ಸಾಧಕರೇ, ಕಾರ್ಯ ಮತ್ತು ಸಾಧನೆ ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ, ಕಾರ್ಯ ಮಾಡುವಾಗ ಸಾಧನೆಯಾಗುವತ್ತ ಗಮನ ಹರಿಸಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಸಮಷ್ಟಿ ಸಾಧನೆಗಾಗಿಯೇ ನಾವು ರಾಮರಾಜ್ಯದ ಸ್ಥಾಪನೆಗಾಗಿ ಪ್ರಯತ್ನಿಸುತ್ತಿದ್ದೇವೆ. ಇದನ್ನು ಮಾಡುವಾಗ ಅದಕ್ಕೆ ವ್ಯಷ್ಟಿ ಸಾಧನೆಯನ್ನು ಜೊತೆಗೂಡಿಸುವುದು ಆವಶ್ಯಕವಾಗಿರುತ್ತದೆ. ಕೆಲವು ಸಾಧಕರಲ್ಲಿ ಕಾರ್ಯ ಮಾಡುವ ತಳಮಳವಿದ್ದರೂ, ಅದನ್ನು ಮಾಡುವಾಗ ತಮ್ಮ ಅನುಭವದ ಕಾರಣದಿಂದ ಅಥವಾ ‘ನಾನು ಎಂಬ ಅಹಂನಿಂದ ಕೆಲವು ಬಾರಿ ‘ಕಾರ್ಯವು ನನ್ನ ಮನಸ್ಸಿನಂತೆಯೇ ಆಗಬೇಕು, ಎಂಬ ಅಪೇಕ್ಷೆಯು ತೀವ್ರವಾಗಿರುತ್ತದೆ. ಕೆಲವೊಮ್ಮೆ ಹಾಗೆ ಆಗದಿದ್ದಾಗ, ಜವಾಬ್ದಾರ ಸಾಧಕರ ಮತ್ತು ಸಂಸ್ಥೆಯ ಕಾರ್ಯಪದ್ಧತಿಯ ಬಗ್ಗೆ ಮನಸ್ಸಿನಲ್ಲಿ ವಿಕಲ್ಪಗಳು ಬರುತ್ತವೆ. ಇಂತಹ ಪ್ರಸಂಗಗಳಲ್ಲಿ ‘ಕಾರ್ಯವಾಗುವುದಕ್ಕಿಂತ ಇಲ್ಲಿ ‘ನನ್ನ ಸಾಧನೆಯಾಗುವುದು ಮುಖ್ಯ ಮತ್ತು ಅದಕ್ಕೆ ಪ್ರಥಮ ಆದ್ಯತೆಯಿದೆ, ಎಂಬುದು ಅವರ ಗಮನಕ್ಕೆ ಬರುವುದಿಲ್ಲ. ಅದರಿಂದ ಅವರಲ್ಲಿ ಸ್ವಭಾವದೋಷಗಳು ಮತ್ತು ಅಹಂಕಾರವೂ ಹೆಚ್ಚಾಗತೊಡಗುತ್ತದೆ. ಇದರ ಪರಿಣಾಮವಾಗಿ ಸಾಧನೆಯಲ್ಲಿ ಕುಸಿತ ಉಂಟಾಗುತ್ತದೆ.

ಸಾಧಕರೇ, ಈಶ್ವರನ ಆಯೋಜನೆಯಂತೆ ಕಾರ್ಯವು ನಡೆಯುತ್ತಲೇ ಇರುತ್ತದೆ; ಆದರೆ ತಮ್ಮ ಸಾಧನೆಯನ್ನು ತಾವೇ ಮಾಡಿಕೊಳ್ಳಬೇಕಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಸಾಧಕರು ಸಮಷ್ಟಿಯ ಜೊತೆಗೆ ವ್ಯಷ್ಟಿ ಸಾಧನೆಯ ಕಡೆಗೂ ಗಮನ ಹರಿಸಬೇಕು !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ