಪಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಶಂಕರಾಚಾರ್ಯರು ಸಶಸ್ತ್ರ ಚದುರಂಗಿಣಿ ಸೇನೆಯ ಸ್ಥಾಪನೆಯನ್ನು ಘೋಷಿಸಿರುವುದು ಈ ಕಗ್ಗತ್ತಲೆಯಲ್ಲಿ ಒಂದು ಸಣ್ಣ ದೀಪವನ್ನು ಹಚ್ಚಿದಂತೆ ಇದೆ.

ಶಸ್ತ್ರಗಳನ್ನು ಹೊಂದಲು ಸಾಧ್ಯವೇ ?
‘ದೇಶದಲ್ಲಿ ಈಗಾಗಲೇ ಅನೇಕ ಸಂಘಟನೆಗಳಿರುವಾಗ ಈ ಸೇನೆಗೆ ಎಷ್ಟು ಪ್ರತಿಕ್ರಿಯೆ ಸಿಗಬಹುದು ?’ ಎಂಬ ಪ್ರಶ್ನೆ ಮೂಡಬಹುದು. ಈ ಸೇನೆಯ ಪ್ರತಿಯೊಬ್ಬ ಸದಸ್ಯರ ಕೈಯಲ್ಲಿ ‘ಪರಶು’ (ಕೊಡಲಿ) ಇರಲಿದೆ ಎಂದು ಹೇಳಲಾಗಿದೆ. ಆದರೆ, ಕಾನೂನುಬದ್ಧವಾಗಿ ಹೀಗೆ ಬಹಿರಂಗವಾಗಿ ಆಯುಧ ಹಿಡಿಯಲು ಅನುಮತಿ ಸಿಗುತ್ತದೆಯೇ ಎಂಬ ಪ್ರಶ್ನೆ ಏಳುತ್ತದೆ. ಕಾನೂನಿನ ಪ್ರಕಾರ, ೬ ಇಂಚಿನೊಳಗಿನ ಯಾವುದೇ ಚೂಪಾದ ವಸ್ತುವು ‘ಶಸ್ತ್ರ’ ಎಂದು ಪರಿಗಣಿಸಲ್ಪಡುವುದಿಲ್ಲ. ಅದಕ್ಕಾಗಿಯೇ ಬರಂಗದಳ ಅಥವಾ ವಿಶ್ವ ಹಿಂದೂ ಪರಿಷತ್ ೬ ಇಂಚಿನ ತ್ರಿಶೂಲಗಳನ್ನು ವಿತರಿಸುತ್ತವೆ. ಈ ಸೇನೆಯ ಪರಶುಗಳೂ ಸಹ ಇದೇ ಮಿತಿಯಲ್ಲಿ ಇರುತ್ತವೆಯೇ ? ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ಈ ಸೇನೆಯಲ್ಲಿ ೨ ಲಕ್ಷದ ೧೮ ಸಾವಿರದ ೭೦೦ ಸದಸ್ಯರನ್ನು ಸೇರಿಸುವ ಗುರಿ ಹೊಂದಲಾಗಿದೆ. ‘ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳು ಪಾಲ್ಗೊಳ್ಳಬಹುದು’, ಎಂಬ ಆಶಾವಾದವಿದ್ದರೂ, ಈ ಸದಸ್ಯರಿಗೆ ‘ಸಾಧನೆ’ಯನ್ನು ಕಲಿಸದಿದ್ದರೆ ಅವರಿಗೆ ರಕ್ಷಣೆ ಮಾಡುವ ಶಕ್ತಿ ಬರುತ್ತದೆಯೇ ?’ ಈ ಸಂಘಟನೆಯ ಕಾರ್ಯವೈಖರಿ ಅಥವಾ ಮಾರ್ಗದರ್ಶಿ ಸೂಚಿಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿದ್ದರೂ, ‘ಶಂಕರಾಚಾರ್ಯರೇ ಇದರ ಅಧ್ಯಕ್ಷರಾಗಿರುವುದರಿಂದ ಅವರ ಆಧ್ಯಾತ್ಮಿಕ ಸ್ತರದ ಮಾರ್ಗದರ್ಶನದಂತೆ ಸೇನೆ ನಡೆಯಲಿದೆ’ ಎಂದು ಭಾವಿಸಬಹುದು.
ಅಸಂಘಟಿತ ಹಿಂದೂಗಳು !
ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರ ಬಗ್ಗೆ ಅನೇಕ ವಿವಾದಗಳಿವೆ. ಅವರು ಭಾಜಪ ಮತ್ತು ಪ್ರಧಾನಿ ಮೋದಿಯವರ ವಿರೋಧಿ ಎಂದು ಹೇಳಲಾಗುತ್ತದೆ. ತಾವು ಈ ರೀತಿ ಎಂದಿಗೂ ಹೇಳಲಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದರೂ ಕೆಲವರಿಗೆ ಈ ಬಗ್ಗೆ ಸಂದೇಹವಿದೆ. ಏನೇ ಇರಲಿ, ಹಿಂದೂಗಳಿಗೆ ಅವರು ಕೈಗೊಂಡ ಈ ನಿರ್ಧಾರ ಆಶಾದಾಯಕವಾಗಿದೆ. ಭವಿಷ್ಯದಲ್ಲಿ ಈ ಸೇನೆಯು ಗೋಮಾತೆ, ಶಾಸ್ತ್ರ, ಧರ್ಮ ಮತ್ತು ದೇವಾಲಯಗಳ ರಕ್ಷಣೆಗಾಗಿ ಯಾವುದೇ ಹೆಜ್ಜೆ ಇಟ್ಟರೆ, ಸಾಮಾನ್ಯ ಹಿಂದೂಗಳೂ ತಮ್ಮ ಅಡಚಣೆಗಳನ್ನು ಮರೆತು ವೈಚಾರಿಕ, ಭಾವನಾತ್ಮಕ ಅಥವಾ ಆರ್ಥಿಕವಾಗಿ ಅಥವಾ ಇನ್ನಿತರ ರೀತಿಯಲ್ಲಿ ಬೆಂಬಲಿಸಬೇಕಾಗಿದೆ.
ಮುಸಲ್ಮಾನರು ಧರ್ಮದ ವಿಷಯ ಬಂದಾಗ ತಕ್ಷಣ ಒಂದಾಗುತ್ತಾರೆ ಅಥವಾ ಯಾವಾಗಲೂ ಒಟ್ಟಾಗಿಯೇ ಇರುತ್ತಾರೆ. ಆದರೆ ಹಿಂದೂಗಳು ಜಾತಿ, ಪಕ್ಷ, ಭಾಷೆ ಮತ್ತು ವೈಯಕ್ತಿಕ ಸಿದ್ಧಾಂತಗಳಿಂದಾಗಿ ವಿಭಜಿಸಲ್ಪಟ್ಟಿದ್ದಾರೆ. ಅವರ ಸಂಘಟನೆಗಳೂ ಪ್ರತ್ಯೇಕವಾಗಿರುತ್ತವೆ. ಹಿಂದೂ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡುವುದು ಅಪರೂಪ. ಇಂತಹ ಸಂಘಟನೆಗಳು ಒಟ್ಟಾಗಿ ಕಾರ್ಯ ಮಾಡುವುದು ಕೆಲವೇ ಸಮಯದಲ್ಲಿ ಗಮನಕ್ಕೆ ಬರುತ್ತದೆ, ‘ದೊಡ್ಡ ಹಿಂದೂ ಸಂಘಟನೆಗಳು ಸಣ್ಣ ಸಂಘಟನೆಗಳಿಗೆ ಸಹಾಯ ಮಾಡುವುದಿಲ್ಲ’ ಎಂಬ ಆರೋಪವೂ ಇದೆ. ಇದರಿಂದ ‘ಹಿಂದೂ ಮತ್ತು ಅವರ ಸಂಘಟನೆಗಳು ಸಂಘಟಿತರಾಗುವುದಿಲ್ಲ ಹಾಗೂ ಒಂದಾದರೆ ಪರಸ್ಪರ ಜಗಳವಾಡುತ್ತಾರೆ’, ಎಂಬಂತೆ ಚಿತ್ರಣ ಕಾಣಿಸುತ್ತದೆ, ಇದನ್ನೇ ಬಂಡವಾಳ ಮಾಡಿಕೊಂಡ ಮತಾಂಧರು ಹಿಂದೂಗಳನ್ನು ಹಾಗೂ ಅವರ ಸಂಘಟನೆಗಳನ್ನು ‘ಹೆದರುಪುಕ್ಕರು’ ಎಂದು ಭಾವಿಸುತ್ತಾರೆ. ಇದರ ಪರಿಣಾಮವೇ ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮುಂತಾದ ವಿವಿಧ ಜಿಹಾದ್‌ಗಳನ್ನು ಮಾಡುತ್ತಾರೆ ಮತ್ತು ಇಂದಿಗೂ ಹಿಂದೂಗಳು ಹಾಗೂ ಅವರ ಸಂಘಟನೆಗಳಿಂದ ತಕ್ಕ ಪ್ರತ್ಯುತ್ತರ ನೀಡಲಾಗಿಲ್ಲ. ಗೋಹತ್ಯೆ, ಮತಾಂತರ ಮತ್ತು ಮುಸಲ್ಮಾನರ ಬಹುಸಂಖ್ಯಾತ ಪ್ರದೇಶದಿಂದ ಹಿಂದೂಗಳ ವಲಸೆಯನ್ನು ತಡೆಯಲು ಇಂದಿಗೂ ಸಾಧ್ಯವಾಗದಿರುವುದು ಎಂಬ ಕಟುಸತ್ಯವನ್ನು ಹಿಂದೂಗಳು ಹಾಗೂ ಅವರ ಸಂಘಟನೆಗಳು ಎಂದಿಗೂ ನಿರಾಕರಿಸಲು ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಸೇನೆಯು ಕಾರ್ಯನಿರ್ವಹಿಸುವುದು ದೊಡ್ಡ ಸವಾಲಾಗಿದೆ. ಈಗ ಅವರು ಅವರ ಸಾಧನೆಯ ಬಲದಲ್ಲಿ ಈ ಕಾರ್ಯವನ್ನು ಹೇಗೆ ಮಾಡುವರೆಂದು ಮುಂಬರುವ ಕಾಲವೇ ನಿರ್ಧರಿಸಲಿದೆ.
ಸಾಧನೆಯ ಬಲ ಅಗತ್ಯ !
ಮುಂಬರುವ ಕಾಲವು ಕಠಿಣವಾಗಿದೆ ಎಂಬ ಮಾತಿಗಿಂತಲೂ, ಹಿಂದೂಗಳಿಗೆ ಹಿಂದಿನ ಮತ್ತು ಇಂದಿನ ಕಾಲವೂ ಕಷ್ಟಕರವಾಗಿಯೇ ಇತ್ತು. ಏಕೆಂದರೆ ಹಿಂದೂಗಳು ಮುಂಚೆಯೂ ಹಾಗೂ ಈಗಲೂ ಅಸುರಕ್ಷಿತರಾಗಿದ್ದಾರೆ. ದೇಶ ವಿಭಜನೆಯ ಸಮಯದಲ್ಲಿ ನಡೆದ ಘಟನೆಗಳು ೧೯೯೦ ರಲ್ಲಿ ಕಾಶ್ಮೀರದಲ್ಲಿ ಮರುಕಳಿಸಿದವು ಮತ್ತು ಮುಂದೆ ಬಂಗಾಳದಲ್ಲೂ ಸಂಭವಿಸುವ ಸಾಧ್ಯತೆಯನ್ನು ನಿರಕಾರಿಸುವಂತಿಲ್ಲ. ಹಿಂದೂಗಳ ಕಠಿಣ ಕಾಲವು ದಿನೇ ದಿನೇ ಹೆಚ್ಚುತ್ತಲೇ ಇದೆ. ಲವ್ ಜಿಹಾದ್ ಮತ್ತು ಇತರ ಜಿಹಾದ್‌ಗಳು ಹಿಂದೆ ಇರಲಿಲ್ಲ ಅಥವಾ ಅವುಗಳ ಪ್ರಮಾಣ ಬಹಳ ಅಲ್ಪವಾಗಿತ್ತು, ಆದರೆ ಈಗ ಅದರ ಪ್ರವಾಹವೇ ಬಂದಿದೆ. ಮುಸಲ್ಮಾನರ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ. ದೇಶದ ಅನೇಕ ಜಿಲ್ಲೆಗಳು ಮತ್ತು ಗ್ರಾಮಗಳು ಮುಸಲ್ಮಾನ ಬಹುಸಂಖ್ಯಾತವಾಗುತ್ತಿವೆ. ಬಾಂಗ್ಲಾದೇಶದ ನುಸುಳುಕೋರರ ಸಂಖ್ಯೆ ಹೆಚ್ಚುತ್ತಿದೆ; ಅವರನ್ನು ಹೊರ ಹಾಕುವ ಪ್ರಮಾಣ ಮಾತ್ರ ಶೂನ್ಯವಾಗಿದೆ. ಪ್ರತಿದಿನ ಹಿಂದೂಗಳು, ಅವರ ದೇವಾಲಯಗಳು ಮತ್ತು ಧಾರ್ಮಿಕ ಮೆರವಣಿಗೆಗಳ ಮೇಲೆ ಆಕ್ರಮಣಗಳು ನಡೆಯುತ್ತಲೇ ಇವೆ. ಇಂತಹ ಸ್ಥಿತಿಯಲ್ಲಿ ಯಾರು ಸಹ ಅವರನ್ನು ರಕ್ಷಿಸಲು ಯಶಸ್ವಿ ಮತ್ತು ಕಠಿಣ ಪ್ರಯತ್ನ ಮಾಡುತ್ತಿರುವುದು ಕಾಣಿಸುತ್ತಿಲ್ಲ.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹಿಂದೂಗಳ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಹಿಂದೂಗಳಿಗೆ ಅನಿಸುತ್ತಿದೆ. ಇದರ ಹಿಂದೆ ಅವರ ಸಾಧನೆ ಮತ್ತು ಸಾಧನೆಯ ಬಲ, ಹಾಗೆಯೇ ಗುರುಗಳ ಆಶೀರ್ವಾದವಿದೆ. ಪ್ರತಿಯೊಬ್ಬ ಹಿಂದೂ ಆಡಳಿತಗಾರರು ಹೀಗಿಲ್ಲ ಎನ್ನುವುದು ವಾಸ್ತವ ಸಂಗತಿಯಾಗಿದೆ; ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಶಂಕರಾಚಾರ್ಯರ ಚತುರಂಗಿಣಿ ಸೇನೆಯಿಂದ ಹಿಂದೂಗಳು ನಿರೀಕ್ಷೆ ಇಟ್ಟುಕೊಳ್ಳಬಹುದು. ಅದರಲ್ಲೂ ಹಿಂದೂಗಳು ಕೇವಲ ನಿರೀಕ್ಷೆಯನ್ನಷ್ಟೇ ಇಟ್ಟುಕೊಳ್ಳಬಾರದು, ಬದಲಾಗಿ ಅವರು ಸಾಧನೆ ಮಾಡಿ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಿಕೊಂಡು ಸಂಘಟಿತರಾಗಬೇಕು; ಹಾಗೆ ಮಾಡಿದರೆ ಮಾತ್ರ ಬರಲಿರುವ, ಅಲ್ಲ ಈಗಾಗಲೇ ಬಂದಿರುವ ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಸಾಧ್ಯವಾಗುವುದು. ‘ಧರ್ಮೋ ರಕ್ಷತಿ ರಕ್ಷಿತಃ’ (ಯಾರು ಧರ್ಮವನ್ನು ರಕ್ಷಿಸುತ್ತಾರೋ, ಅವರನ್ನು ಧರ್ಮವು ರಕ್ಷಿಸುತ್ತದೆ) ಎಂಬ ವಚನದಂತೆ, ಹಿಂದೂಗಳು ಸಂತರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!
ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !
ಥಾಪರ್ ಅವರ ‘ವೋಕಿಸಂ’ !