ಸಂಭಲ್ (ಉತ್ತರ ಪ್ರದೇಶ): ಸರ್ಕಾರಿ ಶಾಲೆಯ ಗೋಡೆಗಳ ಮೇಲಿದ್ದ ಮಹಾಪುರುಷರ ಚಿತ್ರಗಳನ್ನು ಅಳಿಸಿ ಕುರಾನ್ ಆಯತ್‌ಗಳ ಬರಹ!

ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕ ಮೊಹಮ್ಮದ್ ನಾಜಿಮ್ ಅಮಾನತು

(ಆಯತ ಎಂದರೆ ಕುರಾನಿನಲ್ಲಿನ ಸಾಲುಗಳು)

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಸಂಭಲ್ ಜಿಲ್ಲೆಯ ಕುಢ್‌ಫತೇಗಢ್ ವ್ಯಾಪ್ತಿಯ ನಗಲಾ ಪೂರ್ವಾ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಗೋಡೆಗಳ ಮೇಲೆ ಕುರಾನ್‌ನ ಆಯತ್‌ಗಳನ್ನು ಬರೆದಿರುವುದು ಮತ್ತು ಮಹಾಪುರುಷರ ಚಿತ್ರಗಳನ್ನು ತೆಗೆದುಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಶಿಕ್ಷಣಾಧಿಕಾರಿಗಳು ಶಾಲೆಯ ಮುಖ್ಯೋಪಾಧ್ಯಾಯಿನಿ ಪುಷ್ಪಾ ದೇವಿ ಮತ್ತು ಸಹಾಯಕ ಶಿಕ್ಷಕ ಮೊಹಮ್ಮದ್ ನಾಜಿಮ್ ಅವರನ್ನು ತಕ್ಷಣವೇ ಅಮಾನತುಗೊಳಿಸಿದ್ದಾರೆ. ಈ ಸಂಪೂರ್ಣ ಘಟನೆಗೆ ನಾಜಿಮ್ ಅವರೇ ಜವಾಬ್ದಾರರು ಎಂದು ಪುಷ್ಪಾ ದೇವಿ ಆರೋಪಿಸಿದ್ದಾರೆ.

1. ಫೆಬ್ರವರಿ 6 ರಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರಿಗೆ ಶಾಲೆಯಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಲಭಿಸಿತ್ತು. ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

2. ಕಾರ್ಯಕರ್ತರ ಆರೋಪ ಮಾಡುತ್ತಾ, ಗೋಡೆಗಳ ಮೇಲಿದ್ದ ಪ್ರಧಾನಮಂತ್ರಿಗಳು, ಭಾರತ ಮಾತೆ, ಶ್ರೀ ಸರಸ್ವತಿ ದೇವಿ, ಸುಭಾಷ್ ಚಂದ್ರ ಬೋಸ್ ಮತ್ತು ರವೀಂದ್ರನಾಥ ಟ್ಯಾಗೋರ್ ಸೇರಿದಂತೆ ಹಲವು ಮಹಾಪುರುಷರ ಚಿತ್ರಗಳನ್ನು ತೆಗೆದು ಕೋಣೆಯೊಂದರಲ್ಲಿ ಇಡಲಾಗಿತ್ತು. ಅವುಗಳ ಬದಲಿಗೆ ಗೋಡೆಗಳ ಮೇಲೆ ಕುರಾನ್‌ನ ವಾಕ್ಯಗಳನ್ನು ಬರೆಯಲಾಗಿತ್ತು.

3. ಇದು ಸರಕಾರಿ ಶಾಲೆಯ ನಿಯಮಗಳ ವಿರುದ್ಧವಾಗಿದೆ ಎಂದು ಹಿಂದೂತ್ವನಿಷ್ಠ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು. ಅಲ್ಲದೆ, ಶಾಲೆಯಲ್ಲಿ ‘ಜಿಹಾದ್’ ನಡೆಸಲಾಗುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿ ಘೋಷಣೆಗಳನ್ನು ಕೂಗಿದರು.

4. ಗದ್ದಲದ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಪ್ರಕರಣವನ್ನು ಶಾಂತಗೊಳಿಸಲಾಯಿತು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಲಾಗಿದೆ.

5. ಶಿಕ್ಷಣಾಧಿಕಾರಿ ಅಲ್ಕಾ ಶರ್ಮಾ ಅವರು ಈ ಇಡೀ ಪ್ರಕರಣದ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆಯನ್ನು ಬೋಧಿಸಬೇಕು ಎಂಬ ಬೇಡಿಕೆ ಬಂದಾಗ ಕಿರುಚಾಡುವ ಕಪಟ ಜಾತ್ಯತೀತವಾದಿಗಳು, ಶಾಲೆಗಳ ಇಸ್ಲಾಮೀಕರಣವಾಗುತ್ತಿರುವಾಗ ಮಾತ್ರ ಮೌನಕ್ಕೆ ಶರಣಾಗುತ್ತಾರೆ ಎಂಬುದನ್ನು ಗಮನಿಸಿ!