ಮಹಾಕವಿ ಕಾಳೀದಾಸರು ‘ರಘುವಂಶ’ ಎಂಬ ಮಹಾಕಾವ್ಯವನ್ನು ರಚಿಸಿದರು. ಮಧುರರಸದಿಂದ ತುಂಬಿ ತುಳುಕುವ ಈ ಮಹಾಕಾವ್ಯವು ಮಹಾಕವಿ ಕಾಳಿದಾಸರ ಲೇಖನಿಯಿಂದ ಹೊರಹೊಮ್ಮಿದೆ. ಅದರ ಭಾಷೆ ಪ್ರಾದೇಶಿಕ, ಅರ್ಥ ಗಂಭೀರ ಹಾಗೂ ಸರಳವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿನ ಆದರ್ಶ ಜೀವನ ಯಾವುದು ? ಆದರ್ಶ ನಾಗರಿಕ ಯಾರು ? ಅವನು ಹೇಗಿರುತ್ತಾನೆ ? ತಪಸ್ವಿ ಹಾಗೂ ಸಂಸಾರಿ ಹೇಗಿರುತ್ತಾನೆ ? ಎಂಬುದರ ಅತ್ಯಂತ ಉತ್ಕೃಷ್ಟ ಹಾಗೂ ಸುಂದರವಾದ ವರ್ಣನೆಯು ನಮಗೆ ಕಾಳೀದಾಸರ ಮಹಾಕಾವ್ಯದಲ್ಲಿ ಕಂಡುಬರುತ್ತದೆ. ಶ್ರೀರಾಮ ಹಾಗೂ ಶ್ರೀಕೃಷ್ಣರ ರೂಪದಲ್ಲಿ ಭಗವಂತನು ಮಾನವೀ ಜೀವನಕ್ಕಾಗಿ ದೊಡ್ಡ ಕಾರ್ಯವನ್ನು ಮಾಡಿ ಆದರ್ಶವನ್ನು ನಿರ್ಮಾಣ ಮಾಡಿದ್ದಾರೆ. ರಘುವಂಶ ಕುಲದಲ್ಲಿನ ವ್ಯಕ್ತಿಗಳು ಜೀವನದಲ್ಲಿ ಆದರ್ಶ ಗುಣಗಳ ಬೀಜವನ್ನು ಬಿತ್ತಿದ್ದಾರೆ. ದೈವೀ ಗುಣಗಳಿಂದ ಸಂಪನ್ನವಾಗಿರುವ ವ್ಯಕ್ತಿಗಳ ಜೀವನವನ್ನು ತಿಳಿದುಕೊಂಡು ನಾವು ನಮ್ಮಲ್ಲಿ ಅಂತಹ ಗುಣಗಳನ್ನು ವೃದ್ಧಿಗೊಳಿಸಲು ಪ್ರಯತ್ನಿಸಬೇಕು, ಎಂಬ ಬೋಧನೆಯನ್ನು ನೀಡಿದರು.

ರಘುವಂಶವು ಶುದ್ಧ ಪವಿತ್ರ ವಂಶವೆಂದು ಭಾರತೀಯ ಸಂಸ್ಕೃತಿಯಲ್ಲಿ ಆದರಣೀಯ ಹಾಗೂ ವಂದನೀಯವಾಗಿದೆ. ರಘುವಂಶ ಭಾರತದ ಈ ಪುಣ್ಯ ಹಾಗೂ ಪವಿತ್ರ ಭೂಮಿಯಲ್ಲಿ ಸಾಂಸ್ಕೃತಿಕ ಬುನಾದಿಯನ್ನು ನೆಟ್ಟಿತು. ರಘುವಂಶದಲ್ಲಿನ ಎಲ್ಲ ರಾಜರು ಸಾಮರ್ಥ್ಯಶಾಲಿಗಳಾಗಿದ್ದರು. ಸಂಪೂರ್ಣ ಪೃಥ್ವಿಯ ಮೇಲೆ ಅವರ ರಾಜ್ಯ ಹಬ್ಬಿತ್ತು. ಅವರ ವಿಜಯ ರಥವನ್ನು ಅಡ್ಡಗಟ್ಟುವ ಒಬ್ಬ ವೀರನೂ ಈ ಭೂಮಿಯ ಮೇಲಿರಲಿಲ್ಲ. ರಘುವಂಶವು ಸಂಪೂರ್ಣ ಮಾನವ ಸಮಾಜಕ್ಕೆ ಸಭ್ಯ ಹಾಗೂ ಆದರ್ಶ ಜೀವನ ಹೇಗಿರುತ್ತದೆ, ಎಂಬುದನ್ನು ತಮ್ಮ ಆಚರಣೆಯಿಂದ ತೋರಿಸಿಕೊಟ್ಟಿತು. ಅವರು ಒಂದು ಆದರ್ಶವನ್ನು ಮುಂದಿಟ್ಟಿದ್ದಾರೆ. ಯಾವುದೇ ಜೀವನವನ್ನು ಸ್ಥಿರಗೊಳಿಸಲಿಕ್ಕಿದ್ದರೆ, ಅದು ಒಬ್ಬ ಮನುಷ್ಯನಿಂದಾಗುವ ಕೆಲಸವಲ್ಲ. ರಘುವಂಶದಲ್ಲಿನ ಅನೇಕ ಪೀಳಿಗೆಗಳು ಸಾಂಸ್ಕೃತಿಕ ಆದರ್ಶ ಜೀವನವನ್ನು ನಿರ್ಮಿಸಲು ತಮ್ಮ ಜೀವವನ್ನು ಸವೆಸಿದರು. ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಆಗ್ರಹದಿಂದ ಹಾಗೂ ನಿಗ್ರಹದಿಂದ ಸಮಾಜದ ಉತ್ಥಾನಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದರು. ಇಂತಹ ಅತ್ಯಂತ ಶುದ್ಧ ಹಾಗೂ ಪವಿತ್ರ ರಘುಕುಲದಲ್ಲಿ ಪ್ರಭು ರಾಮಚಂದ್ರರ ಜನ್ಮವಾಯಿತು.
೧. ಮಹಾಕವಿ ಕಾಳಿದಾಸರು ಶ್ರೀರಾಮರ ಸೂರ್ಯವಂಶಕ್ಕೆ ‘ರಘುವಂಶ’ವೆಂದು ಹೇಳುವುದರ ಹಿಂದಿನ ಕಾರಣಮೀಮಾಂಸೆ !
ಮಹಾಕವಿ ಕಾಳಿದಾಸರು ಶ್ರೀರಾಮರ ಸೂರ್ಯವಂಶವನ್ನು ಯಾರು ‘ಇಶ್ವಾಕು’ ಎಂದು ಗುರುತಿಸಲು ಆರಂಭಿಸಿದರೊ, ಅದನ್ನು ‘ರಘು ವಂಶವೆಂದು ಏಕೆ ಹೇಳಿದರು ?’ಎನ್ನುವ ಪ್ರಶ್ನೆ ಯಾರ ಮನಸ್ಸಿನಲ್ಲಾದರೂ ಉದ್ಭವಿಸಬಹುದು. ಮಹಾಕವಿ ಕಾಳಿದಾಸರಿಗೆ ದಿಲೀಪ ರಾಜನ ಔದಾರ್ಯ ಹಾಗೂ ಶೂರಪುತ್ರ ರಘುರಾಜನ ಚರಿತ್ರೆಯು ಆಕರ್ಷಿಸಿತು. ಮಹಾಕವಿ ಕಾಳಿದಾಸರು ರಘುವಂಶದ ಪ್ರಸ್ತಾವನೆಯಲ್ಲಿ ತಮ್ಮ ಗ್ರಂಥಕ್ಕೆ ರಘು ವಂಶವೆಂಬ ಹೆಸರನ್ನೇಕೆ ಕೊಟ್ಟರು ? ಎಂಬುದನ್ನು ಹೇಳಿದ್ದಾರೆ. ಮಹಾಕವಿ ಕಾಳಿದಾಸರು ಆ ಪ್ರಸ್ತಾವನೆಯಲ್ಲಿ ಬರೆಯುತ್ತಾರೆ…
‘ಜನ್ಮದಿಂದ ಶುದ್ಧ ಫಲ ಪ್ರಾಪ್ತಿಯಾಗುವವರೆಗೆ ಪ್ರಯತ್ನಿಸುವ, ಏಕಾಧಿಪತಿ ಸಾಮ್ರಾಜ್ಯವನ್ನು ಸ್ಥಾಪಿಸಿದ, ಸ್ವರ್ಗದ ಬಾಗಿಲಲ್ಲಿ ತಮ್ಮ ರಥವನ್ನು ನಿಲ್ಲಿಸುವ, ಯಥಾಶಕ್ತಿ ಯಜ್ಞ ಮಾಡುವ, ಯಾಚಕರ ಇಚ್ಛೆಯನ್ನು ಪೂರೈಸುವ, ಅಪರಾಧಿಗಳಿಗೆ ಯೋಗ್ಯ ದಂಡವನ್ನು ವಿಧಿಸುವ, ತಕ್ಷಣ ಜಾಗರೂಕರಾಗುವ, ದಾನ ನೀಡುವ ಸಲುವಾಗಿಯೇ ಸಂಪತ್ತನ್ನು ಗಳಿಸುವ, ವಂಶೋದ್ಧಾರಕ್ಕಾಗಿ ಗೃಹಸ್ಥಾಶ್ರಮವನ್ನು ಸ್ವೀಕರಿಸುವ, ಬಾಲ್ಯಾವಸ್ಥೆಯಲ್ಲಿ ವಿದ್ಯಾಭ್ಯಾಸ, ಯೌವನದಲ್ಲಿ ವಿಷಯಭೋಗ, ವೃದ್ಧಾವಸ್ಥೆಯಲ್ಲಿ ಮುನಿವ್ರತ ಸ್ವೀಕರಿಸುವ ಹಾಗೂ ಕೊನೆಗೆ ನಶ್ವರ ದೇಹವನ್ನು ಯೋಗ ಮಾರ್ಗದಲ್ಲಿ ಬಿಟ್ಟು ಆತ್ಮಸ್ವರೂಪದಲ್ಲಿ ವಿಲೀನವಾಗುವ ಸೂರ್ಯವಂಶಿ ‘ಇಶ್ವಾಕು’ ಕುಲದಲ್ಲಿ ರಾಜರು ಜನ್ಮತಾಳಿದರು. ಇಶ್ವಾಕು ಕುಲದಲ್ಲಿನ ರಾಜರ ಇವೆಲ್ಲ ವೈಶಿಷ್ಟ್ಯಗಳು ರಘು ರಾಜರಿಗೆ ಅನ್ವಯವಾಗುತ್ತದೆ. ಪ್ರಭು ರಾಮಚಂದ್ರರು ಇವೆಲ್ಲ ವೈಶಿಷ್ಟ್ಯಗಳಿಗಿಂತ ಬೇರೆಯಾಗಿರಲಿಲ್ಲ. ಆದ್ದರಿಂದ ರಘು ರಾಜನಂತಹ ಔದಾರ್ಯದ ಶೂರ ವಂಶದ ಕರ್ತಾ, ಅನಂತ ಕೀರ್ತಿವಂತ ರಾಜನ ಹೆಸರು ಈ ಮಹಾಕಾವ್ಯಕ್ಕೆ ನೀಡುತ್ತಿದ್ದೇನೆ.’
೨. ಪ್ರಭು ರಾಮಚಂದ್ರರ ಪೂರ್ವಜರ ನಾಮಾವಳಿಯ ಮಹತ್ವ

ವಿಷಯದಲ್ಲಿ ವಾಲ್ಮಿಕಿ ರಾಮಾಯಣದ ಬಾಲಕಾಂಡದಲ್ಲಿ ಪ್ರಭು ರಾಮಚಂದ್ರರ ಪೂರ್ವಜರ ನಾಮಾವಳಿಯನ್ನು ನೀಡಲಾಗಿದೆ. ಆ ನಾಮಾವಳಿಗನುಸಾರ ರಘುರಾಜನು ಕಾಕುತ್ಸ್ಥಾನನ ಮಗನಾಗಿದ್ದಾನೆ ಮತ್ತು ಕಾಳೀದಾಸರು ರಘುರಾಜನು ದಿಲೀಪ ರಾಜನ ಪುತ್ರನೆಂದು ಹೇಳಿದ್ದಾರೆ. ಈ ವಿಷಯದಲ್ಲಿ ಸಂಶೋಧನೆ ಮಾಡಿ ಡಾ. ಹರದತ್ತ ಶರ್ಮಾ ಇವರು ತಮ್ಮ ‘ಪದ್ಮಪುರಾಣ’ ಹಾಗೂ ‘ಕಾಳಿದಾಸ’ ಈ ಗ್ರಂಥಗಳ ಪ್ರಸ್ತಾವನೆಯಲ್ಲಿ ಬರೆದಿದ್ದಾರೆ. ಆ ಪ್ರಸ್ತಾವನೆಯಲ್ಲಿ ಅವರು, ‘ಶಕುಂತಲೆ’ ಮತ್ತು ‘ರಘುವಂಶ’ ಇವೆರಡು ಮಹಾಕಾವ್ಯದಲ್ಲಿ ಪದ್ಮಪುರಾಣದ ಆಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕೆಲವು ತಜ್ಞರ ಅಭಿಪ್ರಾಯಕ್ಕನುಸಾರ ‘ವಾಯುಪುರಾಣ’ ಹಾಗೂ ‘ವಿಷ್ಣುಪುರಾಣ’ಗಳಲ್ಲಿ ಪ್ರಭು ರಾಮಚಂದ್ರರ ಪೂರ್ವಜರ ನಾಮಾವಳಿಯನ್ನು ನೀಡಲಾಗಿದೆ. ಆ ನಾಮಾವಳಿಗನುಸಾರ ‘ರಘುರಾಜನು ದಿಲೀಪ ರಾಜನ ಪುತ್ರನಾಗಿದ್ದಾನೆ’, ಎಂದು ನಿಶ್ಚಿತವಾಗಿ ಹೇಳಲಾಗುತ್ತದೆ. ಅದೇ ಆಧಾರವನ್ನು ಕಾಳೀದಾಸರು ತೆಗೆದುಕೊಂಡಿರಬಹುದು. ‘ಪದ್ಮಪುರಾಣ’ದಲ್ಲಿ ದಿಲೀಪ ರಾಜನ ಮಗ ರಘು, ರಘುರಾಜನ ಮಗ ಅಜಯ, ಅಜಯ ರಾಜನ ಮಗ ದಶರಥ ರಾಜ ಈ ಕ್ರಮದಲ್ಲಿ ಕೊಡಲಾಗಿದೆ. (ಆಧಾರ : ‘ಸಂಸ್ಕೃತ ಕಾವ್ಯದ ಪಂಚಪ್ರಾಣ’, ಲೇಖಕ – ಡಾ. ಕೇಶವ ನಾರಾಯಣ ವಾಟವೆ, ಪ್ರಕಾಶಕರು – ಮನೋಹರ ಗ್ರಂಥಮಾಲಾ, ಸದಾಶಿವ ಪೇಠೆ ಪುಣೆ)
೩. ರಘುವಂಶದ ರಾಜರ ವೈಶಿಷ್ಟ್ಯಗಳು
ರಘುವಂಶದ ರಾಜರು ಅವರಲ್ಲಿಗೆ ಬರುವ ಯಾಚಕರ ಇಚ್ಛೆಯನ್ನು ಯಥೋಚಿತವಾಗಿ ಪೂರ್ಣಗೊಳಿಸಿದರು. ‘ತಮ್ಮಲ್ಲಿಗೆ ಬರುವ ಯಾಚಕರು ಭಗವಂತ’, ಎಂದು ರಘುವಂಶದ ರಾಜರಿಗೆ ಅನಿಸುತ್ತಿತ್ತು. ಭಗವಂತನಿಗೆ ಇಷ್ಟವಿರುವ ಹಾಗೂ ಅವನ ಕಾರ್ಯಕ್ಕೆ ಅನುಕೂಲವಾಗುವ ಜನರ ಇಚ್ಛೆಯನ್ನು ಪೂರ್ಣಗೊಳಿಸುವ ಕಾರ್ಯವನ್ನು ರಘುವಂಶದ ರಾಜರು ಮಾಡಿದರು. ಅನ್ಯಾಯದಿಂದ, ಅಧಿಕಾರದ ಪ್ರಭಾವದಿಂದ, ಸಾಮರ್ಥ್ಯದ ಬಲದಿಂದ ರಘುವಂಶದ ಯಾವ ರಾಜನೂ ಯಾರದ್ದೇ ಧನವನ್ನು ಕಸಿದುಕೊಳ್ಳಲಿಲ್ಲ. ಅವರು ನಿರ್ಮಾಣ ಮಾಡಿದ ವೈಭವ, ಸ್ವಶ್ರಮದಿಂದ ಗಳಿಸಿದ ಸಂಪತ್ತಿನಿಂದ ಒಂದು ಪೈಸೆ ಕೂಡ ಅವರು ಸ್ವಂತದ ವಿಲಾಸಕ್ಕಾಗಿ ಖರ್ಚು ಮಾಡಲಿಲ್ಲ. ಇದೇ ರಘುವಂಶದ ರಾಜರ ವೈಶಿಷ್ಟ್ಯವಾಗಿದೆ. ‘ತಮ್ಮಲ್ಲಿರುವ ಹಣವನ್ನು ಯೋಗ್ಯ ಕಾರ್ಯಕ್ಕಾಗಿಯೇ ಉಪಯೋಗಿಸ ಬೇಕು’, ಎಂಬುದು ರಘುವಂಶದ ರಾಜರ ಗುಣವಾಗಿದೆ. ಈ ಗುಣಗಳಿಂದಾಗಿಯೇ ರಘುವಂಶದ ರಾಜರ ಮನಸ್ಸಿನಲ್ಲಿಯೂ ಸ್ವಾರ್ಥದ ಲವಲೇಶವೂ ಇರಲಿಲ್ಲ. ಇದರ ಉದಾಹರಣೆಯೆಂದರೆ ರಘುರಾಜನಲ್ಲಿಗೆ ಯಾಚಕನೆಂದು ಬಂದಿದ್ದ ಕೌತ್ಸನಂತಹ ಯಾಚಕನನ್ನು ರಘುರಾಜನು ಬರಿಗೈಯಲ್ಲಿ ಕಳುಹಿಸಲಿಲ್ಲ. ಅವನಿಗೆ ಗುರುದಕ್ಷಿಣೆ ನೀಡಲು ೧೪ ಕೋಟಿ ಸುವರ್ಣಮುದ್ರೆಗಳ ಅವಶ್ಯಕತೆಯಿತ್ತು. ಕುಬೇರನಿಂದ ಅಷ್ಟು ಸುವರ್ಣಮುದ್ರೆಗಳನ್ನು ತರುವ ವಿಚಾರ ರಘುರಾಜನ ಮನಸ್ಸಿನಲ್ಲಿ ಬಂತು. ಅದೇ ಕ್ಷಣದಲ್ಲಿ ಅವನ ಖಜಾನೆ ಸುವರ್ಣಮುದ್ರೆಯಿಂದ ತುಂಬಿಹೋಯಿತು. ಅವನು ಆ ಸಂಪೂರ್ಣ ಖಜಾನೆಯನ್ನು ಕೌತ್ಸನಿಗೆ ಅರ್ಪಿಸಿದನು. ಕೌತ್ಸನು ಅವನಿಗೆ ಎಷ್ಟು ಅವಶ್ಯವಿದೆಯೋ, ಅಷ್ಟೇ ಸುವರ್ಣ ಮುದ್ರೆಗಳನ್ನು ಸ್ವೀಕರಿಸಿದನು. ಈ ರೀತಿ ದಾನಿ ಮತ್ತು ಯಾಚಕ ಇಬ್ಬರೂ ಶ್ರೇಷ್ಠರಾಗಿದ್ದರು.
೪. ಅಪರಾಧಕ್ಕನುಸಾರ ಶಿಕ್ಷೆ ಕೊಡುವ ರಘುವಂಶದ ರಾಜರು
ಯಾವ ಪ್ರಕಾರದ ಅಪರಾಧವೋ ಆ ಪ್ರಕಾರದ ಶಿಕ್ಷೆ ವಿಧಿಸುವುದರಲ್ಲಿ ರಘುವಂಶದ ರಾಜರು ಪ್ರಸಿದ್ಧರಾಗಿದ್ದರು. ಪ್ರಭು ರಾಮಚಂದ್ರರ ರಾಜ್ಯದಲ್ಲಿ ಅಪರಾಧಿಗಳಿಗೆ ದಂಡ ವಿಧಿಸುವ ಅಧಿಕಾರ ಋಷಿಮುನಿಗಳ ಕೈಯಲ್ಲಿತ್ತು. ಸ್ವಾರ್ಥ, ಚರಿತ್ರಹೀನತೆಯಂತಹ ದೋಷ ರಾಮರಾಜ್ಯದಲ್ಲಿನ ಯಾವುದೇ ಅಧಿಕಾರಿಯಲ್ಲಿ ಕಂಡು ಬರುತ್ತಿರಲಿಲ್ಲ. ರಘುವಂಶದಲ್ಲಿನ ರಾಜರು ಸಮಾಜದಲ್ಲಿ ಆತ್ಮಶಾಸನದ ಮಾನವೀ ಸಂಸ್ಕಾರ ಮಾಡಿರುವುದು ಕಂಡುಬರುತ್ತದೆ. ಅದೇ ರೀತಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಅಂತಃಕರಣದಲ್ಲಿ ಶುದ್ಧತೆಯ ದರ್ಶನವಾಗುತ್ತಿತ್ತು. ತಿಳಿಯದೆ ತನ್ನ ಕೈಯಿಂದ ಯಾವುದೇ ಅಪರಾಧವಾದರೆ ಅದಕ್ಕೆ ತಾನೇ ಸ್ವತಃ ಶಿಕ್ಷೆ ವಿಧಿಸಲು ಆಗ್ರಹಿಸುವ ಸ್ವಯಂಶಾಸಿತ ಸಮಾಜವನ್ನು ರಘುವಂಶದ ರಾಜರು ನಿರ್ಮಾಣ ಮಾಡಿದ್ದರು.
೫. ರಘುವಂಶದ ರಾಜರಲ್ಲಿನ ಆದರ್ಶ ಪ್ರಭು ಶ್ರೀರಾಮ !
ಸಮಾಜದ ಜನರಿಗೆ ಪ್ರಬೋಧನೆ ಮಾಡುವ ಮಹತ್ವಪೂರ್ಣ ಕಾರ್ಯವನ್ನು ರಘುವಂಶದ ರಾಜರು ಮಾಡಿದರು. ಇದು ಅವರ ಶ್ರೇಷ್ಠ ಗುಣವಾಗಿದೆ. ಭಗವಂತನಿಗೆ ಹಾಗೂ ಭಗವಂತನ ವಿಶ್ವಾಸದಿಂದ ಮಾಡಿದ ಕಾರ್ಯ, ಅಂದರೆ ಕರ್ಮ ಮನುಷ್ಯನ ಜೊತೆಗೆ ಬರುತ್ತವೆ. ಕೀರ್ತಿ, ವೈಭವ ಹಾಗೂ ಸ್ವಾರ್ಥಕ್ಕಾಗಿ ಮಾಡಿದ ಕರ್ಮಗಳು ಭೌತಿಕ ಜಗತ್ತಿನಲ್ಲಿ ಉಪಯೋಗವಾಗುತ್ತವೆ. ಅದರ ಫಲವನ್ನೂ ಇದೇ ಭೌತಿಕ ಜಗತ್ತಿನಲ್ಲಿ ಭೋಗಿಸಬೇಕಾಗುತ್ತದೆ. ಯೋಗ್ಯ ಸಮಯದಲ್ಲಿ ಜಾಗರೂಕರಾಗಿದ್ದು ಭಗವಂತನ ಕಾರ್ಯ ಮಾಡಲು ಚಡಪಡಿಸುವ ರಘುವಂಶದ ರಾಜರು ಆದರ್ಶ ರಾಜರೆಂದು ಗುರುತಿಸಲ್ಪಡುತ್ತಾರೆ.
ಪ್ರಭು ರಾಮಚಂದ್ರರು ಅದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ರಘುವಂಶದ ರಾಜರು ವಿಶ್ವ ವಿಜಯಿಯಾದರು; ಆದರೆ ಅವರು ಇತರ ರಾಜ್ಯಗಳನ್ನು ಗೆದ್ದುಕೊಂಡು ಮಾಂಡಲಿಕರನ್ನಾಗಿ (ಸಾಂಮತ) ಮಾಡಲಿಲ್ಲ. ಪ್ರಭು ಶ್ರೀರಾಮರು ವಾಲಿಯ ವಧೆ ಮಾಡಿದರು. ಅನಂತರ ಆ ಕಿಷ್ಕಿಂಧಾನಗರವನ್ನು ವಾಲಿಯ ತಮ್ಮನಾದ ಸುಗ್ರೀವನಿಗೆ ಒಪ್ಪಿಸಿದರು. ಅವನನ್ನೇ ಆ ನಗರದ ಸಾಮ್ರಾಟನನ್ನಾಗಿ ಮಾಡಿದರು. ಶ್ರೀರಾಮರು ರಘುಕುಲದ ಅಧಿಕಾರವನ್ನು ಕಿಷ್ಕಿಂಧಾ ನಗರದ ಮೇಲೆ ಹೇರಲಿಲ್ಲ. ಅದೇ ರೀತಿ ಶ್ರೀರಾಮರು ರಾವಣನ ವಧಿಸಿದ ನಂತರ ಅವನ ತಮ್ಮ ವಿಭೀಷಣನಿಗೆ ಲಂಕೆಯ ರಾಜ್ಯವನ್ನು ನೀಡಿದರು. ವಿಭೀಷಣ ಲಂಕೆಯ ಅಧಿಕಾರಿಯಾದನು.
೬. ಗೃಹಸ್ಥಾಶ್ರಮದಲ್ಲಿನ ಒಂದು ಆದರ್ಶ ಜೀವನವನ್ನು ಪ್ರಭು ಶ್ರೀರಾಮರು ತೋರಿಸುವುದು
ಧ್ಯೇಯ, ಪವಿತ್ರತೆ, ಮಾಂಗಲ್ಯವನ್ನು ವಿಸ್ತಾರಗೊಳಿಸುವ ಸಂತಾನ ಅದಾಗಿದೆ. ‘ತಂದೆ ಅನುಸರಿಸಿದ, ಪಾಲನೆ ಮಾಡಿದ ಜೀವನನಿಷ್ಠೆಯನ್ನು ಅಖಂಡವಾಗಿ ಮುಂದುವರಿಸಲು ಸಂತಾನ ಹಾಗೂ ಪುತ್ರ ಇರಬೇಕು’, ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ರಘುವಂಶದಲ್ಲಿನ ರಾಜರಿಗೆ ಸಂತಾನ, ಧರ್ಮರಕ್ಷಣೆ, ಜೀವನದ ಮೌಲ್ಯ ಹಾಗೂ ಜೀವನನಿಷ್ಠೆಯನ್ನು ಜೋಪಾನ ಮಾಡಲಿಕ್ಕಿತ್ತು. ಇದೇ ಕಾರಣಕ್ಕಾಗಿ ಅವರು ಗೃಹಸ್ಥಾಶ್ರಮ ಸ್ವೀಕರಿಸಿ ಒಂದು ಆದರ್ಶ ಜೀವನವನ್ನು ಸಮಾಜದ ಮುಂದೆ ನಿರ್ಮಾಣ ಮಾಡಿದರು.
ರಘುವಂಶದಲ್ಲಿನ ರಾಜರು ಅನಾಸಕ್ತರಾಗಿ ವಿಷಯೋಪಭೋಗ ಮಾಡಿದರು. ಪ್ರಭು ಶ್ರೀರಾಮರು ತಮ್ಮ ವರ್ತನೆಯಿಂದ ಇದನ್ನು ತೋರಿಸಿಕೊಟ್ಟರು. ಯುವರಾಜನೆಂದು ರಾಜ್ಯಾಭಿಷೇಕಕ್ಕಾಗಿ ಶ್ರೀರಾಮರು ಸಿದ್ಧತೆ ಮಾಡಿದರು; ಆದರೆ ಅಷ್ಟರೊಳಗೆ ತಕ್ಷಣ ಅವರಿಗೆ ವನವಾಸಕ್ಕೆ ಹೋಗಲು ಹೇಳಲಾಯಿತು. ಯುವರಾಜನ ವಸ್ತ್ರಗಳನ್ನು ಧರಿಸುವಾಗ ಅವರಲ್ಲಿದ್ದ ಮನಸ್ಥಿತಿಯೇ ವನವಾಸಕ್ಕೆ ಹೋಗಲು ನಾರುಮಡಿ ಧರಿಸುವಾಗಲೂ ಇತ್ತು.
೭. ರಘುವಂಶದ ರಾಜರಲ್ಲಿ ಮುನಿವೃತ್ತಿ ಕಂಡುಬರುತ್ತದೆ
ರಘುವಂಶದ ರಾಜರು ಅನುಭವ, ಜ್ಞಾನ ಹಾಗೂ ಭಾವದಲ್ಲಿ ಮುಂಚೂಣಿಯಲ್ಲಿದ್ದರು. ಇಂತಹ ಜೀವನದ ಬಗೆಗಿನ ಚಿಂತನೆಯಲ್ಲಿ ರಘುವಂಶದ ರಾಜರು ಸ್ವತಃ ತಮ್ಮ ಜೀವನ ಸಾಗಿಸಿದರು. ಧ್ಯೇಯ ಹಾಗೂ ಈಶ್ವರನಿಷ್ಠೆ ಎಂಬ ೨ ಶ್ರೇಷ್ಠ ವಟವೃಕ್ಷಗಳ ನೆರಳಿನಲ್ಲಿ ರಘುವಂಶದ ರಾಜರು ಸಂಸಾರನಿಷ್ಠೆಯನ್ನು ಜೋಪಾನ ಮಾಡಿದರು. ಸಂಕ್ಷಿಪ್ತದಲ್ಲಿ ರಘುವಂಶದ ರಾಜರಲ್ಲಿ ಮುನಿವೃತ್ತಿ ಕಂಡುಬರುತ್ತದೆ. ಮುನಿವೃತ್ತಿಯ ಎರಡು ಅರ್ಥಗಳಿವೆ –
ಅ. ಮನನಶೀಲರಾಗಿರುವವರನ್ನು ಮುನಿ ಎನ್ನುತ್ತಾರೆ.
ಆ. ಯಾವನ ಇಂದ್ರಿಯಗಳು ಮೌನವನ್ನು ಸ್ವೀಕರಿಸಿವೆಯೋ, ಅವನಿಗೆ ಮುನಿ ಎನ್ನುತ್ತಾರೆ. ರಘುವಂಶದ ರಾಜರ ಇಂದ್ರಿಯ ಲಾಲಸೆ ನಗಣ್ಯವಿತ್ತು. ಯಾವುದೇ ವಿಷಯದ ಅಭಿಲಾಷೆ ಅವರ ಮನಸ್ಸಿನಲ್ಲಿ ಬರುತ್ತಿರಲಿಲ್ಲ. ಆದ್ದರಿಂದ ಅಭಿಲಾಷೆಯ ಕಡೆಗೆ ಎಂದಿಗೂ ಇಂದ್ರಿಯ ಆಕರ್ಷಣೆಯಾಗಿರಲಿಲ್ಲ. ರಘುವಂಶದ ರಾಜರು ಯೋಗಸಾಧನೆಯ ಸಹಾಯದಿಂದ ದೇಹತ್ಯಾಗ ಮಾಡಿದರು. ಮಾನವನು ಕರ್ಮ ಮತ್ತು ಜ್ಞಾನದಿಂದ ಭಗವಂತನೊಂದಿಗೆ ಜೋಡಿಸಿರಬೇಕು. ಭಗವಂತನ ಮೇಲೆ ದೃಢ ಶ್ರದ್ಧೆ ಹಾಗೂ ನಿಷ್ಠೆಯನ್ನು ಇಟ್ಟು ರಘುವಂಶದ ರಾಜರು ಕರ್ಮಯೋಗವನ್ನು ಸಾಧಿಸಿದರು. ಅಧಿಕಾರ, ವೈಭವ, ಕೀರ್ತಿ ಇತ್ಯಾದಿ ಯಾವುದೇ ವಿಷಯದಲ್ಲಿ ಅವರು ಮೈಮರೆಯಲಿಲ್ಲ.
(ಆಧಾರ : ‘ರಘುವಂಶ’, ಮಹಾಕವಿ ಕಾಳೀದಾಸ)
– ಶ್ರೀ. ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಹಾಗೂ ಲೇಖಕರು, ಡೊಂಬಿವಲಿ, ಮಹಾರಾಷ್ಟ್ರ. (೭.೩.೨೦೨೩)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು