|

ತಿರುವನಂತಪುರಂ (ಕೇರಳ) – ಕೇರಳ ಉಚ್ಚ ನ್ಯಾಯಾಲಯವು ಶಬರಿಮಲೆ ದೇವಸ್ಥಾನದ ಪ್ರಸಾದ ಮಾರಾಟ ಮತ್ತು ಅದರಿಂದ ಬರುವ ಆದಾಯದ ನಿರ್ವಹಣೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ ಕಾರ್ಯವೈಖರಿಯಲ್ಲಿ ಗಂಭೀರ ಲೋಪಗಳು ಕಂಡುಬಂದಿವೆ ಎಂದು ಸ್ಪಷ್ಟಪಡಿಸಿದೆ. ಮಂಡಳಿಯು ಆದಾಯವನ್ನು ಸುರಕ್ಷಿತವಾಗಿಡಲು ಮತ್ತು ಅವ್ಯವಹಾರಗಳನ್ನು ತಡೆಯಲು ಸಮಗ್ರ ಹಾಗೂ ಪಾರದರ್ಶಕ ಯೋಜನೆಯನ್ನು ಸಿದ್ಧಪಡಿಸುವ ಸಮಯ ಬಂದಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ರಾಜಾ ವಿಜಯರಾಘವನ್ ವಿ. ಮತ್ತು ಕೆ.ವಿ. ಜಯಕುಮಾರ ಅವರಿದ್ದ ಪೀಠವು ಜಾಗೃತ ಮತ್ತು ಭ್ರಷ್ಟಾಚಾರ ವಿರೋಧಿ ವಿಭಾಗದ ವಿಶೇಷ ತನಿಖಾ ತಂಡದ ವರದಿಯನ್ನು ಪರಿಶೀಲಿಸಿದ ನಂತರ ಈ ಟಿಪ್ಪಣಿಗಳನ್ನು ಮಾಡಿದೆ. ದೇವಸ್ಥಾನದ ಪ್ರಸಾದವಾದ ‘ಅಡಿಯಾ ಸಿಸ್ಟಮ್ ತುಪ್ಪ’ದ ಮಾರಾಟಕ್ಕೆ ಸಂಬಂಧಿಸಿದ ಅವ್ಯವಹಾರದ ಪ್ರಕರಣದ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿತ್ತು. ಈ ಪವಿತ್ರ ಪ್ರಸಾದವನ್ನು ಶಬರಿಮಲೆಯ ಭಗವಾನ್ ಅಯ್ಯಪ್ಪ ಮಂದಿರದಲ್ಲಿ ಭಕ್ತರಿಗೆ ಮಾರಾಟ ಮಾಡಲಾಗುತ್ತದೆ.
ಈ ಪ್ರಕರಣದಲ್ಲಿ ಒಟ್ಟು ೩೩ ಜನರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ವಿಶೇಷ ತನಿಖಾ ತಂಡವು ನ್ಯಾಯಾಲಯಕ್ಕೆ ತಿಳಿಸಿದೆ. ದೇವಸ್ಥಾನದ ವಿಶೇಷ ಅಧಿಕಾರಿ ಮತ್ತು ೩೦ ‘ಕೌಂಟರ್’ ಸಿಬ್ಬಂದಿಗಳ (ಪ್ರಸಾದವನ್ನು ನೇರವಾಗಿ ಭಕ್ತರಿಗೆ ಮಾರಾಟ ಮಾಡುವವರು) ವಿರುದ್ಧ ದೂರು ದಾಖಲಾಗಿವೆ. ತನಿಖೆಯನ್ನು ಮುಂದುವರಿಸಿ ೪೫ ದಿನಗಳ ಒಳಗೆ ಪೂರ್ಣಗೊಳಿಸುವಂತೆ ನ್ಯಾಯಪೀಠವು ವಿಶೇಷ ತನಿಖಾ ತಂಡಕ್ಕೆ ನಿರ್ದೇಶನ ನೀಡಿದೆ. ಈ ಅವ್ಯವಹಾರವು ಮೇಲ್ವಿಚಾರಣೆ, ದಾಸ್ತಾನು ಲೆಕ್ಕಪತ್ರ ಮತ್ತು ಆರ್ಥಿಕ ನಿಯಂತ್ರಣದಲ್ಲಿನ ವ್ಯಾಪಕ ಲೋಪಗಳನ್ನು ಎತ್ತಿ ತೋರಿಸುತ್ತದೆ ಎಂದು ನ್ಯಾಯಾಲಯ ವಿವರಿಸಿದೆ. ಅಪ್ಪಂ, ಅಡಿಯಾ ಸಿಸ್ಟಮ್ ತುಪ್ಪ, ಅರವಣ, ವಿಭೂತಿ, ಕುಂಕುಮ ಮತ್ತು ಇತರ ಪ್ರಸಾದಗಳ ಮಾರಾಟದಿಂದ ಬರುವ ಎಲ್ಲಾ ಆದಾಯವನ್ನು ಜವಾಬ್ದಾರಿಯುತ ಹಾಗೂ ಪಾರದರ್ಶಕ ಆರ್ಥಿಕ ಮತ್ತು ಆಡಳಿತಾತ್ಮಕ ಚೌಕಟ್ಟಿನೊಳಗೆ ತರುವಂತೆ ನ್ಯಾಯಾಲಯ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ ೨೭ಕ್ಕೆ ನಿಗದಿಪಡಿಸಲಾಗಿದೆ.
ಸಂಪಾದಕೀಯ ನಿಲುವುಕೇರಳ ರಾಜ್ಯದ ಹಿಂದೂಗಳ ದೇವಸ್ಥಾನಗಳು ದೇವಸ್ವಂ ಮಂಡಳಿಗಳ ಮೂಲಕ ಸರಕಾರೀಕರಣಗೊಂಡಿರುವುದರಿಂದಲೇ ಇಂತಹ ಅವ್ಯವಹಾರಗಳು ನಡೆಯುತ್ತಿವೆ. ದೇವಸ್ಥಾನಗಳ ಸರಕಾರೀಕರಣವನ್ನು ರದ್ದುಪಡಿಸಿ ಭಕ್ತರ ಕೈಗೆ ನೀಡುವುದೇ ಏಕೈಕ ಪರಿಹಾರವಾಗಿದೆ. ಈ ವಿಷಯದಲ್ಲಿ ಕೇಂದ್ರ ಸರಕಾರವು ಈಗ ಗಮನಹರಿಸುವುದು ಅತ್ಯಗತ್ಯ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ