ನಿಖಿಲ್ ಗುಪ್ತಾ, ‘ಸಿಸಿ-೧’ ಮತ್ತು ‘ಸ್ಪೆಷಲ್ ಆಪರೇಷನ್ಸ’ (ವಿಶೇಷ ಕಾರ್ಯಾಚರಣೆ)…!

(ಟಿಪ್ಪಣಿ : ‘ಸಿಸಿ-೧’, ಎಂದರೆ ‘ಕೊ ಕಾನ್ಸಪಿ ರೇಟರ್-೧’ – ಪಿತೂರಿಯ ಪಾಲುದಾರ)

ಕಳೆದ ೨-೩ ವರ್ಷಗಳಿಂದ ವಿದೇಶದಲ್ಲಿ ಅಡಗಿ ಕುಳಿತು ಭಾರತವಿರೋಧಿ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳ ನಿಗೂಢ ಸಾವುಗಳ ಸುದ್ದಿಗಳು ಭಾರತೀಯ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿವೆ. ಇದರಲ್ಲಿ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲ. ತಮ್ಮ ದೇಶದ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ಎಸಗುವವರನ್ನು ಪರಸ್ಪರ ನಿರ್ಮೂಲನೆಗೆ(ಹತ್ಯೆ) ಎಲ್ಲಾ ದೇಶಗಳು ಯಾವಾಗಲೂ ವಿವಿಧ ಮಾರ್ಗಗಳನ್ನು ಬಳಸುತ್ತಾ ಬಂದಿವೆ ಮತ್ತು ‘ಅಂತಹ ಯಾವುದೇ ಘಟನೆಯ ಜವಾಬ್ದಾರಿಯನ್ನು ಹೊರಬಾರದು’ ಎಂಬುದು ಅಲಿಖಿತ ನಿಯಮವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಉತ್ಸಾಹದಿಂದ ಈ ಬಗ್ಗೆ ಬರೆಯುತ್ತಾರೆಯೋ, ಆ ಕೆಲಸ ಅಷ್ಟು ಸುಲಭವಲ್ಲ ಈ ಕೆಲಸ ಮತ್ತು ಹಲವಾರು ಬಾರಿ ಯಾರನ್ನಾದರೂ ಸುರಕ್ಷಿತವಾಗಿಡಲು ಇಂತಹ  ಸುದ್ದಿಗಳನ್ನು  ಬಿತ್ತರಿಸಲಾಗುತ್ತದೆ. ಅದಕ್ಕೆ ನಾವು ಮರುಳಾಗಿ ಅವರಿಗೆ ಬೇಕಾದುದನ್ನೇ ಮಾಡುತ್ತೇವೆ. ಆದ್ದರಿಂದ ಇಂತಹ  ಘಟನೆಗಳು, ವದಂತಿಗಳು ಮತ್ತು ಸುದ್ದಿಗಳ ಬಗ್ಗೆ ಸಾಕ್ಷರತೆ ಮೂಡಿಸುವ ದೃಷ್ಟಿಯಿಂದ ‘ನಿಖಿಲ್ ಗುಪ್ತಾ’ ಪ್ರಕರಣದ ಕನಿಷ್ಟ ಪರಿಚಯವು ಆವಶ್ಯಕವಾಗಿದೆ.                                      (ಪೂರ್ವಾರ್ಧ)

೧. ನಿಖಿಲ್ ಗುಪ್ತಾ ಉರ್ಫ ‘ನಿಕ್’ !

೧೮ ಜೂನ್ ೨೦೨೩ ರಂದು ಬ್ರಿಟಿಷ್ ಕೊಲಂಬಿಯಾ, ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ ಸಿಂಗ ನಿಜ್ಜರನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದರ ನಂತರ ಭಾರತೀಯ ಪ್ರಜೆಯಾದ ನಿಕ್‌ನಿಗೆ ಜೆಕ್ ಗಣರಾಜ್ಯದಿಂದ ಆತನ ಅಮೇರಿಕನ್ ‘ಸೋರ್ಸ’ನು (ಸ್ರೋತ) ಈಗ ತಕ್ಷಣವೇ ಗುರುಪತವಂತ್ ಸಿಂಗ್ ಪನ್ನೂನನ್ನು ಕೊಲ್ಲಲು ಅಡ್ಡಿಯಿಲ್ಲ ಎಂದು ತಿಳಿಸಿದನು. ನಿಜ್ಜರ ಮತ್ತು ಪನ್ನೂ ಖಲಿಸ್ತಾನ ಚಳುವಳಿಯ ದೊಡ್ಡ ಹೆಸರುಗಳಾಗಿವೆ. ನಿಕ್‌ನ ಅಮೇರಿಕನ್ ‘ಸೋರ್ಸ’ನು ಪನ್ನೂವಿನ ನ್ಯೂಯಾರ್ಕನ ಮನೆಯ ವಿಳಾಸ, ಮೊಬೈಲ್ ಸಂಖ್ಯೆ, ಇತ್ತೀಚಿನ ಛಾಯಾಚಿತ್ರಗಳು ಪನ್ನೂನ ದೈನಂದಿನ ಚಟುವಟಿಕೆಗಳ ಪ್ರತಿಯೊಂದು ವಿವರ ಮತ್ತು ಎಲ್ಲಾ ರೀತಿಯ ‘ಆಪರೇಷನಲ್’ (ವ್ಯವಹಾರ) ಮಾಹಿತಿಗಳನ್ನು ಒದಗಿಸಿದ್ದನು.

ಈ ಎಲ್ಲಾ ಮಾಹಿತಿಯನ್ನು ನಿಕ್ ನಿಗೆ ಈ ಪ್ರಕರಣದ ‘ಸಿಸಿ-೧’ ಎಂದರೆ ‘ಕೊ ಕಾನ್ಸಪಿರೇಟರ್-೧’ ಎನ್ನಲಾಗುವ ತಥಾಕಥಿತ ಅಧಿಕಾರಿಯು ನೀಡಿದ್ದನು ಮತ್ತು  ‘ಸಿಸಿ-೧’ ನಿಕ್ ನಿಗೆ ಹಣ, ಲಾಜಿಸ್ಟಿಕ್ (ಮಾಹಿತಿಯನ್ನು) ಮತ್ತು ಆದೇಶಗಳನ್ನು ನೀಡುತ್ತಿದ್ದನು. ಈ ‘ಸಿಸಿ-೧’ ಭಾರತೀಯ ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ ಭಾರತೀಯ ಗುಪ್ತಚರ ಸಂಸ್ಥೆಗೆ ಹೋದ ‘ಸೀನಿಯರ್ ಫೀಲ್ಡ್  ಆಫೀಸರ್’ (ಹಿರಿಯ ಕ್ಷೇತ್ರ ಅಧಿಕಾರಿ) ಎಂದು ನಿಕ್‌ನು ಜೆಕ್ ಗಣರಾಜ್ಯದ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎಂಬ ಮಾಹಿತಿ ಅಮೇರಿಕನ್ ನ್ಯಾಯಾಂಗ ಇಲಾಖೆಯ ಸಾರ್ವಜನಿಕ ಸಂಪರ್ಕ ವಿಭಾಗದ ಜಾಲತಾಣದಲ್ಲಿದೆ. ‘ಸಿಸಿ-೧’ ಹೆಸರಿನ ಉಲ್ಲೇಖವು ಜೆಕ್ ಅಥವಾ ಅಮೆರಿಕನ್ ದಾಖಲೆಗಳಲ್ಲಿ ಎಲ್ಲಿಯೂ ಇಲ್ಲ; ಏಕೆಂದರೆ ‘ಸಿಸಿ-೧’ ನಿಜವಾದ ಗುರುತು ನಿಕ್ ನಿಗೆ ತಿಳಿದಿರುವ ಸಾಧ್ಯತೆ ಖಂಡಿತವಾಗಿಯೂ ಇಲ್ಲ.

ನಿಖಿಲ್ ಗುಪ್ತಾ ‘ನಿಕ್’ ಒಬ್ಬ ಅಂತಾರಾಷ್ಟ್ರೀಯ ‘ನಾರ್ಕೊ ಟಿಕ್’ (ಮಾದಕ ಪದಾರ್ಥ) ಮತ್ತು ಶಸ್ತ್ರಾಸ್ತ್ರ ಕಳ್ಳ ಸಾಗಣೆಯಲ್ಲಿ ಪಳಗಿದವನಾಗಿದ್ದಾನೆ. ಅವನು ಅಮೆರಿಕದಲ್ಲಿ ತನ್ನೊಂದಿಗೆ ಈ ಕಳ್ಳ ದಂಧೆಯಲ್ಲಿ ಶಾಮೀಲಾಗಿದ್ದ ಒಬ್ಬ ಸ್ಥಳೀಯ ಮಾದಕ ಪದಾರ್ಥ ಕಳ್ಳಸಾಗಣೆದಾರನನ್ನೂ ಪನ್ನೂನ ಹತ್ಯೆಯ ಸಂಚಿನಲ್ಲಿ ಸೇರಿಸಿಕೊಂಡಿದ್ದನು. ಆದರೆ ಆ ಅಮೆರಿಕನ್ ಕಳ್ಳಸಾಗಣೆದಾರನು ವಾಸ್ತವದಲ್ಲಿ ‘ಡ್ರಗ್ ಎನ್‌ಫೋರ್ಸಮೆಂಟ್ ಏಜೆನ್ಸಿ’ಯ ‘ಕಾನ್ಫಿಡೆನ್ಷಿಯಲ್ ಸೋರ್ಸ್’ (ಗುಪ್ತ ಮಾಹಿತಿದಾರ) ಹಾಗೂ ‘ಅಂಡರಕವರ್ ಆಫೀಸರ್’ (ಗುಪ್ತ ಪೊಲೀಸ ಅಧಿಕಾರಿ) ಆಗಿದ್ದನು. ಅಂದರೆ ನಿಖಿಲ್ ಗುಪ್ತಾ ತನ್ನ ಪಾಲುದಾರ ಎಂದು ಭಾವಿಸಿದ್ದವನು ವಾಸ್ತವದಲ್ಲಿ ಅಮೆರಿಕನ್ ‘ಡಬಲ್ ಏಜೆಂಟ್’ (ಎರಡೂ ಕಡೆಯಿಂದ ಹೊಣೆಯನ್ನು ನಿರ್ವಹಿಸುವ  ದಳ್ಳಾಳಿ) ಆಗಿದ್ದನು. ಹೀಗಾಗಿ ‘ನಿಕ್’ ಪನ್ನೂನನ್ನು ಕೊಲ್ಲಲು ನ್ಯೂಯಾರ್ಕನಲ್ಲಿ ಸ್ಥಳೀಯ ‘ಹಿಟ್ ಮ್ಯಾನ್’ ಅಂದರೆ ಸುಪಾರಿ ಹಂತಕ ಗೂಂಡಾನನ್ನು ಹುಡುಕಲು ಪ್ರಾರಂಭಿಸಿದಾಗಿನಿಂದ ಅಮೆರಿಕನ್ ಸಂಸ್ಥೆಗಳಿಗೆ ಈ ಪಿತೂರಿಯ ಮಾಹಿತಿ ಸಿಗುತ್ತಿತ್ತು. ಇದರಿಂದಲೇ  ಅಮೆರಿಕಾ ಅತ್ಯಂತ ತತ್ಪರತೆಯಿಂದ ಜೆಕ್ ಗಣರಾಜ್ಯದಲ್ಲಿ ನಿಖಿಲ್ ಗುಪ್ತಾನನ್ನು ಬಂಧಿಸಿತು. ಅಮೆರಿಕಕ್ಕೆ ಬಹುಶಃ ನಿಖಿಲ್ ಗುಪ್ತಾ ಅಮೆರಿಕನ್ ದಳ್ಳಾಳಿಯ ಸಂಪರ್ಕದಲ್ಲಿದ್ದಂತೆ, ಬೇರೆ ಯಾರಾದರೂ ಭಾರತೀಯ ಏಜೆಂಟ ಬೇರೆ ಯಾವುದಾದರೂ ‘ಹಿಟ್ ಮ್ಯಾನ’ ಸಂಪರ್ಕದಲ್ಲಿರಬಹುದು ಮತ್ತು ಪನ್ನೂ ಇನ್ನು ಮುಂದೆ ಹೆಚ್ಚು ಕಾಲ ಬದುಕಿರುವುದು ಸಾಧ್ಯವಿಲ್ಲ ಎನ್ನುವ ಭಯ ಕಾಡುತ್ತಿರಬಹುದು.

೨. ಅಮೇರಿಕಾದೊಂದಿಗೆ ಪನ್ನೂವಿನ ಸಂಬಂಧ

ಭಾರತೀಯ ಗುಪ್ತಚರ ಸಂಸ್ಥೆ ‘ರಾ’ ಸಂಸ್ಥಾಪಕ ಕಾವೋ ಅವರ ಅತ್ಯಂತ ಆಪ್ತ ಸಹೋದ್ಯೋಗಿ ಬಿ. ರಮಣ ಅವರು ಅವರ ಪುಸ್ತಕದಲ್ಲಿ ಹೇಳಿರುವಂತೆ, ಖಲಿಸ್ತಾನಿ ವಿಭಜನಾವಾದಿ ಚಳುವಳಿಯನ್ನು ಅಂದಿನ ಅಮೇರಿಕಾ ಅಧ್ಯಕ್ಷ ರಿಚರ್ಡ್ ನಿಕ್ಸನ್ ಇವರ ಜನರಲ್ ಯಾಹ್ಯಾ ಖಾನ ಇವರ ಸಹಾಯದಿಂದ ಆರಂಭಿಸಿದ್ದರೆಂದು ನೇರ ಆರೋಪಿಸಿದ್ದರು. ಆದ್ದರಿಂದ ನ್ಯೂಯಾರ್ಕ್‌ನಲ್ಲಿ ವಾಸವಿದ್ದು ಸತತವಾಗಿ ಭಾರತವಿರೋಧಿ ವಿಡಿಯೊಗಳನ್ನು ಪ್ರಸಾರ ಮಾಡುವ ಖಲಿಸ್ತಾನಿ ಪನ್ನೂ ಅಮೇರಿಕಾದ ಗುಪ್ತಚರ ಸಂಸ್ಥೆ ‘ಸಿಐಎ’ನ ‘ಅಸೆಟ್’ (ಆಸ್ತಿ) ಆಗಿದ್ದಾರೆ ಎಂಬುದು ವಾಸ್ತವವಾಗಿದೆ. ಸಹಜವಾಗಿಯೇ ಅವನ ಸುರಕ್ಷತೆಯ ಜವಾಬ್ದಾರಿ ಅಮೆರಿಕಾದ್ದಾಗಿದೆ. ಆದ್ದರಿಂದ ನಿಕ್ ಪನ್ನೂನನ್ನು ಕೊಲ್ಲಲು ಸಿದ್ಧತೆ ಆರಂಭಿಸಿದಾಗ ಅಮೆರಿಕಾ ಅವನ ಸುತ್ತ ಜಾಲ ಹೆಣೆದು ಅವನನ್ನು ಜೆಕ್ ಗಣರಾಜ್ಯದಿಂದ ಬಂಧಿಸಿತು.

೩. ‘ಸಿಸಿ-೧’ ಯಾರು ಇರಬಹುದು ?

ಶ್ರೀ. ವಿನಯ ಜೋಶಿ

ನಿಖಿಲ ಗುಪ್ತಾನನ್ನು ಬಂಧಿಸಿದ ನಂತರ ಸತತವಾಗಿ ಮುನ್ನೆಲೆಗೆ ಬರುತ್ತಿರುವ ಪಾತ್ರವೆಂದರೆ ‘ಸಿಸಿ-೧’ ಆದರೆ ಇದುವರೆಗೆ ಅವನ ನಿಜವಾದ ಗುರುತು ಬಹಿರಂಗವಾಗಿಲ್ಲ್ಲ ಮತ್ತು ಆಗುವ ಸಾಧ್ಯತೆಯೂ ಇಲ್ಲ. ಏಕೆಂದರೆ ಗುಪ್ತಚರ ಸಂಸ್ಥೆ ಮತ್ತು ‘ಸ್ಪೆಷಲ್ ಏಜೆನ್ಸಿ’ಗಳ ಕಾರ್ಯಪದ್ಧತಿ ಎಷ್ಟು ವಿಭಿನ್ನವಾಗಿರುತ್ತದೆ ಎಂದರೆ, ವಿದೇಶದಲ್ಲಿ ಕೆಲಸ ಮಾಡುವ ಗುಪ್ತಾನಂತಹ ವ್ಯಕ್ತಿ ಸಿಕ್ಕಿ ಬಿದ್ದು ಜಗತ್ತಿನ ಮುಂದೆ ಬಯಲಾದರೂ, ಅವನ ಮತ್ತು ಅವನೊಂದಿಗೆ ಯಾರಿದ್ದರು ಎಂಬುದು ತಿಳಿಯುವ ಮಾರ್ಗವೇ ಇರುವುದಿಲ್ಲ.

ಮೂಲತಃ ಒಂದು ಕ್ಷಣ ನಿಖಿಲ್ ಗುಪ್ತಾನನ್ನು ‘ಭಾರತೀಯ ಸ್ಪೆಷಲ್ ಆಪರೇಶನ್ಸ್’ ತಂಡವು ಪನ್ನೂನನ್ನು ಕೊಲ್ಲಲು ನಿಯುಕ್ತಿ ಗೊಳಿಸಿದೆಯೆಂದು ಭಾವಿಸಿದರೂ, ಅವರಿಗೆ ಈ ಮನುಷ್ಯ ಮಾದಕ ಪದಾರ್ಥ ವ್ಯವಹಾರದಲ್ಲಿದ್ದಾನೆ ಎಂಬುದು ತಿಳಿದಿರುತ್ತದೆ.  ಅವನು ಅದರಲ್ಲಿ ಶಾಮೀಲಾಗಿದ್ದಾನೆ ಎಂದೇ ಅವನು ಅವನನ್ನು ಈ ‘ಪ್ರಾಜೆಕ್ಟ್’ನಲ್ಲಿ ಸೇರಿಸಿಕೊಂಡಿರಬಹುದು. ಏಕೆಂದರೆ ನಾರ್ಕೊ (ಮಾದಕ ದ್ರವ್ಯ) ಮತ್ತು ವೆಪನ್ಸ (ಶಸ್ತ್ರಾಸ್ತ್ರ) ಕಳ್ಳಸಾಗಣೆಯಲ್ಲಿ ತೊಡಗಿರುವ ಜನರಿಗೆ ಪ್ರತಿಯೊಂದು ದೇಶದಲ್ಲಿ ಉತ್ತಮ ಸಂಬಂಧ ಮತ್ತು ಜಾಲವಿರುತ್ತದೆ. ಇಂತಹ ಸ್ಥಿತಿಯಲ್ಲಿ ಯಾವುದೇ ಗುಪ್ತಚರ ಅಧಿಕಾರಿ ಅವನನ್ನು ನೇರವಾಗಿ ಭೇಟಿಯಾಗುವ ಸಾಧ್ಯತೆ ಕಡಿಮೆ, ತನ್ನ ನಿಜ ಹೆಸರಿನಲ್ಲಿ ಅವನೊಂದಿಗೆ ಮಾತನಾಡಿದ ಅಥವಾ ಮೊಬೈಲ್ ಸಂಪರ್ಕದಲ್ಲಿದ್ದ ಸಾಧ್ಯತೆ ವಿರಳವಾಗಿದೆ.

೪. ಗುಪ್ತಚರ ಸಂಸ್ಥೆ ಮತ್ತು ಸ್ಪೆಷಲ್ ಆಪರೇಶನ್ಸ್….

ವೆಬ್ ಸರಣಿಗಳು ಮತ್ತು ’ಸ್ಪೈ ಮೂವೀಸ್’ (ಗೂಢಚಾರಿ ಚಲನಚಿತ್ರ) ಗಳಲ್ಲಿ ಗೂಢಚಾರರಾಗಿ ಕೆಲಸ ಮಾಡುವವರು ಮತ್ತು ’ಸ್ಪೆಶಲ್ ಆಪರೇಷನ್ಸ್’ಗಳನ್ನು (ವಿಶೇಷ ಕಾರ್ಯಾಚರಣೆ) ಪ್ರತ್ಯಕ್ಷವಾಗಿ ಹತ್ಯೆ ಮಾಡುವ ’ಶಾರ್ಪ್ ಶೂಟರ್ಸ್’ (ತಪ್ಪಿಲ್ಲದ ಗುರಿ ಇಡುವವರು) ಒಬ್ಬರೇ ವ್ಯಕ್ತಿಯಾಗಿರುತ್ತಾರೆ; ಆದರೆ ವಾಸ್ತವದಲ್ಲಿ ಇವು ಎರಡು ಸ್ವತಂತ್ರ ವ್ಯವಸ್ಥೆಗಳಾಗಿವೆ ಮತ್ತು ಇವುಗಳ ’ವರ್ಕ್ ಪ್ರೊಫೈಲ್’ (ಕೆಲಸದ ಸ್ವರೂಪ) ಅತ್ಯಂತ ಭಿನ್ನ ಹಾಗೂ ಸಂಪೂರ್ಣವಾಗಿ ಬೇರೆಯಾಗಿರುತ್ತದೆ.”

ಆದರೆ ಪ್ರತ್ಯಕ್ಷದಲ್ಲಿ ಇವು ಎರಡು ಸ್ವತಂತ್ರ ವ್ಯವಸ್ಥೆಗಳಾಗಿರುತ್ತವೆ ಮತ್ತು ಅವರ ‘ವರ್ಕ್ ಪ್ರೊಫೈಲ್’ (ಕೆಲಸದ ಸ್ವರೂಪ) ಅಮೂಲಾಗ್ರ ಭಿನ್ನ ಮತ್ತು ಪ್ರತ್ಯೇಕವಾಗಿರುತ್ತದೆ. ಸಾಮಾನ್ಯವಾಗಿ ಗುಪ್ತಚರ ಸಂಸ್ಥೆಗಳ ಬಳಿ ಗುಪ್ತ ಮಾಹಿತಿ ಸಂಗ್ರಹಿಸಿ ಅದನ್ನು ವಿಶ್ಲೇಷಿಸುವ ಅಧಿಕಾರಿಗಳಿರುತ್ತಾರೆ ಮತ್ತು ಅವರು ಖಾಯಂ ಸರಕಾರಿ ಸೇವೆಯಲ್ಲಿರುವ ಉದ್ಯೋಗಿ ಗಳಾಗಿರುತ್ತಾರೆ. ಅವರು ನೌಕರಿಗೆ ಸೇರಿದಾಗಿನಿಂದ ನಿವೃತ್ತಿಯ ವರೆಗೆ ಕೇವಲ ಅದೇ ಕೆಲಸ ಮಾಡಿರುತ್ತಾರೆ. ಸ್ಪೆಷಲ್ ಆಪ್ಸ್’ನಲ್ಲಿ ಶಾಮೀಲಾಗಿರುವ ಕಾಯಂ ಸ್ವರೂಪಿ ಅಧಿಕಾರಿಗಳು ಮೂಲತಃ  ಗುಪ್ತಚರ ಅಧಿಕಾರಿಗಳಾಗಿದ್ದರೂ, ಅವರ ಪಾತ್ರವು ವಿವಿಧ ಸಂಸ್ಥೆಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ ಯಾವುದಾದರೂ ವ್ಯಕ್ತಿಯನ್ನು ‘ಮಟ್ಟಹಾಕಲು’ ಯೋಗ್ಯ ವ್ಯಕ್ತಿ ಯನ್ನು ಆರಿಸಿ ಆವಶ್ಯಕವಿರುವ ಲಾಜಿಸ್ಟಿಕ್ ಪೂರೈಸುವುದು ಮತ್ತು ಕೆಲಸ ಮಾಡಿಸಿಕೊಳ್ಳುವುದಾಗಿರುತ್ತದೆ. ‘ಮಟ್ಟ ಹಾಕುವುದು’ ಎಂದರೆ ಕೇವಲ ಕೊಲ್ಲುವುದು ಮಾತ್ರವಲ್ಲ, ಬದಲಿಗೆ ವಿದೇಶದಲ್ಲಿರುವ ಎಷ್ಟೋ ವಿರೋಧಿಗಳಿಗೆ ಹಣ,  ಸ್ತ್ರೀ ಬಾಟಲಿ’ (ಆಮಿಷವೊಡ್ಡಿ ಕೆಲಸ ಮಾಡಿಸಿಕೊಳ್ಳುವುದು), ಬೆಲೆಬಾಳುವ ವಸ್ತುಗಳು, ಸರಕಾರಿ ಸೌಲಭ್ಯಗಳು, ನೌಕರಿ ಅಥವಾ ಯಾವುದನ್ನು ನೀಡಿ ಅವನ ಬಾಯಿ ಮುಚ್ಚಿಸಬಹುದೋ ಅದನ್ನು ಮಾಡುವುದು.

ನಮ್ಮ ದೇಶದಲ್ಲಿರುವ ಆಡಳಿತಗಾರರ ವಿದೇಶದಲ್ಲಿರುವ ವಿರೋಧಿಗಳನ್ನು ಕೊಲ್ಲುವುದು ಕೊನೆಯ ಉಪಾಯವಾಗಿರುತ್ತದೆ. ಅದಕ್ಕೂ ಮೊದಲು ಮೇಲಿನ ಉಪಾಯಗಳನ್ನು ಬಳಸಿ ಅವನ ಧ್ವನಿಯನ್ನು ಅಡಗಿಸುವುದು ಸುಲಭದ ಮಾರ್ಗಗಳಾಗಿರುತ್ತವೆ. ಪುತಿನ್ ಅವರ ವಿರೋಧಿ ಅಲೆಕ್ಸಾಂಡರ ಲಾಟ್ವಿನೆಂಕೊ ಬ್ರಿಟನ್ ನಲ್ಲಿ ಕುಳಿತು ಪುತಿನ್ ವಿರುದ್ಧ ಸಮರ ಸಾರಿದ್ದರು. ಅವರಿಗೆ ರಷ್ಯಾದ ಏಜೆಂಟರ ‘ಪೊಲೊನಿಯಮ್ ೧೧೦’ ಎಂಬ ವಿಕಿರಣಶೀಲ ರಾಸಾಯನಿಕವನ್ನು ಚಹಾದಲ್ಲಿ ಬೆರೆಸಿ ಕುಡಿಸಿ ಕೊಂದರು; ಆದರೆ ಇದನ್ನು ಹೊರತುಪಡಿಸಿ ವಿದೇಶಕ್ಕೆ ಓಡಿ ಹೋದ ಎಷ್ಟೋ ವಿರೋಧಿಗಳನ್ನು ಪುತಿನ್ ಹಣ ನೀಡಿ ಸುಮ್ಮನಾಗಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಹತ್ಯೆ ಎಂಬುದು ಕೊನೆಯ ದಾರಿಯಾಗಿ ಬಳಸಲಾಗುತ್ತದೆ.

‘ಸ್ಪೆಷಲ್ ಎಪ್ಸ’ ವಿಭಾಗದಲ್ಲಿ ಅತ್ಯಂತ ಗುಪ್ತ ರೀತಿಯಲ್ಲಿ ಇಂತಹ ಕೆಲಸಗಳನ್ನು ಮಾಡುವ ಅಧಿಕಾರಿಗಳೂ ಬಹಳ ಕಡಿಮೆ ಇರುತ್ತಾರೆ; ಕಾರಣ ವಿದೇಶಿ ನೆಲದಲ್ಲಿ ನಿಖಿಲ ಗುಪ್ತಾನಂತಹವರ  ಬಂಧನವಾದರೆ, ಅವನ ಗುರುತು ಮತ್ತು ಸರಕಾರಿ ಅಧಿಕಾರಿ ಎಂಬ ವಿಷಯ ಹೊರಬಂದರೆ ಇಡೀ ದೇಶವೇ ಜಗತ್ತಿನ ಮುಂದೆ ಅಪಕೀರ್ತಿಗೆ ಒಳಗಾಗಬಹುದು. ಈ ಪ್ರಕರಣದಲ್ಲಿ ನಿಖಿಲ್ ಗುಪ್ತಾ ಎಂಬ ‘ನಾರ್ಕೊ’ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆದಾರನ ಬಂಧನದ ನಂತರ  ಭಾರತ ಸರಕಾರ ಇದರಿಂದ ಪ್ರತ್ಯೇಕವಾಗಿ ಉಳಿಯಿತು ಮತ್ತು ‘ಸಿಸಿ-೧’ ಅಂದರೆ ‘ನಮ್ಮ ಯಾವ ಅಧಿಕಾರಿ ಎಂದು ನೀವೇ ನಮಗೆ ತಿಳಿಸಿ, ಆಗ ನಾವು ಅವನ ತನಿಖೆ ಮಾಡುತ್ತೇವೆ’ ಎಂದು ಭಾರತ ಸರಕಾರ ಅಮೇರಿಕಾ ಮತ್ತು ಜೆಕ್ ಪೊಲೀಸರ ಮುಂದೆ ಸತತವಾಗಿ  ಜಪಿಸುತ್ತಿದೆ.

‘ಸ್ಪೆಷಲ್ ಎಪ್ಸ್’ ನಿಮಿತ್ತದಿಂದ ತನ್ನ ಅತ್ಯಂತ ತರಬೇತಿ ಪಡೆದ ಅಧಿಕಾರಿಗಳನ್ನು ವ್ಯಯಿಸುವುದಕ್ಕಿಂತ ವಿದೇಶದಲ್ಲಿ ಅವರ ಬಂಧನವಾದರೆ ಆ ಅಪಕೀರ್ತಿಯನ್ನು ಎದುರಿಸುವುದಕ್ಕಿಂತ, ಜಾಗತಿಕ ಅಪರಾಧ ಜಗತ್ತಿನ ಭಾಗವಾಗಿರುವ ಜನರಿಗೆ ಹಣ ನೀಡಿ ನೇಮಿಸುವುದು ಕಡಿಮೆ ವೆಚ್ಚದಾಯಕವಾಗಿದೆ. ಪನ್ನೂ ಪ್ರಕರಣದಲ್ಲಿಯೂ ‘ಸಿಸಿ-೧’ ನಿಕ್ ನನ್ನು ನೇಮಿಸಿದ, ನಿಕ್ ಅಮೇರಿಕನ್ ಸ್ಮಗ್ಲರ್‌ನನ್ನು (ಆ ಕಳ್ಳಸಾಗಾಣಿಕೆದಾರನು ಅಮೇರಿಕನ್ ‘ಅಂಡರಕವರ್ ಆಫೀಸರ’ ಆಗಿದ್ದನು) ನೇಮಿಸಿ, ಅವನಿಗೆ ೧೫ ಸಾವಿರ ಅಮೇರಿಕನ್ ಡಾಲರ್‌ಗಳನ್ನು ಎರಡು ಬಾರಿ ನೀಡಿ ಸ್ಥಳೀಯ ಶೂಟರ್ ನೇಮಿಸಲು ಹೇಳಲಾಯಿತು. ಒಟ್ಟು ಸುಪಾರಿ ೧ ಲಕ್ಷ ಅಮೇರಿಕನ್ ಡಾಲರ್‌ಗಳಾಗಿತ್ತು. ಆದರೆ ಈ ಕ್ಷೇತ್ರದ ತಜ್ಞರು ಮತ್ತು ಪತ್ರಕರ್ತರು ಹೇಳುವಂತೆ ಪನ್ನೂನಂತಹ ‘ಹೈಪ್ರೊಫೈಲ್’ ವ್ಯಕ್ತಿಯನ್ನು ಅಮೇರಿಕಾದ ನೆಲದಲ್ಲಿ ಕೊಲ್ಲಲು ಇಷ್ಟು ಕಡಿಮೆ ಮೊತ್ತದ ಸುಪಾರಿ ಕೊಡಲು ಸಾಧ್ಯವಿಲ್ಲ. ಆದ್ದರಿಂದ ನಿಖಿಲ್ ಗುಪ್ತಾ ಮತ್ತು ‘ಸಿಸಿ-೧’ ಎಂಬ ಈ ಮೂಲ ಕಥಾನಕವೇ ಬೋಗಸ್ (ಸುಳ್ಳು) ಆಗಿದೆ.

– ಶ್ರೀ ವಿನಯ ಜೋಶಿ, ಗೌಹಾಟಿ, ಅಸ್ಸಾಂ.