|

ನಾಗ್ಪುರ/ಪಣಜಿ, ಮಾರ್ಚ್ 8 (ವಾರ್ತೆ) – ಗುಜರಾತಿನ ಕರ್ಣಾವತಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದ ಹಿನ್ನೆಲೆಯಲ್ಲಿ, ದೇಶದಲ್ಲಿ 10 ಸಾವಿರ ಕೋಟಿ ರೂಪಾಯಿಗಳ ಬೆಟ್ಟಿಂಗ್ ನಡೆಯುತ್ತಿದೆ. ‘ಹೈ-ಟೆಕ್’ ಆ್ಯಪ್‌ಗಳು ಮತ್ತು ‘ಆಫ್‌ಶೋರ್ ಸರ್ವರ್’ (ದೇಶದ ಹೊರಗಿನ ದತ್ತಾಂಶ ಕೇಂದ್ರಗಳಲ್ಲಿರುವ ಸರ್ವರ್‌ಗಳು) ಮೂಲಕ ಈ ಹಗರಣ ಮಾಡಲಾಗುತ್ತಿದೆ.
🚨 ₹10,000 Crore Betting Scandal?
Probe Demanded in #T20WorldCup2026Final@SurajyaAbhiyan has demanded a thorough investigation into the alleged ₹10,000 crore betting racket linked to the #INDvsNZ final
The organisation has also extended support to citizen complaints already… pic.twitter.com/sGXo23wYGq
— Sanatan Prabhat (@SanatanPrabhat) March 8, 2026
ಈ ಬಗ್ಗೆ ರಾಯಬಂದರ್, ಪಣಜಿಯ ಜಾಗೃತ ನಾಗರಿಕರಾದ ಶ್ರೀ. ದಿಲೀಪ್ ಶೇಟ್ಯೆ ಅವರು ಪಣಜಿ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ನೀಡಿದ್ದಾರೆ.

ನಾಗ್ಪುರದಲ್ಲೂ ಒಬ್ಬರು ಜಾಗೃತ ನಾಗರಿಕರು ಇ-ಮೇಲ್ ಮೂಲಕ ದೂರು ದಾಖಲಿಸಿದ್ದಾರೆ. ಈ ದೂರುಗಳಿಗೆ ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ವು ಬಹಿರಂಗ ಬೆಂಬಲ ಘೋಷಿಸಿದೆ. ಈ ಪ್ರಕರಣದ ಕುರಿತು ವಿಶೇಷ ತನಿಖಾ ತಂಡದ (SIT) ಮೂಲಕ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಸುರಾಜ್ಯ ಅಭಿಯಾನವು ಆಗ್ರಹಿಸಿದೆ.
#T20WorldCup2026final : ₹10,000 Cr Betting Scandal ! @SurajyaAbhiyan backs citizen complaints filed in Goa & Nagpur. We demand an immediate SIT probe & "Surgical Strike" on bookie hubs to save India's image! @CMOMaharashtra @DGPMaharashtra @nagpurpolice @GoaPolice @HMOIndia pic.twitter.com/5M0p3Byu5X
— Surajya Abhiyan (@SurajyaAbhiyan) March 8, 2026
ಈ ಕುರಿತು ‘ಸುರಾಜ್ಯ ಅಭಿಯಾನ’ವು,
1. ಕೆಲವು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಬೆಟ್ಟಿಂಗ್ ಸುದ್ದಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ (ಸುಮೋಟೋ) ದಾಖಲಿಸಿಕೊಂಡು ಪೊಲೀಸ್ ಆಡಳಿತವು ತಕ್ಷಣವೇ ಕ್ರಮ ಕೈಗೊಳ್ಳಬೇಕಿತ್ತು.
टी-२० विश्वचषक फायनल: १०,००० कोटींच्या सट्टेबाजी प्रकरणाची उच्चस्तरीय चौकशी करा ! https://t.co/sL7yFaFZG8
— Surajya Abhiyan (@SurajyaAbhiyan) March 8, 2026
2. ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುವ ಬೆಟ್ಟಿಂಗ್ ಭಾರತದ ಜಾಗತಿಕ ಪ್ರತಿಷ್ಠೆಗೆ ಧಕ್ಕೆ ತರುವಂತಹುದ್ದಾಗಿದೆ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅಪಕೀರ್ತಿ ಉಂಟಾಗುವುದಲ್ಲದೆ, ಭಾರತೀಯ ಕ್ರಿಕೆಟ್‌ನ ವಿಶ್ವಾಸಾರ್ಹತೆಯೂ ಅಪಾಯದಲ್ಲಿದೆ.
#t20worldcup2026 | @LokmatTimes_ngp reports the massive 10,000 Cr Criclet Betting ! How @MahaCyber1 remains unaware ? @CMOMaharashtra https://t.co/1DuJnH0k3I
— Surajya Abhiyan (@SurajyaAbhiyan) March 8, 2026
3. ಕ್ರಿಕೆಟ್ ಹೆಸರಿನಲ್ಲಿ ಬೆಟ್ಟಿಂಗ್, ಜೂಜು ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಇದನ್ನು ನಡೆಸುವವರು ಕೆಲವು ನಿರ್ದಿಷ್ಟ ಜನರಾಗಿದ್ದಾರೆ ಎಂಬುದು ತನಿಖಾ ಸಂಸ್ಥೆಗಳಿಗೂ ತಿಳಿದಿರುತ್ತದೆ. ಅನೇಕ ಬೆಟ್ಟಿಂಗ್ ದಂಧೆಕೋರರನ್ನು ಬಂಧಿಸಿದ ಸುದ್ದಿಗಳು ಬರುತ್ತವೆ; ಆದರೆ ಮತ್ತೆ ಬೆಟ್ಟಿಂಗ್ ಮಾರುಕಟ್ಟೆ ಚಾಲೂ ಆಗುತ್ತದೆ. ಇದಕ್ಕೆ ಯಾರ ಬೆಂಬಲವಿದೆ? ಎಂಬುದನ್ನು ಪತ್ತೆಹಚ್ಚಬೇಕು. ಕೇವಲ ಸಣ್ಣ ಮೀನುಗಳನ್ನಷ್ಟೇ ಅಲ್ಲದೆ, ದೊಡ್ಡ ಮೀನನ್ನು (ದೊಡ್ಡವರನ್ನು) ಹಿಡಿಯುವುದು ಅತ್ಯಗತ್ಯವಾಗಿದೆ.
ಬೆಟ್ಟಿಂಗ್ ನಿಯಂತ್ರಿಸಲು ಸುರಾಜ್ಯ ಅಭಿಯಾನ ಸೂಚಿಸಿದ ಕ್ರಮಗಳು!1. 10 ಸಾವಿರ ಕೋಟಿ ರೂಪಾಯಿಗಳ ಈ ಹಗರಣದ ಗಂಭೀರತೆಯನ್ನು ಗಮನಿಸಿ, ಪೊಲೀಸರು ತಕ್ಷಣವೇ ಸಂಬಂಧಪಟ್ಟ ಮಾಧ್ಯಮಗಳನ್ನು ಸಂಪರ್ಕಿಸಿ ಮಾಹಿತಿಯ ಮೂಲವನ್ನು ಪರಿಶೀಲಿಸಬೇಕು ಮತ್ತು ಬೆಟ್ಟಿಂಗ್ ನಿಯಂತ್ರಣ ಕೇಂದ್ರಗಳನ್ನು ಧ್ವಂಸಗೊಳಿಸಬೇಕು. ವಶಪಡಿಸಿಕೊಂಡ ಹಣವನ್ನು ಜನಹಿತದ ಯೋಜನೆಗಳಿಗಾಗಿ ಬಳಸಬೇಕು. 2. ಕೇಂದ್ರ ಸರ್ಕಾರ ಜಾರಿಗೆ ತಂದ ‘ಆನ್‌ಲೈನ್ ಗೇಮಿಂಗ್ ಕಾಯ್ದೆ 2025’ ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು, ಇದರಲ್ಲಿ ಅಕ್ರಮ ಬೆಟ್ಟಿಂಗ್‌ಗೆ ನೆರವು ನೀಡುವುದು ಜಾಮೀನು ರಹಿತ ಅಪರಾಧವಾಗಿದೆ. 3. ಜಾರಿ ನಿರ್ದೇಶನಾಲಯ (ED) ಮತ್ತು ಸೈಬರ್ ವಿಭಾಗವು ಹವಾಲಾ ಮಾರ್ಗ (ಅರಬ್ ಮತ್ತು ದಕ್ಷಿಣ ಏಷ್ಯಾ ದೇಶಗಳು ಹಣ ವರ್ಗಾವಣೆಗಾಗಿ ಬಳಸುವ ಒಂದು ನಿರ್ದಿಷ್ಟ ವ್ಯವಸ್ಥೆ) ಹಾಗೂ ಡಿಜಿಟಲ್ ಪಾವತಿಯ ದಾರಿಗಳನ್ನು ಬಂದ್ ಮಾಡಬೇಕು. 4. ಸ್ಥಳೀಯ ಬುಕಿಗಳು (ಸಟ್ಟಾ ದಳ್ಳಾಳಿಗಳು) ಮತ್ತು ಅಂತರಾಷ್ಟ್ರೀಯ ಸಿಂಡಿಕೇಟ್ (ಟೋಳಿ) ನಡುವಿನ ಸಂಬಂಧವನ್ನು ಪತ್ತೆಹಚ್ಚಲು ರಾಜ್ಯ ಮಟ್ಟದಲ್ಲಿ ತಕ್ಷಣವೇ ‘ವಿಶೇಷ ತನಿಖಾ ತಂಡ’ವನ್ನು ರಚಿಸಬೇಕು. 5. ಭಾರತ ಮತ್ತು ಕ್ರಿಕೆಟ್‌ಗೆ ಜಗತ್ತಿನಾದ್ಯಂತ ಕೆಟ್ಟ ಹೆಸರು ಬರದಂತೆ ತಡೆಯಲು, ಪಂದ್ಯ ಮುಗಿಯುವ ಮೊದಲೇ ಈ ಜಾಲದ ಮೇಲೆ ದೇಶೀಯ ‘ಸರ್ಜಿಕಲ್ ಸ್ಟ್ರೈಕ್’ ಆಗುವುದು ಅಗತ್ಯವಾಗಿದೆ. ಆಡಳಿತಾತ್ಮಕ ಪಾರದರ್ಶಕತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ಸುರಾಜ್ಯ ಅಭಿಯಾನವು ಈ ಪ್ರಕರಣವನ್ನು ಮುಂದೆಯೂ ಫಾಲೋ-ಅಪ್ ಮಾಡಲಿದೆ. |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !