
ನವ ದೆಹಲಿ – ಬಾಂಗ್ಲಾದೇಶದಲ್ಲಿ ಫೆಬ್ರವರಿ ೧೨ ರಂದು ಸಾರ್ವತ್ರಿಕ ಚುನಾವಣೆ ನಡೆದಿದೆ. ಈ ಕುರಿತು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಅವರು ‘ಎ.ಎನ್.ಐ.’ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ, ಬಾಂಗ್ಲಾದೇಶದಲ್ಲಿ ‘ಜಮಾತ್-ಎ-ಇಸ್ಲಾಮಿ’ ಪಕ್ಷವು ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶದ ಪ್ರಜಾಪ್ರಭುತ್ವವು ಅಂತ್ಯಗೊಳ್ಳಲಿದೆ ಮತ್ತು ಕಟ್ಟರವಾದವು ಹೆಚ್ಚಾಗಲಿದೆ. ಇದರಿಂದಾಗಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಲಿವೆ ಮತ್ತು ಅವರು ದೇಶವನ್ನು ತೊರೆಯಬೇಕಾಗಬಹುದು. ಮಹಿಳೆಯರಿಗೆ ಬುರ್ಖಾವನ್ನು ಕಡ್ಡಾಯಗೊಳಿಸಲಾಗುವುದು. ಇದರಿಂದಾಗಿ ಬಾಂಗ್ಲಾದೇಶವು ಎರಡನೇ ಅಫ್ಘಾನಿಸ್ತಾನವಾಗಬಹುದು ಎಂದು ಹೇಳಿದರು.
Power shifts in Dhaka, but the fear among Bangladeshi Hindus remains constant.
"If Jamaat-e-Islami rises, Bangladesh may turn into another Afghanistan."
Taslima Nasreen cautions against the party's rise.
India must prepare; safety of Hindus across borders is not optional. 🇮🇳… pic.twitter.com/hWUis4JQGg
— Sanatan Prabhat (@SanatanPrabhat) February 13, 2026
ನಸ್ರೀನ್ ಅವರು ಮಾತು ಮುಂದುವರೆಸಿ,
೧. ೧೯೭೧ ರ ಯುದ್ಧದಲ್ಲಿ ಜಮಾತ್-ಎ-ಇಸ್ಲಾಮಿಯು ಪಾಕಿಸ್ತಾನಿ ಸೇನೆಗೆ ಸಾಥ್ ನೀಡಿತ್ತು. ಈ ಶಕ್ತಿಗಳು ಭಾರತ ವಿರೋಧಿ ಮತ್ತು ಪಾಕಿಸ್ತಾನದ ಪರವಾಗಿವೆ; ಆದರೆ ಈ ಬಾರಿಯೂ ಜಮಾತ್ ಚುನಾವಣೆಯಲ್ಲಿ ಗೆಲ್ಲುವುದಿಲ್ಲ.
೨. ಈ ಚುನಾವಣೆಯಲ್ಲಿ ಜಮಾತ್ ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಿದರು. ‘ನಮ್ಮ ಪಕ್ಷದ ಚುನಾವಣಾ ಚಿಹ್ನೆಯಾದ ತಕ್ಕಡಿಗೆ ಮತ ನೀಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಮತ್ತು ನಮಗೆ ಮತ ನೀಡುವುದು ಅಲ್ಲಾಹನ ಆದೇಶವಾಗಿದೆ’ ಎಂದು ಜಮಾತ್ ಕಾರ್ಯಕರ್ತರು ದಾವೆ ಮಾಡಿದ್ದರು.
೩. ‘ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ’ (ಬಿ.ಎನ್.ಪಿ.) ಅಧಿಕಾರಕ್ಕೆ ಬಂದರೆ ಅದರ ಮುಂದೆ ದೊಡ್ಡ ಸವಾಲುಗಳಿರುತ್ತವೆ. ಯಾವುದೇ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದು ಅಗತ್ಯವಾಗಿದೆ. ಅವರು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕಾಗುತ್ತದೆ. ‘ಬಿ.ಎನ್.ಪಿ.’ ಈ ಅಂಶಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಜನಸಾಮಾನ್ಯರ ವಿಶ್ವಾಸವನ್ನು ಪಡೆಯಬಹುದು ಎಂದು ಹೇಳಿದರು.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಅಲ್ಲಿನ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಅವರ ರಕ್ಷಣೆಗಾಗಿ ಭಾರತವು ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ! |
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ