ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಬ್ರಿಟನ್ ಯುದ್ಧನೌಕೆಗಳನ್ನು ಕಳುಹಿಸಲಿವೆ ಎಂಬ ಭರವಸೆಯಲ್ಲಿ ಟ್ರಂಪ್

ವಾಷಿಂಗ್ಟನ್ / ಟೆಲ್ ಅವಿವ್ / ಟೆಹ್ರಾನ್ – ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ ನಡುವಿನ ಯುದ್ಧ ಆರಂಭವಾಗಿ 15 ದಿನಗಳು ಕಳೆದಿವೆ. ಈ ಬೆನ್ನಲ್ಲೇ, “ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಕ್ತಗೊಳಿಸಲು ಅನೇಕ ದೇಶಗಳು ಯುದ್ಧನೌಕೆಗಳನ್ನು ಕಳುಹಿಸಲಿವೆ” ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಮುದ್ರ ಮಾರ್ಗದಿಂದ ಪ್ರಭಾವಿತವಾಗಿರುವ ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಬ್ರಿಟನ್‌ನಂತಹ ದೇಶಗಳು ಸಹ ಈ ಪ್ರದೇಶಕ್ಕೆ ತಮ್ಮ ಯುದ್ಧನೌಕೆಗಳನ್ನು ಕಳುಹಿಸಬಹುದು. ಈ ದೇಶಗಳ ಸಹಕಾರದೊಂದಿಗೆ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲಾಗುವುದು ಎಂದು ಅವರು ಆಶಿಸಿದ್ದಾರೆ.
ಇರಾನ್‌ನ ಶೇ. 100 ರಷ್ಟು ಮಿಲಿಟರಿ ಸಾಮರ್ಥ್ಯ ನಾಶಪಡಿಸಲಾಗಿದೆ!
ಟ್ರಂಪ್ ಮಾತನಾಡಿ, “ನಾವು ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ಶೇ. 100 ರಷ್ಟು ನಾಶಪಡಿಸಿದ್ದೇವೆ. ಆದರೂ ಇರಾನ್ ಇನ್ನೂ ಡ್ರೋನ್ ಅಥವಾ ಅಲ್ಪ ವ್ಯಾಪ್ತಿಯ ಕ್ಷಿಪಣಿಗಳ ಮೂಲಕ ಜಲಸಂಧಿಯಲ್ಲಿ ಅಡಚಣೆ ಉಂಟುಮಾಡಲು ಪ್ರಯತ್ನಿಸಬಹುದು. ಅಮೆರಿಕ ಯಾವುದೇ ಪರಿಸ್ಥಿತಿಯಲ್ಲೂ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುತ್ತದೆ ಮತ್ತು ಇದನ್ನು ಸಾಧಿಸಲು ಮಿಲಿಟರಿ ಕಾರ್ಯಾಚರಣೆ ಅಗತ್ಯವಾಗಿದೆ” ಎಂದು ಹೇಳಿದರು.
ಟ್ರಂಪ್ ಅವರ ದಾವೆಗಳು ಆಧಾರರಹಿತ! – ಇರಾನ್
ಇರಾನ್‌ನ ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, “ಹಾರ್ಮುಜ್ ಜಲಸಂಧಿ ಇನ್ನೂ ಮುಕ್ತವಾಗಿದ್ದು, ಅದು ಇರಾನ್‌ನ ನಿಯಂತ್ರಣದಲ್ಲಿದೆ” ಎಂದು ಹೇಳಿದ್ದಾರೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯ ಕಮಾಂಡರ್ ಅಲಿರೆಜಾ ತಂಗ್ಸಿರಿ ಮಾತನಾಡಿ, ಅಮೆರಿಕದ ದಾವೆಗಳು ಸುಳ್ಳು ಎಂದು ಹೇಳಿದ್ದಾರೆ. “ಇರಾನ್‌ನ ನೌಕಾಪಡೆಯನ್ನು ನಾಶಪಡಿಸಿದ್ದೇವೆ ಮತ್ತು ತೈಲ ನೌಕೆಗಳಿಗೆ ಸುರಕ್ಷಿತ ಮಾರ್ಗ ಒದಗಿಸುತ್ತೇವೆ ಎನ್ನುವ ಅಮೆರಿಕದ ವಾದದಲ್ಲಿ ಸತ್ಯವಿಲ್ಲ” ಎಂದಿದ್ದಾರೆ.
ಯುದ್ಧಕ್ಕೆ ಸಂಬಂಧಿಸಿದ 5 ಜಾಗತಿಕ ಬೆಳವಣಿಗೆಗಳು!
- ಪ್ಯಾರಿಸ್ (ಫ್ರಾನ್ಸ್): ಅಮೆರಿಕ-ಇಸ್ರೇಲ್ ವಿರುದ್ಧ ಮುಸ್ಲಿಮರಿಂದ ಪ್ರತಿಭಟನೆ
- ವಾಷಿಂಗ್ಟನ್ (ಅಮೆರಿಕ): ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಮತ್ತೆ ‘ಮೋಜಿಗಾಗಿ’ ದಾಳಿ ಮಾಡುತ್ತೇವೆ! – ಟ್ರಂಪ್
- ಬಾಗ್ದಾದ್ (ಇರಾಕ್): ಬಾಗ್ದಾದ್ ಮತ್ತು ಇರ್ಬಿಲ್‌ನಲ್ಲಿನ ಅಮೆರಿಕದ ನೆಲೆಗಳ ಮೇಲಿನ ದಾಳಿಯ ಹೊಣೆ ಹೊತ್ತ ಶಿಯಾ ಭಯೋತ್ಪಾದಕ ಸಂಘಟನೆ ‘ಸಿರಾಯಾ ಔಲಿಯಾ ಅಲ್-ದಮ್’
- ಬೈರುತ್ (ಲೆಬನಾನ್): ಇಸ್ರೇಲ್ ದಾಳಿಯಲ್ಲಿ ಅನೇಕ ವೈದ್ಯರು ಸೇರಿದಂತೆ 100 ಜನರು ಸಾವು.
- ಟೆಹ್ರಾನ್ (ಇರಾನ್): ಇಸ್ರೇಲ್‌ನಿಂದ ಒಂದೇ ದಿನದಲ್ಲಿ ನೂರಾರು ಸ್ಥಳಗಳ ಮೇಲೆ ದಾಳಿ.
ಹಾರ್ಮುಜ್ ಜಲಸಂಧಿ ಕೇವಲ ನಮ್ಮ ಶತ್ರುಗಳ ನೌಕೆಗಳಿಗೆ ಮಾತ್ರ ಬಂದ್! – ಇರಾನ್
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಮಾತನಾಡಿ, “ಹಾರ್ಮುಜ್ ಜಲಸಂಧಿಯು ಕೇವಲ ನಮ್ಮ ಶತ್ರುಗಳಾದ ಅಮೆರಿಕ ಮತ್ತು ಇಸ್ರೇಲ್ ನೌಕೆಗಳಿಗೆ ಮಾತ್ರ ಬಂದ್ ಆಗಿದೆ. ಉಳಿದ ಎಲ್ಲರಿಗೂ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ. ಸುರಕ್ಷತಾ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ. |
ಟ್ರಂಪ್ ಅವರಿಂದ ಕದನ ವಿರಾಮದ ಚರ್ಚೆಗೆ ನಿರಾಕರಣೆ!

ಯುದ್ಧ ಕೊನೆಗೊಳಿಸಲು ಮಧ್ಯಪ್ರಾಚ್ಯದ ಮಿತ್ರರಾಷ್ಟ್ರಗಳು ರಾಜತಾಂತ್ರಿಕ ಚರ್ಚೆ ಆರಂಭಿಸಿವೆ ಎಂಬ ವರದಿಯನ್ನು ಟ್ರಂಪ್ ಆಡಳಿತ ತಿರಸ್ಕರಿಸಿದೆ. ವೈಟ್ ಹೌಸ್ ಅಧಿಕಾರಿಯೊಬ್ಬರು ಮಾತನಾಡಿ, ಟ್ರಂಪ್ ಅವರ ಗಮನ ಪ್ರಸ್ತುತ ಯುದ್ಧ ನಿಲ್ಲಿಸುವುದರ ಮೇಲೆ ಇಲ್ಲ, ಬದಲಾಗಿ ಇರಾನ್‌ನ ಮಿಲಿಟರಿ ಶಕ್ತಿಯನ್ನು ಮತ್ತಷ್ಟು ಕುಂದಿಸುವುದರ ಮೇಲಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಇರಾನ್ ಸಹ, “ಅಮೆರಿಕ ಮತ್ತು ಇಸ್ರೇಲ್ ದಾಳಿಯನ್ನು ನಿಲ್ಲಿಸುವವರೆಗೆ ಯಾವುದೇ ಕದನ ವಿರಾಮದ ಬಗ್ಗೆ ಚರ್ಚಿಸಲು ಸಿದ್ಧವಿಲ್ಲ” ಎಂದು ಸ್ಪಷ್ಟಪಡಿಸಿದೆ.
ನೆತನ್ಯಾಹು ಬದುಕಿದ್ದರೆ, ಅವರನ್ನು ಹುಡುಕಿ ಕೊಲ್ಲುತ್ತೇವೆ! – ಇರಾನ್
ಇರಾನ್‌ನ ಐಆರ್‌ಜಿಸಿ (IRGC) ಹೇಳಿಕೆಯೊಂದನ್ನು ನೀಡಿದ್ದು, “ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಇನ್ನೂ ಬದುಕಿದ್ದರೆ, ನಾವು ಅವರನ್ನು ಹುಡುಕಿ ಕೊಲ್ಲುತ್ತೇವೆ. ಈ ‘ಮಕ್ಕಳ ಕೊಲೆಗಡುಕ’ ಇನ್ನೂ ಜೀವಂತವಾಗಿದ್ದರೆ, ನಾವು ಪೂರ್ಣ ಶಕ್ತಿಯೊಂದಿಗೆ ಅವನನ್ನು ಬೆನ್ನಟ್ಟಿ ಕೊಲ್ಲುತ್ತೇವೆ” ಎಂದಿದೆ.
ಎರಡು ದಿನಗಳ ಹಿಂದೆ ನೆತನ್ಯಾಹು ಅವರ ವಿಡಿಯೋವೊಂದು ಪ್ರಸಾರವಾಗಿತ್ತು. ಅದರಲ್ಲಿ ಅವರ ಬಲಗೈಗೆ 6 ಬೆರಳುಗಳು ಕಾಣಿಸುತ್ತಿವೆ ಎಂದು ಹೇಳಲಾಗಿತ್ತು. ಇದು ‘AI’ ನಿರ್ಮಿತ ಅಥವಾ ‘ಡೀಪ್‌ಫೇಕ್’ ವಿಡಿಯೋ ಇರಬಹುದು ಎಂದು ಅನೇಕರು ವಾದಿಸಿದ್ದರು. ನೆತನ್ಯಾಹು ಇರಾನ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಅಥವಾ ಜರ್ಮನಿಗೆ ಓಡಿಹೋಗಿದ್ದಾರೆ ಎಂಬ ವದಂತಿಗಳೂ ಹರಡಿದ್ದವು. ಆದರೆ, ನೆತನ್ಯಾಹು ಕಚೇರಿಯು “ಪ್ರಧಾನಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ, ಇವೆಲ್ಲಾ ಸುಳ್ಳು ಸುದ್ದಿಗಳು” ಎಂದು ಸ್ಪಷ್ಟನೆ ನೀಡಿದೆ.
ಇರಾನ್ ಸರಕಾರ ಪತನಗೊಂಡರೆ, ನಾನು ಅಧಿಕಾರ ವಹಿಸಿಕೊಳ್ಳಲು ಸಿದ್ಧ! – ಇರಾನ್‌ನ ಗಡಿಪಾರು ಮಾಡಲ್ಪಟ್ಟ ಯುವರಾಜ ರೆಜಾ ಪಹ್ಲವಿ

ಇರಾನ್‌ನ ಗಡಿಪಾರು ಮಾಡಲ್ಪಟ್ಟ ಯುವರಾಜ ರೆಜಾ ಪಹ್ಲವಿ ಅವರು, “ಒಂದು ವೇಳೆ ಇರಾನ್ ಸರಕಾರ ಪತನಗೊಂಡರೆ, ನಾನು ದೇಶದ ನೇತೃತ್ವ ವಹಿಸಲು ಸಿದ್ಧನಿದ್ದೇನೆ. ನಾನು ಈಗಾಗಲೇ ಮಧ್ಯಂತರ ವ್ಯವಸ್ಥೆಯನ್ನು ರೂಪಿಸುವ ಕೆಲಸ ಮಾಡುತ್ತಿದ್ದೇನೆ. ಇರಾನ್ ಒಳಗೆ ಮತ್ತು ವಿದೇಶದಲ್ಲಿರುವ ಅನೇಕ ವ್ಯಕ್ತಿಗಳನ್ನು ಈ ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ” ಎಂದು ಹೇಳಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ