
ಮಥುರಾ (ಉತ್ತರ ಪ್ರದೇಶ) – ಇಲ್ಲಿನ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪಶು ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಆವರಣದಲ್ಲಿ ದೇಶದ ಮೊದಲ ‘ರಾಷ್ಟ್ರೀಯ ಗೋ ಸಂಸ್ಕೃತಿ ಸಂಗ್ರಹಾಲಯ’ವನ್ನು ಸ್ಥಾಪಿಸಲಾಗುವುದು. ಉತ್ತರ ಪ್ರದೇಶ ಬ್ರಜ್ ತೀರ್ಥ ವಿಕಾಸ ಪರಿಷತ್ತಿನ ನೇತೃತ್ವದಲ್ಲಿ ಈ ಸಂಗ್ರಹಾಲಯ ನಿರ್ಮಿಸಲಾಗುತ್ತಿದೆ.
೧. ಪ್ರಸ್ತಾವಿತ ಸಂಗ್ರಹಾಲಯದ ಮುಖ್ಯ ಉದ್ದೇಶವು ಹಸುಗಳ ಪ್ರಯೋಜನಗಳು ಮತ್ತು ಅವುಗಳ ಉತ್ಪನ್ನಗಳ ಬಗ್ಗೆ ಜನಜಾಗೃತಿ ಮೂಡಿಸುವುದಾಗಿದೆ. ಈ ಸಂಗ್ರಹಾಲಯದ ಮೂಲಕ ಹಸುವಿನ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವದ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಸಂಗ್ರಹಾಲಯವು ಪರಂಪರೆ ಮತ್ತು ವಿಜ್ಞಾನದ ಮಿಶ್ರಣವಾಗಿರಲಿದೆ ಎಂದು ಪರಿಷತ್ತಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
೨. ರಾಷ್ಟ್ರೀಯ ಗೋ ಸಂಸ್ಕೃತಿ ಸಂಗ್ರಹಾಲಯದಲ್ಲಿ ದೇಶಾದ್ಯಂತದ ಪ್ರಮುಖ ಗೋ ತಳಿಗಳು ಮತ್ತು ಅಳಿವಿನಂಚಿನಲ್ಲಿರುವ ತಳಿಗಳ ಸುಮಾರು ೧೦೦ ಡಿಜಿಟಲ್ ಮತ್ತು ಸಾಂಕೇತಿಕ ಮಾದರಿಗಳನ್ನು ಇಡಲಾಗುವುದು. ಇದಲ್ಲದೆ, ಸಂಗ್ರಹಾಲಯದಲ್ಲಿ ಹಾಲು ಮತ್ತು ಹಾಲಿನಿಂದ ತಯಾರಿಸಿದ ಮೊಸರು, ಚೀಸ್ ಮತ್ತು ತುಪ್ಪದಂತಹ ಉತ್ಪನ್ನಗಳ ಪ್ರದರ್ಶನವಿರಲಿದೆ. ಹಾಲು ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನ, ವೈಜ್ಞಾನಿಕ ದೃಷ್ಟಿಕೋನ ಸೇರಿದಂತೆ ವಿವಿಧ ಪ್ರಯೋಜನಗಳನ್ನು ನಾಗರಿಕರಿಗೆ ವಿವರಿಸಲಾಗುವುದು, ಎಂದು ಬ್ರಜ್ ತೀರ್ಥ ವಿಕಾಸ ಪರಿಷತ್ತು ತಿಳಿಸಿದೆ.
ಸಂಪಾದಕೀಯ ನಿಲುವುಇದೊಂದು ಉತ್ತಮ ಪ್ರಯತ್ನ; ಆದರೆ ಇದರ ಜೊತೆಗೆ ದೇಸಿ ತಳಿಯ ಹಸುಗಳ ಸಂರಕ್ಷಣೆಗಾಗಿ ಮತ್ತು ಅವುಗಳ ಹತ್ಯೆಯಾಗದಂತೆ ತಡೆಯಲು ಪ್ರಯತ್ನಗಳನ್ನು ಹೆಚ್ಚಿಸುವ ಅವಶ್ಯಕತೆಯಿದೆ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ