ವಿಚಾರಣೆ ವೇಳೆ ಬಂಧಿತ ಜಿಹಾದಿ ಭಯೋತ್ಪಾದಕನಿಂದ ಮಾಹಿತಿ

ನವದೆಹಲಿ – ದೆಹಲಿ ಪೊಲೀಸರು ಎರಡು ದಿನಗಳ ಹಿಂದೆ ಬಂಧಿಸಿದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಶಬ್ಬೀರ್ ಅಹ್ಮದ್, ದೆಹಲಿಯ ಪ್ರಸಿದ್ಧ ಕಾಲಕಾಜಿ ಮಂದಿರ, ಲೋಟಸ್ ಟೆಂಪಲ್ (ಕಮಲದ ದೇವಾಲಯ) ಮತ್ತು ಛತರ್‌ಪುರ ಮಂದಿರಗಳ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ.
ಸ್ಥಳ ಪರಿಶೀಲನೆಯ ವಿಡಿಯೋಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದ!
ಶಬ್ಬೀರ್ ಅಹ್ಮದ್ ಈ ದೇವಸ್ಥಾನಗಳ ಜೊತೆಗೆ ಕನ್ನಾಟ್ ಪ್ಲೇಸ್‌ನ ಜನನಿಬಿಡ ಮಾರುಕಟ್ಟೆಗಳ ಸಮೀಕ್ಷೆ ನಡೆಸಿದ್ದನು. ನಂತರ ಆಯಾ ಸ್ಥಳಗಳ ವಿಡಿಯೋಗಳನ್ನು ಪಾಕಿಸ್ತಾನದಲ್ಲಿರುವ ತನ್ನ ಹ್ಯಾಂಡ್ಲರ್‌ಗಳಿಗೆ (ಸೂತ್ರಧಾರರಿಗೆ) ಕಳುಹಿಸಿಕೊಟ್ಟಿದ್ದನು.
ವಿಚಾರಣೆಯ ವೇಳೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಮತ್ತು ಲಷ್ಕರ್-ಎ-ತೊಯ್ಬಾ ಸಂಘಟನೆಗಳು ಕಾಶ್ಮೀರದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿ.ಆರ್.ಎಫ್.) ಮಾದರಿಯಲ್ಲಿ ಬಾಂಗ್ಲಾದೇಶದಲ್ಲಿ ಹೊಸ ಭಯೋತ್ಪಾದಕ ಜಾಲವನ್ನು ಸೃಷ್ಟಿಸುತ್ತಿವೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಯೋಜನೆಗಾಗಿ ಅಲ್ಲಿನ ಮುಸ್ಲಿಂ ಯುವಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಶಬ್ಬೀರ್ ಅಹ್ಮದ್ ಕೆಲವು ಕಾಲ ಬಾಂಗ್ಲಾದೇಶದಲ್ಲಿ ಅಡಗಿಕೊಂಡಿದ್ದನು ಮತ್ತು ಅಲ್ಲಿನ ಅಧಿಕಾರ ಬದಲಾವಣೆಯ ನಂತರ ಮತ್ತೆ ಸಕ್ರಿಯನಾಗಿದ್ದನು. ಈತ ದೆಹಲಿಯಿಂದ ದಕ್ಷಿಣ ಭಾರತ ಮತ್ತು ಬಂಗಾಳದವರೆಗೆ ತನ್ನ ಜಾಲವನ್ನು ವಿಸ್ತರಿಸಿದ್ದನು.
ಜೈಲಿನಿಂದ ಬಿಡುಗಡೆಯಾದ ನಂತರ ಮತ್ತೆ ಭಯೋತ್ಪಾದಕ ಚಟುವಟಿಕೆ
ಶಬ್ಬೀರ್ ಅಹ್ಮದ್‌ಗೆ ಟಿ.ಆರ್.ಎಫ್. ಕಮಾಂಡರ್ ಸಜ್ಜಾದ್ ಗುಲ್ ಜೊತೆ ಸಂಬಂಧವಿರುವುದು ತಿಳಿದುಬಂದಿದೆ. ಗುಲ್ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಭಾರಿ ಬಹುಮಾನ ಘೋಷಿಸಿದೆ. 2015 ರಲ್ಲಿ ಕಾಶ್ಮೀರದಲ್ಲಿ ಇವರಿಬ್ಬರನ್ನೂ ಒಟ್ಟಿಗೆ ಬಂಧಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ನಂತರ ಸಜ್ಜಾದ್ ಪಾಕಿಸ್ತಾನಕ್ಕೆ ಪರಾರಿಯಾಗಿ, ಅಲ್ಲಿಂದ ಕಾರ್ಯಾಚರಣೆ ಆರಂಭಿಸಿದರೆ, ಶಬ್ಬೀರ್‌ನನ್ನು ಭಾರತದಲ್ಲಿ ದಾಳಿ ನಡೆಸಲು ಸಜ್ಜುಗೊಳಿಸಲಾಗಿತ್ತು. (ಇದರಿಂದ ಸ್ಪಷ್ಟವಾಗುವುದೇನೆಂದರೆ, ಭಯೋತ್ಪಾದಕರನ್ನು ಪೋಷಿಸುವುದಕ್ಕಿಂತ ಅವರನ್ನು ಬಂಧಿಸಿದ ತಕ್ಷಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ನೀಡುವುದೇ ಸರಿಯಾದ ಕ್ರಮ! ಈಗಲಾದರೂ ನಮ್ಮ ಸರಕಾರ ಶಬ್ಬೀರ್‌ಗೆ ಗಲ್ಲು ಶಿಕ್ಷೆಯಾಗುವಂತೆ ಪ್ರಯತ್ನಿಸಬೇಕು! – ಸಂಪಾದಕರು)
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!