
ಇಸ್ಲಾಮಾಬಾದ್ (ಪಾಕಿಸ್ತಾನ) – ಲಾಹೋರ್ ಸಮೀಪವಿರುವ ಮುರೀದಕೆಯಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಧ್ವಂಸಗೊಂಡ ಪ್ರಧಾನ ಕಚೇರಿ ‘ಮರ್ಕಜ್ ತಯ್ಯಬಾ’ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಲಷ್ಕರ್-ಎ-ತೊಯ್ಬಾ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿಯನ್ನು ಗುಂಡಿಕ್ಕಿ ಮತ್ತು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ.
೧. ಮಾರ್ಚ್ ೨೨ ರಂದು ಮಧ್ಯಾಹ್ನ ಮರ್ಕಜ್ ತಯ್ಯಬಾ ಪ್ರದೇಶದಲ್ಲಿ ಈದ್ ನ ನಮಾಜ್ ಆಯೋಜಿಸಲಾಗಿತ್ತು. ಇದರಲ್ಲಿ ಮೌಲಾನಾ ಅಬು ಜಾರ್, ಮೌಲಾನಾ ಅಬ್ದುಲ್ ರೆಹಮಾನ್ ಆಬಿದ್ ಸೇರಿದಂತೆ ಲಷ್ಕರ್-ಎ-ತೊಯ್ಬಾದ ಅನೇಕ ಪ್ರಮುಖ ಕಮಾಂಡರ್‌ಗಳು ಉಪಸ್ಥಿತರಿದ್ದರು.
೨. ನಮಾಜ್ ಮುಗಿದ ನಂತರ ಬಿಲಾಲ್ ಆರಿಫ್ ಸಲಾಫಿ ಹೊರಬಂದಾಗ, ಒಬ್ಬ ವ್ಯಕ್ತಿ ಆತನ ಮೇಲೆ ಗುಂಡು ಹಾರಿಸಿದರೆ, ಒಬ್ಬ ಮಹಿಳೆ ಚೂರಿಯಿಂದ ಇರಿದಿದ್ದಾಳೆ.
೩. ಆ ನಂತರ ಇತರ ಭಯೋತ್ಪಾದಕರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಲಾಫಿಯನ್ನು ಆಸ್ಪತ್ರೆಗೆ ಕರೆದೊಯ್ದರು.
೪. ಮೂಲಗಳ ಪ್ರಕಾರ, ಸಲಾಫಿ ೨೦೦೫ ರಿಂದ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಹೊಂದಿದ್ದನು ಮತ್ತು ಸಂಘಟನೆಗಾಗಿ ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದನು.
೫. ಸಲಾಫಿಯು ಮುರೀದಕೆಯಲ್ಲಿನ ತಯ್ಯಬಾ ಕಾಲೋನಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದನು. ಅಲ್ಲಿ ಸೇನೆಯ ಇತರ ಕಮಾಂಡರ್‌ಗಳು ಸಹ ವಾಸವಾಗಿದ್ದಾರೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !