
‘ಪ್ರಸ್ತುತ ಯುಗದಲ್ಲಿ ಅನೇಕ ಸಾಧಕರು ಕೇವಲ ಕೆಲವು ಗಂಟೆಗಳ ಕಾಲ ಸಾಧನೆಯೆಂದು ನಾಮಜಪ, ಧ್ಯಾನ ಇತ್ಯಾದಿಗಳನ್ನು ಮಾಡುತ್ತಾರೆ ಮತ್ತು ದಿನದ ಹೆಚ್ಚಿನ ಸಮಯವನ್ನು ದೂರದರ್ಶನ ವಾಹಿನಿಗಳ ಕಾರ್ಯಕ್ರಮ ಮತ್ತು ಚಲನಚಿತ್ರಗಳನ್ನು ವೀಕ್ಷಿಸುವುದರಲ್ಲಿ, ಹಾಗೆಯೇ ಸಂಚಾರವಾಣಿ ಮತ್ತು ‘ಸೋಶಿಯಲ್ ಮೀಡಿಯಾ’ಗಳಲ್ಲಿ ಕಳೆಯುತ್ತಾರೆ.’ ಸಂತರ ಸತ್ಸಂಗದಲ್ಲಿರುವ ಚೈತನ್ಯ ಮತ್ತು ಸಾತ್ತ್ವಿಕತೆಯಿಂದಾಗಿ, ಸತ್ಸಂಗದಲ್ಲಿರುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ತಾತ್ಕಾಲಿಕ ಕಾಲಾವಧಿಗಾಗಿ ಹೆಚ್ಚಾಗುತ್ತದೆ. ಇದರಿಂದಾಗಿ ಅವರಿಗೆ ಆಧ್ಯಾತ್ಮಿಕ ಅನುಭೂತಿಗಳು ಬರುತ್ತವೆ. ವ್ಯಕ್ತಿಗೆ ಸತತವಾಗಿ ಸಂತರ ಸತ್ಸಂಗದ ಚೈತನ್ಯ ಸಿಗುವುದರಿಂದ ಮತ್ತು ಅವರ ಸಾಧನೆಯ ಪ್ರಯತ್ನಗಳಿಂದಾಗಿ ಅವರ ಆಧ್ಯಾತ್ಮಿಕ ಮಟ್ಟವು ಸ್ಥಿರವಾಗಿ ಉಳಿಯುತ್ತದೆ. ತದ್ವಿರುದ್ಧ ರಜ-ತಮ ಪ್ರಧಾನÀ ಚಲನಚಿತ್ರ ಮತ್ತು ದೂರದರ್ಶನ ವಾಹಿನಿಗಳ ಕಾರ್ಯಕ್ರಮಗಳನ್ನು ನೋಡುವುದು, ‘ಸೋಶಿಯಲ್ ಮೀಡಿಯಾ’ ಬಳಸುವುದು ಮುಂತಾದ ವಿಷಯಗಳಲ್ಲಿ ದಿನದ ಹೆಚ್ಚಿನ ಸಮಯವನ್ನು ಕಳೆದರೆ, ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ತಾತ್ಕಾಲಿಕವಾಗಿ ಕುಸಿಯುತ್ತದೆ. ಆ ಸಮಯದಲ್ಲಿ ಸಾಧಕನ ಕಡಿಮೆಯಾದ ಆಧ್ಯಾತ್ಮಿಕ ಮಟ್ಟದ ದುರ್ಲಾಭವನ್ನು ಪಡೆದುಕೊಂಡು, ಕೆಟ್ಟ ಶಕ್ತಿಗಳು ಸಾಧಕನ ಮೇಲೆ ತೀವ್ರವಾಗಿ ಆಕ್ರಮಣ ಮಾಡುತ್ತವೆ ಮತ್ತು ಅವನನ್ನು ಅನಾರೋಗ್ಯಕ್ಕೆ ಈಡು ಮಾಡುತ್ತವೆ. ಸತತವಾಗಿ ವ್ಯಕ್ತಿಯ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣವಾಗುವುದು ಮತ್ತು ಚಲನಚಿತ್ರ ಹಾಗೂ ದೂರದರ್ಶನ ಕಾರ್ಯಕ್ರಮಗಳನ್ನು ವೀಕ್ಷಿಸುವುದು, ‘ಸೋಶಿಯಲ್ ಮೀಡಿಯಾ’ ಬಳಕೆ ಮುಂತಾದವುಗಳಿಂದ ಪ್ರಕ್ಷೇಪಿತವಾಗುವ ರಜ-ತಮ ಗುಣಗಳಿಂದಾಗಿ ಅಂತಿಮವಾಗಿ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟದಲ್ಲಿ ಶಾಶ್ವತವಾಗಿ ಕುಸಿತ ಉಂಟಾಗುತ್ತದೆ.
‘ಹೀಗಾಗಬಾರದು’ ಎನ್ನುವುದಕ್ಕಾಗಿ, ಸಾಧಕನು ದಿನವಿಡೀ ಪ್ರಾರ್ಥನೆ, ಓಡಾಡುವಾಗ ನಾಮಜಪ ಮತ್ತು ಭಾವಜಾಗೃತಿಯ ಪ್ರಯೋಗ ಮಾಡುವುದು, ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮುಂತಾದ ವಿವಿಧ ಮಾಧ್ಯಮಗಳ ಮೂಲಕ ಈಶ್ವರನ ಸತ್ಸಂಗದಲ್ಲಿ, ಅಂದರೆ ಅನುಸಂಧಾನದಲ್ಲಿ ಇರುವುದು ಮಹತ್ವದ್ದಾಗಿದೆ.’
– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮ ಜ್ಞಾನಪ್ರಾಪ್ತಕರ್ತ ಸಾಧಕರು, ಆಧ್ಯಾತ್ಮಿಕ ಮಟ್ಟ ಶೇ. ೬೩), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ಲಭಿಸಿದ ದಿನಾಂಕ: ೧೪.೧.೨೦೨೬)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !