
ಹಿರಿಯ ಮಹಿಳಾ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರ ನೇತೃತ್ವದ ನ್ಯಾಯವಾದಿಗಳ ತಂಡವು ೧೨ ನವೆಂಬರ್ ೨೦೨೫ ರಂದು ಲೈಂಗಿಕ ಸಂಬಂಧದ ಸಮ್ಮತಿಯ ವಯಸ್ಸನ್ನು ೧೮ ವರ್ಷಗಳಿಂದ ೧೬ ವರ್ಷಗಳಿಗೆ ಇಳಿಸುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿತು. ಇದು ಪರಸ್ಪರ ಒಪ್ಪಿಗೆಯಿಂದ ಉಂಟಾದ ಹದಿಹರೆಯದ ಸಂಬಂಧಗಳನ್ನು ಅನ್ಯಾಯವಾಗಿ ಅಪರಾಧಿಕರಣಗೊಳಿಸುವುದನ್ನು ತಡೆಯುತ್ತದೆ ಎಂಬುದು ಅವರ ವಾದ. ನ್ಯಾಯವಾದಿಗಳ ತಂಡ ಉಲ್ಲೇಖಿಸಿದಂತೆ, ‘ಜಾಗತಿಕ ಮಟ್ಟದಲ್ಲಿ ಲೈಂಗಿಕ ಸಂಬಂಧದ ಒಪ್ಪಿಗೆಯ ವಯಸ್ಸು ೧೪ ರಿಂದ ೧೬ ವರ್ಷಗಳಷ್ಟಿದೆ’; ಆದರೆ, ಕೇಂದ್ರ ಸರಕಾರವು ಶೋಷಣೆ, ಬಾಲ್ಯವಿವಾಹ ಮತ್ತು ಹದಿಹರೆಯದವರ ಮೆದುಳಿನ ಅಪರಿಪಕ್ವತೆಯಿಂದ ರಕ್ಷಣೆ ನೀಡುವ ನಿಟ್ಟಿನಲ್ಲಿ ಈ ಬದಲಾವಣೆಯನ್ನು ವಿರೋಧಿಸುತ್ತಿದೆ.

೧. ಲೈಂಗಿಕ ಸಂಬಂಧದ ಒಪ್ಪಿಗೆಯ ವಯಸ್ಸನ್ನು ಕಡಿಮೆ ಮಾಡುವುದರಿಂದ ಉಂಟಾಗುವ ಸಮಸ್ಯೆಗಳು
ನ್ಯಾಯಾಂಗವು ಇಡೀ ಸಮಾಜಕ್ಕೆ ಯಾವುದು ಉತ್ತಮವೋ ಅದನ್ನೇ ನಿರ್ಧರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಹೌದು, ಶಾಲೆಗೆ ಹೋಗುವ ಮಕ್ಕಳಲ್ಲಿ ಪರಸ್ಪರ ಒಪ್ಪಿಗೆಯ ಸಂಬಂಧಗಳು ಹೆಚ್ಚಾಗಿರುತ್ತವೆ. ಇದು ಅವರ ದೇಹದಲ್ಲಿನ ಹಾರ್ಮೋನ್ ಬದಲಾವಣೆಗಳು, ಅವರ ಕುತೂಹಲ ಮತ್ತು ಸಮವಯಸ್ಕರರ ತೀವ್ರ ಒತ್ತಡದಿಂದ ಉಂಟಾಗುತ್ತದೆ. ಈ ವಯಸ್ಸಿನಲ್ಲಿ ಅವರು ಅತ್ಯಂತ ಅಸುರಕ್ಷಿತರಾಗಿರುತ್ತಾರೆ. ಅವರ ನಿರ್ಧಾರಗಳು ಕೇವಲ ವ್ಯಾಮೋಹ ಮತ್ತು ಕ್ಷಣಿಕ ಭಾವನೆಗಳಿಂದ ನಿಯಂತ್ರಿಸಲ್ಪಡಬಹುದು ಮತ್ತು ಅವರನ್ನು ಅಸುರಕ್ಷಿತ ರನ್ನಾಗಿಸಬಹುದು. ಅವರು ವಂಚನೆಗೆ ಒಳಗಾಗಬಹುದು ಅಥವಾ ನೋವನ್ನು ಅನುಭವಿಸಬಹುದು. ಅವರು ಪರಿಣಾಮಗಳ ಬಗ್ಗೆ ಸ್ಪಷ್ಟವಾಗಿ ಯೋಚಿಸುವುದಿಲ್ಲ ಮತ್ತು ತಮ್ಮ ಕೃತಿಯ ಜವಾಬ್ದಾರಿ ಮತ್ತು ಪರಿಣಾಮದ ಅರಿವು ಅವರಿಗಾಗುವುದಿಲ್ಲ ಮತ್ತು ಅದರಿಂದಾಗಿ ಅವರು ‘ಪೊಕ್ಸೊ’ ಕಾಯಿದೆಯ ಸಂಕಷ್ಟಕ್ಕೆ ಸಿಲುಕಬಹುದು. ಹೀಗಿರುವಾಗ ನಾವು ಒಪ್ಪಿಗೆಯ ವಯಸ್ಸನ್ನು ೧೬ ವರ್ಷಗಳಿಂದ ಅಥವಾ ೧೪ ವರ್ಷಕ್ಕೆ ಇಳಿಸಬೇಕೇ ? ಇದರಿಂದ ಹೆಚ್ಚಿನ ಸಮಸ್ಯೆಗಳು ಉದ್ಭವಿಸುವುದಿಲ್ಲವೇ ? ‘೧೬ ವರ್ಷದ ಮಕ್ಕಳು ವಾಹನ ಚಲಾಯಿಸಬಾರದು ಅಥವಾ ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು’ ಎಂಬ ನಿಯಮವಿದೆ; ಆದರೆ ಇಂತಹ ಮಕ್ಕಳು ಮದ್ಯಪಾನ ಮಾಡಿ ವಾಹನ ಚಲಾಯಿಸಿ ರಸ್ತೆಯಲ್ಲಿ ಅಪಘಾತಗಳನ್ನು ಮಾಡುತ್ತಾರೆ. ಮಾರಣಾಂತಿಕ ಅಪಘಾತಕ್ಕಾಗಿ ಅವರ ಮೇಲೆ ಮೊಕದ್ದಮೆ ಹೂಡಿದಾಗ, ಆ ಮಕ್ಕಳ ಮೇಲಾಗುವ ಮಾನಸಿಕ ಪರಿಣಾಮ ದೊಡ್ಡದಾಗಿರುತ್ತದೆ. ಮಕ್ಕಳಲ್ಲಿನ ಸಾಹಸ ಮನೋಭಾವವು ಅವರನ್ನು ಮದ್ಯಪಾನ ಮಾಡಲು ಅಥವಾ ಕುಟುಂಬದ ವಾಹನ ಚಲಾಯಿಸಲು ಪ್ರೇರೇಪಿಸುತ್ತದೆ. ಹದಿಹರೆಯದ ಸಂಬಂಧಗಳಲ್ಲೂ ಇದೇ ಪ್ರವೃತ್ತಿ ಕಂಡುಬರುತ್ತದೆ. ಈ ಮಕ್ಕಳು ತಮ್ಮ ನಡವಳಿಕೆಯ ಪರಿಣಾಮಗಳ ಬಗ್ಗೆ ಯೋಚಿಸುವುದಿಲ್ಲ. ಇಂತಹ ಪರಿಸ್ಥಿತಿಯನ್ನು ನಾವು ಎದುರಿಸುವುದು ಹೇಗೆ ?
೨. ಗರ್ಭಪಾತದಂತಹ ಸಮಸ್ಯೆಗಳನ್ನು ನಿಭಾಯಿಸಲು ಹದಿಹರೆಯದವರು ಶಕ್ತರೇ ?
ನಾವು ಬಾಲ್ಯವಿವಾಹವನ್ನು ರದ್ದುಗೊಳಿಸಿದೆವು; ಏಕೆಂದರೆ ಮಕ್ಕಳಿಗೆ ಜನ್ಮ ನೀಡುತ್ತಿದ್ದ ಆ ದಂಪತಿಗಳು ತಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಥವಾ ಮಕ್ಕಳನ್ನು ಬೆಳೆಸಲು ಪ್ರಬುದ್ಧರಾಗಿರಲಿಲ್ಲ. “ಹದಿಹರೆಯದ ಸಂಬಂಧಗಳಲ್ಲಿ ಅನೇಕ ಪ್ರಕರಣಗಳಲ್ಲಿ ಗರ್ಭಧಾರಣೆಯಾಗುತ್ತದೆ, ಇದು ಹೇಗೆ ಸಾಧ್ಯ ?’ ಎಂದು ವಾದಿಸಬಹುದು. ಅವರಿಗೆ ಅಸುರಕ್ಷಿತ ಲೈಂಗಿಕ ಸಂಬಂಧದ ಅಪಾಯಗಳು ಮತ್ತು ‘ಏಡ್ಸ್’ನಂತಹ ಗಂಭೀರ ಕಾಯಿಲೆಗಳ ಬಗ್ಗೆ ತಿಳಿದಿದ್ದರೂ ಇಂತಹ ಘಟನೆಗಳು ಏಕೆ ಸಂಭವಿಸುತ್ತವೆ ? ಎಂಬ ಪ್ರಶ್ನೆ ಉದ್ಭವವಾಗಬಹುದು. ಕಲ್ಪಿಸಿಕೊಳ್ಳಿ, “ಶಾಲೆಯಲ್ಲಿ ಓದುತ್ತಿರುವ ೧೬ ವರ್ಷದ ೧೦ ನೇ ತರಗತಿಯ ಹುಡುಗಿ ಗರ್ಭಿಣಿಯಾದರೆ ಏನಾಗಬಹುದು ?” ಅದೇ ತರಗತಿಯ ಅವಳ ಜೊತೆಗಾರನನ್ನು ‘ಮಕ್ಕಳ ನ್ಯಾಯ ಮಂಡಳಿ’ಯ ಮುಂದೆ ಹಾಜರುಪಡಿಸಿದಾಗ ಅವನ ಮೇಲೆ ‘ಪೊಕ್ಸೊ’ ಕಾಯಿದೆಯಡಿ ಪ್ರಕರಣ ದಾಖಲಾಗುತ್ತದೆ. “ಇದು ಪರಸ್ಪರ ಒಪ್ಪಿಗೆಯಿಂದ ನಡೆದ ಕೃತ್ಯ, ಹಾಗಾಗಿ ವಯಸ್ಸನ್ನು ಕಡಿಮೆ ಮಾಡುವುದು ಸರಿಯಾದ ಕ್ರಮ” ಎಂದು ಕೆಲವರು ಹೇಳಬಹುದು. ಆದರೆ ‘ಅವರು ತಂದೆ-ತಾಯಿಯಾಗಲು ಸಿದ್ಧರಿದ್ದಾರೆಯೇ ?’ ಎಂಬುದಕ್ಕೆ ಉತ್ತರ ‘ಇಲ್ಲ’. ಅಂದರೆ ಅವರ ಮನಸ್ಸು ಮತ್ತು ದೇಹ ಇನ್ನೂ ಮತ್ತೊಂದು ಜೀವವನ್ನು ಪೋಷಿಸಲು ಸಿದ್ಧವಾಗಿಲ್ಲ; ಅವರ ಕೃತಿಯ ಪರಿಣಾಮಗಳು ಅವರನ್ನು ಜವಾಬ್ದಾರರನ್ನಾಗಿ ಮಾಡಿವೆ. ಇಂತಹ ಪರಿಸ್ಥಿತಿಯಲ್ಲಿ ಏನಾಗುತ್ತದೆ

ಹೆಚ್ಚಿನ ಪ್ರಕರಣಗಳಲ್ಲಿ ಒಂದೋ ಮದುವೆ ಮಾಡಲಾಗುತ್ತದೆ ಅಥವಾ ಗರ್ಭಪಾತ ಮಾಡಿಸಲಾಗುತ್ತದೆ. ಈ ವಿಷಯ ಹದಿ ಹರೆಯದವರಿಗೆ ತುಂಬಾ ತಡವಾಗಿ ತಿಳಿಯಬಹುದು. ಅವರು ಗೊಂದಲಕ್ಕೊಳಗಾಗುತ್ತಾರೆ ಮತ್ತು ಈ ಪರಿಸ್ಥಿತಿಯನ್ನು ನಿಭಾಯಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಇದು ಅವರಿಗೆ ಅಪಾಯಕಾರಿಯಾಗಬಹುದು. ಕೊನೆಯಲ್ಲಿ ಪೋಷಕರೇ ಮುಂದೆ ಬರಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಮಕ್ಕಳಿಗೆ ತಮ್ಮ ಪೋಷಕರನ್ನು ಸಂಪರ್ಕಿಸಲು ಮನಸ್ಸಿನಲ್ಲಿ ಮೂಡುವ ಅನೇಕ ಭಯದ ಆಲೋಚನೆಗಳನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ಕೋರಿ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ ಅನೇಕ ಘಟನೆಗಳನ್ನು ನಾವು ಓದಿದ್ದೇವೆ.
A Major Civilisational Pushback by Sewa Nyaya Utthan
Our fight against attempts to lower the age of sexual consent from 18 to 16 through Supreme Court – a move that would have endangered millions of minors – has seen remarkable impact.
11 counter petitions have now been filed… pic.twitter.com/pj9jyGsnji
— Sewa Nyaya Utthan Foundation (@sewanyaya) October 22, 2025
೩. ಗರ್ಭಧಾರಣೆಯಾದರೆ ‘ಬಾಲ್ಯವಿವಾಹ’ ಅದಕ್ಕೆ ಪರಿಹಾರವಲ್ಲ !
ಇಂತಹ ಅನೇಕ ವೈದ್ಯಕೀಯ ಗರ್ಭಪಾತಗಳು ವಿಫಲ ವಾಗುತ್ತವೆ ಮತ್ತು ಮಗು ಜೀವಂತವಾಗಿ ಉಳಿಯುತ್ತದೆ. ಮಗುವಿನ ತಂದೆ-ತಾಯಿಗೆ ಮತ್ತು ಅಜ್ಜ-ಅಜ್ಜಿಗೆ ಅದರ ಅಸ್ತಿತ್ವದ ಬಗ್ಗೆ ತಿಳಿದಿರುತ್ತದೆ; ಆದರೆ ಸ್ವಾಭಾವಿಕವಾಗಿ ಅವರಿಗೆ ಅದು ಬೇಕಿರುವುದಿಲ್ಲ. ಆದ್ದರಿಂದ ರಾಜ್ಯ ಸರಕಾರವೇ ಇದಕ್ಕೆ ಹೊಣೆಯಾಗಿರುತ್ತದೆ; ಆದರೆ ತಮ್ಮ ಮಗು ಅಥವಾ ಮೊಮ್ಮಗು ಅಸ್ತಿತ್ವದಲ್ಲಿದೆ ಎಂಬ ವಾಸ್ತವದ ನೆನಪಿನಿಂದ ಅವರು ಮಾನಸಿಕವಾಗಿ ಮುಕ್ತರಾಗಲು ಸಾಧ್ಯವೇ ? ಇದು ಒಂದು ಆಘಾತವಾಗಿದ್ದು, ಅನೇಕ ಹದಿಹರೆಯದವರು ಮತ್ತು ಪೋಷಕರು ಇದನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ‘ಬಾಲ್ಯವಿವಾಹ ಇದಕ್ಕೆ ಉತ್ತರವೇ ?’ ಎಂದರೆ ಖಂಡಿತವಾಗಿಯೂ ‘ಇಲ್ಲ’.
ಕೇವಲ ಮಾಹಿತಿಗಾಗಿ
https://www.statemirror.com/state/haryana/the-brutes-are-at-home-a-9-year-old-girl-became-pregnant-the-accused-turned-out-to-be-her-own-brother-a-female-officer-recounted-an-incident-that-shocked-everyone-158660
೪. ಜಾಗತಿಕ ಪರಿಸ್ಥಿತಿಯ ಬಗ್ಗೆ ಸಮಗ್ರವಾಗಿ ಯೋಚಿಸಬೇಕು !
ಅಪ್ರಾಪ್ತ ಪೋಷಕರು ವಿವಾಹಿತರಾಗಿದ್ದರೂ, ಅವರು ತಮ್ಮ ಮಕ್ಕಳನ್ನು ಬೆಳೆಸಲು ಸಾಧ್ಯವಾಗುವುದಿಲ್ಲ; ಏಕೆಂದರೆ ಅವರು ಇನ್ನೂ ಆರ್ಥಿಕವಾಗಿ ಮತ್ತು ದೈಹಿಕವಾಗಿ ಸಶಕ್ತರಾಗಿರುವುದಿಲ್ಲ. ಆದ್ದರಿಂದ ಶರೀರದ ಮತ್ತು ಭಾವನೆಗಳಿಗೆ ಸಂಬಂಧಿಸಿದ ಹಕ್ಕುಗಳನ್ನು ನೀಡಲು ಸಮ್ಮತಿಯ ವಯಸ್ಸನ್ನು ಕಡಿಮೆ ಮಾಡುವುದು ಸಾಕಾಗುವುದಿಲ್ಲ. ಅವರ ಶೋಷಣೆ ನಡೆಯಬಹುದು ಅಥವಾ ಇತರ ಮಾರ್ಗಗಳ ಮೂಲಕ ಸಾಗಾಣಿಕೆ ಅಥವಾ ಅವರು ವಂಚನೆಗೆ ಗುರಿಯಾಗಬಹುದು. ವಿಫಲವಾದ ವೈದ್ಯಕೀಯ ಗರ್ಭಪಾತಗಳು ಅವರದೇ ಜವಾಬ್ದಾರಿಯಾಗಿರುತ್ತದೆ; ಏಕೆಂದರೆ ತಾಯಿಯ ಗರ್ಭದಿಂದ ವಂಚಿತವಾದ ಮಗುವನ್ನು ಅಂಗವೈಕಲ್ಯಕ್ಕೆ ಮತ್ತು ಅಂಗವೈಕಲ್ಯದ ಜೀವನಕ್ಕಾಗಿ ದೂಷಿಸ ಲಾಗುತ್ತದೆ. ಹಾಗಾದರೆ ಇದಕ್ಕೆ ಉತ್ತರವೇನು ? ಇದು ಕಷ್ಟಕರವಾಗಿದೆ. ಈ ಸಮಸ್ಯೆಯನ್ನು ಸಮ್ಮತಿಯ ವಯಸ್ಸನ್ನು ಕಡಿಮೆ ಮಾಡದೆಯೇ, ಕೇವಲ ಮಗುವನ್ನು ‘ಪೊಕ್ಸೊ’ ಕಾಯಿದೆಯಲ್ಲಿ ಅನಗತ್ಯವಾಗಿ ಸಿಲುಕದಂತೆ ರಕ್ಷಿಸಲು ಮತ್ತು ವಿಶ್ಯದಾದ್ಯಂತದ ಪರಿಸ್ಥಿತಿ ಹೇಗಿದೆ ಎಂಬ ವಾಸ್ತವದ ಬಗ್ಗೆ ಸಮಗ್ರವಾಗಿ ಯೋಚಿಸಬೇಕು !
– ಶ್ರೀಮತಿ ಲಲಿತಾ ಗೊಡಬೋಲೆ, ನೆರುಳ, ನವಿಮುಂಬಯಿ.

|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು