ಯುಗಾದಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ

‘ಹಿಂದೂ ಸಂಸ್ಕೃತಿಯಲ್ಲಿ ಯುಗಾದಿಯು ಹೊಸ ವರ್ಷದ ಆರಂಭ ಮಾತ್ರವಲ್ಲ, ಅದು ಅಧರ್ಮದ ಮೇಲೆ ಧರ್ಮದ ವಿಜಯದ ಸಂಕೇತವಾಗಿರುವ ಅತ್ಯಂತ ಶುಭ ದಿನವಾಗಿದೆ. ಪ್ರಭು ಶ್ರೀರಾಮನು ೧೪ ವರ್ಷಗಳ ವನವಾಸವನ್ನು ಮುಗಿಸಿ, ಅಸುರಿ ಶಕ್ತಿಗಳನ್ನು ನಾಶ ಮಾಡಿ ಅಯೋಧ್ಯೆಗೆ ಮರಳಿದಾಗ, ಅಯೋಧ್ಯೆಯ ಭಕ್ತ ನಾಗರಿಕರು ಆನಂದ ಮತ್ತು ವಿಜಯದ ಸಂಕೇತವೆಂದು ಮನೆಮನೆಗಳ ಮೇಲೆ ಬ್ರಹ್ಮಧ್ವಜವನ್ನು ಏರಿಸಿದ್ದರು. ಅದೇ ವಿಜಯೋತ್ಸವ ಮತ್ತು ಅದೇ ಆದರ್ಶದ ಬ್ರಹ್ಮಧ್ವಜವು ಇಂದಿಗೂ ನಮಗೆ ನಿಜವಾದ ಅರ್ಥದಲ್ಲಿ ‘ರಾಮರಾಜ್ಯ’ವನ್ನು ಸ್ಥಾಪಿಸಲು ಪ್ರೇರಣೆ ನೀಡುತ್ತಿದೆ. ರಾಮರಾಜ್ಯದಲ್ಲಿ ಮಾತ್ರ ನಿಜವಾದ ಸುಖ ಮತ್ತು ಆನಂದವನ್ನು ಅನುಭವಿಸಲು ಸಾಧ್ಯ.
ರಾಮರಾಜ್ಯ ಎಂದರೆ ಆಧ್ಯಾತ್ಮಿಕ ಶ್ರದ್ಧೆಯು ಉತ್ತಮ ಆಡಳಿತದಲ್ಲಿ ಪ್ರತಿಫಲಿಸುವಂತಹ ರಾಜ್ಯ. ಭಾರತದಲ್ಲಿ ಆದರ್ಶ ರಾಜ, ಸಾತ್ತ್ವಿಕ ಪ್ರಜೆಗಳು, ಉತ್ತಮ ಆಡಳಿತ ಮತ್ತು ಸುರಕ್ಷಿತ ರಾಮರಾಜ್ಯವನ್ನು ತರುವುದೇ ನಿಜವಾದ ಕಾಲಾನುಸಾರ ಧರ್ಮಸಂಸ್ಥಾಪನೆಯಾಗಿದೆ. ನಾಗರಿಕರು ‘ಸಾಧಕರು’ (ನಿತ್ಯ ಸಾಧನೆ ಮಾಡುವವರು ಅಥವಾ ಭಗವದ್ಭಕ್ತರು) ಆಗಿರುವುದೇ ರಾಮರಾಜ್ಯಕ್ಕಾಗಿ ಅರ್ಹತೆಯಾಗಿದೆ. ಸಮಾಜದ ವ್ಯಕ್ತಿಗಳು ಆಧ್ಯಾತ್ಮಿಕವಾಗಿ ಉನ್ನತ ಮತ್ತು ಧರ್ಮಸಂಸ್ಕಾರವಂತರಾದಾಗ ಮಾತ್ರವೇ ನಿಜ ಅರ್ಥದಲ್ಲಿ ಆದರ್ಶ ರಾಷ್ಟ್ರರಚನೆ ಸಾಕಾರಗೊಳ್ಳುತ್ತದೆ.
ಯುಗಾದಿಯ ಈ ಶುಭ ಮುಹೂರ್ತದಲ್ಲಿ ನಾವು ಮನೆಯ ಹೊರಗೆ ಬ್ರಹ್ಮಧ್ವಜ ಏರಿಸುವುದರ ಜೊತೆಗೆ, ರಾಮರಾಜ್ಯದ ಸಿದ್ಧಾಂತದ ಮೇಲಾಧಾರಿತ ರಾಷ್ಟ್ರ ನಿರ್ಮಾಣಕ್ಕಾಗಿ ಕೊಡುಗೆ ನೀಡಲು ಮತ್ತು ಸಾಧನೆ ಮಾಡಲು ಸಂಕಲ್ಪ ಮಾಡೋಣ. ಭಾರತದಲ್ಲಿ ಮತ್ತೊಮ್ಮೆ ‘ರಾಮರಾಜ್ಯ’ದ ಬ್ರಹ್ಮಧ್ವಜ ಏರಿಸಲು ಕಟಿಬದ್ಧರಾಗೋಣ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
‘ಮನುಷ್ಯ ಮತ್ತು ದೇವರ ನಡುವಿನ ತುಲನೆಯ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಚಾರ’ದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ ಮತ್ತು ಅದರಿಂದ ಕಲಿಯಬೇಕಾದ ಬೋಧನೆ ಅಂದರೆ ‘ಜೀವನವನ್ನು ಸಾರ್ಥಕಗೊಳಿಸಲು ಕಠಿಣ ಸಾಧನೆ ಮಾಡದೇ ಪರ್ಯಾಯವಿಲ್ಲ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !