|

ಚಿಪ್ಲೂಣ್, ೧೬ ಫೆಬ್ರವರಿ (ವಾರ್ತೆ) – ಇಲ್ಲಿನ ನಾರಾಯಣ ಕೆರೆ ಪರಿಸರದಲ್ಲಿ ೩೦ ಜನವರಿ ೨೦೨೬ ರಂದು ಮುಸಲ್ಮಾನರು ನಮಾಜ್ ಮಾಡಿದ್ದರು. ಇದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಹಿಂದುತ್ವವಾದಿಗಳು ನಗರ ಪರಿಷತ್‌ಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುವಂತಹ ಸೂಕ್ಷ್ಮ ವಿಷಯದ ಬಗ್ಗೆ ೧೬ ದಿನಗಳು ಕಳೆದರೂ ಆಡಳಿತ ಮಂಡಳಿಯಿಂದ ದೂರು ದಾಖಲಾಗಿರಲಿಲ್ಲ. ಈ ಕುರಿತು ಹಿಂದುತ್ವವಾದಿ ಸಂಘಟನೆಗಳ ಪ್ರತಿನಿಧಿಗಳು ನಗರ ಪರಿಷತ್ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳ ಬಳಿ ಸತತವಾಗಿ ಬೆಂಬೆತ್ತಿದರೂ (ಫಾಲೋ-ಅಪ್ ಮಾಡಿದರೂ) ಒಂದು ಸಣ್ಣ ದೂರು ಕೂಡ ದಾಖಲಾಗಿಲ್ಲ. (ಇದೇನಾದರೂ ಮುಸಲ್ಮಾನರ ವಿಷಯದಲ್ಲಿ ಆಗಿದ್ದರೆ ಪೊಲೀಸರು ಸುಮ್ಮನಿರುತ್ತಿದ್ದರೆ? ಇಷ್ಟರೊಳಗೆ ಹಿಂದೂಗಳ ಮೇಲೆ ದೂರು ದಾಖಲಿಸಿ ಬಂಧಿಸುವ ಪ್ರಕ್ರಿಯೆ ಆರಂಭವಾಗಿರುತ್ತಿತ್ತು! – ಸಂಪಾದಕರು)
೧. ವಿಪರೀತ ವಿಳಂಬವಾಗುತ್ತಿರುವುದರಿಂದ ೧೬ ಫೆಬ್ರವರಿ ದಿನದಂದು ಹಿಂದುತ್ವವಾದಿ ಸಂಘಟನೆಗಳ ಪ್ರತಿನಿಧಿಗಳು ನಗರ ಪರಿಷತ್ ಆಡಳಿತವನ್ನು ಪ್ರಶ್ನಿಸಿದಾಗ, ಆಡಳಿತವು ವಿಳಂಬಕ್ಕೆ ಪೊಲೀಸರೇ ಕಾರಣ ಎಂದು ಹೇಳುತ್ತಿತ್ತು.
೨. ಆ ಸಮಯದಲ್ಲಿ ಹಿಂದುತ್ವವಾದಿಗಳು ಚಿಪ್ಲೂಣ್ ಪೊಲೀಸ್ ಠಾಣೆಯ ಅಧಿಕಾರಿಯೊಂದಿಗೆ ಮಾತನಾಡಲು ತಿಳಿಸಿದರು. ಆಗ, ನಗರ ಪರಿಷತ್‌ಗೆ ಈ ಬಗ್ಗೆ ದೂರು ನೀಡಲು ಗುರುವಾರ ೧೨ ಫೆಬ್ರವರಿಯಂದೇ ಪತ್ರ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು. ಆ ನಂತರ ಮುಖ್ಯಾಧಿಕಾರಿಗಳು ಆ ಪತ್ರವನ್ನು ಹುಡುಕಾಡುತ್ತಿರುವುದನ್ನು ನೋಡಿ ಹಿಂದೂ ಸಂಘಟನೆಗಳ ಪ್ರತಿನಿಧಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.
ಇದನ್ನೂ ಓದಿರಿ ⇒ ಚಿಪ್ಲೂಣ್ (ರತ್ನಗಿರಿ ಜಿಲ್ಲೆ) ನಾರಾಯಣ ಕೆರೆಯ ಪರಿಸರದಲ್ಲಿ ಮುಸ್ಲಿಮರಿಂದ ನಮಾಜ್ |
೩. ಸಮಾಜದಿಂದ ಈ ಪ್ರಕರಣದ ಬಗ್ಗೆ ಇಷ್ಟೊಂದು ತೀವ್ರ ಪ್ರತಿಕ್ರಿಯೆ ಬಂದಿದ್ದರೂ ‘ನಗರ ಪರಿಷತ್ ವತಿಯಿಂದ ದೂರು ನೀಡದಿರುವುದು ಹಿಂದೂಗಳ ಭಾವನೆಗಳನ್ನು ತುಚ್ಛವಾಗಿ ಕಾಣುವ ಪ್ರಯತ್ನವಾಗಿದೆ’ ಎಂದು ಪ್ರತಿನಿಧಿಗಳಲ್ಲಿ ಈ ಸಮಯದಲ್ಲಿ ಆಕ್ರೋಶ ಉಂಟಾಯಿತು.
೪. ನಗರ ಪರಿಷತ್ ಉದ್ಯಾನ ವಿಭಾಗದ ಜವಾಬ್ದಾರ ಉದ್ಯೋಗಿ ಶ್ರೀ ಬಾಪು ಸಾಡ್ವಿಲ್ಕರ್ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹಿಂದುತ್ವವಾದಿ ಸಂಘಟನೆಗಳ ಪ್ರತಿನಿಧಿಗಳು ಪೊಲೀಸ್ ಠಾಣೆಗೆ ಹೋಗಿ ೧೬ ಫೆಬ್ರವರಿಯಂದು ದೂರು ದಾಖಲಿಸಿಕೊಳ್ಳುವಂತೆ ಸ್ವತಃ ಉಪಸ್ಥಿತರಿದ್ದು ಬೆಂಬತ್ತಿದರು.
೫. ಈ ಸಮಯದಲ್ಲಿ ನಗರಸಭಾ ಸದಸ್ಯ ನಿಹಾರ್ ಕೋವಳೆ ಅವರು ಮುಖ್ಯಾಧಿಕಾರಿಗಳಿಗೆ ಈ ಪ್ರಕರಣದಲ್ಲಿ ನಗರ ಪರಿಷತ್ ಆಡಳಿತದ ವಿಳಂಬ ನೀತಿಯ ಬಗ್ಗೆ ಪ್ರಶ್ನಿಸಿದರು. ‘ಇದರಲ್ಲಿ ಯಾರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ?’ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.
೬. ಈ ಪ್ರಕರಣದಲ್ಲಿ ಪೊಲೀಸರು ಕೂಡ ನಗರ ಪರಿಷತ್ ಅಧಿಕಾರಿಯ ಕೈಗೆ ನೇರವಾಗಿ ಪತ್ರ ನೀಡದೆ ಅದನ್ನು ಕೇವಲ ದಾಖಲು (ಇನ್ವರ್ಡ್) ಮಾಡಿಕೊಂಡಿದ್ದರು. ಇದರಿಂದಲೂ ದೂರು ದಾಖಲಿಸುವ ಪ್ರಕ್ರಿಯೆ ವಿಳಂಬವಾಯಿತು ಎಂದು ಕಂಡುಬರುತ್ತಿದೆ. ಈ ಬಗ್ಗೆ ಪೊಲೀಸ್ ಆಡಳಿತವು ತೋರಿದ ಅಸೂಕ್ಷ್ಮತೆಯ ಬಗ್ಗೆ ಚಿಪ್ಲೂಣ್ ನಗರದ ಹಿಂದುತ್ವವಾದಿ ಸಂಘಟನೆಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
೭. ಈ ದೂರು ದಾಖಲಿಸಲು ಮತ್ತು ಅದರ ಬೆಂಬತ್ತಲು ಶಿವಪ್ರತಿಷ್ಠಾನ ಹಿಂದುಸ್ಥಾನದ ಶ್ರೀ. ಅಜಿಂಕ್ಯ ಓತಾರಿ, ಸಕಲ ಹಿಂದೂ ಸಮಾಜ ಸಂಘಟನೆಯ ಶ್ರೀ. ರಾಜೇಶ್ ಓತಾರಿ, ಗೋರಕ್ಷಕ ಶ್ರೀ. ವಿಕ್ರಮ್ ಜೋಶಿ, ಯುವಸೇನೆಯ ಉಪ ತಾಲೂಕು ಪ್ರಮುಖ ಶ್ರೀ. ಆದಿತ್ಯ ಜೋಶಿ, ಶಿವಸೇನೆ ಗುಹಾಗರ ವಿಧಾನಸಭಾ ನಿರೀಕ್ಷಕ ಶ್ರೀ. ಅನುರಾಗ್ ಉತೇಕರ್, ಹಿಂದೂ ಜನಜಾಗೃತಿ ಸಮಿತಿಯ ಡಾ. ಹೇಮಂತ್ ಚಾಳ್ಕೆ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಅಮಿತ್ ಜೋಶಿ, ಪ್ರಶಾಂತ್ ಉತೇಕರ್, ಸಂದೀಪ್ ಖರೆ ಮೊದಲಾದವರು ಉಪಸ್ಥಿತರಿದ್ದರು.
ಸಂಪಾದಕೀಯ ನಿಲುವು
|
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ