|

ನವದೆಹಲಿ – ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಅಂಗವಾಗಿ ಕೇಂದ್ರ ಸರಕಾರ ಸನಾತನ ಸಂಸ್ಥೆಗೆ 63 ಲಕ್ಷ ರೂಪಾಯಿ ನೀಡಿದ್ದಕ್ಕೆ ಕಾಂಗ್ರೆಸ್‌ಗೆ ಹೊಟ್ಟೆನೋವು ಶುರುವಾಗಿದೆ. ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸಿ ಸನಾತನ ಸಂಸ್ಥೆಯ ಅಪಕೀರ್ತಿ ಮಾಡಿದೆ. ಈಗ ಇದರ ವಿರುದ್ಧ ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಹಿಂದೂ ವಿರೋಧಿ ಮಾಧ್ಯಮಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಸನಾತನ ಸಂಸ್ಥೆ ನಿರ್ಧರಿಸಿದೆ. ಈ ಬಗ್ಗೆ ಸಂಸ್ಥೆಯ ವಕ್ತಾರ ಅಭಯ ವರ್ತಕ ಸನಾತನ ಪ್ರಭಾತಗೆ ತಿಳಿಸಿದ್ದು, ನಮ್ಮ ಅಪಕೀರ್ತಿ ಮಾಡುವವರನ್ನು ನಾವು ಕೇವಲ ಖಂಡಿಸುವುದಷ್ಟೇ ಅಲ್ಲ, ಯಾರು ಸನಾತನ ಸಂಸ್ಥೆಯ ಬಗ್ಗೆ ಅಪಪ್ರಚಾರ ಮಾಡಿದ್ದಾರೋ ಮತ್ತು ‘ಈ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡಲೇ ಇಲ್ಲ’ ಎಂದು ಸುಳ್ಳು ಹೇಳಿದ್ದಾರೋ ಅವರೆಲ್ಲರಿಗೂ ಕಾನೂನು ನೋಟಿಸ್ ಕಳುಹಿಸುತ್ತಿದ್ದೇವೆ. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಸಂವಿಧಾನಿಕ ಚೌಕಟ್ಟಿನಲ್ಲಿ ಅವರು ಉತ್ತರ ನೀಡಲೇ ಬೇಕು, ಎಂದು ಹೇಳಿದರು.
ಶ್ರೀ. ಅಭಯ ವರ್ತಕ ಮಾತು ಮುಂದುವರೆಸುತ್ತಾ,
1. ದೆಹಲಿಯಲ್ಲಿ ಡಿಸೆಂಬರ್ 2025 ರಲ್ಲಿ ಆಯೋಜಿಸಲಾದ ಮಹೋತ್ಸವದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1 ಸಾವಿರಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ದೆಹಲಿಯ ಗಣ್ಯರು ಭಾಗವಹಿಸಿದ್ದರು.
2. ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದೆ. ಅದರ ಅಂಗವಾಗಿ ಹಮ್ಮಿಕೊಂಡಿದ್ದ ಭವ್ಯ ಪ್ರದರ್ಶನವು ಈ ಕಾರ್ಯಕ್ರಮದ ಭಾಗವಾಗಿತ್ತು. ವಂದೇ ಮಾತರಂ ಸಾಮೂಹಿಕ ಗಾಯನ ನಡೆಯಿತು. ಇದೇ ವೇಳೆ ಕಾಂಗ್ರೆಸ್ ನಾಯಕರಿಗೆ, ‘ನಾವು ಈ ವಂದೇ ಮಾತರಂ ಘೋಷಣೆಯನ್ನು ವಿರೋಧಿಸಿದರೆ ಮುಸಲ್ಮಾನರು ಖುಷಿಯಾಗುತ್ತಾರೆ’ ಎಂದು ಅನ್ನಿಸತೊಡಗಿತು. ಹಾಗಾಗಿ ಅವರು ವಿರೋಧಿಸುತ್ತಿದ್ದಾರೆ ಮತ್ತು ವಿರೋಧಿಸಲು ಆರಂಭಿಸಿದ್ದಾರೆ.
3. ಕಮ್ಯುನಿಸ್ಟ್ ಸಿದ್ಧಾಂತದವರೂ ಇದನ್ನು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರವಿದ್ದಾಗ ದೇಶದ ಹಲವು ಭಾಗಗಳಲ್ಲಿ ಜಮೀನುಗಳನ್ನು ಪಡೆದು ಸರಕಾರದ ಪ್ರಾಯೋಜಕತ್ವದಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡಿ ಹಿಂದೂ ಧರ್ಮದ ಮೇಲೆ ಕೆಸರೆರಚಿದವರೇ ಇಂದು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವನ್ನು ವಿರೋಧಿಸುತ್ತಿರುವುದು ಆಶ್ಚರ್ಯದ ಸಂಗತಿ ಹಾಗೂ ದುರದೃಷ್ಟಕರವಾಗಿದೆ.
‘ಸುದರ್ಶನ್ ನ್ಯೂಸ್’ ಕೂಡ ನ್ಯಾಯಾಲಯಕ್ಕೆ ಹೋಗಲಿದೆ!
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ‘ಸುದರ್ಶನ್ ನ್ಯೂಸ್’ ಮುಖ್ಯ ಸಂಪಾದಕ ಶ್ರೀ. ಸುರೇಶ ಚವ್ಹಾಣ್ಕೆ ಅವರೂ ಮಾತನಾಡಿದ್ದರು. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಮಾಧ್ಯಮಗಳು ಚವ್ಹಾಣ್ಕೆ ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಅವರು ಆಡದ ಮಾತುಗಳನ್ನು ಆಡಿದ್ದಾರೆ ಎಂದು ಸುಳ್ಳು ಸುದ್ದಿ ನೀಡುತ್ತಿದ್ದಾರೆ. ಆದ್ದರಿಂದ ಶ್ರೀ. ಚವ್ಹಾಣ್ಕೆ ಅವರು ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದ್ದಾರೆ. ಅವರು ಸನಾತನ ಪ್ರಭಾತಕ್ಕೆ, ‘ದ ಬಿಸಿನೆಸ್ ಸ್ಟ್ಯಾಂಡರ್ಡ್’ ಇಂಗ್ಲಿಷ್ ಮಾಧ್ಯಮದ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ. |

ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ