ಮಾರ್ಚ ೮ ರಂದು ‘ಅಂತಾರಾಷ್ಟ್ರೀಯ ಮಹಿಳಾ ದಿನ’ವಿದೆ. ಆ ನಿಮಿತ್ತ…

ಮಹಿಳಾ ಶಕ್ತಿಯನ್ನು ಗೌರವಿಸುವುದು, ಅವರ ಶಕ್ತಿಗೆ ಚಾಲನೆಯನ್ನು ನೀಡುವುದು, ಈ ರೀತಿಯ ಸಕಾರಾತ್ಮಕ ವಿಷಯಗಳನ್ನು ಎತ್ತಿಹಿಡಿಯಲು ಮಾರ್ಚ ೮ ರಂದು ‘ಅಂತಾರಾಷ್ಟ್ರೀಯ ಮಹಿಳಾ ದಿನ’ವೆಂದು ಜಗತ್ತಿನಾದ್ಯಂತ ವಿವಿಧ ಉಪಕ್ರಮಗಳನ್ನು ನಡೆಸಲಾಗುತ್ತದೆ; ಆದರೆ ಅವರ ಸುರಕ್ಷತೆಯ ಬಗ್ಗೆ ಏನು ? ಇನ್ನು ಮುಂದೆ ಇಂತಹ ಉಪಕ್ರಮಗಳನ್ನು ಕೇವಲ ಒಂದು ದಿನಕ್ಕಾಗಿ ಸೀಮಿತವಾಗಿಡದೇ ನಿರಂತರವಾಗಿ ನಡೆಸಿ ಅವರನ್ನು ಸಕ್ಷಮ, ಸಮರ್ಥ ಮತ್ತು ಸ್ವಾವಲಂಬಿ ಮಾಡುವುದು ಅತ್ಯಾವಶ್ಯಕವಾಗಿದೆ, ಆವಾಗಲೇ ಈ ದಿನವನ್ನು ಆಚರಿಸುವುದು ಯೋಗ್ಯವೆನಿಸುವುದು.
ನಮ್ಮಲ್ಲಿ ಯಾವುದಾದರೊಬ್ಬ ಸ್ತ್ರೀಯ ಮೇಲೆ, ಹುಡುಗಿಯ ಮೇಲೆ ಅತ್ಯಾಚಾರವಾದ ನಂತರ ಅದರ ಪರಿಣಾಮ ಮುಂದಿನ ಕೆಲವು ದಿನಗಳಲ್ಲಿ ದೇಶದಾದ್ಯಂತ ನೋಡಲು ಸಿಗುತ್ತದೆ. ಬೀದಿಬೀದಿಗಳಲ್ಲಿ ಪ್ರತಿಭಟನೆಗಳು ನಡೆಯುತ್ತವೆ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಲಾಗುತ್ತದೆ, ಮೇಣಬತ್ತಿಯ ಮೆರವಣಿಗೆಗಳು ಹೊರಡುತ್ತವೆ; ಆದರೆ ಜನತೆಯಲ್ಲಿ ಈ ಕೋಪವು ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ. ಇದರಿಂದ ಮಹಿಳೆಯರ ಮೇಲಿನ ಅತ್ಯಾಚಾರವನ್ನು ತಡೆಯಲು ಸಹಾಯ ಸಿಗುತ್ತದೆಯೇ ? ಪ್ರತಿಭಟನೆ, ಆಂದೋಲನಗಳಿಂದ ಹೆಚ್ಚೇನೂ ಪರಿಣಾಮ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿಖರವಾಗಿ ಏನು ಮಾಡಬೇಕು ? ಎಂಬುದರ ಬಗ್ಗೆ ಈ ಲೇಖನದಲ್ಲಿ ಕೊಡಲಾಗಿದೆ.

ವಿವಿಧ ಸ್ತರಗಳಲ್ಲಿ ಸುರಕ್ಷತೆಯ ಜವಾಬ್ದಾರಿ ಮತ್ತು ಪಾತ್ರ
೧ ಪೊಲೀಸರ ಪಾತ್ರ : ಮಹಿಳೆಯರ ವಿರುದ್ಧದ ಅಪರಾಧಗಳ ಬಗ್ಗೆ ತ್ವರಿತವಾಗಿ ಮತ್ತು ಪರಿಣಾಮಕಾರಿ ತನಿಖೆಯನ್ನು ಮಾಡಬೇಕು, ಮಹಿಳೆಯರಿಗಾಗಿ ಸುರಕ್ಷಿತ ವಾತಾವರಣವನ್ನು ನಿರ್ಮಿಸಬೇಕು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಜನಜಾಗೃತಿ ಮೂಡಿಸಬೇಕು.
೨ ಸರಕಾರದ ಪಾತ್ರ : ದಂಡದ ನಿಬಂಧನೆಗಳೊಂದಿಗೆ ಕಟ್ಟುನಿಟ್ಟಾದ ಕಾನೂನುಗಳನ್ನು ರಚಿಸುವುದು, ಮಹಿಳೆಯರಿಗಾಗಿ ಸುರಕ್ಷಿತ ಆಶ್ರಯ ಮತ್ತು ಸಹಾಯ ಕೇಂದ್ರಗಳನ್ನು ಸ್ಥಾಪಿಸುವುದು, ಹಾಗೆಯೇ ಮಹಿಳೆಯರ ಸಬಲೀಕರಣ ಮತ್ತು ಆತ್ಮರಕ್ಷಣೆಯ (ಸ್ವಯಂರಕ್ಷಣಾ) ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು.
೩ ಸಮಾಜದ ಪಾತ್ರ : ಮಹಿಳೆಯರ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸುವುದು, ಮಹಿಳೆಯರ ಸುರಕ್ಷತೆಗಾಗಿ ಸಾಮಾಜಿಕ ಜನಜಾಗೃತಿ ಮೂಡಿಸುವುದು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಧ್ವನಿ ಎತ್ತುವುದು.
೪ ಕುಟುಂಬದವರ ಪಾತ್ರ : ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮತ್ತು ಹೋರಾಡುವ ವೃತ್ತಿಯನ್ನು ನಿರ್ಮಿಸುವುದು. ಹೆಣ್ಣುಮಕ್ಕಳಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಶಿಕ್ಷಣವನ್ನು ನೀಡುವುದು ಮತ್ತು ಹುಡುಗಿಯರಿಗೆ ಸುರಕ್ಷತೆಯ ಬಗ್ಗೆ ಸತತವಾಗಿ ಮಾರ್ಗದರ್ಶನ ಮಾಡುವುದು.
೫ ಮಹಿಳೆಯರ ಸ್ವಂತದ ಪಾತ್ರ : ಆತ್ಮರಕ್ಷಣೆ ಮಾಡುವ ತರಬೇತಿಯನ್ನು ಪಡೆಯುವುದು, ಅಪಾಯಕಾರಿ ಪರಿಸ್ಥಿತಿಯನ್ನು ಗುರುತಿಸುವುದು ಮತ್ತು ಅದನ್ನು ತಪ್ಪಿಸುವುದು, ಹಾಗೆಯೇ ತಮ್ಮ ಸುರಕ್ಷತೆಗಾಗಿ ಧ್ವನಿ ಎತ್ತುವುದು ಮತ್ತು ಸಹಾಯವನ್ನು ಪಡೆಯಲು ಹಿಂಜರಿಯಬಾರದು.
ಮಹಿಳೆಯರ ಸುರಕ್ಷತೆಗಾಗಿ ಸರಕಾರವು ಮಾಡಬೇಕಾದ ಯೋಜನೆಗಳು
೧. ಸಮಗ್ರ ಕಾರ್ಯನೀತಿ : ಮಹಿಳೆಯರ ಸುರಕ್ಷತೆಗಾಗಿ ಸರಕಾರ, ಸಮಾಜ ಮತ್ತು ನಾಗರಿಕರ ನಡುವೆ ಸಮನ್ವಯವನ್ನು ಸಾಧಿಸಿ ಸಮಗ್ರ ಕಾರ್ಯನೀತಿಯನ್ನು ಸಿದ್ಧಪಡಿಸುವುದು ಆವಶ್ಯಕವಾಗಿದೆ.
೨. ಕಠೋರ ಕಾನೂನುಗಳನ್ನು ಮಾಡುವುದು : ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯಲು ಕಠಿಣ ಕಾನೂನುಗಳು ಮತ್ತು ದಂಡದ ನಿಬಂಧನೆಗಳನ್ನು ಮಾಡುವುದು ಆವಶ್ಯಕ
೩. ಆತ್ಮರಕ್ಷಣೆ ತರಬೇತಿ : ಮಹಿಳೆಯರಿಗಾಗಿ ದೊಡ್ಡ ಪ್ರಮಾಣದಲ್ಲಿ ಆತ್ಮರಕ್ಷಣೆಯ ತರಬೇತಿಯ ಕಾರ್ಯಕ್ರಮದ ಆಯೋಜನೆ ಮಾಡುವುದು ಮಹತ್ವದ್ದಾಗಿದೆ.
೪. ಜಾಗರೂಕತೆಯ ಅಭಿಯಾನ : ಮಹಿಳೆಯರ ಮೇಲಿನ ಹಿಂಸಾಚಾರದ ವಿರುದ್ಧ ಜಾಗೃತಿ ಮೂಡಿಸಲು ದೊಡ್ಡ ಪ್ರಮಾಣದಲ್ಲಿ ಜಾಗೃತಿ ಅಭಿಯಾನಗಳನ್ನು ಮಾಡುವುದು ಆವಶ್ಯಕ.
೫. ತಂತ್ರಜ್ಞಾನದ ಉಪಯೋಗ : ಮಹಿಳೆಯರ ಸುರಕ್ಷತೆಗಾಗಿ ‘ಜಿ.ಪಿ.ಎಸ್. ಟ್ರ್ಯಾಕಿಂಗ್’, ಸುರಕ್ಷಾ ‘ಆಪ್’ ಮತ್ತು ‘ಕ್ಲೋಸ್ ಸರ್ಕಿಟ್ ಟಿ.ವಿ. ಕ್ಯಾಮೆರಾಗಳು.’ ಈ ತಂತ್ರಜ್ಞಾನಗಳನ್ನು ಉಪಯೋಗಿಸುವುದು ಆವಶ್ಯಕವಾಗಿದೆ,
ನಿಷ್ಕರ್ಷ
ಮಹಿಳೆಯರ ಸುರಕ್ಷೆಯು ಕೇವಲ ಸ್ತ್ರೀಯರ ಜವಾಬ್ದಾರಿ ಆಗಿರದೇ, ಸಮಾಜದ ಜವಾಬ್ದಾರಿಯಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಎಲ್ಲ ಸ್ತರಗಳಲ್ಲಿ ಪ್ರಯತ್ನಿಸುವುದು ಆವಶ್ಯಕವಾಗಿದೆ.
– ಬ್ರಿಗೇಡಿಯರ್ ಹೇಮಂತ ಮಹಾಜನ (ನಿವೃತ್ತ)
೧. ಪ್ರತಿಯೊಂದು ಪ್ರದೇಶಕ್ಕೆ ನಿರ್ದಿಷ್ಟಸುರಕ್ಷಾ ಪರಿಹಾರೋಪಾಯ
ದೇಶದಲ್ಲಿ ಬಲಾತ್ಕಾರ, ಅತ್ಯಾಚಾರದ ಪ್ರಕರಣಗಳು ಎಷ್ಟೊಂದು ಆಗಿವೆ ಮತ್ತು ಆಗುತ್ತಿವೆ, ಎಂದರೆ ಸ್ತ್ರೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂದು ಸ್ತ್ರೀ ಸುರಕ್ಷತೆಯ ವಿಷಯವು ಎಷ್ಟು ಗಂಭೀರವಾಗಿದೆ ಎಂದರೆ ಪ್ರತಿಯೊಬ್ಬ ಮಹಿಳೆಯ ಹಿಂದೆ ಒಬ್ಬ ಪೊಲೀಸನನ್ನು ನೇಮಿಸಿದರೆ ಮಾತ್ರ ಇಂತಹ ಘಟನೆಗಳನ್ನು ತಡೆಯಬಹುದು; ಆದರೆ ಇದು ಅಸಾಧ್ಯವಾಗಿದೆ. ಆದ್ದರಿಂದ ಪರಿಹಾರೋಪಾಯಗಳ ವಿಚಾರವನ್ನು ಮಾಡಬೇಕು.
ಎಲ್ಲಕ್ಕಿಂತ ಮೊದಲು ಮಹಿಳೆಯರು ಮತ್ತು ಅವರ ಕುಟುಂಬದವರು ಅವರು ಯಾವ ಪ್ರದೇಶದಲ್ಲಿ, ಇರುತ್ತಾರೆಯೋ, ಯಾವ ವಿಶ್ವವಿದ್ಯಾಲಯದಲ್ಲಿ ಕಲಿಯಲು ಹೋಗುತ್ತಾರೆಯೋ, ಎಲ್ಲಿ ನೌಕರಿಗಾಗಿ ಹೋಗುತ್ತಾರೆಯೋ, ಆ ಎಲ್ಲ ಸ್ಥಳಗಳಲ್ಲಿ ಎದುರಿಸಬಹುದಾದ ಭದ್ರತೆಯ ಬಗ್ಗೆ ಒಟ್ಟಾಗಿ ವಿಚಾರ ಮಾಡಬೇಕು. ಆ ಸವಾಲುಗಳನ್ನು ಎದುರಿಸಲು ಮಹಿಳೆಯರು ನಿರ್ದಿಷ್ಟವಾಗಿ ಏನು ಮಾಡಬಹುದು ? ಎಂಬುದರ ಆಯೋಜನೆ ಯನ್ನು ಮಾಡಬೇಕು. ಕುಟುಂಬ, ವಸಾಹತು ಅಥವಾ ಸಮಾಜದಲ್ಲಿನ ನಿವಾಸಿಗಳು ಇದರ ಮೇಲೆ ಒಟ್ಟಾಗಿ ವಿಚಾರ ಮಾಡಿದರೆ ಮಾತ್ರ ಪ್ರತಿಯೊಂದು ಪರಿಸರಕ್ಕಾಗಿ ನಿಖರವಾಗಿ ಭದ್ರತೆಯ ಪರಿಹಾರೋಪಾಯಗಳನ್ನು ಮಾಡಬಹುದು.
೨. ಮಹಿಳೆಯರು ದೈಹಿಕವಾಗಿ ಸದೃಢವಾಗುವುದು ಆವಶ್ಯಕ
ಯಾವುದಾದರೊಂದು ಪ್ರದೇಶ ಅಥವಾ ರಸ್ತೆ ನಿರ್ಜನವಾಗಿ ಇರುತ್ತದೆ, ರಸ್ತೆಯಲ್ಲಿ ರಾತ್ರಿ ಕಗ್ಗತ್ತಲು ಇರುತ್ತದೆ, ರಸ್ತೆಯಲ್ಲಿ ಸಮಾಜವಿರೋಧಕರ ಓಡಾಟ ನಡೆದಿರುತ್ತದೆ. ಇಂತಹ ಸ್ಥಳಗಳಲ್ಲಿ ಮಹಿಳೆಯರ ಭದ್ರತೆಯನ್ನು ಹೆಚ್ಚಿಸಲು ಪೊಲೀಸ, ಹೋಮ್‌ಗಾರ್ಡ ಅಥವಾ ಇತರ ಸ್ವಯಂಸೇವಕರು ಗಸ್ತು ಹಾಕಬಹುದೇ ? ಕತ್ತಲಿನ ಪರಿಸರದಲ್ಲಿ ಸಾಕಷ್ಟು ಬೆಳಕು ಬೀಳುವಂತೆ ಮಾಡುವ ವ್ಯವಸ್ಥೆ, ಸಂವೇದನಾಶೀಲ ಪರಿಸರದಲ್ಲಿ ಸಾಯಂಕಾಲದ ಸಮಯದಲ್ಲಿ ಅಥವಾ ರಾತ್ರಿ ಕಾವಲುಗಾರರನ್ನು ಇಡಬಹುದೇ ? ಒಂದು ಸಮಾಜವೆಂದು ನಿಖರವಾಗಿ ಏನು ಮಾಡಬಹುದು ?
ಮಹಿಳೆಯರಿಗೆ ನೌಕರಿ, ವ್ಯವಸಾಯ ಅಥವಾ ಇತರ ಅನೇಕ ಕಾರಣಗಳಿಂದ ಹೊರಗೆ ಹೋಗಬೇಕಾಗುತ್ತದೆ. ಪ್ರತಿಯೊಂದು ಸಮಯದಲ್ಲಿ ಅವಳ ಜೊತೆಗೆ ತಂದೆ, ಸಹೋದರರು, ಪತಿ ಮತ್ತು ಇನ್ಯಾರೂ ಇರುವುದಿಲ್ಲ, ಆದ್ದರಿಂದ ನಿರಾಶ್ರಿತತೆಯ ಪ್ರಸಂಗಳು ಬಂದರೆ ಮಹಿಳೆಗೆ ತನ್ನ ಸುರಕ್ಷತೆಯನ್ನು ತಾನೇ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಸ್ತ್ರೀಯರು ದೈಹಿಕವಾಗಿ ಸದೃಢವಾಗಿರುವುದು ಆವಶ್ಯಕವಾಗಿದೆ. ಸಂಕಟದ ಸಮಯದಲ್ಲಿ ಓಡಿ ಹೋಗುವ ಪ್ರಮೇಯ ಬಂದಾಗ ಹಾಗೆ ಮಾಡಲು ಸಾಧ್ಯವಾಗಬೇಕು. ಆಪತ್ಕಾಲದ ಪರಿಸ್ಥಿತಿಯಲ್ಲಿ ಕನಿಷ್ಠ ೫-೧೦ ನಿಮಿಷಗಳವರೆಗೆ ತನ್ನ ರಕ್ಷಣೆಯನ್ನು ಹೇಗೆ ಮಾಡಿ ಕೊಳ್ಳಬಹುದು, ಎಂದು ಬಾಕ್ಸಿಂಗ್, ಕರಾಟೆಯಂತಹ ಸ್ವರಕ್ಷಣಾ ತರಬೇತಿ ಪಡೆಯಬೇಕು. ಇದರಿಂದ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳಬಹುದು. ಶಾಲೆಗಳಿಂದಲೇ ಇದನ್ನು ಪ್ರಾರಂಭಿಸಬೇಕು.
೩. ವಿವಿಧ ಸುರಕ್ಷಾ ‘ಆಪ್‌ಗಳನ್ನು ಡೌನ್‌ಲೋಡ್’ ಮಾಡಿರಿ !
ಅ. ಪ್ರಸ್ತುತ ಅನೇಕರಲ್ಲಿ ‘ಸ್ಮಾರ್ಟ್ ಫೋನ್’ ಇರುತ್ತವೆ. ಅನೇಕ ಸುರಕ್ಷಾ ‘ಆಪ್’ (ಸಂಚಾರವಾಣಿ ತಂತ್ರಾಂಶ)ಗಳನ್ನು ಪೊಲೀಸರು ನಿರ್ಮಿಸಿದ್ದಾರೆ. ಸಂಚಾರವಾಣಿಯನ್ನು ಬಳಸುವ ಎಲ್ಲ ಯುವತಿಯರು-ಮಹಿಳೆಯರು ಅವುಗಳನ್ನು ‘ಡೌನ್‌ಲೋಡ್’ ಮಾಡಬೇಕು. ಪ್ರಸ್ತುತ, ‘೧೧೨ India’, ‘ಸುರಕ್ಷಾ’ (Suraksha
ಆಪ್ (ಕರ್ನಾಟಕಕ್ಕೆ ಸೀಮಿತ), ಸ್ಮಾರ್ಟ್‌ಫೋನ್‌ನ ’ಇನ್-ಬಿಲ್ಟ್ ಎಸ್‌ಓಎಸ್’ ದಂತಹ ಅನೇಕ ‘ಆಪ್’ಗಳು ಆಪತ್ಕಾಲದಲ್ಲಿ ತಕ್ಷಣ ಕಾರ್ಯನಿರತವಾಗುತ್ತವೆ ಮತ್ತು ಎಲ್ಲಿ ಘಟನೆ ಘಟಿಸುತ್ತಿರುತ್ತದೆಯೋ, ಅಲ್ಲಿನ ಕ್ರಮಾಂಕಗಳನ್ನು ಕಿರುಸಂದೇಶದಿಂದ ಸುರಕ್ಷಾದಳಕ್ಕೆ ಕಳುಹಿಸಲಾಗುತ್ತದೆ. ‘ಜಿ.ಪಿ.ಎಸ್.’ ಮೂಲಕ ‘ಲೋಕೆಶನ್’ (ನಾವಿರುವ ಪ್ರದೇಶದ ಮಾಹಿತಿ) ಕಳುಹಿಸಿ ಸಹಾಯ ಪಡೆಯ ಬಹುದು. ಇದರಿಂದ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ.
ಆ. ಇದರ ಹೊರತು ‘ಎಸ್.ಓ.ಎಸ್.’ ಆಪ್’ (ಆಪತ್ಕಾಲದ ಸ್ಥಿತಿಯಲ್ಲಿ ಬಳಸಲಾಗುವ ಸಂಚಾರವಾಣಿ ತಂತ್ರಾಂಶ) ಇದೆ. ಈ ‘ಆಪ್ ಡೌನ್‌ಲೋಡ್’ ಮಾಡಿದ ನಂತರ ‘ಪವರ್’ ಬಟನ್‌ನ ಆಧಾರದಿಂದ ಅದು ತನ್ನಷ್ಟಕ್ಕೆ ತಾನೇ ಪ್ರಾರಂಭವಾಗುತ್ತದೆ ಮತ್ತು ೩ ಬಾರಿ ‘ಪವರ್’ ಬಟನ್ ಒತ್ತಿದರೆ ತುರ್ತುಪರಿಸ್ಥಿತಿಯಲ್ಲಿ ತನ್ನ ಸಂಚಾರವಾಣಿ ಕ್ರಮಾಂಕವನ್ನು ಕಿರುಸಂದೇಶದ ಮೂಲಕ ಕಳುಹಿಸಬಹುದು. ಯಾವ ವ್ಯಕ್ತಿಯು ಕಿರುಸಂದೇಶವನ್ನು ಕಳುಹಿಸಿದ್ದಾನೆಯೋ, ಪೊಲೀಸರಿಗೆ ಆ ವ್ಯಕ್ತಿಯ ಸ್ಥಳವನ್ನು ಹುಡುಕಲೂ ಸುಲಭವಾಗುತ್ತದೆ.
ಸಂಕ್ಷಿಪ್ತದಲ್ಲಿ ಹೇಳುವುದಾದರೆ ಈ ರೀತಿಯ ‘ಆಪ್’ಗಳಿಂದ ನಮಗೆ ತುರ್ತುಪರಿಸ್ಥಿತಿಯಲ್ಲಿ ಪೊಲೀಸರ ಅಥವಾ ಇತರರ ಸಹಾಯವು ಕೂಡಲೇ ಸಿಗುತ್ತದೆ. ಅಂದರೆ ‘ಆಪ್’ ಡೌನ್‌ಲೋಡ್’ ಮಾಡಿದ ನಂತರ ಅದನ್ನು ಹೇಗೆ ಬಳಸಬೇಕು ? ಎಂಬುದರ ಪೂರ್ಣ ಮಾಹಿತಿಯನ್ನು ಪಡೆಯುವುದು ಆವಶ್ಯಕವಾಗಿದೆ. ಅದಕ್ಕಾಗಿ ಆ ‘ಆಪ್’ನ್ನು ೧-೨ ಬಾರಿ ಬಳಸಿ ನೋಡಬೇಕು.
೪. ಆತ್ಮರಕ್ಷಣೆಗಾಗಿ ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಿರಿ !
ಮಹಿಳೆಯರು ತಮ್ಮ ರಕ್ಷಣೆಗಾಗಿ ಇನ್ನೂ ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದು. ಆಭರಣ, ಬೆಲೆಬಾಳುವ ವಸ್ತುಗಳೊಂದಿಗೆ ಪ್ರಯಾಣಿಸುವುದನ್ನು ತಪ್ಪಿಸಬೇಕು. ಅಹಿತಕರ ಘಟನೆ ಘಟಿಸುವ ಸಾಧ್ಯತೆ ಅನಿಸಿದರೆ ಸ್ವರಕ್ಷಣೆಗಾಗಿ ವೇಗದಿಂದ ಓಡಿಹೋಗಿರಿ, ಕೂಗಾಡಿರಿ. ಒಂದು ವೇಳೆ ಓಡಲು ಸಾಧ್ಯವಾಗದಿದ್ದರೆ, ದಾಳಿ ಮಾಡುವವರನ್ನು ಕಾಲಿನಿಂದ ಒದೆಯುವುದು, ದಾಳಿ ಮಾಡುವವರ ಸೂಕ್ಷ್ಮ ಭಾಗದ ಮೇಲೆ ಆಕ್ರಮಣ ಮಾಡುವುದು, ದೂಡುವುದು, ಕಣ್ಣಲ್ಲಿ ಖಾರದ ಪುಡಿಯನ್ನು ಚೆಲ್ಲುವುದು ಮುಂತಾದ ಉಪಾಯಗಳನ್ನು ಮಾಡಬಹುದು. ಸದ್ಯ ‘ಪೇಪರ್ ಸ್ಪ್ರೇ’ ಸಿಗುತ್ತದೆ, ಅದನ್ನು ಆಕ್ರಮಣ ಮಾಡುವವರ ಕಣ್ಣುಗಳ ಮೇಲೆ ಹಾರಿಸಬಹುದು. ಕತ್ತಲಲ್ಲಿ ಪ್ರಯಾಣವನ್ನು ಮಾಡುವಾಗ ಬ್ಯಾಟರಿಯನ್ನು ಬಳಸಬೇಕು. ಜೇಬಿನಲ್ಲಿ ಸೀಟಿಯನ್ನು ಇಟ್ಟುಕೊಂಡರೆ, ದಾಳಿಯ ಸಂದರ್ಭದಲ್ಲಿ ಅದನ್ನು ಜೋರಾಗಿ ಊದುವುದರಿಂದ ಎದುರಿಗಿನ ತೊಂದರೆ ಕೊಡುವ ವ್ಯಕ್ತಿಯನ್ನು ಗಾಬರಿಗೊಳಿಸಬಹುದು.
ರಾತ್ರಿಯ ಸಮಯದಲ್ಲಿ ವಾಹನ ಕೆಟ್ಟರೆ ಅದನ್ನು ‘ಲಾಕ್’ (ಬೀಗವನ್ನು ಹಚ್ಚಿ) ಮಾಡಿ ಅಲ್ಲಿಯೇ ಬಿಟ್ಟು ನಂತರ ಇತರರ ಸಹಾಯವನ್ನು ಪಡೆಯಲು ಹಿಂತಿರುಗುವುದು ಹೆಚ್ಚು ಮಹತ್ವದ್ದಾಗಿದೆ. ಬಸ್ ಅಥವಾ ಲೋಕಲದಲ್ಲಿ (ನಗರಗಳಲ್ಲಿನ ರೇಲ್ವೆಗಳಲ್ಲಿ) ತೊಂದರೆ ಕೊಡಲು ಪ್ರಯತ್ನಿಸುತ್ತಿದ್ದರೆ ಆ ವ್ಯಕ್ತಿಗೆ ಅಲ್ಲಿಯೇ ಪಾಠ ಕಲಿಸುವುದು ಲಾಭದಾಯಕವಾಗಿದೆ; ಏಕೆಂದರೆ ಅಲ್ಲಿ ಸಹಾಯ ಮಾಡಲು ಅನೇಕ ಜನರು ಇರುತ್ತಾರೆ. ತಮ್ಮಲ್ಲಿನ ಹಣವನ್ನು ಒಂದೇ ಸ್ಥಳದಲ್ಲಿ ಇಡುವ ಬದಲು ಬೇರೆ ಬೇರೆ ಸ್ಥಳಗಳಲ್ಲಿ ವಿಂಗಡಿಸಿ ಇಡಬೇಕು.
ಬಸ್ ಅಥವಾ ಲೋಕಲ್‌ನಲ್ಲಿ ಪ್ರಯಾಣವನ್ನು ಮಾಡುವಾಗ, ಆಟೋ, ‘ಕ್ಯಾಬ್’ನಲ್ಲಿ (ಪ್ರವಾಸಿಗಳ ಕಾರು) ಒಬ್ಬಂಟಿಯಾಗಿ ಪ್ರಯಾಣ ಮಾಡುತ್ತಿರುವಾಗ ನಿರ್ಜನ ರಸ್ತೆಯಲ್ಲಿ ಮುಂತಾದ ವಿವಿಧ ಪರಿಸ್ಥಿತಿಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೇಗೆ ಮಾಡಬೇಕು ? ಎಂಬುದರ ಉಪಾಯಗಳನ್ನು ಮಹಿಳೆಯರೇ ಮನಸ್ಸಿನಲ್ಲಿ ಯೋಚಿಸಬೇಕು, ಒಟ್ಟಿನಲ್ಲಿ ತಮ್ಮ ಮೇಲೆ ಸಂಕಟಗಳು ಬಂದರೆ ಸ್ವರಕ್ಷಣೆಯನ್ನು ಮಾಡಬಹುದು. ಅದಕ್ಕಾಗಿ ಶಾಲೆಯ ಸ್ತರದಲ್ಲಿಯೇ ‘ದೈಹಿಕ ಸಾಮರ್ಥ್ಯ ಅಭಿವೃದ್ಧಿ’ಯನ್ನು ಮಹತ್ವದ ವಿಷಯಗಳ ಬಗ್ಗೆ ಪ್ರತಿ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಕಲಿಸುವುದು ಆವಶ್ಯಕವಾಗಿದೆ.
೫. ಕೃತಿಶೀಲ ಕಾರ್ಯಾಚರಣೆಯ ಆವಶ್ಯಕತೆ
ಬಲಾತ್ಕಾರದ ಘಟನೆಗಳು ಸಂಪೂರ್ಣ ದೂರವಾಗಬೇಕಾದರೆ, ಪುರುಷರ ಮಾನಸಿಕತೆಯಲ್ಲಿ ಬದಲಾವಣೆಯಾಗಬೇಕು. ಮಹಿಳೆಯರ ಕಡೆಗೆ ಅವರ ನೋಡುವ ದೃಷ್ಟಿಕೋನವನ್ನು ಬದಲಾಯಿಸಬೇಕು. ಅದಕ್ಕಾಗಿ ಸಂಸ್ಕಾರಗಳು, ಪ್ರಬೋಧನೆ ಮತ್ತು ಸಲಹೆಯು ಅಗತ್ಯವಾಗಿದೆ. ಈ ಪ್ರಕ್ರಿಯೆಯು ನಿಜವಾಗಿಯೂ ತುಂಬಾ ವ್ಯಾಪಕ ಮತ್ತು ದೀರ್ಘಕಾಲದ್ದಾಗಿದೆ. ಅದಕ್ಕೆ ಸಹಜವಾಗಿ ಯಶಸ್ವಿಯಾಗುವುದು ಅಷ್ಟೊಂದು ಸುಲಭವಾಗಿಲ್ಲ. ಆದ್ದರಿಂದ ಸದ್ಯದ ಸ್ಥಿತಿಯ ವಿಚಾರವನ್ನು ಮಾಡಿ ಮಹಿಳೆಯರು ಆತ್ಮರಕ್ಷಣೆಗಾಗಿನ ಪರಿಹಾರೋಪಾಯಗಳ ಮೇಲೆ ಒತ್ತು ನೀಡುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.
ಮಹಿಳೆಯರ ಸುರಕ್ಷತೆ ಮುಂಬರುವ ಕಾಲದಲ್ಲಿ ಮಹತ್ವದ ವಿಷಯವಾಗಿರುವುದು, ಆದ್ದರಿಂದಲೇ ಪ್ರತಿಯೊಂದು ಕುಟುಂಬವು ತಮ್ಮ ಮನೆಯಲ್ಲಿನ ಮಹಿಳೆಯರು ಮತ್ತು ಹುಡುಗಿಯರು ಸುರಕ್ಷಿತವಾಗಿರಲು ಸುರಕ್ಷತೆಯ ಪರಿಹಾರೋಪಾಯಗಳನ್ನು ಮಾಡಬೇಕು; ಏಕೆಂದರೆ ಪ್ರತಿಯೊಂದು ಪ್ರದೇಶದಲ್ಲಿನ ಅಪಾಯಗಳು ಭಿನ್ನವಾಗಿರುತ್ತವೆ. ತಮ್ಮ ಪ್ರದೇಶದಲ್ಲಿನ ಮಹಿಳೆಯರಿಗೆ ಯಾವ ರೀತಿಯ ಅಪಾಯಗಳಿವೆ, ಎಂಬುದನ್ನು ಆ ಪರಿಸರದಲ್ಲಿ ವಾಸಿಸುವ ನಾಗರಿಕರೇ ನಿರ್ಧರಿಸಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ ನಮ್ಮ ಕುಟುಂಬದವರು, ಸಹದ್ಯೋಗಿಗಳು, ನೆರೆಹೊರೆಯವರ ಸಹಾಯದಿಂದ ಮಹಿಳೆಯರ ಸುರಕ್ಷತೆಗಾಗಿ ತಮ್ಮ ಪರಿಸರದ ನಿಮ್ಮದೇ ಆದ ಯೋಜನೆಯನ್ನು ಮಾಡಿದರೆ, ಅದನ್ನು ಉಪಯೋಗಿಸಿ ಮಹಿಳೆಯರನ್ನು ಸುರಕ್ಷಿತವಾಗಿಡಬಹುದು. ಘಟನೆ ಘಟಿಸಿದ ನಂತರ ಪ್ರತಿಭಟನೆ ಮಾಡಿ, ಮೇಣಬತ್ತಿ ಮೆರವಣಿಗೆ ಮುಂತಾದವುಗಳನ್ನು ಮಾಡಿ ಏನು ಪರಿಣಾಮ ಆಗುವುದಿಲ್ಲ. ಇಂದು ಕೃತಿಶೀಲ ಕಾರ್ಯಾಚರಣೆ ಅಗತ್ಯವಿದೆ.
– ಬ್ರಿಗೇಡಿಯರ್ ಹೇಮಂತ ಮಹಾಜನ (ನಿವೃತ್ತ), ಪುಣೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು