ನಿವೃತ್ತ ಭೂಸೇನಾ ಮುಖ್ಯಸ್ಥ ಜನರಲ್ ಮುಕುಂದ ನರವಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪ್ರಕಾಶನಗೊಳ್ಳದ ಪುಸ್ತಕದ ಪ್ರಕರಣ

ನವದೆಹಲಿ – ಭಾರತದ ನಿವೃತ್ತ ಭೂಸೇನಾ ಮುಖ್ಯಸ್ಥ ಜನರಲ್ ಮುಕುಂದ ನರವಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಎಂಬ ಪ್ರಕಾಶನಗೊಳ್ಳದ ಪುಸ್ತಕದ ಕುರಿತು ವಿವಾದ ನಡೆಯುತ್ತಿದೆ. ಈ ಪುಸ್ತಕವನ್ನು ಯೋಜನಾಬದ್ಧವಾಗಿ ಸೋರಿಕೆ ಮಾಡಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ದೆಹಲಿ ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಪುಸ್ತಕವನ್ನು ರಕ್ಷಣಾ ಸಚಿವಾಲಯದ ಅಗತ್ಯ ಅನುಮತಿಯಿಲ್ಲದೆ ಪ್ರಕಟಿಸಲಾಗಿದೆ ಮತ್ತು ಮೊದಲಿಗೆ ಕೆನಡಾ, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಅಮೆರಿಕದ ಆನ್ ಲೈನ್ ವೇದಿಕೆಗಳಲ್ಲಿ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗಿತ್ತು. ನಂತರ ಅದು ಬೇರೆಡೆ ಕಂಡುಬಂದಿತು. ಆರಂಭಿಕ ಮಾರಾಟವೂ ಇದೇ ದೇಶಗಳಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ, ‘ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ’ ಪ್ರಕಟಣೆಯನ್ನು ಬಿಡುಗಡೆ ಮಾಡಿ, ಪುಸ್ತಕವು ಯಾವುದೇ ರೂಪದಲ್ಲಿ ಪ್ರಕಟವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಪುಸ್ತಕದ ಪ್ರಕಟಣೆಯ ಹಕ್ಕುಗಳು ಪೆಂಗ್ವಿನ್ ಸಂಸ್ಥೆಯ ಬಳಿಯೇ ಇವೆ ಎಂದು ಅದು ತಿಳಿಸಿದೆ. ಘೋಷಿಸಿರುವ ಶೀರ್ಷಿಕೆ, ಮುಂಗಡ ನೋಂದಣಿ ಮತ್ತು ಪ್ರತ್ಯಕ್ಷ ಪ್ರಕಟವಾದ ಪುಸ್ತಕ ಇವು ಬೇರೆ ಬೇರೆ ಹಂತದ ವಿಷಯಗಳಾಗಿವೆ. ಪುಸ್ತಕವು ಚಿಲ್ಲರೆ ಮಾರಾಟದ ಜಾಲದಲ್ಲಿ ಲಭ್ಯವಾದ ನಂತರವೇ ಅದನ್ನು ಪ್ರಕಟಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಮುದ್ರಿತ ಅಥವಾ ಡಿಜಿಟಲ್ ರೂಪದ ಯಾವುದೇ ಅಧಿಕೃತ ಪ್ರತಿಯನ್ನು ಬಿಡುಗಡೆ ಮಾಡಲಾಗಿಲ್ಲ ಮತ್ತು ಪ್ರಸ್ತುತ ಪ್ರಸಾರವಾಗುತ್ತಿರುವ ಯಾವುದೇ ಸಾಹಿತ್ಯವನ್ನು ಕೃತಿಸ್ವಾಮ್ಯ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ವಿವಾದ ಏಕೆ ಉಂಟಾಯಿತು?
ಜನರಲ್ ನರವಣೆ ಅವರ ಪುಸ್ತಕದ ಮೇಲಿನ ವಿವಾದವು ಸಂಸತ್ತಿನಲ್ಲಿ ಆರಂಭವಾಯಿತು. ರಾಹುಲ್ ಗಾಂಧಿಯವರು ನರವಣೆ ಅವರ ಈ ಪ್ರಕಟವಾಗದ ಪುಸ್ತಕದ ವಿಷಯಗಳನ್ನು ಉಲ್ಲೇಖಿಸುತ್ತಾ ಲೋಕಸಭೆಯಲ್ಲಿ ಪುಸ್ತಕದ ಪ್ರತಿಯನ್ನು ತೋರಿಸಿದರು. ಇದಕ್ಕೆ ಆಡಳಿತ ಪಕ್ಷವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ‘ಅಪ್ರಕಟಿತ ಹಸ್ತಪ್ರತಿಯನ್ನು ಹೇಗೆ ಪಡೆಯಲಾಯಿತು ಮತ್ತು ಅದರ ವಿಷಯಗಳನ್ನು ಸದನದಲ್ಲಿ ಹೇಗೆ ಉಲ್ಲೇಖಿಸಲಾಯಿತು?’ ಎಂಬ ಪ್ರಶ್ನೆಯನ್ನು ಎತ್ತಲಾಯಿತು. ನಂತರ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ರಾಹುಲ ಗಾಂಧಿಯವರ ಪ್ರಕಾರ, ಪುಸ್ತಕದಲ್ಲಿ ೨೦೨೦ ರಲ್ಲಿ ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸಂಘರ್ಷದ ಕುರಿತು ಸರಕಾರಕ್ಕೆ ಮುಜುಗರ ಉಂಟು ಮಾಡುವಂತಹ ಸತ್ಯಗಳಿವೆ. ಈ ಪ್ರಕರಣದ ಸಮಯದಲ್ಲಿ ಮೋದಿ ಸರಕಾರವು ಜನರಲ್ ನರವಣೆ ಅವರನ್ನು ಏಕಾಂಗಿಯಾಗಿಸಿತ್ತು ಮತ್ತು ಚೀನೀ ಸೈನಿಕರ ಮೇಲೆ ಗುಂಡು ಹಾರಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವನ್ನು ಅವರ ಮೇಲೆಯೇ ಹೊರಿಸಲಾಗಿತ್ತು ಎಂದು ಅವರು ದಾವೆ ಮಾಡಿದ್ದಾರೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !