
( ಈ ಛಾಯಾಚಿತ್ರವನ್ನು ಮುದ್ರಿಸುವ ಹಿಂದೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿಲ್ಲ, ಬದಲಾಗಿ ನಡೆದ ವಿಡಂಬನೆಯು ತಿಳಿಯಲಿ ಎಂಬ ಉದ್ದೇಶದಿಂದ ಇವುಗಳನ್ನು ಪ್ರಕಟಿಸಲಾಗಿದೆ. – ಸಂಪಾದಕರು )
ಕರಾಚಿ (ಪಾಕಿಸ್ತಾನ) – ಇಲ್ಲಿನ ಐತಿಹಾಸಿಕ ಕಟ್ಟಡವೊಂದರ ಗೋಡೆಗಳ ಮೇಲಿದ್ದ ಹಿಂದೂ ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಇದರಿಂದ ಅಲ್ಪಸಂಖ್ಯಾತ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ; ಆದರೆ ಪಾಕಿಸ್ತಾನದ ಆಡಳಿತಗಾರರು ಈ ಬಗ್ಗೆ ಮೌನ ವಹಿಸಿದ್ದಾರೆ. ಪೊಲೀಸರಿಂದಲೂ ಇದುವರೆಗೆ ಯಾವುದೇ ಕ್ರಮ ಜರುಗಿಸಲಾಗಿಲ್ಲ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಲ್ಪುರ್ ಜಿಲ್ಲೆಯ ಅಲ್ಪಸಂಖ್ಯಾತರ ಹಕ್ಕುಗಳ ಸಂಘಟನೆಯ ಅಧ್ಯಕ್ಷರಾದ ಶಿವ ಕಚ್ಚಿ ಅವರು ‘ಎಕ್ಸ್’ (X) ನಲ್ಲಿ,
೧. ಕರಾಚಿಯ ಐತಿಹಾಸಿಕ ‘ಸಗನ್ ಮ್ಯಾನ್ಷನ್’ ಕಟ್ಟಡದಲ್ಲಿ ಭಗವಾನ್ ಶ್ರೀಕೃಷ್ಣ ಮತ್ತು ಗೋಪಿಯರ ವಿಗ್ರಹಗಳಿಗೆ ಮಾಡಿದ ಅವಮಾನವು ಅತ್ಯಂತ ಖಂಡನೀಯವಾಗಿದೆ. ಇದು ಕೇವಲ ಒಂದು ಕಟ್ಟಡಕ್ಕೆ ಉಂಟಾದ ಹಾನಿಯಲ್ಲ, ಬದಲಾಗಿ ಪಾಕಿಸ್ತಾನದ ಬಹುಸಂಸ್ಕೃತಿಯ ಪರಂಪರೆ, ಧಾರ್ಮಿಕ ಸಾಮರಸ್ಯ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಭಾವನೆಗಳ ಮೇಲಿನ ದಾಳಿಯಾಗಿದೆ. ಈ ನಾಚಿಕೆಗೇಡಿನ ಕೃತ್ಯವನ್ನು ತೀವ್ರವಾಗಿ ಪ್ರತಿಭಟಿಸುವುದು ಅಗತ್ಯವಾಗಿದೆ.
೨. ಕರಾಚಿಯ ಎಂ.ಎ. ಜಿನ್ನಾ ರಸ್ತೆಯಲ್ಲಿರುವ ಈ ಐತಿಹಾಸಿಕ ಕಟ್ಟಡವನ್ನು ೧೯೩೭ ರಲ್ಲಿ ನಿರ್ಮಿಸಲಾಗಿದ್ದು, ಇದು ಹಿಂದೂ ಧಾರ್ಮಿಕ ಸಂಕೇತಗಳ ಸಮೃದ್ಧ ಅಸ್ತಿತ್ವದ ಸಂಕೇತವಾಗಿದೆ. ಭಗವಾನ್ ಶ್ರೀಕೃಷ್ಣ ಮತ್ತು ಗೋಪಿಯರ ವಿಗ್ರಹಗಳ ಶಿರಚ್ಛೇದ ಮಾಡುವುದು ಕೇವಲ ಧಾರ್ಮಿಕ ಅವಮಾನವಲ್ಲ, ಬದಲಾಗಿ ಹಂಚಿಕೆಯ ಪರಂಪರೆಯ ನಾಶವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು, ತಪ್ಪಿತಸ್ಥರನ್ನು ವಿಳಂಬವಿಲ್ಲದೆ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಹಾಗೆಯೇ ಈ ಐತಿಹಾಸಿಕ ಕಟ್ಟಡವನ್ನು ತಕ್ಷಣವೇ ಪುನರ್ಸ್ಥಾಪಿಸಿ ಅದರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಇಷ್ಟು ವರ್ಷಗಳ ಕಾಲ ಈ ವಿಗ್ರಹಗಳು ಇನ್ನೂ ಸುರಕ್ಷಿತವಾಗಿದ್ದವು ಎಂಬುದೇ ಆಶ್ಚರ್ಯಪಡುವಂತಹ ಸ್ಥಿತಿ ಪಾಕಿಸ್ತಾನದಲ್ಲಿದೆ! ಇಂತಹ ಘಟನೆಗಳು ವಿಶ್ವದಾದ್ಯಂತ ಇರುವ ಹಿಂದೂಗಳಿಗೆ ಲಜ್ಜಾಸ್ಪದವಾಗಿವೆ ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು