
೧. ಮಸೀದಿಗಳು ಮತ್ತು ಮದರಸಾಗಳ ಕುರಿತು ಮಾಹಿತಿ ಸಂಗ್ರಹ ಅಭಿಯಾನ
ಜನವರಿ ೨೦೨೬ ರ ನಡುವಿನ ಸಮಯದಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಸಂಪೂರ್ಣ ಪ್ರದೇಶದ ಮಸೀದಿಗಳು ಮತ್ತು ಮದರಸಾಗಳಿಗೆ ಹಲವಾರು ಪುಟಗಳ ಪ್ರಶ್ನಾವಳಿಗಳನ್ನು ನೀಡಿದ್ದಾರೆ. ಅವರು ಪಂಥೀಯ ಸಂಯೋಜನೆ (ಉದಾ. ಬರೇಲವಿ, ದೇವಬಂದಿ), ಆಸನ ಸಾಮರ್ಥ್ಯ, ಭೂಮಿಯ ಮಾಲೀಕತ್ವದ ದಾಖಲೆ ಮತ್ತು ನಿರ್ಮಾಣ ವೆಚ್ಚ, ಮಾಸಿಕ ವೆಚ್ಚದ ವಿವರ, ಹಾಗೆಯೇ ನಿಧಿಯ ನಿರ್ದಿಷ್ಟ ಮೂಲಗಳ ಮಾಹಿತಿ, ಇಮಾಮ, ಮುಯಜ್ಜಿನ (ಅಜಾನ ನೀಡುವವರು) ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರ ವಿವರವಾದ ಮಾಹಿತಿ ಸೇರಿದಂತೆ ಅವರ ಸಂಚಾರವಾಣಿಯ ‘ಐ.ಎಮ್.ಇ.ಐ.’ ಸಂಖ್ಯೆ, ಸಾಮಾಜಿಕ ಮಾಧ್ಯಮಗಳ ಖಾತೆ, ಬ್ಯಾಂಕ್ ಖಾತೆಗಳ ವಿವರ ಹಾಗೂ ಪ್ರಯಾಣದ ಇತಿಹಾಸ ಇತ್ಯಾದಿ ಮಾಹಿತಿಗಳನ್ನು ಕೋರಲಾಗಿದೆ.
೨. ಪೊಲೀಸರು ನೀಡಿರುವ ಕಾರಣಗಳು
‘ರಾಜಕೀಯ ಪ್ರಚಾರಕ್ಕಾಗಿ ಅಥವಾ ಪಾಕಿಸ್ತಾನ ಪರ ರ‍್ಯಾಲಿಗಳಿಗಾಗಿ ಧಾರ್ಮಿಕ ಸಂಸ್ಥೆಗಳ ದುರ್ಬಳಕೆಯಾಗುತ್ತಿಲ್ಲ ಎಂಬುದನ್ನು ಖಾತ್ರಿ ಮಾಡಲು; ‘ವೈಟ್ ಕಾಲರ್’ (ಸುಶಿಕ್ಷಿತ) ಭಯೋತ್ಪಾದಕ ಗುಂಪುಗಳಿಂದ ಮಸೀದಿಗಳ ಬಳಕೆಯನ್ನು ತಡೆಯುವುದು (ಮಸೀದಿಗಳನ್ನು ಕೇಂದ್ರವಾಗಿಸಿಕೊಂಡು ಕಾರ್ಯಾಚರಿಸುವ ’ವೈಟ್ ಕಾಲರ್’ ಭಯೋತ್ಪಾದಕ ಜಾಲಗಳಿಗೆ ಕಡಿವಾಣ ಹಾಕುವುದು) ಮತ್ತು ಕಟ್ಟರಪಂಥೀಯರ ಪ್ರಭಾವದ ಮೇಲೆ ನಿರಂತರ ನಿಗಾ ಇಡುವುದು ಮತ್ತು ಸಂಸ್ಥೆಗಳಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಅಧಿಕೃತ ಮಾಹಿತಿ ಸಂಗ್ರಹದಲ್ಲಿರುವ (ಆಚಿಣಚಿbಚಿse) ಕೊರತೆಯನ್ನು ನೀಗಿಸುವುದು, ಈ ಆಡಳಿತಾತ್ಮಕ ಪ್ರಕ್ರಿಯೆಯ ಉದ್ದೇಶವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಸ್ಥಾನಗಳು ಸಂಪೂರ್ಣ ಸರಕಾರೀಕರಣಗೊಂಡಿದ್ದರೂ, ಸರಕಾರದ ಮೇಲೆ ಅಪನಂಬಿಕೆಯಿಟ್ಟಿರುವ ಮೆಹಬೂಬಾ ಮುಫ್ತಿ !
ಮೆಹಬೂಬಾ ಮುಫ್ತಿಯವರು ದೇವಸ್ಥಾನಗಳೆಡೆಗೆ ಬೆರಳು ತೋರಿಸುತ್ತಾ ಮಸೀದಿ ಮತ್ತು ದೇವಸ್ಥಾನಗಳ ಹೋಲಿಕೆ ಮಾಡಲು ಪ್ರಯತ್ನಿಸಿದ್ದಾರೆ. ಅವರು ಮಾತನಾಡುತ್ತಾ, ಸರಕಾರಕ್ಕೆ ನಿಜವಾಗಿಯೂ ಧಾರ್ಮಿಕ ಮುಖಂಡರ ಮೇಲೆ ನಿಗಾ ಇಡಬೇಕೆಂದಿದ್ದರೆ, ಅದನ್ನು ದೇವಸ್ಥಾನದಿಂದಲೇ ಏಕೆ ಪ್ರಾರಂಭಿಸಬಾರದು ? ಯಾವ ಅರ್ಚಕರು ಎಲ್ಲಿ ಸೇವೆ ಮಾಡುತ್ತಾರೆ ? ಗರ್ಭಗುಡಿಯಲ್ಲಿ ಯಾರಿಗೆ ಪ್ರವೇಶವಿದೆ ? ಮತ್ತು ಅದಕ್ಕಾಗಿ ಎಷ್ಟು ಹಣ ಪಾವತಿಸಲಾಗುತ್ತದೆ ? ಎನ್ನುವುದನ್ನು ಪರಿಶೀಲನೆ ಮಾಡಬೇಕು. ಮಸೀದಿಯು ಎಲ್ಲ ಮುಸಲ್ಮಾನರಿಗಾಗಿ ಇರುತ್ತದೆ. ಯಾವುದೇ ಆರಾಧಕರಿಗೆ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ. ದೇವಸ್ಥಾನದಲ್ಲಿ ಪ್ರವೇಶಕ್ಕಾಗಿ ಎಷ್ಟು ಹಣವನ್ನು ಸಂಗ್ರಹಿಸಲಾಗುತ್ತದೆಯೆಂದು ಪರಿಶೀಲನೆ ಮಾಡಬೇಕು. ಏಕೆಂದರೆ ನಮ್ಮ ಮಸೀದಿಗಳಲ್ಲಿ ಇಂತಹದ್ದೇನೂ ಇಲ್ಲ’ ಎಂದು ಹೇಳಿದ್ದಾರೆ.
ದೇಶದಲ್ಲಿರುವ ದೊಡ್ಡ ಪ್ರಮಾಣದಲ್ಲಿ ಹಣ ನೀಡುವ ಬಹುತೇಕ ಎಲ್ಲ ದೇವಸ್ಥಾನಗಳೂ ಸರಕಾರೀಕರಣಗೊಂಡಿವೆಯೆನ್ನುವ ಮಾಹಿತಿಯೂ ಮೆಹಬೂಬಾ ಮುಫ್ತಿಯವರಿಗೆ ಇಲ್ಲವೆನಿಸುತ್ತದೆ.
೩. ಮುಸಲ್ಮಾನ ಸಂಘಟನೆಗಳು ಮತ್ತು ನಾಯಕರಿಂದ ಮಾಹಿತಿ ಸಂಗ್ರಹದ ಬಗ್ಗೆ ಆಕ್ಷೇಪಗಳು
ಸರಕಾರದ ಈ ಕ್ರಮದ ಕುರಿತು ರಾಜ್ಯದ ಮುಸಲ್ಮಾನ ನಾಯಕರ ಮತ್ತು ಸಂಘಟನೆಗಳ ಆಕ್ಷೇಪವಿದೆ. ಆ ಆಕ್ಷೇಪಗಳ ಅಂತರ್ಗತ ಅಂಶಗಳು ಗಮನ ಹರಿಸುವಂತಹದ್ದಾಗಿವೆ.
ಅ. ಸಂಸದ ರೂಹುಲ್ಲಾ (ನ್ಯಾಶನಲ್ ಕಾನ್ಫರೆನ್ಸ್) : ದೇಶವನ್ನು ನಡೆಸುತ್ತಿರುವ ಒಂದು ನಿರ್ದಿಷ್ಟ ಬಲಪಂಥೀಯ ವಿಚಾರಧಾರೆಯ ಯೋಜನೆಯಿದು. ಇತರ ಧರ್ಮಗಳನ್ನು ನಿಯಂತ್ರಿಸುವ ಅದರ ಸ್ಪಷ್ಟ ಬಯಕೆ ಇಲ್ಲಿ ಕಂಡು ಬರುತ್ತಿದೆ.
ಆ. ಮಿರವಾಯಿಜ ಉಮರ ಫಾರೂಕ ಇವರ ನಾಯಕತ್ವದ ಮುತ್ತಹಿದಾ ಮಜಲಿಸ ಉಲೇಮಾ (ಎಮ್.ಎಮ್.ಯು) : ಉಪಾಸನೆಯ ಸ್ಥಳಗಳು ಮತ್ತು ಆಂತರಿಕ ಧಾರ್ಮಿಕ ವಿಷಯಗಳ ಮೇಲೆ ಅನಿಯಂತ್ರಿತ ನಿಗಾ ಇಡುವಂತಿಲ್ಲ.
ಇ. ಮೆಹಬೂಬಾ ಮುಫ್ತಿ, ಮಾಜಿ ಮುಖ್ಯಮಂತ್ರಿ ಮತ್ತು ಅಧ್ಯಕ್ಷೆ, ಪೀಪಲ್ಸ ಡೆಮಾಕ್ರೆಟಿಕ ಪಾರ್ಟಿ (ಪಿಡಿಪಿ) : ಇದು ಮುಸಲ್ಮಾನರನ್ನು ಅವರ ಧರ್ಮದಿಂದ ದೂರ ಮಾಡುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ.
ಈ. ಸಜ್ಜಾದ ಗನಿ ಲೋನ, ಅಧ್ಯಕ್ಷರು, ಜಮ್ಮು ಮತ್ತು ಕಾಶ್ಮೀರ ಪೀಪಲ್ಸ ಕಾನ್ಫರನ್ಸ : ಈ ಜಾತ್ಯತೀತ ರಚನೆಯ ಮೇಲಿನ ದಾಳಿಯಾಗಿದೆ. ಇದು ನಾಗರಿಕರ ಮೂಲಭೂತ ಹಕ್ಕುಗಳನ್ನು ಸ್ಪಷ್ಟವಾಗಿ ದುರುಪಯೋಗಪಡಿಸಿಕೊಳ್ಳುವ ಸಂಪೂರ್ಣ ಖಂಡನೀಯ ಮತ್ತು ಅಮಾನವೀಯ ಕ್ರಮವಾಗಿದೆ.
ಉ. ‘ಅಲ್ ಜಜೀರಾ’ ವಾರ್ತಾವಾಹಿನಿ : ಸರಕಾರವು ಧಾರ್ಮಿಕ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದೆ ಎಂದು ಕಾಶ್ಮೀರದ ನಾಗರಿಕರ ಭಾವನೆಯಾಗಿದೆ.
ಊ. ಪಾಕಿಸ್ತಾನ : ಧಾರ್ಮಿಕ ವಿಷಯಗಳಲ್ಲಿ ಮಾಡಲಾಗಿರುವ ಈ ಬಹಿರಂಗ ಹಸ್ತಕ್ಷೇಪವು ಧಾರ್ಮಿಕ ಸ್ವಾತಂತ್ರ್ಯ ಮತ್ತು ನಂಬಿಕೆಯ ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಅಷ್ಟೇ ಅಲ್ಲದೆ, ಆಕ್ರಮಿತ ಪ್ರದೇಶಗಳ ಮುಸಲ್ಮಾನ ಜನಸಂಖ್ಯೆಯನ್ನು ಬೆದರಿಸುವ ಮತ್ತು ಅವರನ್ನು ಮೂಲೆಗುಂಪು ಮಾಡುವ ಮತ್ತೊಂದು ಒತ್ತಡದ ತಂತ್ರವಾಗಿದೆ. ಪೊಲೀಸರು ಭಯೋತ್ಪಾದನೆಯನ್ನು ಹತ್ತಿಕ್ಕಲು ಪ್ರಯತ್ನ ಪ್ರಾರಂಭಿಸಿದ ಕೂಡಲೇ, ‘ಮೂಲಭೂತ ಹಕ್ಕುಗಳ ಉಲ್ಲಂಘನೆ, ಜಾತ್ಯಾತೀತತೆಯ ಮೇಲೆ ಆಘಾತ ಮತ್ತು ಧಾರ್ಮಿಕ ವಿಷಯಗಳಲ್ಲಿ ಸರಕಾರದ ಹಸ್ತಕ್ಷೇಪ’ ಎಂದು ಕುಂಟುನೆಪಗಳನ್ನು ಹೇಳಲಾಗುತ್ತದೆಯೆಂದು ಗಮನಿಸಬೇಕು. ಸರಕಾರಿ ಪ್ರಯತ್ನಗಳಿಗೆ ಯಾವ ರೀತಿಯಲ್ಲಿ ಬಣ್ಣ ಬಳಿಯಲಾಗುತ್ತದೆ ಎನ್ನುವುದನ್ನು ಇಲ್ಲಿ ಗಮನಕ್ಕೆ ತೆಗೆದುಕೊಳ್ಳಬೇಕು.
ನ್ಯಾಯಾಲಯದ ಆದೇಶದ ಮೇರೆಗೆ ಮಸೀದಿಯ ಸಮೀಕ್ಷೆ ನಡೆಸಿದ್ದಕ್ಕೆ ಗಲಭೆ
ವರ್ಷ ೨೦೨೪ ಅಂತ್ಯದಲ್ಲಿ ಉತ್ತರ ಪ್ರದೇಶದ ಸಂಭಲ್ ನಲ್ಲಿರುವ ಶಾಹಿ ಜಾಮಾ ಮಸೀದಿಯಂತಹ ಕೆಲವು ನಿರ್ದಿಷ್ಟ ಮಸೀದಿಗಳ ಐತಿಹಾಸಿಕ ಸತ್ಯಾಸತ್ಯತೆ ಯನ್ನು ಪರಿಶೀಲಿಸಲು ನ್ಯಾಯಾಲಯದ ಆದೇಶದಂತೆ ಸಮೀಕ್ಷೆ ನಡೆಸಲಾಯಿತು. ಇದರಿಂದ ಸ್ಥಳೀಯವಾಗಿ ಉದ್ವಿಗ್ನತೆ ಮತ್ತು ಅಸಮಾಧಾನ ಉಂಟಾಗಿ ಗಲಭೆಗಳು ನಡೆದವು. ಈ ಗಲಭೆಗೆ ಕಾರಣ ಯಾರು ಎಂಬ ಬಗ್ಗೆ ಮಾಧ್ಯಮಗಳಲ್ಲಿ ಈಗಾಗಲೇ ಚರ್ಚೆಯಾಗಿದೆ.
೪. ಇಸ್ಲಾಮಿಕ ದೇಶಗಳಲ್ಲಿನ ಮಸೀದಿಯ ಮೇಲಿನ ನಿಯಂತ್ರಣ ಏನು ಹೇಳುತ್ತದೆ ?
ಈ ಎಲ್ಲ ಹಿನ್ನೆಲೆಯಲ್ಲಿ ಕಾಶ್ಮೀರದಂತೆಯೆ ಆದರೆ ಭಯೋತ್ಪಾದನೆ ಇಲ್ಲದಿರುವ ಹಾಗೂ ಮುಸಲ್ಮಾನ ಆಡಳಿತಾಧಿಕಾರಿಗಳು ಇರುವ ಮತ್ತು ಅನ್ಯ ಧರ್ಮದವರು ಅಲ್ಪಸಂಖ್ಯಾತರಾಗಿರುವ ಈಜಿಪ್ತ, ಸೌದಿ ಅರೇಬಿಯಾ, ಜೋರ್ಡನ, ಅಲ್ಜಿರಿಯಾ, ಕುವೈತ, ಬಹರೀನ, ಟರ್ಕಿ, ಮಲೇಶಿಯಾಗಳಂತಹ ದೇಶಗಳಲ್ಲಿ ಆಯಾ ಸ್ಥಳಗಳ ಮಸೀದಿಗಳ ಮೇಲೆ ಯಾವ ರೀತಿ ನಿಯಂತ್ರಣ ಇರುತ್ತದೆ ಎನ್ನುವುದನ್ನು ಅಧ್ಯಯನ ಮಾಡುವುದು ಆವಶ್ಯಕವಾಗಿದೆ.
೫. ಇತರ ಮುಸಲ್ಮಾನ ರಾಷ್ಟ್ರಗಳ ಮಸೀದಿಗಳಲ್ಲಿನ ಶುಕ್ರವಾರದ ಪ್ರವಚನಗಳ ಮೇಲೆ ಸರಕಾರದ ನಿಯಂತ್ರಣ
ಈಜಿಪ್ಟ, ಸೌದಿ ಅರೇಬಿಯಾ, ಜೋರ್ಡಾನ, ಅಲ್ಜಿರಿಯಾ, ಕುವೈತ, ಬಹರೇನ, ಟರ್ಕಿ, ಮಲೇಶಿಯಾ, ಸಿಂಗಾಪುರ ಈ ದೇಶಗಳಲ್ಲಿ ಮುಲ್ಲಾ ಮೌಲವಿ ಮುಂತಾದ ಉಪದೇಶಕರ ಮಾಧ್ಯಮದಿಂದ ವಿಶೇಷವಾಗಿ ಶುಕ್ರವಾರ ನೀಡುವ ಪ್ರವಚನಗಳ ಮೇಲೆ (ಖುತಬಾ) ಕಟ್ಟುನಿಟ್ಟಿನ ನಿಯಂತ್ರಣ ಇಡಲಾಗುತ್ತದೆ. ಪ್ರವಚನದಲ್ಲಿ ಏನು ಹೇಳಬೇಕು ? ಮತ್ತು ಏನು ಹೇಳಬಾರದು. ಹಾಗೂ ಸರಕಾರದ ನೀತಿಗಳನ್ನು ಹೇಗೆ ಪ್ರಸಾರ ಮಾಡಬೇಕು ಮತ್ತು ಮೂಲಭೂತವಾದ ಹರಡುವುದನ್ನು ತಡೆಗಟ್ಟುವುದು ಇತ್ಯಾದಿಗಳಿಗೆ ನಿಯಂತ್ರಣವಿರುತ್ತದೆ. ಇವುಗಳಿಗಾಗಿ ಸರಕಾರದಿಂದ ಮಾರ್ಗದರ್ಶಿ ಅಂಶಗಳನ್ನು ನೀಡಲಾಗುತ್ತದೆ. ಈಜಿಪ್ತನಲ್ಲಿ ಎಲ್ಲ ಇಮಾಮಗಳಿಗೆ ಪ್ರತಿವಾರ ಒಂದು ವಿಶಿಷ್ಟ ವಿಷಯದ ಮೇಲೆ ಎಲ್ಲ ಒಂದೇ ರೀತಿ ಮತ್ತು ಮೊದಲೇ ಬರೆಯಲ್ಪಟ್ಟ ಖುತಬಾ ನೀಡಲು ತಿಳಿಸಲಾಗುತ್ತದೆ. ಅಲ್ಜೀರಿಯಾದಲ್ಲಿ ಪ್ರವಚನದಿಂದ ರಾಷ್ಟ್ರೀಯ ಏಕತೆ, ಸುರಕ್ಷಾ ಮತ್ತು ಸಾಮಾಜಿಕ ಸಂಘರ್ಷ ತಡೆಯುವ ಬಗ್ಗೆ ಗಮನಹರಿಸಲು ಸೂಚಿಸಲಾಗುತ್ತದೆ.

ಕುವೈತ ಮತ್ತು ಬಹರಿನನಲ್ಲಿ ಸರಕಾರದ ಪರವಾಗಿ ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಲು ಮತ್ತು ಕೋಮುವಾದವನ್ನು ತಡೆಯುವ ಉಪದೇಶಗಳನ್ನು ಪ್ರಸಾರ ಮಾಡಲಾಗುತ್ತದೆ. ಸಿಂಗಾಪುರದಲ್ಲಿನ ‘ಇಸ್ಲಾಮಿಕ ಧಾರ್ಮಿಕ ಪರಿಷತ’ (ಎಮ್.ಯು.ಆಯ್.ಎಸ್.) ಮೂಲಕ ಸರಕಾರವು ಶುಕ್ರವಾರದ ಪ್ರವಚನಗಳನ್ನು ರಾಜ್ಯದ ನೀತಿಗಳನ್ನು ಪ್ರಸಾರ ಮಾಡಲು ಮತ್ತು ಜಾತ್ಯತೀತ, ಬಹುಸಂಸ್ಕೃತಿಯ ದೃಷ್ಟಿಕೋನಕ್ಕೆ ಪೂರಕವಾದ ‘ಸಿಂಗಾಪುರಿ ಮುಸಲ್ಮಾನ’ ಪ್ರತಿಬಿಂಬವನ್ನು ನಿರ್ಮಿಸಲು ಬಳಸಿಕೊಳ್ಳುತ್ತದೆ. ತಜಾಕಿಸ್ತಾನ, ತುರ್ಕಮೆನಿಸ್ತಾನ ಮತ್ತು ಉಜ್ಬೇಕಿಸ್ತಾನ ಇಲ್ಲಿ ಕೆಲವು ಸಂದರ್ಭಗಳಲ್ಲಿ ಚಿತ್ರೀಕರಣವನ್ನೂ ಮಾಡಲಾಗುತ್ತದೆ. ಇಸ್ಲಾಮಿಕ ದೇಶಗಳಲ್ಲಿಯೂ ಮಸೀದಿಗಳ ಮೇಲೆ ಇಂತಹ ನಿಯಮಗಳು ಅನ್ವಯವಾಗಲು ಕಾರಣವೇನು ? ಎಂದು ಸಾಮಾನ್ಯ ಜನರು ಆಲೋಚಿಸಬೇಕು. ಮಸೀದಿಯ ಪ್ರವಚನಗಳಲ್ಲಿ ಏನನ್ನು ಹೇಳಬೇಕು ಎನ್ನುವ ವಿಷಯದಲ್ಲಿಯೂ ಈ ದೇಶಗಳಲ್ಲಿ ಪೂರ್ಣ ಸ್ವಾತಂತ್ರ್ಯವಿಲ್ಲ.
೬. ಮಸೀದಿಗಳ ಮೇಲೆ ಸರಕಾರಿ ನಿಯಂತ್ರಣವೆಂದರೆ ಧರ್ಮದ ಮೇಲಿನ ಆಕ್ರಮಣ ಎಂದು ವಿದೇಶಿ ಮುಸಲ್ಮಾನರು ಹೇಳುತ್ತಾರೆಯೇ ?
ವಿದೇಶಗಳ ಮಸೀದಿಗಳಲ್ಲಿನ ಶುಕ್ರವಾರದ ಧರ್ಮೋಪದೇಶಗಳ ಮೇಲೆ ಅಲ್ಲಿನ ಸರಕಾರಗಳು ಇಷ್ಟೊಂದು ನಿಯಂತ್ರಣ ಹೊಂದಿರುವಾಗ ಇತರ ವಿಷಯಗಳಲ್ಲಿನ ನಿಯಂತ್ರಣ ಎಷ್ಟಿರಬಹುದು, ಎಷ್ಟೆಲ್ಲ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಎಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂಬುದರ ಕುರಿತು ಯೋಚಿಸಬೇಕು ಮತ್ತು ಈ ಪರಿಸ್ಥಿತಿಯನ್ನು ಭಾರತದ ಮಸೀದಿ ಮತ್ತು ಮದರಸಾಗಳಿಗೆ ಹೋಲಿಸಿ ನೋಡಬೇಕು. ಈ ಅಧ್ಯಯನ ಮಾಡಿದಾಗ ಕಾಶ್ಮೀರದಲ್ಲಿ ದಶಕಗಳಿಂದ ನಡೆಯುತ್ತಿರುವ ಭಯೋತ್ಪಾದನೆ ಮತ್ತು ಕಳೆದ ಕೆಲವು ಶತಮಾನಗಳಿಂದ ಕಾಶ್ಮೀರಿ ಹಿಂದೂಗಳು ಪದೇಪದೇ ಅಲ್ಲಿಂದ ಯಾಕೆ ಪಲಾಯನ ಮಾಡಬೇಕಾಗುತ್ತಿದೆ ಎಂದು ಅಭ್ಯಾಸ ಮಾಡಬೇಕು. ತದನಂತರ ಕಾಶ್ಮೀರದ ಪೊಲೀಸರಿಗೆ ಈಗ ಕಠಿಣ ಕ್ರಮಗಳನ್ನು ಏಕೆ ಮಾಡಬೇಕಾಗುತ್ತಿದೆಯೆಂದು ಎನ್ನುವ ವಿಚಾರವನ್ನು ಬುದ್ಧಿಜೀವಿಗಳು ಯೋಚಿಸಬೇಕು. ಬಳಿಕ ಇವೆಲ್ಲದರ ಹಿನ್ನೆಲೆಯಲ್ಲಿ ಕಾಶ್ಮೀರಿ ಮುಸಲ್ಮಾನ ನಾಯಕರ ಆಕ್ಷೇಪಗಳನ್ನು ಪರಿಗಣಿಸಬೇಕು.
೭. ಮಸೀದಿಗಳ ಮಾಹಿತಿ ಸಂಗ್ರಹ ಅಂದರೆ ಸಮಾಜದಲ್ಲಿ ತಾರತಮ್ಯ ಎನ್ನುವ ಕಾಶ್ಮೀರಿ ಮುಸಲ್ಮಾನ ನಾಯಕರು
ಹಲವು ದಶಕಗಳಿಂದ ಭಯೋತ್ಪಾದನೆಯ ಅಟ್ಟಹಾಸ ಮುಂದುವರಿಯುತ್ತಿರುವಲ್ಲಿ, ಈ ಭಯೋತ್ಪಾದನೆಯು ಹಿಂದೂ-ಮುಸಲ್ಮಾನ ಎಂದು ಭೇದಭಾವ ಮಾಡಿಯೇ ಮಾಡುತ್ತದೆ ಎಂಬುದಕ್ಕೆ ಈ ಎರಡು ಉದಾಹರಣೆಗಳೇ ಸಾಕು.
ಅ. ೧೯೯೦ ರಲ್ಲಿ ಮಸೀದಿಗಳಿಂದ ‘ಹಿಂದೂಗಳೇ ಧರ್ಮ ಬದಲಾಯಿಸಿ, ಇಲ್ಲವೇ ಕಾಶ್ಮೀರ ಬಿಟ್ಟು ತೊಲಗಿ’ ಎಂದು ಹೇಳಿದ ಬಳಿಕ ರಸ್ತೆ-ರಸ್ತೆಗಳಲ್ಲಿ ಮುಸಲ್ಮಾನ ಸಮುದಾಯದವರ ಆಕ್ರೋಶದ ಘೋಷಣೆಗಳನ್ನು ಕಂಡು ರಾತ್ರೋರಾತ್ರಿ ಲಕ್ಷಾಂತರ ಹಿಂದೂಗಳು ಭಾರತದ ಇತರ ಪ್ರದೇಶಗಳಿಗೆ ವಲಸೆ ಹೋದರು.
ಆ. ಕಳೆದ ವರ್ಷ ಪಹಲಗಾಮನಲ್ಲಿ ಪ್ರವಾಸಿಗರನ್ನು ಕೊಂದ ಹತ್ಯೆಕೋರರು ಹಲ್ಲೆಯ ಮೊದಲು ‘ಯಾರು ಹಿಂದೂಗಳು’ ಎಂದು ಕೇಳಿರುವ ವಿಷಯ ಎಲ್ಲರಿಗೂ ತಿಳಿದಿದೆ.
ಹೀಗಿದ್ದರೂ ಇಲ್ಲಿ ಮಸೀದಿ ಮತ್ತು ಮದರಸಾಗಳ ವಿವರವಾದ ಮಾಹಿತಿಯನ್ನು ಸಂಗ್ರಹಿಸಲು ಪೊಲೀಸರು ಮುಂದಾದಾಗ ಸಮಾಜದಲ್ಲಿ ಭೇದಭಾವ ಮೂಡಿಸಲಾಗುತ್ತಿದೆ ಎಂದು ಮುಸಲ್ಮಾನ ನಾಯಕರಿಂದ ಹೇಳಲಾಗುತ್ತಿದೆ.
ಪಿಡಿಪಿ ಶಾಸಕ ವಹೀದ ಪಾರಾ ಅವರು ಈ ವಿಚಾರಣೆಯಿಂದ ಸಮಾಜದಲ್ಲಿರುವ ಕಂದಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ. ದೇವಸ್ಥಾನಗಳ ಮೇಲೆ ಯಾವುದೇ ರೀತಿಯ ಸರಕಾರಿ ನಿಯಂತ್ರಣ ತರಲು ಪ್ರಯತ್ನಿಸಿದರೂ ಹಿಂದೂಗಳು ಎಂದಿಗೂ ಹೀಗೆ ಹೇಳಿಲ್ಲ. ಇದರಿಂದ ಹಿಂದೂ ಧರ್ಮಾಭಿಮಾನಿಗಳು ಯೋಗ್ಯ ಪಾಠವನ್ನು ಪಡೆಯಬೇಕು ಮತ್ತು ಕಾಶ್ಮೀರದ ಮುಸಲ್ಮಾನ ನಾಯಕರ ಮಾನಸಿಕತೆಯನ್ನು ಅಭ್ಯಸಿಸಬೇಕು.
೮. ಉತ್ತರಪ್ರದೇಶದಲ್ಲಿ ಮಾನ್ಯತೆ ಇಲ್ಲದ ಮದರಸಾಗಳ ಮಾಹಿತಿ ಪಡೆಯುವ ಸರಕಾರದ ಪ್ರಯತ್ನಗಳಿಗೆ ಆಕ್ಷೇಪ
೨೦೨೨ ರಿಂದ ೨೦೨೫ ಅವಧಿಯಲ್ಲಿ ಉತ್ತರಪ್ರದೇಶ ಸರಕಾರವು ರಾಜ್ಯಾದ್ಯಂತ ನೋಂದಣಿಯಾಗದ ಮದರಸಾಗಳ ಸಮೀಕ್ಷೆಯನ್ನು ನಡೆಸಿತು. ಈ ಸಮೀಕ್ಷೆಯು ಮುಖ್ಯವಾಗಿ ಮೂಲ ಸೌಕರ್ಯ, ವಿದ್ಯಾರ್ಥಿಗಳ ನೋಂದಣಿ ಮತ್ತು ಪಠ್ಯಕ್ರಮದ ಮೇಲೆ ಕೇಂದ್ರೀಕೃತವಾಗಿತ್ತು. ಆದಾಯದ ಮೂಲ ಮತ್ತು ಸ್ವಯಂಸೇವಾ ಸಂಸ್ಥೆಗಳೊಂದಿಗಿನ ಸಂಬಂಧವನ್ನು ಬಹಿರಂಗಪಡಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಅಖಿಲ ಭಾರತ ಮುಸಲ್ಮಾನ ವೈಯಕ್ತಿಕ ಕಾನೂನು ಮಂಡಳಿ ಮತ್ತು ಜಮಿಯತ ಉಲೇಮಾ ಎ ಹಿಂದ್ ನಂತಹ ಸಂಸ್ಥೆಗಳು ಇದನ್ನು ಬಲವಾಗಿ ವಿರೋಧಿಸಿದವು. ‘ಎ.ಐ.ಎಂ.ಐ.ಎಂ.’ ಮುಖ್ಯಸ್ಥ ಅಸಾದುದ್ದೀನ ಓವೈಸಿ ಕೂಡ ಇದನ್ನು ಟೀಕಿಸಿದ್ದಾರೆ.
೯. ಮುಸಲ್ಮಾನ ಮತ್ತು ಹಿಂದೂಗಳ ಪ್ರಾರ್ಥನಾ ಮಂದಿರಗಳ ಬಗೆಗಿನ ಮಾನಸಿಕತೆಯ ತುಲನೆ
ಹಿಂದೂಗಳು ದೇವಸ್ಥಾನಗಳ ಸರಕಾರೀಕರಣದ ವಿರುದ್ಧ ಪ್ರಾರಂಭದಲ್ಲಿ ಎಂದೂ ಧ್ವನಿ ಎತ್ತಲಿಲ್ಲ. ಸರಕಾರವು ದೇವಸ್ಥಾನಗಳ ವ್ಯವಸ್ಥೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ ಎಂದು ನಂಬಿದ್ದರು. ಸರಕಾರವು ದಶಕಗಳ ಕಾಲ ದೇವಸ್ಥಾನಗಳ ಮೇಲೆ ಅಧಿಕಾರ ನಡೆಸಿತು. ಇತ್ತೀಚಿನ ವರ್ಷಗಳಲ್ಲಿ ಸರಕಾರೀಕರಣಗೊಂಡ ದೇವಸ್ಥಾನಗಳಲ್ಲಿ ಕಳ್ಳತನ, ಭ್ರಷ್ಟಾಚಾರ ಮತ್ತು ದೇವಸ್ಥಾನದ ಭೂಮಿಯನ್ನು ಕಬಳಿಸುವ ಪ್ರಕರಣಗಳು ಬೆಳಕಿಗೆ ಬಂದಾಗ, ಹಿಂದೂಗಳ ಕೆಲವು ಸಣ್ಣ ಸಣ್ಣ ದೇವಸ್ಥಾನಗಳು ಮತ್ತು ಧರ್ಮಾಭಿಮಾನಿಗಳು ಧ್ವನಿ ಎತ್ತಲು ಪ್ರಾರಂಭಿಸಿದರು. ಎಲ್ಲಾ ಪಕ್ಷಗಳ ಹಿಂದೂ ನಾಯಕರು ಸರಕಾರೀಕರಣದ ವಿರುದ್ಧ ಎಷ್ಟು ಧ್ವನಿ ಎತ್ತಿದ್ದಾರೆ ? ಇದನ್ನು ಎರಡು ಸಮುದಾಯಗಳ ನಡುವೆ ಕಂದಕ ಸೃಷ್ಟಿಸುವ ಪ್ರಯತ್ನ ಎಂದು ಎಂದಾದರೂ ಕರೆದಿದ್ದಾರೆಯೇ? ಸಂವಿಧಾನದ ಉಲ್ಲಂಘನೆ ಅಥವಾ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣ ಎಂದು ಹೇಳಿದ್ದಾರೆಯೇ ? ಇಲ್ಲಿಯೇ ಎರಡು ಸಮುದಾಯಗಳ ನಡುವಿನ ವ್ಯತ್ಯಾಸವನ್ನು ನಾವು ಗುರುತಿಸಬೇಕು.
– ಆಧುನಿಕ ವೈದ್ಯ (ಡಾ.) ದುರ್ಗೇಶ ಸಾಮಂತ (ವಯಸ್ಸು ೬೫ ವರ್ಷ) ಎಮ್.ಡಿ. (ಮೆಡಿಸಿನ) ಸನಾತನ ಆಶ್ರಮ, ರಾಮನಾಥಿ, ಗೋವಾ (೨೪.೧.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು