ಬಾಗಲಕೋಟೆ : ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲು ತೂರಾಟ – Stone Pelting in Shivaji Jayanti Procession

ಭಾಗ್ಯನಗರ (ತೆಲಂಗಾಣ) ಇಲ್ಲಿಯೂ ಮೆರವಣಿಗೆಯಲ್ಲಿ ನುಡಿಸಲಾಗುತ್ತಿದ್ದ ಸಂಗೀತಕ್ಕೆ ಮಸೀದಿಯ ಬಳಿ ಮುಸಲ್ಮಾನರಿಂದ ವಿರೋಧ

ಬಾಗಲಕೋಟೆ(ಕರ್ನಾಟಕ) /ಭಾಗ್ಯನಗರ (ತೆಲಂಗಾಣ) – ದೇಶದಲ್ಲಿ ಫೆಬ್ರವರಿ 19 ರಂದು ಅತ್ಯಂತ ಉತ್ಸಾಹದಿಂದ ಶಿವಜಯಂತಿ ಅಂದರೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು; ಆದರೆ ಬಾಗಲಕೋಟೆಯಲ್ಲಿ ಶಿವಜಯಂತಿಯ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲು ತೂರಾಟ ನಡೆಸಲಾಯಿತು, ಹಾಗೆಯೇ ಭಾಗ್ಯನಗರದಲ್ಲಿ (ತೆಲಂಗಾಣ) ಮಸೀದಿಯ ಬಳಿ ವಿವಾದ ಉಂಟಾಯಿತು. ಬಾಗಲಕೋಟೆಯಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಪ್ರಸ್ತುತ ಈ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿಯಿದ್ದರೂ ಶಾಂತಿಯುತವಾಗಿದೆ ಮತ್ತು ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಬಾಗಲಕೋಟೆ :

ಬಾಗಲಕೋಟೆಯಲ್ಲಿ ಬೆಳಿಗ್ಗೆ ಜಿಲ್ಲಾ ಆಡಳಿತದ ವತಿಯಿಂದ ಶಿವಜಯಂತಿಯನ್ನು ಸಡಗರದಿಂದ ಆಚರಿಸಲಾಗಿತ್ತು. ತದನಂತರ ಮಧ್ಯಾಹ್ನ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿಯ ಸಮಯದಲ್ಲಿ ಈ ಮೆರವಣಿಗೆಯು ಪಂಕಾ ಮಸೀದಿಯ ಮಾರ್ಗವಾಗಿ ಸಾಗುತ್ತಿದ್ದಾಗ, ಮಸೀದಿಯಲ್ಲಿ ನಮಾಜ್ ನಡೆಯುತ್ತಿತ್ತು. ಇದೇ ಪರಿಸ್ಥಿತಿಯ ಲಾಭ ಪಡೆದ ಕೆಲವರು ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲು ತೂರಾಟ ನಡೆಸಿದರು. ಇದರಿಂದಾಗಿ ಉದ್ವಿಗ್ನತೆ ನಿರ್ಮಾಣವಾಯಿತು. ಈ ಕಲ್ಲು ತೂರಾಟದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧೀಕ್ಷಕ ಸಿದ್ದಾರ್ಥ್ ಗೋಯಲ್ ಅವರ ಕುತ್ತಿಗೆಗೆ ಗಾಯವಾಗಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನಾ ಸ್ಥಳದಲ್ಲಿ ಭಾರೀ ಪೊಲೀಸ ಬಂದೋಬಸ್ತ್ ನಿಯೋಜಿಸಲಾಗಿದೆ. ‘ಘಟನೆಯಲ್ಲಿ ಯಾವುದೇ ದೊಡ್ಡ ಹಾನಿಯಾಗಿಲ್ಲ. ಕಲ್ಲು ತೂರಾಟದಲ್ಲಿ ನನಗೆ ಅಂತಹ ದೊಡ್ಡ ಗಾಯಗಳಾಗಿಲ್ಲ, ಕೇವಲ ಸ್ವಲ್ಪ ತರಚಿದ ಗಾಯಗಳಾಗಿವೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅದರ ಆಧಾರದ ಮೇಲೆ ದೋಷಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು . ಬಾಗಲಕೋಟೆಯ ಪಂಕಾ ಮಸೀದಿ ಮತ್ತು ಕೋಟೇಶ್ವರ ದೇವಸ್ಥಾನದ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಇದೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ’, ಎಂದು ಗೋಯಲ್ ಅವರು ಮಾಹಿತಿ ನೀಡಿದ್ದಾರೆ.

ಭಾಗ್ಯನಗರ (ತೆಲಂಗಾಣ):

ಭಾಗ್ಯನಗರದ ಅಂಬರಪೇಟೆಯಲ್ಲಿ ಫೆಬ್ರುವರಿ 19 ರಂದು ರಾತ್ರಿ ಒಬ್ಬ ಯೂಟ್ಯೂಬರ್ (ಯೂಟ್ಯೂಬ್ನಲ್ಲಿ ವಿಡಿಯೋ ಅಪ್ಲೋಡ್ ಮಾಡುವವನು) ಜಾಮಾ ಮಸೀದಿಯ ಬಳಿ ವಿಡಿಯೋ ಮಾಡುತ್ತಿದ್ದನು. ಇದನ್ನು ಅಲ್ಲಿದ್ದ ಕೆಲವು ಜನರು ಆಕ್ಷೇಪಿಸಿ ಯೂಟ್ಯೂಬರ್ ಮೇಲೆ ಹಲ್ಲೆ ನಡೆಸಿದರು. ಇದೇ ಸಮಯದಲ್ಲಿ ಮಸೀದಿಯ ಎದುರಿನಿಂದ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆಯೂ ಸಾಗುತ್ತಿತ್ತು, ಆಗ ಮಸೀದಿಯಲ್ಲಿ ನಮಾಜ್ ನಡೆಯುತ್ತಿತ್ತು. ಮೆರವಣಿಗೆಯಲ್ಲಿ ನುಡಿಸುತ್ತಿದ್ದ ಸಂಗೀತ ಮತ್ತು ಘೋಷಣೆಗಳ ವಿಷಯವಾಗಿ ವಿವಾದ ಉಂಟಾಯಿತು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನಸಮೂಹವನ್ನು ಚದುರಿಸಿದರು. ಸ್ವಲ್ಪ ಸಮಯದಲ್ಲೇ ಪರಿಸ್ಥಿತಿ ಸಾಮಾನ್ಯವಾಯಿತು. ಯಾವುದೇ ಹಾನಿ ಸಂಭವಿಸಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಘಟನಾ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಸಂಪಾದಕೀಯ ನಿಲುವು

ಕರ್ನಾಟಕ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಅಂದರೆ ಮೊಘಲರ ವಂಶಜರ ರಾಜ್ಯವಿರುವುದರಿಂದ, ಅಲ್ಲಿ ಶಿವಜಯಂತಿಯ ಮೆರವಣಿಗೆಯ ಮೇಲೆ ಆಕ್ರಮಣ ನಡೆಯುವುದರಲ್ಲಿ ಆಶ್ಚರ್ಯವೇನಿಲ್ಲ!