
(ಈ ಜಾಹೀರಾತನ್ನು ಪ್ರಕಟಿಸುವ ಹಿಂದೆ ಯಾರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶ ನಮ್ಮದಲ್ಲ. ವಿಡಂಬನೆ ಹೇಗೆ ನಡೆದಿದೆ ಎಂಬುದನ್ನು ತಿಳಿಸಲು ಇದನ್ನು ಪ್ರಕಟಿಸಲಾಗಿದೆ ಎಂಬುದನ್ನು ಗಮನಿಸಬೇಕು. – ಸಂಪಾದಕರು)
ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯ ಆಗ್ರಹ !
ಮುಂಬಯಿ, ೨೬ ಫೆಬ್ರವರಿ (ವಾರ್ತೆ.) – ಸ್ವಂತ ಸಾಮರ್ಥ್ಯದ ಮೇಲೆ ವಿಶ್ವಾಸವಿಡಿ, ಬೂಟಾಟಿಕೆಯ ಮೇಲಲ್ಲ, ಎಂಬ ಬರಹವಿರುವ ಮತ್ತು ಸಾಧು-ಸಂತರ ವೇಷದಲ್ಲಿರುವ ವ್ಯಂಗ್ಯಚಿತ್ರದ ಮೂಲಕ ಹಿಂದೂ ಧರ್ಮವನ್ನು ಅವಮಾನಿಸಿರುವ ಸಾಮಾಜಿಕ ನ್ಯಾಯ ಇಲಾಖೆಯ ವಿವಾದಾತ್ಮಕ ಜಾಹೀರಾತಿನ ಬಗ್ಗೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂ ಜನಜಾಗೃತಿ ಸಮಿತಿಯ ಮುಂಬಯಿಯ ಶ್ರೀ. ಸತೀಶ್ ಸೋನಾರ್ ಅವರು ಸಾಮಾಜಿಕ ನ್ಯಾಯ ಸಚಿವ ಸಂಜಯ ಶಿರಸಾಟ್ ಅವರನ್ನು ಭೇಟಿಯಾಗಿ ಈ ಜಾಹೀರಾತನ್ನು ತಕ್ಷಣವೇ ಹಿಂಪಡೆಯುವಂತೆ ಮತ್ತು ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಕುರಿತು ಸಚಿವರು ಮಾತನಾಡಿ, ‘‘ಈ ಜಾಹೀರಾತನ್ನು ರಾತ್ರಿಯೇ ಹಿಂಪಡೆಯಲಾಗಿದೆ. ಈ ಜಾಹೀರಾತನ್ನು ನಮ್ಮ ಇಲಾಖೆಯ ವತಿಯಿಂದ ಹೊರಡಿಸಿರಲಿಲ್ಲ. ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇದನ್ನು ಪ್ರಕಟಿಸಿತ್ತು’’ ಎಂದು ಹೇಳಿದರು.
Government forced to withdraw an advertisement mocking Hindu Saints after massive outrage. 🚩@HinduJagrutiOrg demands strict action against the culprits
On one side, Maharashtra prepares to showcase the glory of Hindu Dharma at the Nashik Simhastha Kumbh Mela 🌊🕉️ on the… pic.twitter.com/OqXRZjMiIM
— Sanatan Prabhat (@SanatanPrabhat) February 26, 2026
ಮಹಾರಾಷ್ಟ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ವಿಶೇಷ ಸಹಾಯ ಇಲಾಖೆಯ ಹೆಸರಿನಲ್ಲಿ ಪ್ರಕಟವಾದ ಜಾಹೀರಾತಿನಲ್ಲಿ ಜಟಾ, ತಿಲಕ, ರುದ್ರಾಕ್ಷಿ ಮಾಲೆ, ತಲೆಬುರುಡೆ ಮತ್ತು ನಿಂಬೆಹಣ್ಣು-ಮೆಣಸಿನಕಾಯಿಯಂತಹ ಚಿತ್ರಗಳನ್ನು ತೋರಿಸಿ ಓರ್ವ ಸಾಧುವಿನ ವಿಡಂಬನಾತ್ಮಕ ವ್ಯಂಗ್ಯಚಿತ್ರವನ್ನು ಪ್ರಕಟಿಸಲಾಗಿತ್ತು. ಇದರೊಂದಿಗೆ ‘ಬೇಡ ಬೂಟಾಟಿಕೆ, ಪಡೆಯೋಣ ಶಿಕ್ಷಣದ ಬುತ್ತಿ’, ಎಂಬ ಘೋಷವಾಕ್ಯವನ್ನು ಬಳಸಿ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಗುರಿಯಾಗಿಸಲಾಗಿತ್ತು.
ಹಿಂದುತ್ವವಾದಿ ಸಂಘಟನೆಗಳ ತೀವ್ರ ವಿರೋಧ !
ಈ ಚಿತ್ರಣದಿಂದ ಹಿಂದೂ ಸಾಧು-ಸಂತರು ಮತ್ತು ಋಷಿ-ಮುನಿಗಳ ಪರಂಪರೆಯ ಅವಮಾನಕಾರಕ ಪ್ರಸ್ತುತಿಯಾಗಿದೆ ಎಂಬ ಭಾವನೆಯನ್ನು ವಿವಿಧ ಹಿಂದುತ್ವವಾದಿ ಸಂಘಟನೆಗಳು ವ್ಯಕ್ತಪಡಿಸಿವೆ. ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಂಘಟಕರಾದ ಶ್ರೀ. ಸುನೀಲ್ ಘನವಟ್ ಅವರು ಸರಕಾರಕ್ಕೆ ಲಿಖಿತ ದೂರು ನೀಡಿ ದೋಷಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!