ನನ್ನ ತಾಯಿ ಸೌ. ಮಾಧುರಿ ಮಾಧವ ಗಾಡಗೀಳ (ವಯಸ್ಸು ೮೨ ವರ್ಷ) ಇವರು ೧೭.೧.೨೦೨೬ ರಂದು ಬೆಳಗ್ಗೆ ೧೧.೫೫ ಕ್ಕೆ ನಿಧನರಾದರು. ಅವರ ಮೃತ್ಯುವಿನ ಸಮಯದಲ್ಲಿ ಮತ್ತು ನಂತರ ನನಗೆ ಅರಿವಾದ ಅಂಶಗಳು ಹಾಗೂ ನಾನು ಮಾಡಿದ ಸೂಕ್ಷ್ಮ ಪರೀಕ್ಷಣೆಗಳನ್ನು ಮುಂದೆ ನೀಡಲಾಗಿದೆ.

೧. ಸಹಜವಾಗಿ ಪ್ರಾಣೋತ್ಕ್ರಮಣವಾಗುವುದು (ಪ್ರಾಣ ಹೋಗುವುದು)
ತಾಯಿಯ ಮರಣದ ೫ ನಿಮಿಷಗಳ ಮೊದಲು ನಾನು ಅವರನ್ನು ನೋಡಿದ್ದೆನು. ಆಗ ಇನ್ನೂ ೫ ನಿಮಿಷದಲ್ಲಿ ಅವರು ಮರಣ ಹೊಂದುತ್ತಾರೆ ಎಂದು ನನಗೆ ಅನಿಸಿರಲಿಲ್ಲ. ಅವರ ಪ್ರಾಣವು ಅತ್ಯಂತ ಸಹಜವಾಗಿ ಯಾವುದೇ ಕ್ಲೇಶವಿಲ್ಲದೇ ಮತ್ತು ಅಲ್ಪ ಸಮಯದಲ್ಲಿ ಹೊರಹೋಯಿತು ಎಂಬುದು ನನ್ನ ಗಮನಕ್ಕೆ ಬಂದಿತು. ಚೆನ್ನೈಯ ನಾಡಿಪಟ್ಟಿ ವಾಚಕರಾದ ಪೂ. ಡಾ. ಓಂ ಉಲಗನಾಥನ್ ಅವರು ತಾಯಿಗೆ ಮರಣದ ಯಾವುದೇ ತೊಂದರೆಯಾಗುವುದಿಲ್ಲ. ಅವರ ಮರಣವು ಸುಲಭವಾಗಿ ಆಗಲಿದೆಯೆಂದು ಹೇಳಿದ್ದರು.
ದಿ. (ಸೌ.) ಮಾಧುರಿ ಗಾಡಗೀಳ ಅವರು ಹಾಸಿಗೆ ಹಿಡಿದಿದ್ದರೂ ಸಹ ಅವರು ತೀವ್ರ ಸಾಧನೆಯನ್ನು ಮಾಡಿದರು. ಶಾರೀರಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಸಹಿಸಿಕೊಳ್ಳಲು ಅವರ ಸ್ಪಲ್ಪ ಸಾಧನೆಯು ಬಳಕೆಯಾಯಿತು. ಅವರ ಮರಣದ ಮೊದಲು ಆಧ್ಯಾತ್ಮಿಕ ಮಟ್ಟವು ಶೇ. ೬೨ ರಷ್ಟಿತ್ತು ಮತ್ತು ಮರಣದ ಸಮಯದಲ್ಲಿ ಅವರ ಆಧ್ಯಾತ್ಮಿಕ ಮಟ್ಟವು ಶೇ. ೬೩ ರಷ್ಟಾಯಿತು.
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೨೪.೧.೨೦೨೬)
೨. ಮರಣದ ನಂತರ ಅರಿವಾದ ಅಂಶಗಳು
ಅ. ಮರಣದ ನಂತರ ಅವರ ಮುಖದಲ್ಲಿ ಮರಣದ ಸಮಯದ ಯಾವುದೇ ವೇದನೆಗಳು ಕಂಡು ಬರಲಿಲ್ಲ. ಅವರ ಮುಖವನ್ನು ನೋಡಿದಾಗ ಅವರು ಅತ್ಯಂತ ಶಾಂತವಾಗಿ ನಿದ್ರಿಸುತ್ತಿದ್ದಾರೆ ಎಂದು ಅನ್ನಿಸುತ್ತಿತ್ತು.
ಆ. ಅವರ ಪ್ರಾಣವು ಬಾಯಿಯ ಮೂಲಕ ಹೊರಹೋಯಿತು ಎಂದು ನನಗೆ ಅರಿವಾಯಿತು.
ಇ. ತಾಯಿ ನಿಧನರಾದ ಮೇಲೆ ಕೊಠಡಿಯಲ್ಲಿ ಅತ್ಯಂತ ಒಳ್ಳೆಯ ವಾತಾವರಣವು ಅರಿವಾಗುತ್ತಿತ್ತು. ಕೊಠಡಿಯಲ್ಲಿ ತೀರ ನಗಣ್ಯ ಅಂದರೆ ಶೇ. ೨-೩ ರಷ್ಟು ಮಾತ್ರ ತೊಂದರೆದಾಯಕ ಸ್ಪಂದನಗಳಿರುವುದು ಕಂಡು ಬಂದಿತು. ಮರಣದ ನಂತರ ದೇಹದಿಂದ ತ್ಯಾಜ್ಯ ಅನಿಲಗಳು ಹೊರಬರುತ್ತಿರುತ್ತವೆ. ಈ ಸ್ಪಂದನಗಳೂ ಅದರದ್ದಾಗಿವೆಯೆಂದು ನನಗೆ ಅರಿವಾಯಿತು.
ಈ. ಮರಣದ ಮೊದಲು ಅವರ ಆಧ್ಯಾತ್ಮಿಕ ಮಟ್ಟವು ಶೇ. ೬೨ ರಷ್ಟಿತ್ತು. ಮರಣದ ಸಮಯದಲ್ಲಿ ಅವರ ಆಧ್ಯಾತ್ಮಿಕ ಮಟ್ಟವು ಶೇ. ೬೩ ರಷ್ಟಾಗಿದೆ ಎಂದು ನನಗೆ ಅರಿವಾಯಿತು.

೩. ದಿ. (ಸೌ.) ಮಾಧುರಿ ಗಾಡಗೀಳ ಅವರ ಪಾರ್ಥಿವ ಶರೀರದಿಂದ ಪ್ರಕ್ಷೇಪಿತವಾದ ಸ್ಪಂದನಗಳು

ಅವರ ಪಾರ್ಥಿವ ಶರೀರದಿಂದ ಶಾಂತಿಯ ಸ್ಪಂದನಗಳು ಅತ್ಯಧಿಕವಾಗಿ ಪ್ರಕ್ಷೇಪಿತವಾಗುತ್ತಿರುವುದರಿಂದ ಅವರ ಕೊಠಡಿಯಲ್ಲಿ ಶಾಂತ ಅನ್ನಿಸುತ್ತಿತ್ತು.
೪. ಅಂತಿಮ ದರ್ಶನ ಪಡೆಯುವಾಗ ಅರಿವಾದ ಅಂಶಗಳು
ಅ. ಅವರ ಅಂತ್ಯದರ್ಶನ ಪಡೆಯುವಾಗ ನನಗೆ ಅವರ ಕಣ್ಣುಗಳು ಸ್ವಲ್ಪ ತೆರೆದಿರುವುದು ಕಂಡಿತು. ಅವರು ಎಲ್ಲರನ್ನೂ ಕೊನೆಯದಾಗಿ ಪ್ರೇಮಪೂರ್ವಕವಾಗಿ ನೋಡುತ್ತಿದ್ದಾರೆ ಎಂದು ನನಗೆ ಅನಿಸಿತು.
ಆ. ಅವರ ಎಡಗಣ್ಣಿನಲ್ಲಿ ನನಗೆ ಒಂದು ಹನಿ ಕಣ್ಣೀರು ಕಂಡಿತು. ಕೇವಲ ಎಡಗಣ್ಣಿನಲ್ಲಿ ಬರುವ ಕಣ್ಣಿರು ಭಾವಾಶ್ರು (ಭಾವದ ಕಣ್ಣೀರು) ಆಗಿರುತ್ತದೆ ಎಂದು ಹೇಳುತ್ತಾರೆ.
೫. ಅಗ್ನಿಸಂಸ್ಕಾರದ ಸಮಯದಲ್ಲಿ ಅರಿವಾದ ಅಂಶಗಳು
ಅ. ತಾಯಿಯ ಚಿತೆಗೆ ಅಗ್ನಿ ನೀಡಿದ ನಂತರ ಚಿತೆಯು ಕೇವಲ ೧೦ ರಿಂದ ೧೫ ನಿಮಿಷಗಳಲ್ಲಿ ಸಂಪೂರ್ಣವಾಗಿ ಹೊತ್ತಿಕೊಂಡಿತು. ಶರೀರದಲ್ಲಿ ಜಡತ್ವವಿದ್ದರೆ, ಅಗ್ನಿ ಪ್ರಜ್ವಲಿಸಲು ಸಮಯ ತಗಲುತ್ತದೆ. ತಾಯಿಯ ದೇಹವು ಶ್ರೀರಾಮನ ನಾಮಜಪದಿಂದ ಹಗುರವಾಗಿತ್ತು.
ಆ. ಚಿತೆಯ ಜ್ಞಾಲೆಗಳ ಬಣ್ಣವು ಕೇಸರಿಯಾಗಿತ್ತು. ಆ ಜ್ಞಾಲೆಗಳಿಂದ ಶಕ್ತಿ ಮತ್ತು ಭಾವದ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿದ್ದವು.
೬. ತಾಯಿಯ ಮತ್ತು ೨ ಸಾಮಾನ್ಯ ವ್ಯಕ್ತಿಗಳ ಅಸ್ಥಿ ಹಾಗೂ ರಕ್ಷೆಯ (ಬೂದಿ) ತುಲನಾತ್ಮಕ ಅಭ್ಯಾಸ
೧೯.೧.೨೦೨೬ ರಂದು ನಾವು ತಾಯಿಯ ಅಸ್ಥಿ ಮತ್ತು ರಕ್ಷೆಯನ್ನು ಸಂಗ್ರಹಿಸಲು ಸ್ಮಶಾನಕ್ಕೆ ಹೋಗಿದ್ದೆವು. ಅವರ ಅಸ್ಥಿ ಮತ್ತು ರಕ್ಷೆಯನ್ನು ನೋಡಿದಾಗ ನನಗೆ ಅತ್ಯಂತ ಹಗುರವಾಗಿ ಅನ್ನಿಸುತ್ತಿತ್ತು. ಅವುಗಳಲ್ಲಿ ಯಾವುದೇ ತೊಂದರೆದಾಯಕ ಸ್ಪಂದನಗಳು ಅರಿವಾಗುತ್ತಿರಲಿಲ್ಲ. ಅಭ್ಯಾಸಕ್ಕಾಗಿ ನಾನು ಸ್ಮಶಾನದಲ್ಲಿದ್ದ ಇತರ ೨ ಸಾಮಾನ್ಯ ವ್ಯಕ್ತಿಗಳ ಅಸ್ಥಿ ಮತ್ತು ರಕ್ಷೆಯನ್ನು ಪರೀಕ್ಷಿಸಿದೆನು. ಆಗ ನನಗೆ ಒಬ್ಬ ವ್ಯಕ್ತಿಯ ಅಸ್ಥಿ ಮತ್ತು ರಕ್ಷೆಯಲ್ಲಿ ಶೇ. ೨೫ ರಷ್ಟು ತೊಂದರೆದಾಯಕ ಸ್ಪಂದನಗಳು ಮತ್ತು ಇನ್ನೊಬ್ಬ ವ್ಯಕ್ತಿಯ ಅಸ್ಥಿ ಹಾಗೂ ರಕ್ಷೆಯಲ್ಲಿ ಶೇ. ೧೦ ರಷ್ಟು ತೊಂದರೆದಾಯಕ ಸ್ಪಂದನಗಳು ಅರಿವಾದವು.
೭. ದಿ. (ಸೌ.) ಮಾಧುರಿ ಗಾಡಗೀಳ ಅವರ ಅಸ್ಥಿ ಮತ್ತು ರಕ್ಷೆಯಲ್ಲಿ ಅರಿವಾದ ಸ್ಪಂದನಗಳು

ಇದರಿಂದ ಗಮನಕ್ಕೆ ಬರುವುದೇನೆಂದರೆ ತಲೆಯ ಭಾಗದ ಅಸ್ಥಿ ಮತ್ತು ರಕ್ಷೆಯಿಂದ ಶಕ್ತಿ ಹಾಗೂ ಭಾವದ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗುತ್ತವೆ.
೭ ಅ. ತಾಯಿಯ ಅಸ್ಥಿ ಮತ್ತು ರಕ್ಷೆಯ ವಾಸನೆ ನೋಡಿದಾಗ ನನಗೆ ಶ್ವಾಸದಲ್ಲಿ ಶೀತಲತೆಯ ಅರಿವಾಯಿತು ಮತ್ತು ಪ್ರಾಣಶಕ್ತಿ ಲಭಿಸಿತು.
೮. ಅಸ್ಥಿಯ ವಿಸರ್ಜನೆಯ ನಂತರ ಅರಿವಾದ ಅಂಶಗಳು
ಅ. ೧೯.೧.೨೦೨೬ ರಂದು ನಾವು ಗೋವಾದ ಹರವಳೆ ಎಂಬಲ್ಲಿರುವ ಶಿವಸ್ಥಾನದ ಜಲಪಾತದ ಪ್ರವಾಹದಲ್ಲಿ ತಾಯಿಯ ಅಸ್ಥಿ ಮತ್ತು ರಕ್ಷೆಯನ್ನು ವಿಸರ್ಜನೆ ಮಾಡಿದೆವು. ಮೊದಲು ನನಗೆ ತಾಯಿಯ ಪಂಚತತ್ತ್ವಗಳಲ್ಲಿನ ಅಸ್ತಿತ್ವವು ಶೇ. ೨೫ ರಷ್ಟು ಅರಿವಾಗುತ್ತಿತ್ತು. ಅದು ಈಗ ಶೇ. ೧೫ ರಷ್ಟು ಮಾತ್ರ ಉಳಿದಿದೆ ಎಂದು ಅರಿವಾಯಿತು.
ಆ. ಈಗ ಅವರ ಉಳಿದಿರುವ ಈ ಅಸ್ತಿತ್ವವು ಮುಂದಿನ ಶ್ರಾದ್ಧವಿಧಿಗಳನ್ನು ಮಾಡಿದ ನಂತರ ಇಳಿಮುಖವಾಗುತ್ತಾ ಹೋಗುವುದು ಎಂದು ನನಗೆ ಅನಿಸಿತು.
ಮೇಲಿನ ಸೂಕ್ಷ್ಮ ಪರೀಕ್ಷಣೆಯಿಂದ ನನ್ನ ಗಮನಕ್ಕೆ ಬಂದಿರುವುದೇನೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕೃಪೆಯಿಂದ ತಾಯಿಗೆ ಸದ್ಗತಿ ಲಭಿಸಿದೆ. ಗುರುಕೃಪೆಯಿಂದ ಅವರ ಸಾಧನೆಯು ಮುಂದೆಯೂ ಹೀಗೆಯೇ ಮುಂದುವರಿಯುವುದು.
– (ಸದ್ಗುರು) ಡಾ. ಮುಕುಲ ಗಾಡಗೀಳ (ದಿ. (ಸೌ.) ಮಾಧುರಿ ಗಾಡಗೀಳ ಅವರ ಹಿರಿಯ ಪುತ್ರ) (ರಸಾಯನಶಾಸ್ತ್ರದಲ್ಲಿ ಪಿ.ಎಚ್.ಡಿ. ಮುಂಬಯಿ ವಿಶ್ವವಿದ್ಯಾಲಯ) ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೨೦.೧.೨೦೨೬)
ಓದುಗರಿಗೆ ಕರೆಮೃತಪಟ್ಟ ವ್ಯಕ್ತಿಗಳ ಕುರಿತು ಸಂಶೋಧನೆ ನಡೆಸಿ ಮಾನವಕುಲಕ್ಕೆ ಅಮೂಲ್ಯ ಜ್ಞಾನ ನೀಡಲು ಸಹಾಯ ಮಾಡಿ !ಜ್ಞಾನವು ಅನಂತವಾಗಿದೆ. ಅದನ್ನು ಎಷ್ಟು ಗ್ರಹಿಸಿದರೂ ಕಡಿಮೆಯೇ. ದೇವರು ಪ್ರತಿಯೊಂದು ವಿಷಯದ ಮೂಲಕ ಮಾನವನಿಗೆ ಏನಾದರೂ ಕಲಿಸುತ್ತಿರುತ್ತಾನೆ. ಜಿಜ್ಞಾಸೆ ತೋರದೆ ಪ್ರತಿಯೊಂದು ವಿಷಯದ ಅಧ್ಯಯನ ಮಾಡದೆ ಮತ್ತು ಅದರ ಬಗ್ಗೆ ಸೂಕ್ಷ್ಮದಿಂದ ತಿಳಿದುಕೊಳ್ಳದೆ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ಸಾಮಾನ್ಯ ವ್ಯಕ್ತಿಗೆ ಇಂತಹ ಅಧ್ಯಯನ ಮಾಡುವ ಅಭ್ಯಾಸವಿರುವುದಿಲ್ಲ ಅಥವಾ ಹೊಸದನ್ನು ತಿಳಿದುಕೊಳ್ಳುವ ದೃಷ್ಟಿಯಿರುವುದಿಲ್ಲ. ಪ್ರತಿಯೊಂದು ವಿಷಯದ ಬಗ್ಗೆಯೂ ಇಂತಹ ಅಭ್ಯಾಸವನ್ನು ಮಾಡಬಹುದು. ಇಲ್ಲಿ ಮೃತರಾದ ವ್ಯಕ್ತಿಯ ಬಗ್ಗೆ ಆ ಅಧ್ಯಯನವನ್ನು ಹೇಗೆ ಮಾಡಬೇಕು ? ಮತ್ತು ಆ ನಿಟ್ಟಿನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಕ್ಕೆ ಹೇಗೆ ಸಹಾಯ ಮಾಡಬಹುದು? ಎಂಬುದಕ್ಕೆ ಉದಾಹರಣೆ ನೀಡಲಾಗಿದೆ. ಮುಂದೆ ನೀಡಿರುವ ಪ್ರಶ್ನೆಗಳ ಕುರಿತು ಮಾಹಿತಿ ನೀಡಿರಿ. ಹಾಗೆಯೇ ತಮಗೆ ಇನ್ನೇನಾದರೂ ಹೊಸತು ಕಲಿಯಲು ಸಿಕ್ಕರೆ ಅದರ ಮಾಹಿತಿಯನ್ನೂ ನೀಡಿ ನಮಗೆ ಸಹಾಯ ಮಾಡಬೇಕು. ೧. ಮೃತ ವ್ಯಕ್ತಿಯು ಆಸ್ತಿಕನಾಗಿದ್ದನೇ ಅಥವಾ ನಾಸ್ತಿಕನಾಗಿದ್ದನೇ ? ಆಸ್ತಿಕನಾಗಿದ್ದರೆ ಏನಾದರೂ ಸಾಧನೆ ಮಾಡುತ್ತಿದ್ದನೇ ಮತ್ತು ಅದು ಯಾವುದು ? ಅವರ ಆಧ್ಯಾತ್ಮಿಕ ಮಟ್ಟ ತಿಳಿದಿದ್ದರೆ ತಿಳಿಸಿ, ಆ ವ್ಯಕ್ತಿಯ ಛಾಯಾಚಿತ್ರವನ್ನು ಕಳುಹಿಸಿ. ಅದರ ಮೂಲಕ ಆಧ್ಯಾತ್ಮಿಕ ಮಟ್ಟವನ್ನು ಕಂಡು ಹಿಡಿಯಬಹುದು. ೨. ಮರಣದ ನಂತರ ವ್ಯಕ್ತಿಯ ಮುಖ, ಕೈ, ಕಾಲು ಇತ್ಯಾದಿಗಳ ಬಣ್ಣದಲ್ಲಿ ಏನಾದರೂ ಬದಲಾವಣೆ ಕಂಡು ಬಂದಿತೇ ? ಉತ್ತಮ ಸಾಧನೆ ಇರುವವರ ಚರ್ಮದ ಬಣ್ಣ ಹಳದಿಯಾಗಿ ಕಾಣಿಸುತ್ತದೆ ಹಾಗೂ ಅವರ ಮುಖವು ತೇಜಸ್ವಿಯಾಗಿ ಕಾಣುತ್ತದೆ. ಮುಖದಲ್ಲಿ ಇನ್ನೇನಾದರೂ ಭಾವಗಳು ಮೂಡಿದ್ದವೇ ? ೩. ಮೃತವ್ಯಕ್ತಿಯನ್ನು ನೋಡಿದಾಗ ತೊಂದರೆದಾಯಕ ಅನಿಸುತ್ತಿತ್ತೇ ಅಥವಾ ಒಳ್ಳೆಯದು ಅನ್ನಿಸುತ್ತಿತ್ತೇ ? ೪. ವ್ಯಕ್ತಿ ಮೃತಪಟ್ಟ ಸ್ಥಳದ ವಾತಾವರಣದಲ್ಲಿ ಏನಾದರೂ ಬದಲಾವಣೆ ಕಂಡು ಬಂದಿತೇ ? ಅಲ್ಲಿ ಒಳ್ಳೆಯ ಅಥವಾ ಕೆಟ್ಟ ವಾಸನೆ ಹರಡಿತ್ತೇ ? ವ್ಯಕ್ತಿಯ ಸಾಧನೆ ಚೆನ್ನಾಗಿದ್ದರೆ ಅಲ್ಲಿ ಸುಗಂಧ ಹರಡುತ್ತದೆ. ಹಾಗೆಯೇ ಆಕಾಶದಲ್ಲಿ ಏನಾದರೂ ಬಣ್ಣಗಳು ಮೂಡಿದ್ದು ಕಂಡಿತೇ ? ಸಂತ ಮಟ್ಟದ ವ್ಯಕ್ತಿ ದೇಹತ್ಯಾಗ ಮಾಡಿದಾಗ ಆಕಾಶದಲ್ಲಿ ಹಳದಿ, ನೀಲಿ ಅಥವಾ ಕೆಂಪು ಬಣ್ಣ ಹರಡಿರುವುದು ಕಾಣಿಸುತ್ತದೆ. ಹಕ್ಕಿಗಳು ಮಧುರವಾಗಿ ಧ್ವನಿ ಮಾಡುತ್ತವೆ. ಅಂತಹ ಅನುಭವ ಏನಾದರೂ ಆಯಿತೇ ? ೫. ವ್ಯಕ್ತಿ ಮೃತಪಟ್ಟ ಸ್ಥಳದಲ್ಲಿ ಅಥವಾ ಮೃತದೇಹವನ್ನು ಇರಿಸಿದ ಸ್ಥಳದಲ್ಲಿ ಭೂಮಿಯ ಮೇಲೆ ‘ಓಂ’ ಅಥವಾ ಇನ್ನೇನಾದರೂ ಶುಭ ಚಿಹ್ನೆಗಳು ಮೂಡಿದವೇ ಅಥವಾ ಏನಾದರೂ ತೊಂದರೆದಾಯಕ ಆಕೃತಿಗಳು ಮೂಡಿದವೇ ? ೬. ಮೃತ ವ್ಯಕ್ತಿಯ ಚಿತೆಗೆ ಅಗ್ನಿ ನೀಡಿದಾಗ ಚಿತೆಯ ಜ್ಞಾಲೆಗಳ ಬಣ್ಣ ಹೇಗಿತ್ತು ? ಉತ್ತಮ ಸಾಧನೆ ಇರುವ ವ್ಯಕ್ತಿಯ ಚಿತೆಯ ಜ್ವಾಲೆಯ ಬಣ್ಣ ಹೆಚ್ಚಾಗಿ ಹಳದಿ ಇರುತ್ತದೆ. ಹಾಗೆಯೇ ಚಿತೆ ಹೊತ್ತಿಕೊಳ್ಳಲು ಸಮಯ ತಗುಲಿತೇ ಅಥವಾ ತಕ್ಷಣ ಹೊತ್ತಿಕೊಂಡಿತೇ ? ಚಿತೆ ಉರಿಯುವಾಗ ಸುಗಂಧ ಅಥವಾ ದುರ್ಗಂಧ ಬಂದಿತೇ ? ಯಾವುದೇ ಶಬ್ದ ಕೇಳಿಸಿತೇ ? ಚಿತೆಯ ತಾಪವು ಹೆಚ್ಚು ಅನಿಸಿತೇ ಅಥವಾ ಕಡಿಮೆ ಅನಿಸಿತೇ ? ೭. ಸ್ಮಶಾನದಲ್ಲಿ ಮೃತ ವ್ಯಕ್ತಿಯ ಅಸ್ಥಿ ಮತ್ತು ರಕ್ಷೆಯನ್ನು ಸಂಗ್ರಹಿಸಲು ಹೋದಾಗ ಅದನ್ನು ನೋಡಿ ಒಳ್ಳೆಯದು ಅನ್ನಿಸಿತೇ ಅಥವಾ ತೊಂದರೆದಾಯಕ ಅನ್ನಿಸಿತೇ ? ಅದರ ವಾಸನೆ ನೋಡಿ ಅದರ ವರ್ಣನೆಯನ್ನು ಬರೆಯಿರಿ. ಅಸ್ಥಿ ಮತ್ತು ರಕ್ಷೆಯ ಛಾಯಾಚಿತ್ರವನ್ನು ತೆಗೆದು ಕಳುಹಿಸಿರಿ. ೮. ಶ್ರಾದ್ಧ ವಿಧಿಯಲ್ಲಿ ಮೃತವ್ಯಕ್ತಿಯ ಪಿಂಡಕ್ಕೆ ಕಾಗೆ ಸ್ಪರ್ಶಿಸಿತೇ ? ಯಾವುದಾದರೂ ಪ್ರಾರ್ಥನೆ ಮಾಡಿದ ನಂತರ ಕಾಗೆ ಸ್ಪರ್ಶಿಸಿದ್ದರೆ ಆಗ ಯಾವ ಪ್ರಾರ್ಥನೆ ಮಾಡಿದ್ದೀರಿ ? ಸಾಮಾನ್ಯವಾಗಿ ಇಂತಹ ಮಾಹಿತಿಯನ್ನು ಬರೆದು ಕಳುಹಿಸಬೇಕು. ಇನ್ನೇನಾದರೂ ವಿಶೇಷ ವಿಷಯಗಳು ಕಂಡು ಬಂದಲ್ಲಿ ಆ ಮಾಹಿತಿಯನ್ನೂ ಕಳುಹಿಸಿರಿ. ನಾವು ಅದರ ಸಂಶೋಧನೆ ನಡೆಸಿ ಅದನ್ನು ‘ಸನಾತನ ಪ್ರಭಾತ’ದ ನಿಯತಕಾಲಿಕೆಗಳಳ್ಲಿ ಪ್ರಕಟಿಸುತ್ತೇವೆ. ತಾವು ಸಂಗ್ರಹಿಸಿದ ಮಾಹಿತಿಯನ್ನು ‘ಸೌ. ಮಧುರಾ ಕರ್ವೆ’ ಅವರ ಹೆಸರಿಗೆ ಈ ಕೆಳಗಿನ ವಿ-ಅಂಚೆ ವಿಳಾಸಕ್ಕೆ ಕಳುಹಿಸಿ. ವಿ-ಅಂಚೆ ವಿಳಾಸ : [email protected] ಸಂಪರ್ಕ ಸಂಖ್ಯೆ : 9561574972 ಟಿಪ್ಪಣಿ : ಇಲ್ಲಿ ಪ್ರಕಟಿಸಲಾದ ಅನುಭೂತಿಗಳು ಕೆಲವು ಬಾರಿ ಅನಿಷ್ಟ ಶಕ್ತಿಗಳಿಂದ ಅಥವಾ ಭಾವವಿದ್ದಲ್ಲಿ ದೇವರಿರುತ್ತಾನೆ ಎಂಬ ಉಕ್ತಿಯಂತೆ ಸಂತರಿಗೆ ಬಂದ ವೈಯಕ್ತಿಕ ಅನುಭೂತಿಗಳಾಗಿರುತ್ತವೆ. ಅವು ಎಲ್ಲರಿಗೂ ಬರಲೇಬೇಕೆಂದಿಲ್ಲ. – ಸಂಪಾದಕರು |
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯಲ್ಲಿ ಮೂಡಿದ ಕಮಲವು ಸ್ಪಷ್ಟವಾಗಿ ಕಾಣುವುದರ ಕಾರಣವೇನು !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿವಿಧ ಕೃತಿಗಳಿಂದ ಪ್ರಕ್ಷೇಪಿಸುವ ಸ್ಪಂದನಗಳ ಅಧ್ಯಯನ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !