
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಸದ್ಯ ಪಟಾಕಿಗಳಂತೆ ಬಾಂಬ್ ಸ್ಫೋಟಗಳು ಸಂಭವಿಸುತ್ತಿದ್ದು, ಅಲ್ಲಿನ ಪೊಲೀಸರು ಮತ್ತು ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಯುವ್ಯ ಭಾಗದಲ್ಲಿ ಫೆಬ್ರವರಿ ೨೪ ರಂದು ಪೊಲೀಸರ ಮೇಲೆ ೨ ದಾಳಿಗಳು ನಡೆದಿವೆ. ಈ ದಾಳಿಯಲ್ಲಿ ೬ ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಓರ್ವ ನಾಗರಿಕ ಹತರಾಗಿದ್ದಾರೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕೋಹಾಟ್ ಜಿಲ್ಲೆಯಲ್ಲಿ ಭಯೋತ್ಪಾದಕರು ಪೊಲೀಸರ ವಾಹನಗಳನ್ನೇ ಗುರಿಯಾಗಿಸಿಕೊಂಡು ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಈ ಎರಡೂ ಘಟನೆಗಳ ನಂತರ ದಾಳಿಕೋರರು ಪರಾರಿಯಾಗಿದ್ದಾರೆ.
11 police officers killed in 4 terror attacks in Pakistan.
A country that once exported extremism now faces its own blowback.
Will Khawaja Asif blame India again?
With rising unrest from Balochistan to Khyber Pakhtunkhwa, stability looks fragile.
PC: @zeenews pic.twitter.com/poCj1MSCsD
— Sanatan Prabhat (@SanatanPrabhat) February 25, 2026
ಬುಕರ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ
ಅದೇ ದಿನ ಪಂಜಾಬ್ ಪ್ರಾಂತ್ಯದ ಬುಕರ್ ಜಿಲ್ಲೆಯಲ್ಲೂ ಪೊಲೀಸ್ ಚೌಕಿಯೊಂದರ ಮೇಲೆ ಆತ್ಮಹತ್ಯೆ ದಾಳಿಕೋರ ಸ್ಫೋಟ ಮಾಡಿದ್ದಾನೆ. ಈ ಸ್ಫೋಟದಲ್ಲಿ ೨ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ೪ ಜನರು ಗಾಯಗೊಂಡಿದ್ದಾರೆ. ಭದ್ರತಾ ಸಂಸ್ಥೆಗಳು ಸಂಭವನೀಯ ಭಯೋತ್ಪಾದಕ ಜಾಲದ ಪತ್ತೆಗಾಗಿ ಹುಡುಕಾಟ ನಡೆಸುತ್ತಿವೆ.
ಇದಕ್ಕೂ ಮೊದಲು ಫೆಬ್ರವರಿ ೨೩ ರಂದು ಕರಾಕ್ ಭಾಗದ ಅರೆಸೇನಾ ಪಡೆಯ ಚೌಕಿಯ ಮೇಲೆ ಸ್ಫೋಟಕ ತುಂಬಿದ ಡ್ರೋನ್ ಮೂಲಕ ದಾಳಿ ನಡೆಸಲಾಗಿತ್ತು, ಅನೇಕ ಅಧಿಕಾರಿಗಳು ಗಾಯಗೊಂಡಿದ್ದರು. ನಂತರ ಗಾಯಾಳುಗಳನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಮೇಲೆಯೂ ಹೊಂಚು ಹಾಕಿ ದಾಳಿ ನಡೆಸಲಾಯಿತು. ಪರಿಣಾಮ ೩ ಅಧಿಕಾರಿಗಳು ಹತರಾದರು ಮತ್ತು ಅವರ ಮೃತದೇಹಗಳನ್ನು ಸುಟ್ಟುಹಾಕಲಾಗಿದೆ.
ಇತ್ತೀಚಿನ ದಾಳಿಗಳ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲವಾದರೂ, ತಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಸಂಘಟನೆಯ ಮೇಲೆ ಸಂಶಯ ವ್ಯಕ್ತಪಡಿಸಲಾಗುತ್ತಿದೆ. ಕರಾಕ್ ನಲ್ಲಿನ ಭಯೋತ್ಪಾದಕ ದಾಳಿಯ ಹಿಂದಿನ ದಿನವೇ, ಅಂದರೆ ಫೆಬ್ರವರಿ ೨೨ ರಂದು ಪಾಕ್ ಸೈನ್ಯವು ಅಫ್ಘಾನ್ ಗಡಿಯ ಬಳಿ ಕಾರ್ಯಾಚರಣೆ ನಡೆಸಿ ೭೦ ಭಯೋತ್ಪಾದಕರನ್ನು ಹತ್ಯೆಗೈದಿರುವುದಾಗಿ ಹೇಳಿಕೊಂಡಿತ್ತು.
ಭಯೋತ್ಪಾದನೆ ವಿರುದ್ಧದ ಹೋರಾಟ ಮುಂದುವರಿಯಲಿದೆ ! – ಅಧ್ಯಕ್ಷ ಝರದಾರಿಭಯೋತ್ಪಾದಕ ದೇಶದ, ಅಂದರೆ ಭಯೋತ್ಪಾದಕರ ರಾಷ್ಟ್ರಾಧ್ಯಕ್ಷನ ಇಂತಹ ಹೇಳಿಕೆಗಿಂತ ದೊಡ್ಡ ಹಾಸ್ಯ ಬೇರೇನಿದೆ? |
ಸಂಪಾದಕೀಯ ನಿಲುವು
|
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!