ಚಿಪ್ಲೂಣ್ (ರತ್ನಗಿರಿ ಜಿಲ್ಲೆ) ನಾರಾಯಣ ಕೆರೆಯ ಪರಿಸರದಲ್ಲಿ ಮುಸ್ಲಿಮರಿಂದ ನಮಾಜ್

ಹಿಂದೂತ್ವನಿಷ್ಠರು ಮನವಿ ಸಲ್ಲಿಸಿದ ನಂತರ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸುವ ಭರವಸೆ ನೀಡಿದ ನಗರಾಧ್ಯಕ್ಷ ಉಮೇಶ್ ಸಕಪಾಳ್

ಚಿಪ್ಲೂಣ್, ಫೆಬ್ರವರಿ 2 (ಸುದ್ದಿ) – ಚಿಪ್ಲೂಣ್ ನಗರ ಪರಿಷತ್ತಿನ ವ್ಯಾಪ್ತಿಯಲ್ಲಿರುವ ನಾರಾಯಣ ಕೆರೆಯ ಪರಿಸರದಲ್ಲಿ ಜನವರಿ 30 ರಂದು ಸಾಯಂಕಾಲ ಮುಸ್ಲಿಮರು ನಮಾಜ್ ಮಾಡಿದರು. ಈ ಸಮಯದಲ್ಲಿ ಅಲ್ಲಿದ್ದ ನಾಗರಿಕರು, “ಇದು ಸಾರ್ವಜನಿಕ ಸ್ಥಳವಾಗಿದ್ದು ಇಲ್ಲಿ ನಮಾಜ್ ಮಾಡಬಾರದು” ಎಂದು ಹೇಳಿದರೂ ಅವರು ಕೇಳಲಿಲ್ಲ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಚಿಪ್ಲೂಣ್‌ನ ಸಮಸ್ತ ಹಿಂದೂತ್ವನಿಷ್ಠ ಸಂಘಟನೆಗಳು ಫೆಬ್ರವರಿ 2 ರಂದು ಒಗ್ಗೂಡಿ ನಗರಾಧ್ಯಕ್ಷರಾದ ಶ್ರೀ. ಉಮೇಶ ಸಕಪಾಳ್ ಅವರಿಗೆ ‘ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಸಲ್ಲಿಸಿದರು. ಈ ವೇಳೆ ನಗರಾಧ್ಯಕ್ಷ ಶ್ರೀ. ಉಮೇಶ ಸಕಪಾಳ್ ಅವರು, ‘ಸಂಪೂರ್ಣ ಮಾಹಿತಿ ಪಡೆದು ಈ ಕೃತ್ಯ ಎಸಗಿದವರ ಮೇಲೆ ನಗರ ಪರಿಷತ್ತಿನ ವತಿಯಿಂದ ದೂರು ದಾಖಲಿಸಲು ಎಲ್ಲಾರೀತಿಯಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ನಗರಸಭಾ ಸದಸ್ಯ ನಿಹಾರ್ ಕೋವಳೆ, ಗೋರಕ್ಷಕ ವಿಕ್ರಮ ಜೋಶಿ, ಸಮಸ್ತ ಹಿಂದೂತ್ವನಿಷ್ಠ ಸಂಘಟನೆಗಳ ಸರ್ವಶ್ರೀ ಮಂದಾರ ಲೇಲೆ, ಅಜಿಂಕ್ಯ ಓತಾರಿ, ಅಂಕುಶ ಆವಲೆ, ಗಣೇಶ್ ಆಗ್ರೆ, ಡಾ. ಹೇಮಂತ್ ಚಾಳ್ಕೆ, ಶಿಲ್ಪಾ ಇನಾಮದಾರ್, ಸುಪ್ರಿಯಾ ಶಿಂದೆ, ಸಾರಿಕಾ ಭಾವೆ ಮತ್ತು ಇತರ ಹಿಂದೂತ್ವನಿಷ್ಠರು ಉಪಸ್ಥಿತರಿದ್ದರು.

೧. ನಾರಾಯಣ ಕೆರೆಯಂತಹ ನಗರ ಪರಿಷತ್ತಿನ ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಕೃತ್ಯಗಳನ್ನು ಮಾಡುವುದು ಅಪರಾಧವಾಗಿದೆ. ಅಲ್ಲಿ ನಮಾಜ್ ಮಾಡುವ ಕೃತ್ಯವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ನಮಾಜ್ ಗೆ ಬಂದ ಮುಸ್ಲಿಮರು ಅದಕ್ಕೆ ಬೇಕಾದ ವಸ್ತುಗಳನ್ನು ತಮ್ಮೊಂದಿಗೆ ತಂದಿದ್ದರು. ಈ ಕೃತ್ಯದ ಮೂಲಕ ಚಿಪ್ಲೂಣ್ ನಗರದಲ್ಲಿ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸಿ ನಗರದ ಸಾಮಾಜಿಕ ಶಾಂತಿಯನ್ನು ಕದಡುವ ಸಂಚು ಇದಾಗಿದೆ ಎಂದು ಹಿಂದೂತ್ವನಿಷ್ಠ ಸಂಘಟನೆಗಳು ಈ ಸಂದರ್ಭದಲ್ಲಿ ತಿಳಿಸಿವೆ.

೨. ಅಲ್ಲಿ ನಗರ ಪರಿಷತ್ತಿನ ಕಾವಲುಗಾರ (ವಾಚ್‌ಮನ್) ಯಾರಾದರೂ ಇದ್ದರೇ? ಅವರು ಅವರನ್ನು ಏಕೆ ತಡೆಯಲಿಲ್ಲ? ಇದು ಗಂಭೀರ ವಿಷಯವಾಗಿದ್ದು ಸಂಬಂಧಪಟ್ಟ ಸಿಬ್ಬಂದಿಯ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಲಾಯಿತು.

೩. ನಡೆದ ಘಟನೆಗೆ ನಗರ ಪರಿಷತ್ತು ಆಡಳಿತವೂ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ನಗರ ಪರಿಷತ್ತು ತಕ್ಷಣವೇ ನಮಾಜ್ ಮಾಡಿದವರ ವಿರುದ್ಧ ಪೊಲೀಸ್ ಕ್ರಮಕ್ಕಾಗಿ ದೂರು ನೀಡಬೇಕು, ಇಲ್ಲದಿದ್ದರೆ ಹಿಂದೂತ್ವನಿಷ್ಠ ಸಂಘಟನೆಗಳು ಪ್ರತಿಭಟನೆ ನಡೆಸುತ್ತವೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಲ್ಲಿ ನಗರ ಪರಿಷತ್ತು ಆಡಳಿತವೇ ಜವಾಬ್ದಾರಿಯಾಗಿರುತ್ತದೆ ಎಂದು ಮನವಿಯ ಮೂಲಕ ಎಚ್ಚರಿಸಲಾಯಿತು.

೪. ತದನಂತರ ಹಿಂದೂತ್ವನಿಷ್ಠ ಸಂಘಟನೆಗಳು ಈ ವಿಷಯವಾಗಿ ಚಿಪ್ಲೂಣ್ ಪೊಲೀಸ್ ಇನ್ಸ್‌ಪೆಕ್ಟರ್ ಮೆಂಗಡೆ ಅವರನ್ನು ಭೇಟಿಯಾಗಿ ‘ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳಬೇಕು’ ಎಂದು ಆಗ್ರಹಿಸಿದವು.

೫. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಚಿಪ್ಲೂಣ್ ನಗರದ ಧರ್ಮಾಭಿಮಾನಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ನಗರ ಪರಿಷತ್ತಿನಲ್ಲಿ ಉಪಸ್ಥಿತರಿದ್ದು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು.

ಸಂಪಾದಕೀಯ ನಿಲುವು

  • ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಮಕ್ಕಳನ್ನು ಕರೆದುಕೊಂಡು ಹೋಗುವುದು, ನಂತರ ಅದೇ ಸ್ಥಳದಲ್ಲಿ ಬಲೂನ್ ಮಾರಾಟದಂತಹ ವ್ಯಾಪಾರಗಳನ್ನು ಮಾಡುವುದು; ಸ್ವಲ್ಪ ಸಮಯ ಕಳೆದ ನಂತರ ಅದೇ ಜಾಗದಲ್ಲಿ ನಮಾಜ್ ಮಾಡುವ ಮೂಲಕ ಜಾಗವನ್ನು ಕಬಳಿಸುವುದು ಎಂಬ ಮುಸ್ಲಿಮರ ಈ ಮಾನಸಿಕತೆಯನ್ನು ಆಡಳಿತ ಮಂಡಳಿ ಯಾವಾಗ ಗುರುತಿಸುತ್ತದೆ? ಅಥವಾ ‘ಜಾತ್ಯತೀತತೆ’ ಎಂಬ ಹೆಸರಿನಲ್ಲಿ ಇದೆಲ್ಲ ಹೀಗೆಯೇ ಮುಂದುವರಿಯುತ್ತದೆಯೇ?
  • ಇಂದು ಕೆಲವು ಸ್ತ್ರೀ-ಪುರುಷರು ನಮಾಜ್ ಗೆ ಬಂದಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಮುಂದೆ ಸಾವಿರಾರು ಜನರು ಇಲ್ಲಿಗೆ ಬಂದು ನಮಾಜ್ ಮಾಡಿದರೆ ಆಶ್ಚರ್ಯಪಡಬೇಕಿಲ್ಲ!
  • ‘ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡಿ ನಾಗರಿಕರಿಗೆ ತೊಂದರೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಆಡಳಿತಕ್ಕೆ ಹೇಳಬೇಕೆ? ಆಡಳಿತ ಮಂಡಳಿಯು ಸ್ವತಃ ಇಂತಹವುಗಳ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತದೆ?