ಡೊನಾಲ್ಡ್ ಟ್ರಂಪ್ ವಿರುದ್ಧ ಜಗತ್ತಿನಾದ್ಯಂತ ಹೆಚ್ಚಿದ ಆಕ್ರೋಶ

ವಾಷಿಂಗ್ಟನ್ (ಅಮೇರಿಕ) – ಅಮೇರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯಿಂದಾಗಿ ಇಡೀ ಜಗತ್ತು ಸಂಕಷ್ಟ ಎದುರಿಸ ಬೇಕಾಗುತ್ತಿರುವುದರಿಂದ, ಅಮೇರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪರವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅವರ ವಿವಿಧ ನೀತಿಗಳ ವಿರುದ್ಧ ಮಾರ್ಚ್ 28 ರಂದು ಅಮೇರಿಕ ಮತ್ತು ಯುರೋಪಿನಲ್ಲಿ ‘ನೋ ಕಿಂಗ್ಸ್’ (ರಾಜ ಬೇಡ) ಹೆಸರಿನ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಾಯಿತು. ಇದರಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಆಂದೋಲನದ ಮುಖ್ಯ ಕೇಂದ್ರ ಅಮೇರಿಕದ ಮಿನೆಸೋಟ ಆಗಿತ್ತು. ಸೇಂಟ್ ಪಾಲ್‌ನಲ್ಲಿರುವ ಮಿನ್ನೇಸೋಟದ ಕ್ಯಾಪಿಟಲ್ ಮೈದಾನ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಕೆಲವರು ಅಮೇರಿಕದ ಧ್ವಜಗಳನ್ನು ತಲೆಕೆಳಗಾಗಿ ಹಿಡಿದಿದ್ದರು, ಇದನ್ನು ಐತಿಹಾಸಿಕವಾಗಿ ಸಂಕಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.
🌍 ‘No Kings’ Protests Shake US & Europe! 🇺🇸🔥
Massive protests erupt against Donald Trump over US-Israel actions on Iran and domestic policies.
▪️ Over 3,100 protests across 50 states
▪️ Estimated 9 million participants worldwide
▪️ Epicenter: Minnesota – thousands gathered in… pic.twitter.com/lwq77jDfVK— Sanatan Prabhat (@SanatanPrabhat) March 29, 2026
ವಾಷಿಂಗ್ಟನ್ ಡಿಸಿಯ ಮೆರವಣಿಗೆಯಲ್ಲಿ ‘ವಿದೂಷಕನೇ, ರಾಜಮಕುಟವನ್ನು ಕೆಳಗಿಳಿಸು’ ಎಂಬ ಫಲಕ!
ವಾಷಿಂಗ್ಟನ್ ಡಿಸಿಯಲ್ಲಿ ನೂರಾರು ಜನರು ಲಿಂಕನ್ ಮೆಮೋರಿಯಲ್‌ನಿಂದ ನ್ಯಾಷನಲ್ ಮಾಲ್‌ವರೆಗೆ ಮೆರವಣಿಗೆ ನಡೆಸಿದರು. ಅವರ ಕೈಯಲ್ಲಿ ‘ವಿದೂಷಕನೇ, ರಾಜಮಕುಟವನ್ನು ಕೆಳಗಿಳಿಸು’ ಎಂದು ಬರೆದ ಫಲಕಗಳಿದ್ದವು. ‘ನೋ ಕಿಂಗ್ಸ್’ (ರಾಜ ಬೇಡ) ಎಂಬ ಘೋಷಣೆಗಳನ್ನೂ ಕೂಗಿದರು.
ದೇಶವ್ಯಾಪಿ ಮತ್ತು ಜಾಗತಿಕ ಪ್ರತಿಕ್ರಿಯೆ!
ನ್ಯೂಯಾರ್ಕ್ ನಗರದಿಂದ ಹಿಡಿದು ಐಡಾಹೊದ ಡ್ರಿಗ್ಸ್‌ನಂತಹ ಸಣ್ಣ ಪಟ್ಟಣಗಳವರೆಗೆ ಈ ಪ್ರತಿಭಟನೆಗಳು ಹರಡಿವೆ. ಆಯೋಜಕರ ಪ್ರಕಾರ, 50 ರಾಜ್ಯಗಳಲ್ಲಿ 3,100 ಕ್ಕೂ ಹೆಚ್ಚು ಪ್ರತಿಭಟನೆಗಳನ್ನು ಆಯೋಜಿಸಲಾಗಿತ್ತು. ಅಂದಾಜು 90 ಲಕ್ಷ ಜನರು ಇದರಲ್ಲಿ ಭಾಗವಹಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಸ್ಯಾನ್ ಡಿಯಾಗೋದಲ್ಲಿ ಸುಮಾರು 40 ಸಾವಿರ ಜನರು ಮೆರವಣಿಗೆ ನಡೆಸಿದರು.
ಯುರೋಪ್‌ನ ಲಂಡನ್, ಪ್ಯಾರಿಸ್ ಮತ್ತು ರೋಮ್‌ಗಳಲ್ಲಿಯೂ ಪ್ರತಿಭಟನೆಗಳು ನಡೆದವು. ರೋಮ್‌ನಲ್ಲಿ ಸಾವಿರಾರು ಜನರು ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ ವಿರುದ್ಧ ಮತ್ತು ಇರಾನ್ ಮೇಲಿನ ದಾಳಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
‘ಎಡಪಂಥೀಯರ ಆಂದೋಲನ’ ಎಂದು ಅಮೇರಿಕ ಸರಕಾರದ ಟೀಕೆ
ವೈಟ್ ಹೌಸ್ ವಕ್ತಾರರಾದ ಅಬಿಗೈಲ್ ಜಾಕ್ಸನ್ ಈ ಪ್ರತಿಭಟನೆಗಳನ್ನು ‘ಎಡಪಂಥೀಯ ಜಾಲದ ಸೃಷ್ಟಿ’ ಎಂದು ಕರೆದಿದ್ದಾರೆ ಮತ್ತು ಇದಕ್ಕೆ ಜನರ ನೈಜ ಬೆಂಬಲವಿಲ್ಲ ಎಂದು ಹೇಳಿದ್ದಾರೆ. ನ್ಯಾಷನಲ್ ರಿಪಬ್ಲಿಕನ್ ಕಾಂಗ್ರೆಸ್ ಸಮಿತಿಯು ಸಹ ಇದನ್ನು ‘ಹೇಟ್ ಅಮೇರಿಕ ರ್‍ಯಾಲೀಸ್’ (ಅಮೇರಿಕ ದ್ವೇಷಿ ಮೆರವಣಿಗೆ) ಎಂದು ಟೀಕಿಸಿದೆ.
ಈ ಆಂದೋಲನದಿಂದಾಗಿ ಅಮೇರಿಕದ ರಾಜಕೀಯ ವಾತಾವರಣವು ತೀವ್ರವಾಗಿ ಕಾವೇರಿದ್ದು, ಟ್ರಂಪ್ ಆಡಳಿತದ ವಿರುದ್ಧದ ಅಸಮಾಧಾನವು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ