|
((ಸೆಕ್ಷುಯಲ್) ಗ್ರೂಮಿಂಗ್ ಎಂದರೆ ಚಿಕ್ಕ ವಯಸ್ಸಿನ ಹುಡುಗಿಯರು ಅಥವಾ ಯುವತಿಯರನ್ನು ಜಾಲಕ್ಕೆ ಸೆಳೆಯುವುದು, ಕುಟುಂಬದವರಿಂದ ದೂರ ಕರೆದೊಯ್ದು ಅವರ ಲೈಂಗಿಕ ಶೋಷಣೆ ಮಾಡುವುದು)

ಲಂಡನ (ಬ್ರಿಟನ್) – ಯುನೈಟೆಡ್ ಕಿಂಗ್ ಡಮ್ ನಲ್ಲಿ ‘ಗ್ರೂಮಿಂಗ್’ ಗುಂಪಿಗೆ ‘ಕೌರ್’ (ಸಿಖ್ ಹುಡುಗಿ) ಇಂದ ‘ಖಾನ್’ (ಮುಸಲ್ಮಾನ) ಆಗಿ ಪರಿವರ್ತಿಸಿದರೆ ೧೦,೦೦೦ ಪೌಂಡ್ (೧೧ ಲಕ್ಷ ರೂಪಾಯಿ) ನೀಡಲಾಗುತ್ತಿದೆ. ಪಾಕಿಸ್ತಾನಿ ಮೂಲದ ಗ್ರೂಮಿಂಗ್ ಗುಂಪು ವ್ಯವಸ್ಥಿತ ಸಂಚಿನ ಅಡಿಯಲ್ಲಿ ಮುಸಲ್ಮಾನೇತರ ಹುಡುಗಿಯರನ್ನು, ವಿಶೇಷವಾಗಿ ಸಿಖ್ ಹುಡುಗಿಯರನ್ನು ಗುರಿಯಾಗಿಸಿಕೊಂಡಿದೆ ಎಂದು ಇಂಗ್ಲೆಂಡ್ ನಲ್ಲಿ ವಾಸಿಸುತ್ತಿರುವ ಪಂಜಾಬಿ ಯುವತಿ ನವದೀಪ್ ಸಿಂಗ್ ಒಂದು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.
🚨 Shocking Report from Britain! 🇬🇧
A video shared by @Navdeep_UK exposes a Pakistani 'grooming gang' targeting Sikh girls with a bounty of £10,000 (around Rs 11 lakh), £5,000 (around Rs 5.5 lakh).for targeting Hindu or Christian girls.
⚠️ The pattern:
Fake love ➡️… pic.twitter.com/Alp5XSyMGr— Sanatan Prabhat (@SanatanPrabhat) March 18, 2026
ನವದೀಪ್ ಈ ವಿಡಿಯೋದಲ್ಲಿ, ಗ್ರೂಮಿಂಗ್ ಗುಂಪು ಮೊದಲು ಹುಡುಗಿಯರನ್ನು ಗುರಿಯಾಗಿಸಿಕೊಂಡು ಅವರೊಂದಿಗೆ ಭಾವನಾತ್ಮಕವಾಗಿ ಬೆರೆಯುತ್ತದೆ, ನಂತರ ಅವರನ್ನು ದುಬಾರಿ ಕಾರುಗಳಲ್ಲಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸುತ್ತಾಡಿಸುತ್ತದೆ ಮತ್ತು ಯಾವಾಗ ಹುಡುಗಿ ಅವರ ಜಾಲದಲ್ಲಿ ಸಿಲುಕುತ್ತಾಳೋ, ಆಗ ಅವಳ ಮತಾಂತರ ಮಾಡಲಾಗುತ್ತದೆ. ವಿವಿಧ ಧರ್ಮಗಳ ಹುಡುಗಿಯರನ್ನು ವಂಚಿಸಲು ದರಗಳೂ ವಿಭಿನ್ನವಾಗಿವೆ. ಸಿಖ್ ಹುಡುಗಿಯನ್ನು ವಂಚಿಸಿ ಮುಸಲ್ಮಾನಳನ್ನಾಗಿ ಮಾಡಿದರೆ ಮುಸಲ್ಮಾನ ಯುವಕನಿಗೆ ೧೦,೦೦೦ ಪೌಂಡ್ ಸಿಗುತ್ತದೆ. ಅದೇ ರೀತಿ ಹಿಂದೂ ಅಥವಾ ಕ್ರಿಶ್ಚಿಯನ್ ಹುಡುಗಿಯ ಮತಾಂತರ ಮಾಡಿದರೆ ೫,೦೦೦ ಪೌಂಡ್ (ಸುಮಾರು ಐದೂವರೆ ಲಕ್ಷ ರೂಪಾಯಿ) ನೀಡಲಾಗುತ್ತದೆ.
ಒಂದು ಧರ್ಮದ ಎಲ್ಲಾ ಜನರು ಕೆಟ್ಟವರಲ್ಲ
ಈ ವಿಡಿಯೋ ಯಾವುದೇ ಧರ್ಮದ ವಿರುದ್ಧವಾಗಿಲ್ಲ ಅಥವಾ ಯಾರನ್ನೂ ಗುರಿಯಾಗಿಸಲು ಮಾಡಿದ್ದಲ್ಲ ಎಂದು ಯುವತಿ ಹೇಳಿದ್ದಾರೆ. ಒಂದು ಧರ್ಮದ ಎಲ್ಲಾ ಜನರು ಕೆಟ್ಟವರಲ್ಲ. ಇಡೀ ಧರ್ಮಕ್ಕೆ ಅಪಕೀರ್ತಿ ತರುವಂತಹ ಕೆಲವು ವ್ಯಕ್ತಿಗಳು ಇರುತ್ತಾರೆ.
ಭಾಜಪದ ಭಾರತದ ನಾಯಕರಿಂದ ಅಂತರಾಷ್ಟ್ರೀಯ ಸಂಸ್ಥೆಗಳಿಗೆ ಕರೆ
ಭಾಜಪ ಪಂಜಾಬ್ ವಕ್ತಾರ ಸರಚಂದ ಸಿಂಗ್ ಅವರು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳಿಗೆ ಕರೆ ನೀಡಿದ್ದು, ಈ ವಿಷಯವನ್ನು ಕೇವಲ ಧಾರ್ಮಿಕ ಘಟನೆಯೆಂದು ಪರಿಗಣಿಸದೆ ಮಹಿಳೆಯರ ಸುರಕ್ಷತೆ ಮತ್ತು ಘನತೆಗೆ ಸಂಬಂಧಿಸಿದ ಜಾಗತಿಕ ಸಮಸ್ಯೆಯೆಂದು ಪರಿಗಣಿಸಿ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಗ್ರೂಮಿಂಗ್ ಗುಂಪು ಹೇಗೆ ಕೆಲಸ ಮಾಡುತ್ತದೆ?
೧. ಗುರಿ ನಿಗದಿಪಡಿಸುವುದು : ಗ್ರೂಮಿಂಗ್ ಗುಂಪಿನ ಮುಸಲ್ಮಾನ ಯುವಕರು ಕಾಲೇಜುಗಳು, ಶಾಪಿಂಗ್ ಮಾಲ್ ಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹುಡುಗಿಯರನ್ನು ಹುಡುಕುತ್ತಾರೆ, ಯಾರು ಭಾವನಾತ್ಮಕವಾಗಿ ದುರ್ಬಲರಾಗಿದ್ದಾರೆ ಅಥವಾ ಯಾರ ಕುಟುಂಬದೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯಗಳು ನಡೆಯುತ್ತಿವೆ. ಆರ್ಥಿಕವಾಗಿ ದುರ್ಬಲ ಮತ್ತು ಬೇರೆ ದೇಶಗಳಿಂದ ಓದಲು ಬಂದಿರುವ ಹುಡುಗಿಯರನ್ನು ಆದ್ಯತೆಯ ಮೇಲೆ ಗುರಿಯಾಗಿಸಲಾಗುತ್ತದೆ.
೨. ಗುರುತು ಬದಲಿಸಿ ಸುಳ್ಳು ಪ್ರತಿಷ್ಠೆ ನಿರ್ಮಿಸುವುದು : ಹುಡುಗಿಯರನ್ನು ಆಯ್ಕೆ ಮಾಡಿದ ನಂತರ ಮುಸಲ್ಮಾನ ಯುವಕರು ತಮ್ಮ ಹೆಸರನ್ನು ಹುಡುಗಿಯ ಧರ್ಮದಂತೆ ಇಟ್ಟುಕೊಳ್ಳುತ್ತಾರೆ. ತಮ್ಮನ್ನು ತಾವು ತುಂಬಾ ಶ್ರೀಮಂತರು ಮತ್ತು ಉದಾರವಾದಿಗಳು ಎಂದು ತೋರಿಸಿಕೊಂಡು ಹುಡುಗಿಯೊಂದಿಗೆ ಸ್ನೇಹ ಬೆಳೆಸುತ್ತಾರೆ. ದುಬಾರಿ ಕಾರುಗಳು ಮತ್ತು ಬ್ರಾಂಡೆಡ್ ಬಟ್ಟೆಗಳನ್ನು ಧರಿಸಿ ಹುಡುಗಿಯ ಮೇಲೆ ಪ್ರಭಾವ ಬೀರುತ್ತಾರೆ.
೩. ರೆಸ್ಟೋರೆಂಟ್ ಮತ್ತು ಮಾಲ್ ಗಳಲ್ಲಿ ಸುತ್ತಾಡಿಸುತ್ತಾರೆ : ಗುಂಪಿನಲ್ಲಿರುವ ಮುಸಲ್ಮಾನರು ಹುಡುಗಿಯರನ್ನು ಜಾಲಕ್ಕೆ ಎಳೆಯಲು ಅವರನ್ನು ರೆಸ್ಟೋರೆಂಟ್ ಮತ್ತು ಮಾಲ್ ಗಳಿಗೆ ಸುತ್ತಾಡಿಸಲು ಕರೆದೊಯ್ಯುತ್ತಾರೆ. ಹೀಗೆ ಮಾಡುವ ಮೂಲಕ ಅವರು ಹುಡುಗಿಯರನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆ.
೪. ಪ್ರೀತಿ ಮತ್ತು ಗಮನ ನೀಡುತ್ತಾರೆ : ಪ್ರಾರಂಭದಲ್ಲಿ ಹುಡುಗಿಯ ಮೇಲೆ ಎಷ್ಟು ಪ್ರೀತಿ ತೋರಿಸಲಾಗುತ್ತದೆ ಮತ್ತು ಗಮನ ನೀಡಲಾಗುತ್ತದೆ ಎಂದರೆ, ಅವಳಿಗೆ ಅವನೇ ನನ್ನ ನಿಜವಾದ ಪ್ರಿಯಕರ ಎಂದು ಅನಿಸಲು ಶುರುವಾಗುತ್ತದೆ. ಅವಳಿಗೆ ದೊಡ್ಡ ದೊಡ್ಡ ಕನಸುಗಳನ್ನು ತೋರಿಸಲಾಗುತ್ತದೆ. ಹುಡುಗಿಗೆ ಮದುವೆಯ ಆಮಿಷವನ್ನೂ ಒಡ್ಡುತ್ತಾರೆ.
೫. ಕುಟುಂಬದಿಂದ ಬೇರ್ಪಡಿಸಿ ತಮ್ಮ ಮೇಲೆ ಅವಲಂಬಿತರನ್ನಾಗಿ ಮಾಡುತ್ತಾರೆ : ಮುಸಲ್ಮಾನ ಯುವಕರು ನಿಧಾನವಾಗಿ ಹುಡುಗಿಯ ಮನಸ್ಸಿನಲ್ಲಿ ಅವಳ ಕುಟುಂಬ ಮತ್ತು ಧರ್ಮದ ಬಗ್ಗೆ ದ್ವೇಷ ಅಥವಾ ಸಂಶಯವನ್ನು ಮೂಡಿಸುತ್ತಾರೆ, ಇದರಿಂದ ಅವಳು ತನ್ನ ಹತ್ತಿರದವರಿಂದ ದೂರವಾಗಿ ಸಂಪೂರ್ಣವಾಗಿ ಯುವಕನ ಮೇಲೆ ಅವಲಂಬಿತಳಾಗುತ್ತಾಳೆ.
೬. ಬ್ಲ್ಯಾಕ್ ಮೇಲಿಂಗ್ ಮತ್ತು ಶೋಷಣೆ : ಒಮ್ಮೆ ಹುಡುಗಿ ಅವರ ಜಾಲದಲ್ಲಿ ಸಿಲುಕಿದ ನಂತರ, ಅವರು ಅವಳ ದೈಹಿಕ ಶೋಷಣೆ ಮಾಡಲು ಪ್ರಾರಂಭಿಸುತ್ತಾರೆ. ಅವಳ ಆಕ್ಷೇಪಾರ್ಹ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ತಯಾರಿಸಿ ಅವಳನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸುತ್ತಾರೆ.
೭. ಮತಾಂತರ : ಮುಸಲ್ಮಾನ ಯುವಕರು ನಂತರ ಮದುವೆ ಅಥವಾ ಸುರಕ್ಷತೆಯ ಕಾರಣ ನೀಡಿ ಹುಡುಗಿಯನ್ನು ಮತಾಂತರಗೊಳ್ಳಲು ಒತ್ತಾಯಿಸುತ್ತಾರೆ. ಅವರ (ಸಿಖ್ ಆಗಿದ್ದರೆ) ‘ಕೌರ್’ ಎಂಬ ಉಪನಾಮವನ್ನು ಬದಲಿಸಿ ‘ಖಾನ್’ ಎಂದು ಬದಲಾಯಿಸಲಾಗುತ್ತದೆ.
ಸಂಪಾದಕೀಯ ನಿಲುವು
|
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್