
ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಸ್ಟೀವ್ ಹಾಂಕೆ ಅವರು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಶ್ಲಾಘಿಸಿದ್ದಾರೆ. ಭಾರತದ ವಿದೇಶಾಂಗ ಸಚಿವರು ಗೊಂದಲ ಅಥವಾ ಗದ್ದಲಕ್ಕಿಂತ ಹೆಚ್ಚಾಗಿ ವ್ಯೂಹಾತ್ಮಕ ಚಿಂತನೆಗಳಿಗೆ ಆದ್ಯತೆ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.
೧. ಸ್ಟೀವ್ ಹಾಂಕೆ ಅವರು ‘ಎಕ್ಸ್’ನಲ್ಲಿ ಚಿತ್ರವೊಂದನ್ನು ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ಡಾ. ಎಸ್. ಜೈಶಂಕರ್ ಅವರ ವಿದೇಶಾಂಗ ನೀತಿಯನ್ನು ಪ್ರಶಂಸಿಸುತ್ತಾ ಅದರ ಹಿಂದಿನ ಭೂಮಿಕೆಯನ್ನು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಒಂದು ಬದಿಯಲ್ಲಿ ಯುದ್ಧ, ಆರ್ಥಿಕ ನಿರ್ಬಂಧಗಳು ಮತ್ತು ಅನಿಶ್ಚಿತತೆಯಿಂದ ಬಳಲುತ್ತಿರುವ ಜಗತ್ತನ್ನು ತೋರಿಸಲಾಗಿದ್ದು, ಅಲ್ಲಿ ವಿವಿಧ ದೇಶಗಳ ನಾಯಕರು ಪರಸ್ಪರ ಸಂಘರ್ಷದಲ್ಲಿ ಸಿಲುಕಿರುವುದು ಕಂಡುಬರುತ್ತದೆ. ಇನ್ನೊಂದು ಬದಿಯಲ್ಲಿ ಡಾ. ಎಸ್. ಜೈಶಂಕರ್ ಅವರನ್ನು ದೂರದೃಷ್ಟಿಯುಳ್ಳ ನಾಯಕತ್ವವಾಗಿ ತೋರಿಸಲಾಗಿದೆ.
೨. ಡಾ. ಎಸ್. ಜೈಶಂಕರ್ ಅವರು ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ತೋರಿಸಲಾಗಿದ್ದು, ಆ ಮೆಟ್ಟಿಲುಗಳ ಮೇಲೆ ‘ಡೈವರ್ಸಿಫೈ’ ಎಂದರೆ ವೈವಿಧ್ಯತೆ, ‘ಡಿ ರಿಸ್ಕ್’ ಎಂದರೆ ಅಪಾಯವನ್ನು ಕಡಿಮೆ ಮಾಡುವುದು ಮತ್ತು ‘ಹೆಡ್ಜ್’ ಎಂದರೆ ರಕ್ಷಿಸಿಕೊಳ್ಳುವುದು ಅಥವಾ ಮುನ್ನೆಚ್ಚರಿಕೆ ವಹಿಸುವುದು ಎಂಬ ಹಂತಗಳನ್ನು ತೋರಿಸಲಾಗಿದೆ. ಜಗತ್ತಿನಲ್ಲಿ ನಡೆಯುತ್ತಿರುವ ಗೊಂದಲಗಳಲ್ಲಿ ಪಾಲ್ಗೊಳ್ಳುವ ಬದಲು ಭಾರತವು ದೀರ್ಘಕಾಲದ ಕಾರ್ಯತಂತ್ರದ ಮೇಲೆ ಒತ್ತು ನೀಡುತ್ತಿದೆ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ನೀಡಲು ಪ್ರಯತ್ನಿಸಲಾಗಿದೆ. ಭಾರತವು ಜಾಗತಿಕ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುವ ಬದಲು ತನ್ನದೇ ಆದ ಹಾದಿಯನ್ನು ಆಯ್ದುಕೊಂಡು ಮುಂದೆ ಸಾಗುತ್ತಿದೆ ಎಂಬುದನ್ನು ಈ ಹಂತಗಳು ಸೂಚಿಸುತ್ತವೆ.
೩. ಈ ಪರಿಕಲ್ಪನೆಗಳ ಅರ್ಥವೇನೆಂದರೆ, ಯಾವುದೇ ಒಂದು ದೇಶ ಅಥವಾ ಗುಂಪಿನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬಾರದು. ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತಾ ಭಾರತವು ವಿವಿಧ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಳ್ಳುತ್ತಿದೆ, ಇದರಿಂದಾಗಿ ಒಂದು ಹಾದಿ ಮುಚ್ಚಿದರೂ ಇನ್ನೊಂದು ಲಭ್ಯವಿರುತ್ತದೆ. ಪೂರೈಕೆ ಸರಪಳಿಯಲ್ಲಿನ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತವು ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ, ಇದರಿಂದಾಗಿ ಜಾಗತಿಕ ಬಿಕ್ಕಟ್ಟುಗಳು ದೇಶದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುತ್ತಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು