‘ಮಾಲ್’ಗಳು : ಲಾಭವೋ ನಷ್ಟವೋ ?

ಎ.ಐ. ನಿರ್ಮಿತ ಚಿತ್ರ

 

೨೧ ನೇ ಶತಮಾನದಲ್ಲಿ ಜೀವನಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಿ ಸುಲಭವಾಗಿದೆ. ಅನೇಕ ಸುಖಸೌಲಭ್ಯಗಳು ಲಭ್ಯವಾದವು. ಅದರ ಒಂದು ಭಾಗ ಅಂದರೆ ‘ಮಾಲ್’. ‘ಮಾಲ್’ ಎಂದರೆ ಎಲ್ಲಾ ರೀತಿಯ ಸರಕುಗಳು ಒಂದೇ ಕಟ್ಟಡದಲ್ಲಿ ಲಭ್ಯವಿರುವಂತಹ ಸ್ಥಳ. ಇದರಿಂದ ಗ್ರಾಹಕರು ಹಲವು ಕಡೆ ಹೋಗಬೇಕಾಗಿಲ್ಲ. ಇದರ ಪ್ರಯೋಜನಗಳು ಇವೆ ಹಾಗೆಯೇ ಅನಾನುಕೂಲಗಳೂ ಇವೆ ಎಂದು ಹೇಳಬೇಕಾಗುವುದು. ಮೊದಲು ಮಾರುಕಟ್ಟೆಯಿಂದ ಸಾಮಾನುಗಳನ್ನು ಪಟ್ಟಿ ಮಾಡಿ ಅದರಂತೆ ಖರೀದಿಸಲಾಗುತ್ತಿತ್ತು. ಆದ್ದರಿಂದ ಯಾವುದೇ ಹೆಚ್ಚುವರಿ ಖರೀದಿ ಆಗುತ್ತಿರಲಿಲ್ಲ; ಆದರೆ ಇಂದಿನ ದಿನಗಳಲ್ಲಿ ಶ್ರೀಮಂತರ ಜೊತೆಗೆ ಬಡವರೂ ‘ಮಾಲ್’ ಆಕರ್ಷಣೆಗೆ ಒಳಗಾಗಿದ್ದಾರೆ. ಆದ್ದರಿಂದ ಆರ್ಥಿಕ ಸ್ಥಿತಿ ಇಲ್ಲದಿದ್ದರೂ ಅನಗತ್ಯ ಖರ್ಚು ಮಾಡಲಾಗುತ್ತಿದೆ. ನೀವು ‘ಮಾಲ್’ಅನ್ನು ಪ್ರವೇಶಿಸಿದ ತಕ್ಷಣ, ವಿವಿಧ ಆಕರ್ಷಕ ರಿಯಾಯಿತಿಗಳು ನಿಮ್ಮ ಗಮನವನ್ನು ಸೆಳೆಯುತ್ತವೆ. ನಾವು ಅದರ ಮಾಯೆಗೆ ಬಲಿಯಾಗಿ ಅಗತ್ಯವಿಲ್ಲದಿದ್ದರೂ ಹೆಚ್ಚು ಖರೀದಿಸುತ್ತೇವೆ. ‘ಮಾಲ್’ನಲ್ಲಿ ಮಕ್ಕಳನ್ನು ಆಕರ್ಷಿಸುವ ಹಲವು ವಸ್ತುಗಳು, ಟ್ಯಾಬ್ಲೆಟ್‌ಗಳು, ಬಿಸ್ಕೆಟ್‌ಗಳು, ಆಟಿಕೆಗಳು ಇರುತ್ತವೆ ಮತ್ತು ಈ ವಸ್ತುಗಳನ್ನು ಖರೀದಿಸಲು ತಮ್ಮ ಪೋಷಕರನ್ನು ಒತ್ತಾಯಿಸುತ್ತಾರೆ. ರಿಯಾಯಿತಿಯಲ್ಲಿ ಖರೀದಿಸಿದ ವಸ್ತುಗಳ ಮುಕ್ತಾಯ ದಿನಾಂಕವು ಶೀಘ್ರದಲ್ಲೇ ಕೊನೆ ಗೊಳ್ಳಲಿದೆ ಎಂದು ನಂತರ ಅರಿವಾಗುತ್ತದೆ. ‘ಮಾಲ್’ಗಳಲ್ಲಿ ಉದ್ದೇಶ ಪೂರ್ವಕವಾಗಿ ಯಾವುದೇ ಸಣ್ಣ ಗಾತ್ರದ ವಸ್ತುಗಳನ್ನು ಇಟ್ಟಿರುವುದಿಲ್ಲ. ಹಾಗಾಗಿ ಅಗತ್ಯವಿಲ್ಲದಿದ್ದರೂ ದೊಡ್ಡ ಪ್ಯಾಕ್ ಅನ್ನು ಖರೀದಿಸಲಾಗುತ್ತದೆ, ವಸ್ತುಗಳ ತೂಕವನ್ನು ಬರೆದು ಚೀಲಗಳನ್ನು ತಯಾರಿಸಿಟ್ಟಿರಲಾಗುತ್ತದೆ. ಅದರಲ್ಲಿ ಹೆಚ್ಚುಕಡಿಮೆ ಇದ್ದರೂ ಗೊತ್ತಾಗುವುದಿಲ್ಲ.

ಸಾಮಾನ್ಯವಾಗಿ, ನೀವು ಮಾಲ್‌ನಲ್ಲಿ ಕಾರ್ಡ್ ಮೂಲಕ ಖರೀದಿಗಳನ್ನು ಮಾಡಿದರೆ, ಕೆಲವು ಆಕರ್ಷಕ ರಿಯಾಯಿತಿಗಳು ಸಿಗುತ್ತವೆ. ಹಾಗಾಗಿ ಕಾರ್ಡ್ ಮೂಲಕ ಖರೀದಿ ವಹಿವಾಟು ನಡೆಸುವ ಸೆಳೆತದಿಂದ ಜೇಬಿನಲ್ಲಿ ಎಷ್ಟು ಹಣವಿದೆ ? ಈ ಬಗ್ಗೆ ಚಿಂತೆ ಇಲ್ಲದ ಕಾರಣ ಅನಾವಶ್ಯಕ ಖರೀದಿಗಳಾಗುತ್ತವೆ. ಅಲ್ಲಿ, ಕೆಲವು ನಿಗದಿತ ಸಂಸ್ಥೆಗಳ ಸರಕುಗಳನ್ನು ಇರಿಸಲಾಗುತ್ತದೆ, ಅವುಗಳಲ್ಲಿ ಹೆಚ್ಚಿನವು ವಿದೇಶಿ ಸಂಸ್ಥೆಗಳಿರುವ ಸಾಧ್ಯತೆಯಿರುತ್ತದೆ. ಇದರಿಂದ, ಸ್ವದೇಶಿ ಉದ್ಯಮಿಗಳು ಮತ್ತು ಸಣ್ಣ ವ್ಯಾಪಾರಿಗಳು ಭಾರಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದ ಸಣ್ಣ ಕಿರಾಣಿ ವ್ಯಾಪಾರಿಗಳ ವ್ಯಾಪಾರದಲ್ಲಿ ಇಳಿಕೆಯಾಗಿ ಅವರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಹಾಗಾಗಿ ಇದನ್ನೆಲ್ಲಾ ನೋಡಿದ ಮೇಲೆ ‘ಮಾಲ್’ ಅನ್ನು ವಾಖ್ಯಾನಿಸುವಾಗ ‘ಅನಾವಶ್ಯಕ ಖರ್ಚಿಗೆ ಖಚಿತವಾದ ಸ್ಥಳ’ ಎಂಬ ಯೋಚನೆ ಬರುತ್ತದೆ ! ಹಾಗಾಗಿ ಮುಂಬರುವ ಆಪತ್ಕಾಲೀನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಮಗೆ ಎಷ್ಟು ಬೇಕು ಅಷ್ಟನ್ನೇ ಖರೀದಿಸುವ ಅಭ್ಯಾಸವನ್ನು ಮಾಡಿಕೊಳ್ಳೋಣ !

– ಸೌ. ರಮಾ ದೇಶಮುಖ, ನಾಗಪುರ