ಶ್ರೀಮದ್ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರಿಂದ ಸನಾತನ ಆಶ್ರಮಕ್ಕೆ ಮಂಗಳಮಯ ಭೇಟಿ!

ರಾಮನಾಥಿ (ಗೋವಾ) – ಗೋವಾದ ಅತೀ ಪ್ರಾಚೀನ (550 ವರ್ಷ ಪುರಾತನ) ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೇ ಪೀಠಾಧಿಪತಿ ಮತ್ತು ಶ್ರೀರಾಮನ ನಿಸ್ಸೀಮ ಭಕ್ತರಾದ ಶ್ರೀಮದ್ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಮಂಗಳ ಚರಣಸ್ಪರ್ಶವು ಇಲ್ಲಿನ ಸನಾತನ ಆಶ್ರಮಕ್ಕೆ ಆಯಿತು.

ಈ ಮಂಗಳ ಸಂದರ್ಭದಲ್ಲಿ ಸನಾತನದ ಸಂತ ಪೂ. ಪೃಥ್ವಿರಾಜ ಹಜಾರೆ ಅವರು ಸ್ವಾಮೀಜಿಯವರನ್ನು ಭಾವಪೂರ್ಣವಾಗಿ ಸ್ವಾಗತಿಸಿದರು. ಪೂ. ಸ್ವಾಮೀಜಿಯವರು ಆಶ್ರಮದ ಮೂಲಕ ನಡೆಯುತ್ತಿರುವ ಧರ್ಮ ಪ್ರಸಾರದ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮತ್ತು ಜಿಜ್ಞಾಸೆಯಿಂದ ತಿಳಿದುಕೊಂಡರು. ಆಶ್ರಮವನ್ನು ವೀಕ್ಷಿಸಿದ ನಂತರ ಪೂ. ಸ್ವಾಮೀಜಿಯವರು ಸಾಧಕರಿಗೆ ಈಶಭಕ್ತಿಯ ಮಹತ್ವವನ್ನು ತಿಳಿಸುತ್ತಾ ಅಮೂಲ್ಯ ಮಾರ್ಗದರ್ಶನ ಮಾಡಿದರು.
Param Pujya Shrimad Vidyadhish Teertha Shripad Vader Swamiji, the 24th Peethadhipati of Shri Sansthan Gokarna Partagali Jeevottam Math, graciously visited the Sanatan Sanstha Ashram at #Ramnathi, #Goa. His divine arrival filled the Ashram with spiritual joy and auspiciousness.… pic.twitter.com/0cMUVfNdRT
— Sanatan Sanstha (@SanatanSanstha) February 17, 2026
ಸನಾತನ ಆಶ್ರಮದಲ್ಲಿ ಪೂ. ಸ್ವಾಮೀಜಿಯವರ ದರ್ಶನ ಸಮಾರಂಭ ಹೀಗಿತ್ತು!

1. ಸನಾತನ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಶ್ರೀ. ವೀರೇಂದ್ರ ಮರಾಠೆ ಅವರು ಶ್ರೀ ರಾಮನಾಥ ದೇವಸ್ಥಾನದ ಮಠಕ್ಕೆ ಹೋಗಿ ಪೂ. ಸ್ವಾಮೀಜಿಯವರಿಗೆ ಆಶ್ರಮಕ್ಕೆ ಭೇಟಿ ನೀಡುವಂತೆ ಪ್ರಾರ್ಥಿಸಿದರು.
🙏 With profound reverence, Shri Virendra Marathe, Managing Trustee, Sanatan Sanstha, was blessed with the divine opportunity to meet His Holiness the 24th Peethadhipati of Shri Sansthan Gokarna Partagali Jeevottam Math, Param Pujya Shrimad Vidyadhish Teertha Shripad Vader… pic.twitter.com/JmiDBGbHX3
— Sanatan Sanstha (@SanatanSanstha) February 17, 2026
2. ಫೆಬ್ರವರಿ 17ರ ಸಂಜೆ ಮಂಗಳಮಯ ವಾತಾವರಣದಲ್ಲಿ ಪೂ. ಸ್ವಾಮೀಜಿಯವರು ಆಶ್ರಮಕ್ಕೆ ಆಗಮಿಸಿದಾಗ, ಪ್ರವೇಶ ದ್ವಾರದ ಎರಡೂ ಬದಿಗಳಲ್ಲಿ ನಿಂತಿದ್ದ ಸಾಧಕರು ಸ್ವಾಗತಿಸಿದರು. ಸನಾತನದ ಸಾಧಕ ಶ್ರೀ. ಗಿರಿಜಯ ಪ್ರಭುದೇಸಾಯಿ ಅವರು ಪೂ. ಸ್ವಾಮೀಜಿಯವರ ಪಾದಪೂಜೆ ಮಾಡಿದರು.
3. ಇದರ ನಂತರ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಮತ್ತು ಸನಾತನದ ಸಾಧಕ ಶ್ರೀ. ನಿಷಾದ ದೇಶಮುಖ್ ಅವರು ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮ ಪ್ರಸಾರದ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಪೂ. ಸ್ವಾಮೀಜಿಯವರು ಸನಾತನ ಸಂಸ್ಥೆಯ ಪ್ರಸಾರ ಕಾರ್ಯದ ವಿಷಯವನ್ನು ಆತ್ಮೀಯತೆ ಮತ್ತು ಜಿಜ್ಞಾಸೆಯಿಂದ ತಿಳಿದುಕೊಂಡರು.

4. ಪೂ. ಸ್ವಾಮೀಜಿಯವರು ಸಾಧಕರಿಗೆ ಸಾಧನೆಯ ಬಗ್ಗೆ ಅಮೂಲ್ಯ ಮಾರ್ಗದರ್ಶನ ಮಾಡಿದರು. ತಮ್ಮ ಮಂಗಳ ಹಸ್ತದಿಂದ ಉಪಸ್ಥಿತರಿದ್ದ ಸಾಧಕರಿಗೆ ಪ್ರಸಾದ ನೀಡಿದರು. ಈ ಸಮಾರಂಭದಲ್ಲಿ ಭಾರತಾಚಾರ್ಯ ಪೂ. (ಪ್ರಾ.) ಸು.ಗಂ. ಶೇವಡೆ ಅವರೂ ಸಹ ಉಪಸ್ಥಿತರಿದ್ದರು.
5. ಪೂ. ಸ್ವಾಮೀಜಿಯವರ ಜೊತೆಯಲ್ಲಿ ಶ್ರೀ ರಾಮನಾಥ ದೇವಸ್ಥಾನ ಸಮಿತಿಯ ಅಧ್ಯಕ್ಷ ಶ್ರೀ. ವಲ್ಲಭ ಕುಂಕಳ್ಳಿಕ್ಕರ್, ಸಮಿತಿಯ ಕಾನೂನು ಸಲಹೆಗಾರ ನ್ಯಾಯವಾದಿ ರಾಜೇಶ ತಳಾವಲಿಕರ್, ಸಮಿತಿಯ ಸದಸ್ಯರಾದ ಶ್ರೀ. ಸಂಜೀವ ಬಾಲೆ ಮತ್ತು ಶ್ರೀ. ರುದ್ರ ಕಾಪಡಿ, ಹಾಗೆಯೇ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಗುರೂಜಿ ಶ್ರೀ. ಸಂತೋಷ ಆಚಾರ್ಯ ಮತ್ತು ಶ್ರೀ. ವಸಂತ ಆಚಾರ್ಯ ಉಪಸ್ಥಿತರಿದ್ದರು.
ಪೂ. ಸ್ವಾಮೀಜಿಯವರು ‘ಸನಾತನ ಪ್ರಭಾತ’ನ ಕಾರ್ಯವನ್ನು ಆಳವಾಗಿ ತಿಳಿದುಕೊಂಡರು!![]() ಪೂ. ಸ್ವಾಮೀಜಿಯವರು ‘ಸನಾತನ ಪ್ರಭಾತ’ ಮಾಧ್ಯಮ ಸಮೂಹದ ಕಾರ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿಸ್ತಾರವಾಗಿ ಮತ್ತು ಜಿಜ್ಞಾಸೆಯಿಂದ ತಿಳಿದುಕೊಂಡರು. ‘ಸನಾತನ ಪ್ರಭಾತ’ ಯಾವ ಭಾಷೆಗಳಲ್ಲಿ ಪ್ರಕಟವಾಗುತ್ತದೆ, ಅದರ ಮುದ್ರಣ, ವಿತರಣೆ, ಹಾಗೂ ಸಾಧಕರು ಹೇಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾರೆ ಮುಂತಾದ ವಿಷಯಗಳನ್ನು ವಿವರವಾಗಿ ತಿಳಿದುಕೊಂಡು ಸಾಧಕರಿಗೆ ಆಶೀರ್ವದಿಸಿದರು.
‘ಸನಾತನ ಪ್ರಭಾತ’ನ ಸಮೂಹ ಸಂಪಾದಕ ಶ್ರೀ. ಯೋಗೇಶ ಜಲತಾರೆ ಹಾಗೂ ಕನ್ನಡ ‘ಸನಾತನ ಪ್ರಭಾತ್’ನ ಉಪಸಂಪಾದಕ ಶ್ರೀ. ಪ್ರಶಾಂತ ಹರಿಹರ ಅವರೊಂದಿಗೂ ಪೂ. ಸ್ವಾಮೀಜಿಯವರು ಸಂವಾದ ನಡೆಸಿದರು. |
ಭಾವಪೂರ್ಣ ವಾತಾವರಣದಲ್ಲಿ ನಡೆದ ಸನ್ಮಾನ ಸಮಾರಂಭ!
ಆಶ್ರಮ ದರ್ಶನದ ನಂತರ ಸ್ವಾಮೀಜಿಯವರು ಸಾಧಕರಿಗೆ ಮಾರ್ಗದರ್ಶನ ಮಾಡಿದರು. ಈ ಸಮಯದಲ್ಲಿ ಆರಂಭದಲ್ಲಿ ಪೂ. ಸ್ವಾಮೀಜಿಯವರ ಗುರುಗಳು ಮತ್ತು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 23ನೇ ಪೀಠಾಧಿಪತಿಗಳಾದ ಶ್ರೀಮದ್ ವಿದ್ಯಾದಿರಾಜ ತೀರ್ಥ ಸ್ವಾಮೀಜಿಯವರ ಪಾದುಕೆಗಳಿಗೆ ಸನಾತನದ ಸಾಧಕ ದಂಪತಿ ಡಾ. ಪಾಂಡುರಂಗ ಮರಾಠೆ ಮತ್ತು ಸೌ. ಮಂಗಳಾ ಪಾಂಡುರಂಗ ಮರಾಠೆ ಅವರು ವೇದಮಂತ್ರೋಚ್ಛಾರಗಳೊಂದಿಗೆ ಧರ್ಮಶಾಸ್ತ್ರೀಯ ಪೂಜೆ ಸಲ್ಲಿಸಿದರು.
Shri. Pandurang Marathe and Smt. Mangala Marathe performed the sacred Paduka Pujan (worship) of Param Pujya Shrimad Vidyadhiraj Teertha Shripad Vader Swamiji, the revered Guru of Param Pujya Shrimad Vidyadhish Teertha Shripad Vader Swamiji, the 24th Peethadhipati of Shri Sansthan… pic.twitter.com/aKTUpXHLnt
— Sanatan Sanstha (@SanatanSanstha) February 17, 2026
ಹಾಗೆಯೇ ಶ್ರೀಮದ್ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರಿಗೆ ಪಂಚಾರತಿ ಮಾಡಲಾಯಿತು. ನಂತರ ಸನಾತನದ ಸಂತ ಪೂ. ಪೃಥ್ವಿರಾಜ ಹಜಾರೆ ಅವರು ಶ್ರೀಮದ್ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರನ್ನು ಭಾವಪೂರ್ಣವಾಗಿ ಸನ್ಮಾನಿಸಿದರು. ಹಾಗೆಯೇ ಶ್ರೀ ರಾಮನಾಥ ದೇವಸ್ಥಾನದ ಎಲ್ಲಾ ಪದಾಧಿಕಾರಿಗಳನ್ನೂ ಶ್ರೀಫಲ ಮತ್ತು ಉಡುಗೊರೆ ನೀಡಿ ಸತ್ಕರಿಸಲಾಯಿತು. ಪೂ. ಸ್ವಾಮೀಜಿಯವರು ಈ ಸಮಯದಲ್ಲಿ ಉಪಸ್ಥಿತರಿದ್ದ ಸಾಧಕರಿಗೆ ಮಾರ್ಗದರ್ಶನ ನೀಡಿ, ಪ್ರತಿಯೊಬ್ಬ ಸಾಧಕನಿಗೂ ಪ್ರಸಾದ ನೀಡಿದರು.
ಸನಾತನ ಸಂಸ್ಥೆಯು ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ಕಾರ್ಯವನ್ನು ಮಾಡುತ್ತಿದೆ! – ಶ್ರೀಮದ್ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಆಶೀರ್ವಚನ![]() ಪೂ. ಸ್ವಾಮೀಜಿಯವರು ಸಾಧಕರಿಗೆ ಆಶೀರ್ವಚನ ನೀಡುತ್ತಾ, 1. ಸನಾತನ ಸಂಸ್ಥೆಯು ಧರ್ಮಪ್ರಸಾರಕ್ಕೆ ಕಟಿಬದ್ಧವಾಗಿದೆ!ಸನಾತನ ಸಂಸ್ಥೆಯು ಧರ್ಮಪ್ರಸಾರಕ್ಕೆ ಕಟಿಬದ್ಧವಾಗಿದೆ. ಇದರಿಂದ ಜೀವನದಲ್ಲಿ ತೃಪ್ತಿ ಉಂಟಾಗುತ್ತದೆ. ಜೀವನವನ್ನು ಎರಡು ರೀತಿಯಲ್ಲಿ ಬದುಕಬಹುದು. ಒಂದು ನಮಗೆ ನಾವೇ ಆನಂದವನ್ನು ಕೊಟ್ಟುಕೊಳ್ಳುವುದು ಮತ್ತು ಇನ್ನೊಂದು ಇತರರಿಗೆ ಆನಂದವನ್ನು ನೀಡುವುದು. ಸನಾತನ ಧರ್ಮವು ನಮಗೆ ಇತರರಿಗೆ ಆನಂದವನ್ನು ನೀಡಲು ಪ್ರಯತ್ನಿಸಬೇಕೆಂಬ ಶಿಕ್ಷಣವನ್ನು ನೀಡುತ್ತದೆ. ಸನಾತನ ಸಂಸ್ಥೆಯೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ಕಾರ್ಯವನ್ನು ಮಾಡುತ್ತಿದ್ದು, ಸಮಾಜದಲ್ಲಿ ಆನಂದವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. 2. ಇತರರಿಗೆ ಆನಂದವನ್ನು ನೀಡಲು ಪ್ರಯತ್ನಿಸುತ್ತಿರಿ!‘ಇತರರ ಬಗ್ಗೆ ಹೇಗೆ ಯೋಚಿಸಬೇಕು?’ ಎಂಬ ವಿಷಯದ ಕುರಿತು ಪೂ. ಸ್ವಾಮೀಜಿಯವರು ಒಂದು ಬೋಧಪ್ರದ ಕಥೆಯ ಮೂಲಕ ವಿವರಿಸಿದರು. ಇದರಿಂದ ನಾವು ಇತರರ ಬಗ್ಗೆ ಯೋಚಿಸಬೇಕು ಮತ್ತು ಅವರಿಗೆ ಆನಂದ ನೀಡಲು ಪ್ರಯತ್ನಿಸಬೇಕು ಎಂದು ತಿಳಿಸುತ್ತಾ, ಕೇವಲ ಸ್ವಂತದ ಹೆಸರಿಗಾಗಿ ಬದುಕಬೇಡಿ, ಇತರರಿಗಾಗಿ ಬದುಕಿ ಎಂಬ ಸಂದೇಶವನ್ನೂ ನೀಡಿದರು. 3. ಭಗವದ್ಭಕ್ತನಿಗೆ ಯಾರೂ ತೊಂದರೆ ಕೊಡುವುದಿಲ್ಲ!ಲೌಕಿಕ ದೃಷ್ಟಿಯಿಂದ ಜಿಲ್ಲಾಧಿಕಾರಿ ಅಥವಾ ಪೊಲೀಸ್ ಪ್ರಮುಖರು ಪರಿಚಿತರಾಗಿದ್ದರೆ ಯಾರೂ ತೊಂದರೆ ಕೊಡುವುದಿಲ್ಲ. ಹಾಗೆಯೇ ಸಾಧಕನು ಭಗವಂತನ ಭಕ್ತಿ ಮಾಡುತ್ತಿದ್ದರೆ, ಅಂತಹ ಸಾಧಕನಿಗೆ ಯಾರೂ ತೊಂದರೆ ನೀಡಲು ಹೋಗುವುದಿಲ್ಲ. ಒಂದು ವೇಳೆ ಸಾಧಕನಿಗೆ ತೊಂದರೆ ನೀಡಿದರೆ ಮತ್ತು ಆತ ‘ನನ್ನನ್ನು ರಕ್ಷಿಸು’ ಎಂದು ಭಗವಂತನಲ್ಲಿ ಪ್ರಾರ್ಥಿಸಿದರೆ, ಭಗವಂತನು ಅವನನ್ನು ರಕ್ಷಿಸುತ್ತಾ ಅವನಿಗೆ ಅಹಿತ ಮಾಡುವವರಿಗೆ ಶಿಕ್ಷೆ ನೀಡುತ್ತಾನೆ. ಆದ್ದರಿಂದಲೇ ಭಗವದ್ಭಕ್ತನಿಗೆ ಯಾರೂ ತೊಂದರೆ ಕೊಡುವುದಿಲ್ಲ. ಮತ್ತೊಂದು ಸುಂದರ ಕಥೆಯನ್ನು ವಿವರಿಸುತ್ತಾ ಪೂ. ಸ್ವಾಮೀಜಿಯವರು, ‘ಸಾಧಕರು ಭಗವಂತನ ಭಕ್ತಿಯನ್ನು ಹೆಚ್ಚಿಸಿದರೆ, ಭಗವಂತನೇ ನಮ್ಮನ್ನು ರಕ್ಷಿಸುತ್ತಾನೆ’ ಎಂದು ಸಾಧಕರ ಮನಸ್ಸಿನಲ್ಲಿ ಆಳವಾಗಿ ಬಿಂಬಿಸಿದರು.
4. ಸಾಧಕರೇ, ಭಗವಂತನ ಚರಣಗಳತ್ತ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಿ!ಸಾಧಕರು ಸತತವಾಗಿ ಈಶ್ವರನ ಹತ್ತಿರವಿರಲು ಪ್ರಯತ್ನಿಸಬೇಕು. ಭಗವಂತನ ಚರಣಗಳ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಿ. ಭಗವಂತನ ಬಗ್ಗೆ ಮನೋಭಾವ ಜಾಗೃತವಾದರೆ ಜೀವನದ ಸಂಕಷ್ಟಗಳು ದೂರವಾಗುತ್ತವೆ. ಹಾಗೆಯೇ ಇದರಿಂದ ಇತರರಿಗೆ ನಮ್ಮ ಬಗ್ಗೆ ಇರುವ ಸಕಾರಾತ್ಮಕತೆಯೂ ಹೆಚ್ಚಾಗುತ್ತದೆ. ಸಾಧಕರ ಮೇಲೆ ಭಗವಂತನ ಕೃಪಾಶೀರ್ವಾದ ಸದಾ ಇರಲಿ, ಅವರ ಕಷ್ಟಗಳು ದೂರವಾಗಲಿ ಎಂದು ಶ್ರೀರಾಮ ಮತ್ತು ಶ್ರೀ ವೀರವಿಠಲನ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ. |
ಕ್ಷಣಚಿತ್ರಗಳು
1. ಶ್ರೀಮದ್ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಆಶ್ರಮಕ್ಕೆ ಬರುವ ಮೊದಲು ಆಶ್ರಮದ ಧ್ವನಿವರ್ಧಕಗಳಲ್ಲಿ ಪ್ರಭು ಶ್ರೀರಾಮನ ಭಜನೆಗಳನ್ನು ಹಾಕಲಾಗಿತ್ತು. ಇದರಿಂದ ಸಂಪೂರ್ಣ ಆಶ್ರಮ ಪರಿಸರವು ರಾಮಮಯವಾಗಿತ್ತು.
2. ಪೂ. ಸ್ವಾಮೀಜಿಯವರನ್ನು ಭಾವಪೂರ್ಣವಾಗಿ ಸ್ವಾಗತಿಸುವ ಸ್ವಾಗತ ಫಲಕವು ಎಲ್ಲರ ಗಮನ ಸೆಳೆಯುತ್ತಿತ್ತು.
3. ಆಶ್ರಮದಲ್ಲಿ ರಂಗೋಲಿಗಳನ್ನು ಬಿಡಿಸಿ ಸುಂದರವಾಗಿ ಅಲಂಕರಿಸಲಾಗಿತ್ತು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಇತ್ತೀಚೆಗೆ 550 ವರ್ಷಗಳು ಪೂರ್ಣ!ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಇತ್ತೀಚೆಗೆ 550 ವರ್ಷಗಳು ಪೂರ್ಣಗೊಂಡಿವೆ. ಈ ನಿಮಿತ್ತವಾಗಿ 28 ನವೆಂಬರ್ 2025 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಶುಭಹಸ್ತದಿಂದ ಮಠದ ಆವರಣದಲ್ಲಿ ಶ್ರೀರಾಮನ 77 ಅಡಿ ಎತ್ತರದ ಭವ್ಯ ಕಂಚಿನ ಮೂರ್ತಿಯ ಅನಾವರಣ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗೋವಾ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಇತರ ಭಾಗಗಳಿಂದ ಸಾವಿರಾರು ಭಕ್ತರು ಉಪಸ್ಥಿತರಿದ್ದರು. ![]() |



ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ