
ನವದೆಹಲಿ – ಇರಾನ್ ತನ್ನ ಶತ್ರು ರಾಷ್ಟ್ರಗಳಿಗೆ ಹೋರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರೂ, ಭಾರತಕ್ಕೆ ಮಾತ್ರ ಅದು ಮುಕ್ತವಾಗಿದೆ ಎಂದು ಘೋಷಿಸಿದೆ. ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು, “ಈ ಮಾರ್ಗವು ಎಲ್ಲರಿಗೂ ಮುಚ್ಚಿಲ್ಲ. ನಾವು ನಮ್ಮ ಮಿತ್ರರಿಗಾಗಿ ಇದನ್ನು ತೆರೆದಿಟ್ಟಿದ್ದೇವೆ; ಆದರೆ ಶತ್ರುಗಳಿಗೆ ಇಲ್ಲಿಂದ ಒಂದು ಹನಿ ತೈಲವನ್ನೂ ಕೊಂಡೊಯ್ಯಲು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್‌ನ ಅತ್ಯಂತ ಆಪ್ತ 5 ಮಿತ್ರ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದು, ಭಾರತೀಯ ನೌಕೆಗಳಿಗೆ ಹೋರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ.
🇮🇳 India Gets the Green Light in the Strait of Hormuz
Iran has officially informed the UN & IMO that the Strait is open for "friendly nations" and non-hostile vessels. 🚢
While the regional conflict has choked global trade, FM Abbas Araghchi specifically named India, China,… https://t.co/2v3ffLrDXM pic.twitter.com/pa7xN3d5mS
— Sanatan Prabhat (@SanatanPrabhat) March 26, 2026
ಏನಿದು ಇರಾನ್‌ನ ಹೊಸ ಕಾರ್ಯತಂತ್ರ?
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವಂತೆ ಕರೆ ನೀಡಿದ ನಂತರ ಇರಾನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಇರಾನ್ ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ, ಚೀನಾ, ರಷ್ಯಾ, ಭಾರತ, ಇರಾಕ್ ಮತ್ತು ಪಾಕಿಸ್ತಾನ ದೇಶಗಳ ನೌಕೆಗಳಿಗೆ ಹೋರ್ಮುಜ್ ಮೂಲಕ ಹಾದುಹೋಗಲು ಯಾವುದೇ ಅಡೆತಡೆ ಇರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕಾ, ಇಸ್ರೇಲ್ ಮತ್ತು ಅವುಗಳ ಮಿತ್ರ ರಾಷ್ಟ್ರಗಳಿಗೆ ಸೇರಿದ ನೌಕೆಗಳನ್ನು ಶತ್ರುಗಳೆಂದು ಪರಿಗಣಿಸಲಾಗುವುದು ಮತ್ತು ಅವರಿಗೆ ಈ ಮಾರ್ಗವು ಸಂಪೂರ್ಣವಾಗಿ ಬಂದ್ ಆಗಿರುತ್ತದೆ. ಇರಾನ್ ವಿರುದ್ಧ ಯಾವುದೇ ಆಕ್ರಮಣಕಾರಿ ಕ್ರಮಗಳಲ್ಲಿ ಭಾಗಿಯಾಗದ ದೇಶಗಳಿಗೆ ಮಾತ್ರ ಈ ಮಾರ್ಗದಲ್ಲಿ ಸಂಚರಿಸಲು ಅನುಮತಿ ಇರುತ್ತದೆ. ಇದಕ್ಕಾಗಿ ಇರಾನ್ ನೌಕಾಪಡೆಯೊಂದಿಗೆ ಸಮನ್ವಯ ಸಾಧಿಸುವುದು ಕಡ್ಡಾಯವಾಗಿದೆ.
ಭಾರತೀಯ ಯುದ್ಧನೌಕೆಗಳಿಂದ ರಕ್ಷಣೆ!
ಭಾರತದ 18 ನೌಕೆಗಳು ಹೋರ್ಮುಜ್ ಜಲಸಂಧಿಯ ಪ್ರದೇಶದಲ್ಲಿ ಸಿಲುಕಿಕೊಂಡಿದ್ದವು; ಆದರೆ ಭಾರತದ ಯಶಸ್ವಿ ರಾಜತಾಂತ್ರಿಕತೆಯಿಂದಾಗಿ, ಪೆಟ್ರೋಲಿಯಂ ಉತ್ಪನ್ನಗಳನ್ನು ಹೊತ್ತೊಯ್ಯುತ್ತಿದ್ದ 4 ನೌಕೆಗಳು ಈಗಾಗಲೇ ಸುರಕ್ಷಿತವಾಗಿ ಹೊರಬಂದಿವೆ ಮತ್ತು ಇನ್ನೂ 5 ನೌಕೆಗಳು ಶೀಘ್ರದಲ್ಲೇ ಭಾರತವನ್ನು ತಲುಪಲಿವೆ. ಭಾರತವು ಈ ನೌಕೆಗಳ ಸುರಕ್ಷತೆಗಾಗಿ ‘ಆಪರೇಷನ್ ಊರ್ಜಾ ಸುರಕ್ಷಾ’ (Operation Urja Suraksha) ಆರಂಭಿಸಿದೆ. ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರ ಮತ್ತು ಓಮನ್ ಕೊಲ್ಲಿಯಲ್ಲಿ 5 ಕ್ಕೂ ಹೆಚ್ಚು ಮುಂಚೂಣಿ ಯುದ್ಧನೌಕೆಗಳನ್ನು ನಿಯೋಜಿಸಿದೆ. ಎಲ್.ಪಿ.ಜಿ (LPG), ಎಲ್.ಎನ್.ಜಿ (LNG) ಮತ್ತು ಕಚ್ಚಾ ತೈಲದ ಪೂರೈಕೆಗೆ ಧಕ್ಕೆಯಾಗದಂತೆ ತಡೆಯಲು ಭಾರತೀಯ ನೌಕಾಪಡೆಯು ಕವಚದಂತೆ ನಿಂತು ಭಾರತೀಯ ಸರಕು ನೌಕೆಗಳಿಗೆ ರಕ್ಷಣೆ ನೀಡುತ್ತಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !