ಬಾಂಗ್ಲಾದೇಶದಲ್ಲಿ ಹಿಂದೂಗಳು ಅಸುರಕ್ಷಿತ!

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮೈಮನ್‌ಸಿಂಗ್ ಜಿಲ್ಲೆಯಲ್ಲಿ ಫೆಬ್ರವರಿ ೯ ರ ರಾತ್ರಿ ಸುಸೇನ್ ಚಂದ್ರ ಸರ್ಕಾರ್ (೬೨ ವರ್ಷ) ಎಂಬ ಹಿಂದೂ ವ್ಯಾಪಾರಿಯನ್ನು ಅಪರಿಚಿತರು ಹತ್ಯೆ ಮಾಡಿದ್ದಾರೆ. ಇದೇ ಜಿಲ್ಲೆಯಲ್ಲಿ ಈ ಹಿಂದೆ ದೀಪು ಚಂದ್ರ ದಾಸ್ ಎಂಬ ಹಿಂದೂ ಯುವಕನನ್ನು ಮುಸ್ಲಿಂ ಗುಂಪೊಂದು ಜೀವಂತವಾಗಿ ಸುಟ್ಟು ಹತ್ಯೆ ಮಾಡಿತ್ತು.
ಸುಸೇನ್ ಸರ್ಕಾರ್ ಅವರು ಧಾನ್ಯದ ವ್ಯಾಪಾರಿಯಾಗಿದ್ದರು ಮತ್ತು ಡಾಕಿನ್‌ಕಾಂಡ ಗ್ರಾಮದಲ್ಲಿ ವಾಸಿಸುತ್ತಿದ್ದರು. ಅವರ ‘ಭಾಯಿ ಭಾಯಿ ಎಂಟರ್‌ಪ್ರೈಸ್’ ಹೆಸರಿನ ಅಂಗಡಿಯು ಬೋಗರ್ ಬಜಾರ್ ವೃತ್ತದಲ್ಲಿತ್ತು. ರಾತ್ರಿ ೧೧ ಗಂಟೆಯ ಸುಮಾರಿಗೆ ಅಪರಿಚಿತರು ಸುಸೇನ್ ಚಂದ್ರ ಸರ್ಕಾರ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ನಂತರ ಸರ್ಕಾರ್ ಅವರನ್ನು ಅಂಗಡಿಯೊಳಗೆ ತಳ್ಳಿ ಶಟರ್ ಬಂದ್ ಮಾಡಿದ್ದಾರೆ. ಸರ್ಕಾರ್ ಅವರ ಕುಟುಂಬದವರು ಅವರನ್ನು ಹುಡುಕುತ್ತಾ ಅಂಗಡಿಗೆ ಹೋದಾಗ ಅವರು ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
೧೭ ಹಿಂದೂಗಳ ಹತ್ಯೆ
ಫೆಬ್ರವರಿ ೧೨ ರಂದು ಬಾಂಗ್ಲಾದೇಶದ ಸಂಸತ್ತಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದೂಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಡಿಸೆಂಬರ್ ೨೦೨೫ ರಿಂದ ಜನವರಿ ೨೦೦೬ ರ ಅವಧಿಯಲ್ಲಿ ೧೭ ಹಿಂದೂಗಳ ಹತ್ಯೆಯಾಗಿರುವುದು ದಾಖಲಾಗಿದೆ. ೨೦೨೨ ರ ಜನಗಣತಿಯ ಪ್ರಕಾರ ಬಾಂಗ್ಲಾದೇಶದಲ್ಲಿ ಹಿಂದೂಗಳ ಜನಸಂಖ್ಯೆಯು ಸುಮಾರು ಶೇಕಡಾ ೮ ರಷ್ಟಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !