|

ನವದೆಹಲಿ – ಮಹಮ್ಮದ್ ಅಲಿ ಜಿನ್ನಾ ಅವರ ‘ಮುಸ್ಲಿಂ ಲೀಗ್’ನಂತೆ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್, ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸನಾತನ ಸಂಸ್ಥೆಯ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಮೋದಿ ಸರಕಾರ ಧನಸಹಾಯ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಆರೋಪ ಮಾಡಿದೆ. ಕಾಂಗ್ರೆಸ್, ‘ಪ್ರಧಾನಿ ಮತ್ತು ಅವರ ಸರಕಾರವು ಸನಾತನ ಸಂಸ್ಥೆಯಂತಹ ಮತಾಂಧ ಸಂಘಟನೆಗಳನ್ನು ಪ್ರೋತ್ಸಾಹಿಸುತ್ತಿದೆ’. ಸನಾತನ ಸಂಸ್ಥೆಯು ಮುಸ್ಲಿಂ ಸಮುದಾಯದ ಬಗ್ಗೆ ಕಠಿಣವಾಗಿರಬಹುದು; ಆದರೆ ಅದೊಂದು ಪ್ರಖರ ರಾಷ್ಟ್ರಪ್ರೇಮಿ ಸಂಘಟನೆಯಾಗಿದೆ. ಈ ಸಂಸ್ಥೆಯು ಕಟ್ಟರ್ ಇಸ್ಲಾಮಿಕ್ ಮತ್ತು ಸಾಮ್ಯವಾದಿಗಳ ತಪ್ಪುಗಳನ್ನು ಬಯಲಿಗೆಳೆಯಲು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ರಾಷ್ಟ್ರವಿರೋಧಿ ಶಕ್ತಿಗಳ ಚಟುವಟಿಕೆಗಳಿಂದ ದೇಶವನ್ನು ರಕ್ಷಿಸುವ ಕೆಲಸದಲ್ಲಿ ಸಹಾಯ ಮಾಡುತ್ತಿದೆ ಎಂದು ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ಅಧ್ಯಕ್ಷರು ಮತ್ತು ಮಾಜಿ ಕೇಂದ್ರ ಮಾಹಿತಿ ಆಯುಕ್ತರಾದ ಶ್ರೀ. ಉದಯ ಮಾಹುರ್ಕರ್ ಹೇಳಿದ್ದಾರೆ. ಅವರು ದೇಶವಿರೋಧಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
‘ಎಕ್ಸ್’ (ಟ್ವಿಟರ್) ನಲ್ಲಿ ಮಾಹುರ್ಕರ್ ಅವರು, ಕಾಂಗ್ರೆಸ್ ಯಾವ ಜಾತ್ಯತೀತತೆಯ ಬಗ್ಗೆ ಮಾತನಾಡುತ್ತಿದೆ? ಅದು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಬರೆದಿದ್ದಾರೆ:
Cong, which today resembles Jinnah’s Muslim League, has attacked PM @narendramodi on the Modi Govt funding the recent Sanatan Rashtra Shanknad Mahotsav of @SanatanSanstha in Delhi saying ‘ PM & his Govt were promoting communal organisations like the Sanstha’.
The truth is that…
— Uday Mahurkar (@UdayMahurkar) February 20, 2026
೧. ದ್ವೇಷ ಹರಡುವ ಧರ್ಮಪ್ರಚಾರಕ ಜಾಕಿರ್ ನಾಯ್ಕ್‌ಗೆ ಕಾಂಗ್ರೆಸ್ ಬಹಿರಂಗವಾಗಿ ಅಥವಾ ಗುಪ್ತವಾಗಿ ಬೆಂಬಲ ನೀಡಿದ್ದು ಏಕೆ? ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರವೇ ಆತನ ಮೇಲೆ ಕ್ರಮ ಕೈಗೊಳ್ಳಲಾಯಿತು.
೨. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇರಳದ ವಯನಾಡ್‌ನಿಂದ ಚುನಾವಣೆಯಲ್ಲಿ ಗೆಲ್ಲಲು ಅತ್ಯಂತ ಕಟ್ಟರ್ ಮುಸ್ಲಿಂ ಚಳುವಳಿಗಳ ಬೆಂಬಲವನ್ನು ಏಕೆ ಪಡೆಯುತ್ತಾ ಬಂದಿದ್ದಾರೆ? ಎಂದು ಪ್ರಶ್ನಿಸಿದ ಮಾಹುರ್ಕರ್ ಅವರು, ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ವಯನಾಡ್‌ನಿಂದ ರಾಹುಲ್ ಗಾಂಧಿಯವರನ್ನು ಬೆಂಬಲಿಸಿದ ಕಟ್ಟರ್ ಮುಸ್ಲಿಂ ಸಂಘಟನೆಗಳ ಪಟ್ಟಿಯಿರುವ ಸುದ್ದಿಯ ಲಿಂಕ್ ಅನ್ನು ಲಗತ್ತಿಸಿದ್ದಾರೆ.
೩. ಕಟ್ಟರ್ ಇಸ್ಲಾಮಿಕ್‌ವಾದಿಗಳ ದೇಶವಿರೋಧಿ ಘೋಷಣೆಗಳಿಗೆ ಬಹಿರಂಗವಾಗಿ ಬೆಂಬಲ ನೀಡುವ, ಹಾಗೆಯೇ ಇಡೀ ಭಾರತವನ್ನು ಇಸ್ಲಾಂಗೆ ಪರಿವರ್ತಿಸುವ ಬಗ್ಗೆ ಮಾತನಾಡುವ ಮತಾಂಧ ಉಮರ ಖಾಲಿದನ ತಂದೆ ಮತ್ತು ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ನ ವಕ್ತಾರ ಎಸ್.ಕ್ಯೂ.ಆರ್ ಇಲ್ಯಾಸ್ ಬಗ್ಗೆ ಕಾಂಗ್ರೆಸ್ ನಾಯಕತ್ವ ಏನೆನ್ನುತ್ತದೆ? (ಇಲ್ಯಾಸ್ ಅವರು ೨೦೦೩ ರಲ್ಲಿ ನೀಡಿದ ಸಂದರ್ಶನದಲ್ಲಿ ‘ರಾಷ್ಟ್ರೀಯತೆಯನ್ನು ನಾಶಮಾಡಿ. ಖಿಲಾಫತ್ (ಮುಸ್ಲಿಮರ ರಾಜ್ಯ) ಸ್ಥಾಪಿಸಿ’ ಎಂಬ ಘೋಷಣೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ಆ ಸಂದರ್ಶನದ ಲಿಂಕ್ ಅನ್ನು ಸಹ ಮಾಹುರ್ಕರ್ ಲಗತ್ತಿಸಿದ್ದಾರೆ.)
೪. ಇನ್ನೊಂದೆಡೆ ಪ್ರಧಾನಿ ಮೋದಿ ಅವರು ಮುಸ್ಲಿಂ ಸಮುದಾಯಕ್ಕೆ ನ್ಯಾಯ ಒದಗಿಸಲು ಸರ್ವಪ್ರಯತ್ನ ಮಾಡಿದ್ದಾರೆ. ಮುಸ್ಲಿಮರಿಗೆ ಲೋಕಸೇವಾ ಆಯೋಗದಲ್ಲಿ ಪ್ರವೇಶ ಪಡೆಯಲು ಯಾವುದೇ ಅಡೆತಡೆಯಿಲ್ಲ. ಅವರು ಕಾಶ್ಮೀರ ಕಣಿವೆಯಲ್ಲಿ ದೊಡ್ಡ ಬದಲಾವಣೆ ತಂದಿದ್ದಾರೆ. ಅಲ್ಲಿ ಕಾಶ್ಮೀರಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಮುಖ್ಯವಾಹಿನಿಗೆ ಬರುತ್ತಿದ್ದಾರೆ ಮತ್ತು ಅಭಿವೃದ್ಧಿಯ ಫಲವನ್ನು ಸವಿಯುತ್ತಿದ್ದಾರೆ.
೫. ಅಸುರಕ್ಷಿತತೆಯ ಸುಳ್ಳು ಭಾವನೆಯನ್ನು ಸೃಷ್ಟಿಸಿ ಮುಸ್ಲಿಂ ಸಮುದಾಯಕ್ಕೆ ಅತಿ ದೊಡ್ಡ ಹಾನಿ ಮಾಡುತ್ತಿರುವ ಯಾವುದಾದರೂ ಸಂಸ್ಥೆಯಿದ್ದರೆ ಅದು ಕಾಂಗ್ರೆಸ್ ಆಗಿದೆ.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !