
ಲಂಡನ್‌ನ ಸುಪ್ರಸಿದ್ಧ ಭಾರತೀಯ ಉಪಹಾರಗೃಹ ‘ರಂಗರೇಜ್’ ಈಗ ಶಾಶ್ವತವಾಗಿ ಮುಚ್ಚಲ್ಪಡುತ್ತಿದೆ. ಕಳೆದ ೧೬ ವರ್ಷಗಳಿಂದ ಹೆಸರುವಾಸಿಯಾಗಿದ್ದ ಮತ್ತು ಭಾರತೀಯರಿಗಾಗಿ ವಿಶೇಷವಾಗಿದ್ದ ಈ ಉಪಹಾರಗೃಹ, ಪಾಕಿಸ್ತಾನಿ ನಾಗರಿಕರ ಬೆದರಿಕೆಗಳಿಂದಾಗಿ ಮುಚ್ಚಲ್ಪಡುತ್ತಿದೆ. ಪಾಕಿಸ್ತಾನದಿಂದಾಗಿ ಅಲ್ಲಿನ ಮತ್ತು ಭಾರತದ ಹಿಂದೂಗಳು ಈಗಾಗಲೇ ಅಸಹಾಯಕತೆಯ ಜೀವನ ನಡೆಸುತ್ತಿದ್ದಾರೆ; ಈಗ ಲಂಡನ್‌ನಲ್ಲೂ ಹಿಂದೂಗಳಿಗೆ ಇಂತಹ ಪರಿಸ್ಥಿತಿ ಬಂದಿರುವುದು ಅತ್ಯಂತ ಅವಮಾನಕರ ಸಂಗತಿ. ಪಾಕಿಸ್ತಾನಿ ನಾಗರಿಕರು ಉಪಹಾರಗೃಹದಲ್ಲಿ ಪದೇ ಪದೇ ಕೋಲಾಹಲವೆಬ್ಬಿಸುತ್ತಿದ್ದಾರೆ ಮತ್ತು ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದರ ಜೊತೆಗೆ, ಪಾಕಿಸ್ತಾನಿ ಕಟ್ಟರವಾದಿಗಳು ಉಪಹಾರಗೃಹದ ಮೇಲೆ ಮಾಡಿದ ದಾಳಿ ಮತ್ತು ‘ಖಲಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಲು ಮಾಲೀಕರ ಮೇಲೆ ಹೇರಿದ ಒತ್ತಡವು ಹಿಂದೂಗಳಿಗೆ ಅತ್ಯಂತ ಅಪಾಯಕಾರಿಯಾಗಿದೆ. ಅಲ್ಲಿನ ಹಿಂದೂಗಳ ಸ್ಥಿತಿ ಈಗ ‘ಅತ್ತ ದರಿ, ಇತ್ತ ಪುಲಿ’ ಎಂಬಂತಾಗಿದೆ. ೧೯೯೦ ರ ದಶಕದಲ್ಲಿ ಭಾರತದಿಂದ ಲಂಡನ್‌ನಲ್ಲಿ ನೆಲೆಸುವ ಹಿಂದೂಗಳ ಪ್ರಮಾಣ ಹೆಚ್ಚಿತ್ತು. ವಿದೇಶದಲ್ಲಿ ನೆಲೆಸುವ ಭಾರಿ ಆಕರ್ಷಣೆ ಮತ್ತು ಸ್ಪರ್ಧೆಯಲ್ಲಿ ಉಳಿಯಲು ಅನೇಕರು ಲಂಡನ್‌ಗೆ ಹೋಗುವ ನಿರ್ಧಾರ ಮಾಡಿದ್ದರು; ಆದರೆ ಈಗ ಅವರಿಗೆ ಇದರ ಪಶ್ಚಾತ್ತಾಪವಾಗುತ್ತಿದೆ. ಲಂಡನ್‌ಗಿಂತ ಭಾರತವೇ ಎಷ್ಟೋ ಪಟ್ಟು ಸುರಕ್ಷಿತವಾಗಿದೆ. ೨೦೨೧ ರ ಅಂಕಿಅಂಶಗಳ ಪ್ರಕಾರ, ಲಂಡನ್‌ನಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೧೧.೬ ಮತ್ತು ಹಿಂದೂಗಳ ಜನಸಂಖ್ಯೆ ಕೇವಲ ಶೇ. ೧.೨ ರಷ್ಟಿದೆ. ಸಹಜವಾಗಿಯೇ ಮುಸಲ್ಮಾನರು ಹಿಂದೂಗಳಿಗಿಂತ ಪ್ರಬಲರಾಗಿದ್ದಾರೆ; ಆದ್ದರಿಂದ ಅವರು ಆಕ್ರಮಣಕಾರಿ ಮತ್ತು ಅಹಂಕಾರಿಗಳಾಗಿದ್ದಾರೆ. ಶೇ. ೧ ರಷ್ಟು ಹಿಂದೂಗಳು ಮುಸಲ್ಮಾನರಿಗೆ ಶತ್ರುಗಳಂತೆ ಕಾಣುತ್ತಿದ್ದಾರೆ. ಹಿಂದೂಗಳಂತೆ ಕ್ರೈಸ್ತರ ಸಂಖ್ಯೆಯೂ ಅಲ್ಲಿ ಕ್ಷೀಣಿಸುತ್ತಿದೆ. ಇದು ಅಲ್ಲಿನ ‘ಜನಸಂಖ್ಯಾ ಜಿಹಾದ್’ ಅಲ್ಲದೆ ಮತ್ತೇನು ? ಮುಸಲ್ಮಾನರ ಹೆಚ್ಚುತ್ತಿರುವ ಸಂಖ್ಯೆಯಿಂದಾಗಿ ಅಲ್ಲಿನ ರಾಜಕಾರಣಿಗಳು ಸಹ ಒಟ್ಟು ಮತಗಳಿಗಾಗಿ ಪ್ರಯತ್ನಿಸುತ್ತಿದ್ದಾರೆ. ಮತಗಳಿಗಾಗಿ ರಾಜಕಾರಣಿಗಳು ತಮ್ಮ ನಿಲುವನ್ನು ಬದಲಾಯಿಸುತ್ತಿದ್ದಾರೆ. ಇದರ ಪರಿಣಾಮವಾಗಿ ‘ರಂಗರೇಜ್’ ಹೋಟೆಲ್‌ಗೆ ಬಂದ ಸ್ಥಿತಿ ನಾಳೆ ಇತರ ಅಂಗಡಿಗಳಿಗೂ ಬರಬಹುದು. ಇಂದು ಉಪಹಾರಗೃಹವನ್ನು ಮುಚ್ಚಬೇಕಾಯಿತು, ನಾಳೆ ಮನೆಗೆ ನುಗ್ಗಿ ಹಿಂದೂಗಳನ್ನು ಓಡಿಸಿದರೆ, ಹಿಂದೂಗಳು ಎಲ್ಲಿಗೆ ಹೋಗಬೇಕು ? ಅಲ್ಲಿ ಹಿಂದೂಗಳಿಗೆ ರಕ್ಷಕರು ಯಾರು ? ಈ ಭೀಕರ ಪರಿಸ್ಥಿತಿಯನ್ನು ಕಂಡು ಸ್ಥಳೀಯ ಹಿಂದೂಗಳು ಈ ಘಟನೆಯನ್ನು ಲಘುವಾಗಿ ಪರಿಗಣಿಸಬಾರದು. ಇದರ ಬಗ್ಗೆ ಗಂಭೀರವಾಗಿ ಯೋಚಿಸಿ ತಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಲು ಪ್ರಯತ್ನಿಸಬೇಕು, ಇಲ್ಲದಿದ್ದರೆ ಅಲ್ಲಿ ಕಾಶ್ಮೀರದ ಪರಿಸ್ಥಿತಿ ಮರುಕಳಿಸಲು ಹೆಚ್ಚು ಸಮಯ ಹಿಡಿಯಲಾರದು.
ಮತಾಂಧರ ಗುಲಾಮರು : ಪೊಲೀಸರು ಮತ್ತು ರಾಜಕಾರಣಿಗಳು !
ಲಂಡನ್ ಪೊಲೀಸರಿಗೆ ಎಲ್ಲಾ ಪುರಾವೆಗಳನ್ನು ನೀಡಿದರೂ ಅವರು ಉಪಹಾರಗೃಹಕ್ಕೆ ರಕ್ಷಣೆ ನೀಡಿಲ್ಲ. ಇದಕ್ಕೆ ಕಾರಣವೇನು ? ಅವರು ಸಹ ಭಾರತದ ಪೊಲೀಸರಂತೆ ಮುಸಲ್ಮಾನರ ಗುಲಾಮರಾಗಿದ್ದಾರೆ. ಮತಾಂಧರ ಒತ್ತಡಕ್ಕೆ ಅವರು ತಲೆಬಾಗಲೇಬೇಕಾಗುತ್ತದೆ. ಹಿಂದೂಗಳು ಒತ್ತಡ ಹೇರುವುದಿಲ್ಲ ಅಥವಾ ಆಕ್ರಮಣ ಮಾಡುವುದಿಲ್ಲ ಎಂಬುದು ಪೊಲೀಸರಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಅವರು ಕೇವಲ ಮತಾಂಧರ ಮುಂದೆ ಮಣಿಯುತ್ತಾರೆ. ಇಂತಹ ಪೊಲೀಸರಿಂದ ಹಿಂದೂಗಳು ಏನನ್ನು ನಿರೀಕ್ಷಿಸಬಹುದು ? ಪೊಲೀಸರ ನಿಷ್ಕ್ರಿಯತೆಯಿಂದಾಗಿಯೇ ‘ರಂಗರೇಜ್’ನ ಅದ್ಭುತ ಊಟವನ್ನು ಸ್ಥಳೀಯ ಹಿಂದೂಗಳು ಕಳೆದುಕೊಳ್ಳಬೇಕಾಗಿದೆ. ಇದು ಹಿಂದೂಗಳ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ದಾಳಿಯಲ್ಲವೇ ? ಹಿಂದೂಗಳ ಅತ್ಯಲ್ಪ ಸಂಖ್ಯೆಯನ್ನು ನೋಡಿ ಇದನ್ನು ವಿರೋಧಿಸುವವರು ಯಾರು ? ಆದ್ದರಿಂದ ಪಾಪದ ಹಿಂದೂಗಳಿಗೆ ಸುಮ್ಮನಿರುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ಮುಸಲ್ಮಾನರ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಅಲ್ಲಿನ ರಾಜಕೀಯ ಪಕ್ಷಗಳು ಸಹ ಅವರನ್ನೇ ಓಲೈಸುತ್ತವೆ. ಇಸ್ಲಾಮಿಕ್ ರಾಷ್ಟ್ರದ ಹಾದಿಯಲ್ಲಿ ಸಾಗುತ್ತಿರುವ ದೇಶದಲ್ಲಿ ಹಿಂದೂಗಳ ಬೇಳೆ ಬೇಯುತ್ತದೆಯೇ ? ಶೇ. ೧ ರಷ್ಟು ಹಿಂದೂಗಳನ್ನು ದೇಶದಿಂದ ಓಡಿಸುವ ಪಿತೂರಿ ನಡೆಯುತ್ತಿದೆ ಎಂಬುದು ಈ ಪರಿಸ್ಥಿತಿಯಿಂದ ಸ್ಪಷ್ಟವಾಗುತ್ತದೆ. ಆಹಾರದ ಮಾಧ್ಯಮದಿಂದ ಭಾರತೀಯ ಸಂಸ್ಕೃತಿಯ ಬೇರುಗಳು ಅಲ್ಲಿ ಬೆಳೆಯುತ್ತಿದ್ದವು; ಆದರೆ ಮತಾಂಧರು ಅದನ್ನು ಬುಡಸಮೇತ ಕಿತ್ತೆಸೆಯುವ ಸಂಚು ರೂಪಿಸಿದ್ದಾರೆ. ಕಳೆದ ವರ್ಷ ಮೂವರು ಹಿಂದೂ ಮಕ್ಕಳ ಮೇಲೆ ವರ್ಣ ಮತ್ತು ಧರ್ಮದ ದ್ವೇಷದಿಂದ ಮುಸಲ್ಮಾನರು ಸಾರ್ವಜನಿಕ ಉದ್ಯಾನವನದಲ್ಲಿ ದಾಳಿ ಮಾಡಿದ್ದರು. ಮೂವರಿಗೂ ಅಮಾನವೀಯವಾಗಿ ಹೊಡೆಯಲಾಗಿತ್ತು. ಈ ಹೊಡೆತದಿಂದಾಗಿ ಒಬ್ಬ ಹುಡುಗನ ಕಣ್ಣಿನ ಮೂಳೆ ಮುರಿದಿತ್ತು. ಲಂಡನ್‌ನಲ್ಲಿ ಬೆಳೆಯುತ್ತಿರುವ ಈ ಧಾರ್ಮಿಕ ದ್ವೇಷ ಅತ್ಯಂತ ಚಿಂತಾಜನಕವಾಗಿದೆ. ಬ್ರಿಟಿಷ್ ಸರಕಾರಕ್ಕೆ ಹಿಂದೂಗಳ ಈ ದುಸ್ಥಿತಿ ಕಾಣಿಸುತ್ತಿಲ್ಲವೇ ? ಸ್ಥಳೀಯ ಹಿಂದೂಗಳ ಸುರಕ್ಷತೆಗಾಗಿ ಭಾರತೀಯ ರಾಯಭಾರ ಕಚೇರಿ ಅಥವಾ ವಾಣಿಜ್ಯ ರಾಯಭಾರ ಕಚೇರಿ ಕಠಿಣ ನಿಲುವು ತೆಗೆದುಕೊಳ್ಳುವುದೇ ? ಬೆದರಿಕೆಗಳನ್ನು ನಿಯಂತ್ರಿಸಲು ಕಠಿಣ ಕಾನೂನುಗಳನ್ನು ಯಾವಾಗ ರೂಪಿಸಲಾಗುವುದು ? ಈ ಪ್ರಶ್ನೆಗಳಿಗೆ ಬ್ರಿಟಿಷ್ ಸರ್ಕಾರ ಭಾರತೀಯರಿಗೆ ಉತ್ತರ ನೀಡಬೇಕು. ಸ್ಥಳೀಯ ಹಿಂದೂಗಳು ಸಮಯಕ್ಕೆ ಸರಿಯಾಗಿ ಈ ಭಯಾನಕ ವಾಸ್ತವವನ್ನು ಅರಿತು ಎಚ್ಚೆತ್ತುಕೊಳ್ಳಬೇಕು. ಒಂದು ಕಾಲದಲ್ಲಿ ಲಂಡನ್ ನಗರವು ಬಹುಸಂಸ್ಕೃತಿ, ಬಹುಭಾಷೆ ಮತ್ತು ವಿವಿಧ ಪರಂಪರೆಗಳನ್ನು ಗೌರವಿಸುವ ಜಾಗತಿಕ ಮಹಾನಗರ ಎಂದು ಗುರುತಿಸಲ್ಪಟ್ಟಿತ್ತು. ಅದೇ ಮಹಾನಗರ ಇಂದು ‘ಜಿಹಾದ್‌ನ ರಣಭೂಮಿ’ಯಾಗುವತ್ತ ಸಾಗುತ್ತಿದೆ. ಇಂತಹ ಭೂಮಿಯಲ್ಲಿ ಜೀವನ ಕಳೆಯಬೇಕೇ ಅಥವಾ ಅತ್ಯಂತ ಸುರಕ್ಷಿತವಾಗಿರುವ ಭಾರತಕ್ಕೆ ಮರಳಬೇಕೇ ? ಇದನ್ನು ಹಿಂದೂಗಳೇ ನಿರ್ಧರಿಸಬೇಕು. ಇಲ್ಲದಿದ್ದರೆ ‘ರಂಗರೇಜ್’ ಮಾಲೀಕ ಹರ್ಮನ್ ಸಿಂಗ್ ಕಪೂರ್ ಅವರು ವ್ಯವಹಾರ ಮುಚ್ಚಿದ ನಂತರ ಕಟ್ಟರವಾದದ ವಿರುದ್ಧದ ಹೋರಾಟಕ್ಕೆ ಸಮಯ ನೀಡುವುದಾಗಿ ಹೇಳಿದಂತೆ, ಹಿಂದೂಗಳು ಸಹ ದೃಢ ಮತ್ತು ದೇಶಪ್ರೇಮಿ ನಿಲುವು ತೆಗೆದುಕೊಳ್ಳಬೇಕಾಗುತ್ತದೆ. ಹಾಗೆ ಮಾಡಿದರೆ ಮಾತ್ರ ಅವರು ಉಳಿಯಲು ಸಾಧ್ಯ.

ಯುರೋಪ್ ಇಸ್ಲಾಮೀಕರಣಗೊಳ್ಳಲಿದೆ !
ಇಂದಿನ ವರೆಗೂ ಅಂದಿನ ಕಾಂಗ್ರೆಸ್ ಸರಕಾರವು ಮುಸಲ್ಮಾನರ ಓಲೈಕೆ ಮಾಡಿದ ಕಾರಣದಿಂದಾಗಿ ಭಾರತದಲ್ಲಿ ಅಸಹಿಷ್ಣುತೆಯ ಬೀಜಗಳನ್ನು ಬಿತ್ತಲಾಯಿತು. ಅದರ ಪರಿಣಾಮವನ್ನು ಭಾರತ ಅನುಭವಿಸುತ್ತಲೇ ಇದೆ. ಅದೇ ಬೀಜಗಳು ಈಗ ವಿದೇಶಗಳಲ್ಲೂ ಹರಡುತ್ತಿವೆ. ‘ರಂಗರೇಜ್’ ವಿಷಯದಲ್ಲಿ ನಡೆದದ್ದು ಇದರದ್ದೇ ಪರಿಣಾಮ ! ‘ರಂಗರೇಜ್’ ಮುಚ್ಚುವ ಪರಿಸ್ಥಿತಿ ಬಂದಿರುವುದು ಹಿಂದುತ್ವಕ್ಕೆ ಅಂಟಿದ ಕಳಂಕವಾಗಿದೆ. ಲಂಡನ್‌ನಲ್ಲಿ ‘ಖಲಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಲಾಗುತ್ತಿದೆ ಎನ್ನುವುದರಿಂದಲೇ ಅಲ್ಲಿನ ಪರಿಸ್ಥಿತಿಯನ್ನು ಊಹಿಸಬಹುದು. ಅಲ್ಲಿ ಕೇವಲ ಮುಸ್ಲಿಮರ ಸಂಖ್ಯೆ ಮಾತ್ರವಲ್ಲದೆ, ಗಾಜಾ ಬೆಂಬಲಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಹಿಂದೂಗಳಿಗೆ ಅಪಾಯಕಾರಿ; ಏಕೆಂದರೆ ಗಾಜಾ ಬೆಂಬಲಿಗರು ಗುಪ್ತವಾಗಿ ಹಮಾಸ್ ಬೆಂಬಲಿಗರಾಗಿರುತ್ತಾರೆ. ಲಂಡನ್‌ನಲ್ಲಿರುವ ಹಿಂದೂಗಳು ಈಗ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.
ಉಪಹಾರಗೃಹ ಮುಚ್ಚುತ್ತಿರುವ ಸುದ್ದಿಯಿಂದ ಲಂಡನ್‌ನ ಹಿಂದೂವಿರೋಧಿ ಸ್ವರೂಪ ಇಡೀ ಜಗತ್ತಿನ ಮುಂದೆ ಬಯಲಾಗುತ್ತಿದೆ. ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿ ನಡೆದ ಮತ್ತು ನಡೆಯುತ್ತಿರುವ ಘಟನೆಗಳ ಕಿಡಿ ಲಂಡನ್‌ನಲ್ಲೂ ಬಿದ್ದಿದೆ. ಭಾರತದಲ್ಲಿ ಹಿಂದೂಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೇಗೆ ನಿರ್ಬಂಧಗಳನ್ನು ಹೇರಲಾಗುತ್ತದೆಯೋ, ಅದೇ ಪರಿಸ್ಥಿತಿ ಲಂಡನ್‌ನಲ್ಲೂ ನಿರ್ಮಾಣವಾಗಿದೆ. ಹಿಂದೂಗಳ ಸಹಿಷ್ಣುತೆಯೇ ಮತಾಂಧರ ಅಸಹಿಷ್ಣುತೆಗೆ ಕಾರಣವಾಗುತ್ತಿದೆ. ಸಾಮಾನ್ಯವಾಗಿ ಭಾರತವು ಮುಸಲ್ಮಾನರಿಗೆ ಅಪಾಯಕಾರಿ ಎಂದು ಕೂಗಾಡುವವರು, ಲಂಡನ್‌ನಲ್ಲಿ ಹಿಂದೂಗಳ ಮೇಲಾಗುತ್ತಿರುವ ಈ ದುಸ್ಥಿತಿಯ ಬಗ್ಗೆ ಚಕಾರವೆತ್ತುತ್ತಿಲ್ಲ ಎಂಬುದನ್ನು ಗಮನಿಸಿ ! ಈ ಕರೆಯಲ್ಪಡುವ ಪ್ರಗತಿಪರರು, ಸಾಮ್ಯವಾದಿಗಳು ಮತ್ತು ಮಾನವಹಕ್ಕುಗಳ ಹೋರಾಟಗಾರರು ಸದಾ ಮತಾಂಧ ಮುಸಲ್ಮಾನರ ಕೃತ್ಯಗಳನ್ನು ಮುಚ್ಚಿಡುತ್ತಾರೆ. ಆದ್ದರಿಂದ ಅಂತಹವರಿಗೆ ವಿಶ್ವದಾದ್ಯಂತದ ಹಿಂದೂಗಳ ಬೃಹತ್ ಸಂಘಟನೆಯ ಮೂಲಕವೇ ತಕ್ಕ ಉತ್ತರ ನೀಡಬೇಕಾಗುತ್ತದೆ. ಹಾಗಾಗದಿದ್ದರೆ, ಮುಂಬರುವ ಕೆಲವು ವರ್ಷಗಳಲ್ಲಿ ಬ್ರಿಟನ್ ಸಮೇತ ಇಡೀ ಯುರೋಪ್ ಇಸ್ಲಾಮೀಕರಣಗೊಳ್ಳುವ ಕಾಲ ಬರಲಿದೆ !
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!
ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !
ಥಾಪರ್ ಅವರ ‘ವೋಕಿಸಂ’ !