‘ಇಸ್ಲಾಮಿಕ್ ಸ್ಟೇಟ್’ಗಾಗಿ ಭಯೋತ್ಪಾದಕರನ್ನು ಸಿದ್ಧಪಡಿಸುತ್ತಿದ್ದ ಆರೋಪ

ಮುರಾದಾಬಾದ್ (ಉತ್ತರ ಪ್ರದೇಶ): ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಹಾರಿಸ್ ಅಲಿ ಎಂಬಾತನನ್ನು ಭಯೋತ್ಪಾದನಾ ವಿರೋಧಿ ದಳ (ATS) ಇತ್ತೀಚೆಗೆ ಬಂಧಿಸಿದೆ. ‘ಇಸ್ಲಾಮಿಕ್ ಸ್ಟೇಟ್’ ಭಯೋತ್ಪಾದಕ ಸಂಘಟನೆಗಾಗಿ ಉಗ್ರರನ್ನು ಸಿದ್ಧಪಡಿಸುತ್ತಿದ್ದ ಆರೋಪ ಈತನ ಮೇಲಿದೆ. ಈತನು ‘ಅಲ್ ಇತ್ತಿಹಾದ್’ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮ ಖಾತೆಯನ್ನು ತೆರೆದು, ಅದರ ಮೂಲಕ ಉತ್ತರ ಪ್ರದೇಶದ ನೂರಾರು ಯುವಕರ ದಾರಿ ತಪ್ಪಿಸಿ, ಅವರನ್ನು ಆತ್ಮಹತ್ಯಾ ದಾಳಿಗೆ ಪ್ರೇರೇಪಿಸುತ್ತಿದ್ದನು. ಹಾರಿಸ್‌ನಿಂದ ಅನೇಕ ಆಕ್ಷೇಪಾರ್ಹ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತದಲ್ಲಿ ಶರಿಯತ್ ಕಾನೂನು ಮತ್ತು ಖಲೀಫಾ ಆಡಳಿತವನ್ನು (ಇಸ್ಲಾಂ ಧರ್ಮದ ಆಧಾರಿತ ಆಡಳಿತ ವ್ಯವಸ್ಥೆ) ಸ್ಥಾಪಿಸುವ ಕುರಿತು ಈತ ಚರ್ಚೆ ನಡೆಸುತ್ತಿದ್ದನು.
🚨 ISIS Recruitment Angle Exposed in Moradabad Arrest!
A dental student, Haarish Ali, has been arrested by UP ATS for preparing recruits for the Islamic State (ISIS).
This case raises serious questions about the narrative that terrorism is driven only by poverty. When highly… pic.twitter.com/Ta2QNUnkpx
— Sanatan Prabhat (@SanatanPrabhat) March 17, 2026
1. ಪೊಲೀಸ್ ತನಿಖೆಯಲ್ಲಿ ತಿಳಿದುಬಂದ ವಿಷಯವೇನೆಂದರೆ, 19 ವರ್ಷದ ಹಾರಿಸ್ ಅಲಿ ಮೂಲತಃ ಸಹರಾನ್‌ಪುರದ ಮಾನಕ್ ಮೌ ಪ್ರದೇಶದ ನಿವಾಸಿಯಾಗಿದ್ದಾನೆ. ಈತ ಮುರಾದಾಬಾದ್‌ನ ಪ್ರತಿಷ್ಠಿತ ದಂತ ವೈದ್ಯಕೀಯ ಕಾಲೇಜೊಂದರಲ್ಲಿ ಓದುತ್ತಿದ್ದನು.
2. ಮುಸ್ಲಿಂ ಯುವಕರನ್ನು ‘ಇಸ್ಲಾಮಿಕ್ ಸ್ಟೇಟ್’ ಭಯೋತ್ಪಾದಕ ಸಂಘಟನೆಯೊಂದಿಗೆ ಜೋಡಿಸಲು ಹಾರಿಸ್ ಅಲಿ ‘ಅಲ್ ಇತ್ತಿಹಾದ್’ ಹೆಸರಿನ ಸಾಮಾಜಿಕ ಮಾಧ್ಯಮ ಖಾತೆಯನ್ನು ಬಳಸುತ್ತಿದ್ದನು.
3. ಸಾಮಾಜಿಕ ಮಾಧ್ಯಮಗಳ ಮೂಲಕ ಈತ ಮುಸ್ಲಿಂ ಯುವಕರಿಗೆ ‘ಇಸ್ಲಾಮಿಕ್ ಸ್ಟೇಟ್’ ಪ್ರಚಾರಕ್ಕಾಗಿ ಬಳಸುವ ‘ದಾಬಿಕ್’ ಮತ್ತು ‘ಅಲ್-ನಬಾ’ ಅಂತಹ ಪ್ರಚಾರ ಸಾಮಗ್ರಿಗಳನ್ನು ಹಂಚುತ್ತಿದ್ದನು.
4. ಭಯೋತ್ಪಾದನಾ ವಿರೋಧಿ ದಳ ನೀಡಿದ ಮಾಹಿತಿಯಂತೆ, ಹಾರಿಸ್ ಅಲಿ ಕಳೆದ 2 ವರ್ಷಗಳಲ್ಲಿ ಹಲವಾರು ಬಾರಿ ಜಮ್ಮು-ಕಾಶ್ಮೀರಕ್ಕೂ ಭೇಟಿ ನೀಡಿದ್ದನು. ಮುರಾದಾಬಾದ್ ಸೇರಿದಂತೆ ಸಂಭಲ್, ಅಮ್ರೋಹಾ ಮತ್ತು ಬಿಜ್ನೋರ್‌ನಂತಹ ಪಶ್ಚಿಮ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಈತ ತನ್ನ ಜಾಲವನ್ನು ಹರಡಿದ್ದನು.
ಸಂಪಾದಕೀಯ ನಿಲುವುಉನ್ನತ ಶಿಕ್ಷಣ ಪಡೆದ ಮುಸ್ಲಿಮರೂ ಭಯೋತ್ಪಾದನೆಯತ್ತ ವಾಲುತ್ತಿರುವುದು, ‘ಬಡತನದ ಕಾರಣದಿಂದ ಮುಸ್ಲಿಮರು ಭಯೋತ್ಪಾದನೆಗೆ ಇಳಿಯುತ್ತಾರೆ’ ಎಂದು ವಾದಿಸುವವರಿಗೆ ಒಂದು ಕಪಾಳಮೋಕ್ಷ! |
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari