
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿ ಬಂಧಿಸಲಾದ 4 ಭಯೋತ್ಪಾದಕರ ವಿಚಾರಣೆಯಿಂದ ಹಲವು ವಿಷಯಗಳು ಬೆಳಕಿಗೆ ಬರುತ್ತಿವೆ. ಆರೋಪಿಗಳು ಉತ್ತರಪ್ರದೇಶದ ಸೇನಾ ನೆಲೆಗಳ ಪರಿಶೀಲನೆ ನಡೆಸಿ ಅವುಗಳ ವಿಡಿಯೋಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದರು. ಅಲ್ಲದೆ, ಕೆಲವು ಹಿಂದೂ ನಾಯಕರ ಚಲನವಲನಗಳನ್ನೂ ಗಮನಿಸುತ್ತಿದ್ದರು. ಇದರಿಂದ ಅವರ ಉದ್ದೇಶವು ಹೆಚ್ಚು ಗಂಭೀರವಾಗಿದೆ ಎಂಬುದು ತಿಳಿಯುತ್ತದೆ. ‘ಆ ಹಿಂದೂ ನಾಯಕರು ಯಾರು?’ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಯೊಬ್ಬರೂ ಪಾಕಿಸ್ತಾನದಿಂದ ತಲಾ 12 ಸಾವಿರ ರೂಪಾಯಿ ಪಡೆಯುತ್ತಿದ್ದರು
ಈ ಭಯೋತ್ಪಾದಕರು ಪಿಕಪ್ ಮತ್ತು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ತರಬೇತಿ ನಡೆಸಿ, ಅದರ ವಿಡಿಯೋಗಳನ್ನು ಪಾಕಿಸ್ತಾನದಲ್ಲಿರುವ ತಮ್ಮ ‘ಹ್ಯಾಂಡ್ಲರ್’ (ಸಂಯೋಜಕ) ಗೆ ಕಳುಹಿಸಿದ್ದರು. ಪ್ರತಿಯೊಂದು ಕೃತ್ಯಕ್ಕೂ ಅವರಿಗೆ ಸುಮಾರು 12 ಸಾವಿರ ರೂಪಾಯಿ ಸಿಗುತ್ತಿತ್ತು. ಬಂಧಿತರಾದ ಶಾಕಿಬ, ವಿಕಾಸ ಗೆಹಲಾವತ, ಲೋಕೇಶ ಅಲಿಯಾಸ್ ಪಪಲಾ ಪಂಡಿತ ಮತ್ತು ಅರಬಾಬರನ್ನು ವಿಶೇಷ ನ್ಯಾಯಾಲಯವು 5 ದಿನಗಳ ಬಂಧನಕ್ಕೆ ಕಳುಹಿಸಿದೆ.
ಇಂಟರ್ನೆಟ್ ಮೂಲಕ ಬಾಂಬ್ ತಯಾರಿಕೆಯ ಮಾಹಿತಿಯನ್ನು ಹುಡುಕುತ್ತಿದ್ದರು
ಭಯೋತ್ಪಾದನಾ ನಿಗ್ರಹ ದಳದ ವಿಚಾರಣೆಯಲ್ಲಿ, ಭಯೋತ್ಪಾದಕರ ಮೊಬೈಲ್ ಫೋನ್‌ಗಳಲ್ಲಿ ಟೈಮ್ ಬಾಂಬ್ ಮತ್ತು ರಾಸಾಯನಿಕ ಸ್ಫೋಟಕಗಳನ್ನು ತಯಾರಿಸುವ ಕುರಿತು ಇಂಟರ್ನೆಟ್‌ನಲ್ಲಿ ಹುಡುಕಿರುವ ಮಾಹಿತಿ ಪತ್ತೆಯಾಗಿದೆ. ಹುಡುಕಲಾದ ಕೆಲವು ವಿಡಿಯೋಗಳನ್ನು ನೇರವಾಗಿ ಪಾಕಿಸ್ತಾನದಿಂದ ಕಳುಹಿಸಲಾಗಿತ್ತು. ಮುಖ್ಯ ಆರೋಪಿ ಶಾಕಿಬ್‌ಗೆ ದುಬೈನಲ್ಲಿರುವ ಆತನ ಸಹೋದರನಿಂದಲೂ ಸಹಾಯ ಸಿಗುತ್ತಿತ್ತು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್ಕೌಂಟರ್’ ಮಾಡಲಾಗುತ್ತಿತ್ತು!’