ಉತ್ತರಪ್ರದೇಶದ ಮುರಾದಾಬಾದ್‌ನ `ಮೈನಾಥೇರ್’ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು

ಮುರಾದಾಬಾದ್ (ಉತ್ತರಪ್ರದೇಶ) – ಇಲ್ಲಿನ 2011ರ `ಮೈನಾಥೇರ್’ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ 16 ಮುಸಲ್ಮಾನರಿಗೆ ಮುರಾದಾಬಾದ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 15 ವರ್ಷಗಳ ಹಿಂದೆ ವಿನಯಭಂಗ ( ಛೇಡಿಸುವುದು ) ಪ್ರಕರಣದ ಆರೋಪಿಯನ್ನು ಬಂಧಿಸಲು ಹೋದ ಪೊಲೀಸ್ ತಂಡದ ಮೇಲೆ ಮುಸಲ್ಮಾನರ ಗುಂಪೊಂದು ದಾಳಿ ನಡೆಸಿತ್ತು. ತದನಂತರ ಮುಸಲ್ಮಾನರು ಪೊಲೀಸ್ ಚೌಕಿಗೆ ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಅಂದಿನ ಪೊಲೀಸ್ ಉಪಮಹಾನಿರೀಕ್ಷಕರು (DIG) ಕೂಡ ಗಂಭೀರವಾಗಿ ಗಾಯಗೊಂಡಿದ್ದರು.
🚨 JUSTICE AFTER 15 LONG YEARS 🚨
In Moradabad, 16 Muslim rioters have finally been sentenced to LIFE IMPRISONMENT for the violent unrest that left a senior IPS officer critically injured, vehicles torched, and the Mainather police post set ablaze.
⚖️ 15 YEARS to convict people… pic.twitter.com/oUQSfeM6KR
— Sanatan Prabhat (@SanatanPrabhat) March 30, 2026
ಈ ಪ್ರಕರಣದಲ್ಲಿ ಒಟ್ಟು 19 ಮುಸಸಲ್ಮಾನ ಆರೋಪಿಗಳಿದ್ದರು. ಅವರಲ್ಲಿ ಮೂವರು ಈಗಾಗಲೇ ಮೃತಪಟ್ಟಿದ್ದಾರೆ. ಉಳಿದ 16 ದೋಷಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ. ಶಿಕ್ಷೆಗೊಳಗಾದವರಲ್ಲಿ ಮಂಜೂರ್ ಅಹ್ಮದ್, ಮಹಮ್ಮದ್ ಅಲಿ, ಹಾಶಿಮ್, ಮಹಮ್ಮದ್ ಕಮ್ರುಲ್, ಮಹಮ್ಮದ್ ಮುಜೀಫ್, ಮಹಮ್ಮದ್ ಯೂನುಸ್, ರಿಜ್ವಾನ್, ಶಾಹಪುರ್ ಚಾಮ್ರಾನ್, ಜಾನೆ ಆಲಂ, ನಾಜಿಮ್, ಪರ್ವೇಜ್ ಆಲಂ, ಫಿರೋಜ್ ಮತ್ತು ಇತರ ನಾಲ್ವರು ಸೇರಿದ್ದಾರೆ. ಇವರೆಲ್ಲರೂ ಮೈನಾಥೇರ್ ಪರಿಸರದ ನಿವಾಸಿಗಳಾಗಿದ್ದಾರೆ. ಇವರಲ್ಲಿ 14 ದೋಷಿಗಳು ಈಗಾಗಲೇ ಜೈಲಿನಲ್ಲಿದ್ದರು, ತಲೆಮರೆಸಿಕೊಂಡಿದ್ದ ಇಬ್ಬರನ್ನು ಪೊಲೀಸರು ಇತ್ತೀಚೆಗಷ್ಟೇ ಬಂಧಿಸಿದ್ದರು. ತನಿಖೆಯ ಸಮಯದಲ್ಲಿ ಪೊಲೀಸರು 34 ಜನರನ್ನು ಗುರುತಿಸಿದ್ದರು, ಅವರಲ್ಲಿ 25 ಜನರ ವಿರುದ್ಧ ಆರೋಪಪಟ್ಟಿಯನ್ನು ದಾಖಲಿಸಲಾಗಿತ್ತು. ಇದರಲ್ಲಿ 6 ಅಪ್ರಾಪ್ತ ಬಾಲಕರೂ ಸೇರಿದ್ದರು.
ಏನಿದು ಪ್ರಕರಣ?
ಮುರಾದಾಬಾದ್‌ನ ಮೈನಾಥೇರ್ ವ್ಯಾಪ್ತಿಯ ಅಸಾಲತ್‌ಪುರ್ ಬಘಾ ಗ್ರಾಮದಲ್ಲಿ ಜುಲೈ 6, 2011 ರಂದು ಪೊಲೀಸರು ಅಸಭ್ಯ ವರ್ತನೆಯ ಪ್ರಕರಣದ ಆರೋಪಿಯನ್ನು ಬಂಧಿಸಲು ಹೋಗಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಬಾರದು ಎಂದು ಆರಂಭದಲ್ಲಿ ಮುಸಲ್ಮಾನಂ ಮಹಿಳೆಯರು ಪೊಲೀಸರನ್ನು ಸುತ್ತುವರಿದರು. ತದನಂತರ `ಪೊಲೀಸರು ಧಾರ್ಮಿಕ ಗ್ರಂಥವನ್ನು (ಕುರಾನ್) ಅವಮಾನಿಸಿದ್ದಾರೆ’ ಎಂಬ ವದಂತಿಯನ್ನು ಹಬ್ಬಿಸಲಾಯಿತು. ಈ ವದಂತಿಯ ನಂತರ, ಮುಸಲ್ಮಾನರ ಗುಂಪು ಡಿಂಗರ್‌ಪುರ್ ಪೊಲೀಸ್ ಚೌಕಿ ಮತ್ತು ಅಲ್ಲಿನ ಪೊಲೀಸು ವಾಹನಗಳಿಗೆ ಬೆಂಕಿ ಹಚ್ಚಿತು. ಘಟನೆಯ ಮಾಹಿತಿ ತಿಳಿದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದಾಗ, ಅವರ ಮೇಲೂ ಗುಂಪು ದಾಳಿ ನಡೆಸಿತು.
ಸಂಪಾದಕೀಯ ನಿಲುವುವಿಳಂಬವಾಗಿ ಸಿಗುವ ನ್ಯಾಯವು ಅನ್ಯಾಯವಲ್ಲವೇ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!