ಅಧ್ಯಾತ್ಮವು ಜೀವನದ ಅವಿಭಾಜ್ಯ ಅಂಗವಾಗಿದೆ. ಅಧ್ಯಾತ್ಮವು ಧರ್ಮ, ರಾಷ್ಟ್ರ, ಅರ್ಥವ್ಯವಸ್ಥೆ, ರಾಜಕೀಯ, ಸಮಾಜಕಾರಣ ಮತ್ತು ಕ್ರೀಡೆ ಹೀಗೆ ಪ್ರತಿಯೊಂದು ಕ್ಷೇತ್ರವನ್ನೂ ಆವರಿಸಿದೆ. ಪ್ರತಿಯೊಂದು ಕ್ಷೇತ್ರದ ವ್ಯಕ್ತಿಯೂ ಆಧ್ಯಾತ್ಮಿಕ ದೃಷ್ಟಿಕೋನವನ್ನು ಹೊಂದಿದ್ದರೆ ಅಥವಾ ಅಧ್ಯಾತ್ಮವನ್ನು ಅಳವಡಿಸಿಕೊಂಡರೆ ಆಯಾ ವ್ಯಕ್ತಿಗೆ ಖಂಡಿತವಾಗಿಯೂ ಲಾಭವಾಗುತ್ತದೆ. ಅದೇ ರೀತಿ ಕ್ರಿಕೆಟ್ ಆಟದ ವಿವಿಧ ಆಟಗಾರರು ಅಧ್ಯಾತ್ಮವನ್ನು ಅಳವಡಿಸಿಕೊಂಡಿದ್ದರಿಂದ ಅವರಿಗೆ ಆದ ಲಾಭಗಳನ್ನು ತೋರಿಸುವ ಕೆಲವು ಅಂಶಗಳನ್ನು ಇಲ್ಲಿ ಶ್ರೀ ಗುರುಚರಣಗಳಲ್ಲಿ ಅರ್ಪಿಸುತ್ತಿದ್ದೇನೆ.
ಸಂಕಲನಕಾರರು : ಶ್ರೀ. ಸಾಗರ ನಿಂಬಾಳ್ಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

೧. ‘ಅರ್ಜುನ ಪ್ರಶಸ್ತಿ’ ವಿಜೇತ ಪದ್ಮಭೂಷಣ ಸುನೀಲ ಗಾವಸ್ಕರ್
ಟೆಸ್ಟ್ ಕ್ರಿಕೆಟ್ ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ೧೦,೦೦೦ ಕ್ಕೂ ಹೆಚ್ಚು ರನ್ ಗಳಿಸಿದ ಸುನಿಲ್ ಗಾವಸ್ಕರ್ ಅವರ ಮೇಲೆ ಅಧ್ಯಾತ್ಮದ ಪ್ರಭಾವವಿತ್ತು. ಈ ಬಗ್ಗೆ ಗಾವಸ್ಕರ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ಅವರು ಒಂದು ಸಂದರ್ಶನದಲ್ಲಿ ಸತ್ಯ ಸಾಯಿಬಾಬಾ ಅವರ ಕುರಿತು ತಮಗಾದ ಅವಿಸ್ಮರಣೀಯ ಅನುಭೂತಿಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳಿದರು, ‘ಸತ್ಯ ಸಾಯಿಬಾಬಾ ಅವರ ಆಧ್ಯಾತ್ಮಿಕ ಬೋಧನೆಗಳು ನನ್ನ ಮೇಲೆ ಬಹಳಷ್ಟು ಪರಿಣಾಮ ಬೀರಿದವು. ಅವರ ಗ್ರಂಥಗಳನ್ನು ಓದುವುದರಿಂದ ನನ್ನಲ್ಲಿ ಪರಿಸ್ಥಿತಿಯನ್ನು ಸ್ವೀಕರಿಸುವುದು, ಸಂಯಮವನ್ನು ಕಾಪಾಡಿಕೊಳ್ಳುವುದು ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲೂ ಶಾಂತವಾಗಿರುವುದು ಮುಂತಾದ ಗುಣಗಳು ಬೆಳೆದವು.’
೧ ಅ. ಸುನೀಲ ಗಾವಸ್ಕರ್ ಅವರ ಏಕಾಗ್ರತೆಗೆ ಒಂದು ಉದಾಹರಣೆ : ಒಮ್ಮೆ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಗಾವಸ್ಕರ್ ಬ್ಯಾಟಿಂಗ್ ಮಾಡುತ್ತಿದ್ದರು. ಅವರ ಎದುರಿಗೇ ಬಲಭಾಗದಲ್ಲಿ ಜಾವೇದ್ ಮಿಯಾಂದಾದ್ ಕ್ಷೇತ್ರರಕ್ಷಣೆ (ಫೀಲ್ಡಿಂಗ್) ಮಾಡುತ್ತಿದ್ದರು. ಅವರ ನಡುವೆ ನಡೆದ ಸಂಭಾಷಣೆ ಹೀಗಿದೆ.
ಜಾವೇದ್ : ಕ್ಷಮಿಸಿ ಸನ್ನಿ ಭಾಯ್ ! ನಾನು ನಿಮಗೆ ಬೈದಿದ್ದೇನೆ.

ಸುನೀಲ : ಬೈದಿದ್ದೀಯಾ ? ಯಾವಾಗ ?
ಜಾವೇದ್ : ಅರೇ, ಇದೇನಿದು, ನಾನು ನಿಮ್ಮ ಮುಂದೆಯೇ ನಿಂತಿದ್ದೇನಲ್ಲ. ಇಲ್ಲೇ ನಿಂತು ನಾನು ನಿಮಗೆ ಬೈದಿದ್ದು.
ಸುನೀಲ : ನನಗಂತೂ ಏನೂ ಕೇಳಿಸಲಿಲ್ಲ !
ಜಾವೇದ್ : ಏನು ಹೇಳುತ್ತಿದ್ದೀರಿ ? ಅರೇ, ನಾನು ಇಲ್ಲೇ ನಿಂತಿದ್ದೇನಲ್ಲ.
ಸುನೀಲ : ನೀನು ನನ್ನ ಹಿಂದೆ ನಿಂತಿರುವ ಸಲೀಂ ಯೂಸುಫ್ ಜೊತೆ ಏನೋ ಮಾತನಾಡುತ್ತಿದ್ದೀಯಾ ಎಂದು ನನಗೆ ಅನಿಸಿತು,.
ಜಾವೇದ್ : ಕೊನೆಯದಾಗಿ ಕೇಳುತ್ತಿದ್ದೇನೆ, ನಿಜವಾಗಿಯೂ ನಿಮಗೆ ಏನೂ ಕೇಳಿಸಲಿಲ್ಲವೇ ?
ಸುನಿಲ್ : ಇಲ್ಲ.
ಜಾವೇದ್ : (ನಿರಾಶೆಯ ಧ್ವನಿಯಲ್ಲಿ) ಅಯ್ಯೋ, ಹಾಗಾದರೆ ನಾನು ಸುಮ್ಮನೆ ನಿಮ್ಮ ಬಳಿ ಕ್ಷಮೆ ಕೇಳಿದೆ !
ಈ ಪ್ರಸಂಗದಿಂದ ಸುನೀಲ ಅವರ ಶಾಂತ ಸ್ವಭಾವ ಮತ್ತು ಅಯೋಗ್ಯ ಕೃತಿಗಳನ್ನು ನಿರ್ಲಕ್ಷಿಸುವ ಗುಣವು ಎದುರಾಳಿ ತಂಡದ ಆಟಗಾರರ ಮೇಲೆ ತನ್ನಷ್ಟಕ್ಕೆ ಪ್ರಭಾವ ಬೀರುತ್ತಿತ್ತು ಎಂಬುದು ತಿಳಿಯುತ್ತದೆ.
೧ ಆ. ಸುನೀಲ ಗಾವಸ್ಕರ್ ಅವರ ಬಗ್ಗೆ ಇತರ ದೇಶಗಳ ಅಂದಿನ ಆಟಗಾರರ ಅಭಿಪ್ರಾಯಗಳು
೧ ಆ ೧. ಇಮ್ರಾನ್ ಖಾನ್, ಪಾಕಿಸ್ತಾನ : ಬೌಲರ್‌ನ ಮುಖ್ಯ ಅಸ್ತ್ರವೆಂದರೆ ಬಿರುಸಾದ ಚೆಂಡು. ನಾವು ಸುನಿಲ್ ಗಾವಸ್ಕರ್ ಅವರಿಗೆ ಚೆಂಡು ಬಿರುಸಾಗಿ ಎಸೆದಾಗ, ಅವರು ಬಹಳ ಶಾಂತವಾಗಿ ಅದನ್ನು ಬಿಟ್ಟುಬಿಡುತ್ತಿದ್ದರು. ಇದರಿಂದಾಗಿ ಅವರನ್ನು ಸೋಲಿಸಲು ನಮಗೆ ತುಂಬಾ ಕಷ್ಟವಾಗುತ್ತಿತ್ತು. ಸುನೀಲ ಅವರು ಮೈದಾನದಲ್ಲಿ ಆಡಿದ ಕಾಲವು ಭೀಕರ ಎಸೆತಗಾರರ ಕಾಲವಾಗಿತ್ತು. ವೆಸ್ಟ್ ಇಂಡೀಸ್‌ನ ೭ ಅಡಿ ಎತ್ತರದ ವೇಗದ ಬೌಲರ್‌ಗಳ ಎಸೆತಗಳನ್ನು ಸುನೀಲ ಅವರು ಅಂದು ‘ಹೆಲ್ಮೆಟ್’ ಧರಿಸದೆಯೇ ಎದುರಿಸುತ್ತಿದ್ದರು ! ಆದ್ದರಿಂದ ಸುನೀಲ ಅವರೇ ನನ್ನ ಪ್ರಕಾರ ವಿಶ್ವದ ಶ್ರೇಷ್ಠ ಬ್ಯಾಟರ್ ಆಗಿದ್ದಾರೆ !
೧ ಆ ೨. ವಿವಿಯನ್ ರಿಚರ್ಡ್ಸ್, ವೆಸ್ಟ್ ಇಂಡೀಸ್ : ನಾನು ವೆಸ್ಟ್ ಇಂಡೀಸ್ ತಂಡದಲ್ಲಿದ್ದ ಕಾರಣ, ಬ್ಯಾಟರ್‌ಗಳನ್ನು ನಡುಗಿಸುತ್ತಿದ್ದ ಮೈಕಲ್ ಹೋಲ್ಡಿಂಗ್, ಜೋಯಲ್ ಗಾರ್ನರ್, ಮಾಲ್ಕಮ್ ಮಾರ್ಷಲ್ ಮತ್ತು ಆಂಡಿ ರಾಬರ್ಟ್ಸ್ ಅವರಂತಹ ಬೌಲರ್‌ಗಳನ್ನು ನಾನು ಎಂದೂ ಎದುರಿಸಬೇಕಾಗಲಿಲ್ಲ; ಆದರೆ ಇವರೆಲ್ಲರನ್ನೂ ಸಮರ್ಥವಾಗಿ ಎದುರಿಸಿ ನಿಂತವರು ಸುನೀಲ ಗಾವಸ್ಕರ್ ! ಅವರು ಇವರೆಲ್ಲರನ್ನೂ ಹಾಗೂ ಇತರ ದೇಶಗಳ ಮಾರಕ ಬೌಲಿಂಗ್ ಅನ್ನು ಎದೆಯುಬ್ಬಿಸಿ ಎದುರಿಸುತ್ತಾ ರನ್‌ಗಳ ಮಳೆ ಸುರಿಸಿ, ತಾವೇ ‘ಸರ್ವೋತ್ತಮ ಬ್ಯಾಟರ್’ ಎಂಬುದನ್ನು ಸಾಬೀತುಪಡಿಸಿದ್ದಾರೆ.
೨. ‘ಮೇಜರ್ ಧ್ಯಾನಚಂದ ಖೇಲರತ್ನ ಪ್ರಶಸ್ತಿ’ ಪುರಸ್ಕೃತ ಭಾರತರತ್ನ ಸಚಿನ ತೆಂಡೂಲ್ಕರ

೨ ಅ. ಸಚಿನ್ ಬದುಕಿನ ಅಧ್ಯಾತ್ಮಾಧಾರಿತ ಕೆಲವು ಕ್ಷಣಗಳು
೨ ಅ ೧. ಸಚಿನ್ ಅವರು ಶ್ರೀ ಸತ್ಯಸಾಯಿಬಾಬಾ ಅವರ ಭಕ್ತರಾಗಿದ್ದಾರೆ. ಅವರು ಕೃತಜ್ಞತೆಯಿಂದ ಮುಂದಿನಂತೆ ಹೇಳಿದ್ದಾರೆ, ‘ಸತ್ಯಸಾಯಿಬಾಬಾ ಅವರು ನನಗೆ ಮನಃಶಾಂತಿ ಹೇಗೆ ಪಡೆಯಬೇಕು ಮತ್ತು ಕರುಣೆಯನ್ನು ಕೃತಿಯಲ್ಲಿ ಹೇಗೆ ತರಬೇಕು ಎಂಬುದನ್ನು ಕಲಿಸಿಕೊಟ್ಟರು.
೨ ಅ ೨. ಸಚಿನ್ ತಮ್ಮ ಕ್ರಿಕೆಟ್ ಸಾಮಗ್ರಿಗಳೊಂದಿಗೆ ಯಾವಾಗಲೂ ಶ್ರೀ ಗಣೇಶನ ಚಿತ್ರವನ್ನು ಇಟ್ಟುಕೊಳ್ಳುತ್ತಿದ್ದರು. ಆಟದ ಕಠಿಣ ಸಮಯದಲ್ಲಿ ಅವರು ಶ್ರೀ ಗಣೇಶನನ್ನು ಪ್ರಾರ್ಥಿಸುತ್ತಿದ್ದರು.
೨ ಅ ೩. ಸಚಿನ್ ಅವರ ಕೈ ಮೊಣಕೈಗೆ ಗಾಯವಾದಾಗ (ಟೆನಿಸ್ ಎಲ್ಬೋ) ಮತ್ತು ಅವರ ಆಟವು ಶಾಶ್ವತವಾಗಿ ನಿಂತು ಹೋಗಬಹುದು ಎಂಬ ಪರಿಸ್ಥಿತಿ ಉದ್ಭವಿಸಿದಾಗ, ಅವರು ‘ನಾರಾಯಣ ನಾಗಬಲಿ’ಯಂತಹ ಆಧ್ಯಾತ್ಮಿಕ ಪರಿಹಾರಗಳನ್ನು ಶ್ರದ್ಧಾಪೂರ್ವಕವಾಗಿ ಮಾಡಿದರು.
೨ ಅ ೪. ಭಾರತೀಯ ಸಂಸ್ಕಾರಗಳನ್ನು ಪಾಲಿಸುವ ಸಚಿನ್ ಅವರು ಕ್ರಿಕೆಟ್ ಲೋಕದಲ್ಲಿ ಒಬ್ಬ ಅಜಾತಶತ್ರು ಮತ್ತು ಸತ್‌ಶೀಲ ಆಟಗಾರ ಎಂದು ಪರಿಗಣಿಸಲ್ಪಟ್ಟಿದ್ದಾರೆ. ತಮ್ಮ ೨೪ ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಅವರು ಯಾವುದೇ ರೀತಿಯ ಅಶಿಸ್ತಿನ ವರ್ತನೆ ತೋರಲಿಲ್ಲ ಮತ್ತು ಯಾರೊಂದಿಗೂ ವಿವಾದಕ್ಕೊಳಗಾಗಲಿಲ್ಲ.
೩. ‘ಅರ್ಜುನ ಪ್ರಶಸ್ತಿ’ ಪುರಸ್ಕೃತ ಪದ್ಮಶ್ರೀ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಈ ಪೀಳಿಗೆಯ ಅತ್ಯಂತ ಆಕ್ರಮಣಕಾರಿ ಆಟಗಾರ ಎಂದು ಪರಿಗಣಿಸಲ್ಪಟ್ಟವರು. ೨೦೧೮ ರ ವರೆಗೆ ಅವರ ಅಹಂಕಾರಕ್ಕೆ ಸಂಬಂಧಿಸಿದ ವಿಷಯಗಳು ಹೆಚ್ಚು ಚರ್ಚೆಯಾಗುತ್ತಿದ್ದವು; ಆದರೆ ಮುಂದೆ ವಿರಾಟ್ ಅವರು ಆಧ್ಯಾತ್ಮಿಕ ದೃಷ್ಟಿಕೋನ, ಧ್ಯಾನ ಇತ್ಯಾದಿಗಳ ಆಧಾರ ಪಡೆಯತೊಡಗಿದರು. ಅವರು ನೀಮ್ ಕರೋಲಿ ಬಾಬಾ ಅವರ ಆಶ್ರಮಕ್ಕೆ ಭೇಟಿ ನೀಡಿದರು. ಅಲ್ಲಿನ ಅನುಯಾಯಿಗಳು ಅವರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡಿದರು. ವಿರಾಟ್ ಅವರು ಪ್ರೇಮಾನಂದ ಮಹಾರಾಜರ ಮಾರ್ಗದರ್ಶನವನ್ನೂ ಪಡೆದರು. ಇದರಿಂದ ವಿರಾಟ್ ಅವರಲ್ಲಿ ಅಮೂಲಾಗ್ರ ಬದಲಾವಣೆಗಳಾದವು.

೩ ಅ. ವಿರಾಟ್ ಅವರಲ್ಲಿನ ಬದಲಾವಣೆಯನ್ನು ತೋರ್ಪಡಿಸುವ ಪ್ರಸಂಗ : ೨೦೧೯ ರ ವಿಶ್ವಕಪ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯುತ್ತಿತ್ತು. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಬ್ಯಾಟಿಂಗ್‌ಗೆ ಬಂದಾಗ, ಭಾರತೀಯ ಪ್ರೇಕ್ಷಕರು ಅವರನ್ನು ಹಾಸ್ಯ ಮಾಡಲು ಮತ್ತು ಚುಡಾಯಿಸಲು ಪ್ರಾರಂಭಿಸಿದರು. ಆಗ ವಿರಾಟ್ ಅವರೇ ಸ್ವತಃ ಮುಂದೆ ಬಂದು ಪ್ರೇಕ್ಷಕರನ್ನು ಶಾಂತಗೊಳಿಸಿದರು. ‘ಸ್ಮಿತ್ ಅವರ ಮೇಲಿನ ನಿಷೇಧ ಮುಗಿದ ನಂತರ ಅವರು ಮೊದಲ ಬಾರಿಗೆ ಕ್ರಿಕೆಟ್ ಆಡುತ್ತಿದ್ದಾರೆ, ಆದ್ದರಿಂದ ಅವರನ್ನು ಪ್ರೋತ್ಸಾಹಿಸಲು ಚಪ್ಪಾಳೆ ತಟ್ಟಿ !’ ಎಂದು ಸನ್ನೆಗಳ ಮೂಲಕ ತಿಳಿಸಿ ಹೇಳಿದರು. ಪ್ರೇಕ್ಷಕರು ವಿರಾಟ್ ಅವರ ಮಾತನ್ನು ಕೇಳಿ ಸ್ಮಿತ್ ಅವರನ್ನು ಪ್ರೋತ್ಸಾಹಿಸಿದರು.
೩ ಆ. ವಿರಾಟ್ ಇವರು ವ್ಯಕ್ತಪಡಿಸಿದ ಕೃತಜ್ಞತೆ ! : ವಿರಾಟ್ ಬಹಿರಂಗವಾಗಿ, ‘ಧ್ಯಾನದ ಕಾರಣದಿಂದಲೇ ನಾನು ಶಾಂತವಾಗಿರಲು, ಮನಸ್ಸಿನಿಂದ ದೃಢವಾಗಿರಲು ಮತ್ತು ಭಾವನಾತ್ಮಕವಾಗಿ ಸಮತೋಲನ ಸಾಧಿಸಲು ಸಾಧ್ಯವಾಯಿತು. ಇದರಿಂದಾಗಿಯೇ ನನ್ನ ವೃತ್ತಿಜೀವನವು ಸಮೃದ್ಧವಾಯಿತು,’ ಎಂದು ಹೇಳಿದರು.
೪. ಕರೆ
ಇಂದು ಭಾರತದ ೬೫ ಕೋಟಿ ಜನರಿಗೆ ಕ್ರಿಕೆಟ್ ನಲ್ಲಿ ಆಸಕ್ತಿಯಿದೆ. ಅವರೆಲ್ಲರಿಗೂ ಮತ್ತು ಇತರ ಎಲ್ಲಾ ಕ್ರೀಡಾ ಪ್ರೇಮಿಗಳಿಗೆ ಒಂದು ಕರೆಯೆಂದರೆ, ಮೇಲೆ ತಿಳಿಸಿದ ಆಟ ಗಾರರ ಕೇವಲ ಹಣ, ಪ್ರಸಿದ್ಧತೆ, ವೈಭೋಗ ಅಥವಾ ದೈಹಿಕ ಸೌಂದರ್ಯದತ್ತ ಮಾತ್ರವಲ್ಲ, ಅವರು ಅಧ್ಯಾತ್ಮವನ್ನು ಅಳವಡಿಸಿಕೊಂಡ ರೀತಿಯನ್ನೂ ಗಮನಿಸಿ. ಅಂದರೆ, ನೀವು ಸಹ ನಿಮಗೆ ಸಾಧ್ಯವಿರುವ ಸಾಧನೆಯನ್ನು (ಉದಾ : ನಾಮ ಜಪ, ಪ್ರಾರ್ಥನೆ, ಕೃತಜ್ಞತೆ, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ, ಸತ್ಸೇವೆ, ತ್ಯಾಗ, ಪ್ರೀತಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆ) ಮಾಡಿ ! ಇದಕ್ಕಾಗಿ ಸನಾತನ ಸಂಸ್ಥೆಯು ನಿಮಗೆ ಯಾವಾಗಲೂ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಜೀವನವು ನಿಜವಾದ ಅರ್ಥದಲ್ಲಿ ಆನಂದಮಯವಾಗುತ್ತದೆ !
ಈ ಲೇಖನವನ್ನು ಓದಿ ಪ್ರತಿಯೊಬ್ಬ ಕ್ರೀಡಾಪ್ರೇಮಿಗೂ ಸಾಧನೆ ಮಾಡುವ ಸದ್ಬುದ್ಧಿ ಲಭಿಸಲಿ ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು