ಪಾಕಿಸ್ತಾನಿ ತಜ್ಞರ ಶಂಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಕಳೆದ ಒಂದು ವಾರದಿಂದ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿ.ಎಲ್.ಎ.) ಮತ್ತು ಪಾಕಿಸ್ತಾನಿ ಸೈನ್ಯದ ನಡುವೆ ಹಲವು ಭಾಗಗಳಲ್ಲಿ ಸಂಘರ್ಷ ನಡೆಯುತ್ತಿದೆ. ಈ ಚಟುವಟಿಕೆಗಳಿಗೆ ಭಾರತದ ಬೆಂಬಲವಿದೆ ಎಂದು ಪಾಕಿಸ್ತಾನಿ ಸೈನ್ಯ ಮತ್ತು ಸರಕಾರ ಆರೋಪಿಸಿವೆ. ಆದರೆ, ಕೆಲವು ಪಾಕಿಸ್ತಾನಿ ತಜ್ಞರ ಪ್ರಕಾರ, ಈ ಹಿಂಸಾಚಾರದ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನೈಜ ಕೈವಾಡವಿರಬಹುದು ಎನ್ನಲಾಗಿದೆ.
ಪಾಕಿಸ್ತಾನಿ ತಜ್ಞ ಅಲಿ ಮುಸ್ತಫಾ ಅವರು ತಮ್ಮ ವಿಶ್ಲೇಷಣೆಯಲ್ಲಿ, ಬಲೂಚಿಸ್ತಾನದ ಇತ್ತೀಚಿನ ಹಿಂಸಾಚಾರದಲ್ಲಿ ಯುಎಇ ಪ್ರಮುಖ ಪಾತ್ರ ವಹಿಸಿರಬಹುದೆಂದು ಹೇಳಿದರು. ಒಂದೇ ಸಮಯದಲ್ಲಿ ಬಲೂಚಿಸ್ತಾನ್ ಪ್ರಾಂತ್ಯದ 12 ನಗರಗಳಲ್ಲಿ ಬಿ.ಎಲ್.ಎ. ಏಕಕಾಲದಲ್ಲಿ ದಾಳಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ಬಳಸಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ದಾಳಿಗಳ ಯೋಜನೆಯನ್ನು ಗಮನಿಸಿದರೆ, ಈ ಗುಂಪಿಗೆ ವಿದೇಶದಿಂದ ದೊಡ್ಡ ನೆರವು ಸಿಗುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.
Shocking claims emerging from Pakistan! 📢
Experts are now alleging a direct link between the United Arab Emirates (UAE) and the Balochistan Liberation Army (BLA) regarding recent military strikes. ⚔️
Is this a major shift in regional diplomacy? 🤔#Pakistan #Balochistan… pic.twitter.com/vmyiGNODIe
— Sanatan Prabhat (@SanatanPrabhat) February 7, 2026
ಪಾಕಿಸ್ತಾನಕ್ಕೆ ಸಹಾಯ ಮಾಡುವ ಸೌದಿ ಅರೇಬಿಯಾದೊಂದಿಗೆ ಯುಎಇ ಸಂಬಂಧ ಹದಗೆಟ್ಟಿದೆ!
ಅಲಿ ಮುಸ್ತಫಾ ಅವರ ಪ್ರಕಾರ, ಕಳೆದ ವರ್ಷದ ಅಂತ್ಯದಲ್ಲಿ ಯುಎಇ ಅಧ್ಯಕ್ಷ ಅಲ್ ನಹ್ಯಾನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಮತ್ತು ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆಯ ಬಗ್ಗೆ ಮಾತನಾಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ವೇಗವಾಗಿ ಬದಲಾಗಿದೆ. ವಿಶೇಷವಾಗಿ ಸೌದಿ ಅರೇಬಿಯಾದೊಂದಿಗೆ ಯುಎಇ ಹೊಂದಿರುವ ಉದ್ವಿಗ್ನ ಸಂಬಂಧವು ಪಾಕಿಸ್ತಾನವನ್ನು ಅವರಿಂದ ದೂರ ತಳ್ಳುತ್ತಿದೆ. ಪಾಕಿಸ್ತಾನವು ಸದ್ಯ ಸೌದಿ ಅರೇಬಿಯಾಕ್ಕೆ ಹತ್ತಿರವಾಗುತ್ತಿದ್ದರೆ, ಯುಎಇ ಇಸ್ರೇಲ್ ಮತ್ತು ಭಾರತದೊಂದಿಗೆ ನಿಕಟ ಸಂಬಂಧ ಹೊಂದಿದೆ.
ಗ್ವಾದರ್ ಬಂದರು ವಿವಾದ
ಸೌದಿ ಅರೇಬಿಯಾದೊಂದಿಗಿನ ಉದ್ವಿಗ್ನತೆಯ ಹೊರತಾಗಿ, ಬಲೂಚಿಸ್ತಾನ್ ಮತ್ತು ಗ್ವಾದರ್‌ನಲ್ಲಿ ಅಸ್ಥಿರತೆಯನ್ನು ಸೃಷ್ಟಿಸುವ ಹಿಂದೆ ಯುಎಇಯ ಆರ್ಥಿಕ ಹಿತಾಸಕ್ತಿ ಅಡಗಿದೆ ಎಂದು ಹೇಳಲಾಗುತ್ತಿದೆ. ಅಲಿ ಮುಸ್ತಫಾ ಅವರ ಪ್ರಕಾರ, ಗ್ವಾದರ್ ಬಂದರಿನ ಕಾರ್ಯನಿರ್ವಹಣೆಗೆ ಅಡ್ಡಿಯುಂಟಾದರೆ ಅದರ ಲಾಭ ಯುಎಇಗೆ ಸಿಗುತ್ತದೆ. ಗ್ವಾದರ್ ಬಂದರು ಸಂಪೂರ್ಣವಾಗಿ ಕಾರ್ಯಾರಂಭವಾದರೆ, ಕಡಲ ವ್ಯಾಪಾರದಲ್ಲಿ ಯುಎಇ ಹೊಂದಿರುವ ಪ್ರಭಾವ ಕಡಿಮೆಯಾಗಬಹುದು. ಆದ್ದರಿಂದ, ಬಿ.ಎಲ್.ಎ. ಹಿಂಸಾಚಾರದಿಂದ ಗ್ವಾದರ್ ಅಸ್ಥಿರವಾಗಿರುವುದು ಯುಎಇ ಹಿತಾಸಕ್ತಿಗೆ ಪೂರಕವಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಪಾಕಿಸ್ತಾನದಲ್ಲಿ ಗೊಂದಲ ಸೃಷ್ಟಿಸುವ ಆರೋಪ
ಅರಬ್ಬಿ ಸಮುದ್ರದ ಜೆಬೆಲ್ ಅಲಿ ಬಂದರಿನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಜಾಗತಿಕ ವ್ಯಾಪಾರವನ್ನು ಗ್ವಾದರ್‌ನಿಂದ ದೂರವಿಡುವುದು ಯುಎಇಗೆ ಲಾಭದಾಯಕವಾಗಿದೆ. ಆದ್ದರಿಂದ ಗ್ವಾದರ್‌ನಲ್ಲಿ, ವಿಶೇಷವಾಗಿ ಚೀನೀ ಇಂಜಿನಿಯರ್‌ಗಳ ಮೇಲೆ ದಾಳಿಗಳು ಮುಂದುವರಿಯಬೇಕೆಂದು ಯುಎಇ ಬಯಸುತ್ತಿರಬಹುದು. ಗ್ವಾದರ್‌ನಲ್ಲಿನ ಹಿಂಸಾಚಾರವು ದುಬೈನ ಸರಕು ಸಾಗಣೆ ಟರ್ಮಿನಲ್‌ಗಳಿಗೆ ಸಮಾಧಾನ ತರುತ್ತದೆ. ಬಲೂಚಿಸ್ತಾನದಲ್ಲಿ ಅರಾಜಕತೆಯನ್ನು ಹೆಚ್ಚಿಸುವ ಮೂಲಕ ಕಡಲ ವ್ಯಾಪಾರದ ಮೇಲಿನ ತನ್ನ ಹಿಡಿತವನ್ನು ಕಾಯ್ದುಕೊಳ್ಳಲು ಯುಎಇ ಪ್ರಯತ್ನಿಸುತ್ತಿದೆ ಎಂದು ಮುಸ್ತಫಾ ಹೇಳಿದರು.
ಭಾರತದ ವಿರುದ್ಧವೂ ಪರೋಕ್ಷ ಆರೋಪ
ಬಲೂಚಿಸ್ತಾನದಲ್ಲಿ ಭಾರತದ ಹಸ್ತಕ್ಷೇಪದ ಬಗ್ಗೆ ಚರ್ಚೆಗಳು ನಡೆಯುತ್ತಿವೆ; ಆದರೆ ಭಾರತದಿಂದ ,ಅಫ್ಘಾನಿಸ್ತಾನ ಅಥವಾ ಇರಾನ್ ಮೂಲಕ ಸಹಾಯ ಬರುತ್ತಿರುವ ಬಗ್ಗೆ ಯಾವುದೇ ಸೂಚನೆಗಳು ಕಾಣಿಸುತ್ತಿಲ್ಲ ಎಂದು ಮುಸ್ತಫಾ ಹೇಳಿದ್ದಾರೆ. ಯುಎಇ ಮೇಲೆ ಭಾರತ ಹೊಂದಿರುವ ಪ್ರಭಾವವನ್ನು ಗಮನಿಸಿದರೆ, ಭಾರತವು ಬಿ.ಎಲ್.ಎ.ಗೆ ಸಹಾಯ ಮಾಡುತ್ತಿದ್ದರೆ, ಅದಕ್ಕೆ ದುಬೈ ಒಂದು ಮಾರ್ಗವಾಗಿರಬಹುದು ಎಂಬ ಸಾಧ್ಯತೆಯನ್ನು ಅವರು ತಳ್ಳಿಹಾಕಿಲ್ಲ.
ಯುಎಇ ವಿರುದ್ಧದ ಸಂಶಯ ಮತ್ತಷ್ಟು ಬಲ
ಯುಎಇ ಮೇಲೆ ಸಂಶಯ ವ್ಯಕ್ತಪಡಿಸಿದವರು ಅಲಿ ಮುಸ್ತಫಾ ಒಬ್ಬರೇ ಅಲ್ಲ. ಪಾಕಿಸ್ತಾನದ ಹಿರಿಯ ಪತ್ರಕರ್ತ ಅಬ್ಸಾರ್ ಆಲಂ ಕೂಡ ಇತ್ತೀಚೆಗೆ ಇಸ್ಲಾಮಾಬಾದ್ ಎದುರಿಸುತ್ತಿರುವ ಭಯೋತ್ಪಾದನಾ ಸವಾಲುಗಳ ಹಿಂದೆ ಯುಎಇಯ ದೊಡ್ಡ ಪಾತ್ರವಿದೆ ಎಂದು ಹೇಳಿದ್ದರು. ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಮತ್ತು ಬಿ.ಎಲ್.ಎ. ಎರಡೂ ಸಂಘಟನೆಗಳಿಗೆ ಯುಎಇಯಿಂದ ಸಹಾಯ ಸಿಗುತ್ತಿದೆ. ಬಿ.ಎಲ್.ಎ. ಸದಸ್ಯರಿಗೆ ಯುಎಇಯಲ್ಲಿ ಆಶ್ರಯ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ .
‘ಬಲೂಚಿಸ್ತಾನ್ ದಾಳಿಗಳ ಹಿಂದೆ ಭಾರತ!’ – ಪಾಕ್ ಸೈನ್ಯ
ಪಾಕಿಸ್ತಾನಿ ಮಾಧ್ಯಮಗಳ ಮಾಹಿತಿ ಪ್ರಕಾರ, ಸೈನ್ಯದ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಪ್ರಧಾನ ಮಂತ್ರಿ ಶಹಬಾಜ್ ಶರೀಫ್ ಅವರು ಬಲೂಚಿಸ್ತಾನ್ ದಾಳಿಯಲ್ಲಿ ಗಾಯಗೊಂಡವರನ್ನು ಕ್ವೆಟ್ಟಾದ ಆಸ್ಪತ್ರೆಯಲ್ಲಿ ಭೇಟಿಯಾದರು. ಬಿ.ಎಲ್.ಎ. ಭಾರತದ ಸಹಾಯದಿಂದ ಈ ದಾಳಿಗಳನ್ನು ನಡೆಸಿದೆ ಎಂದು ಪಾಕಿಸ್ತಾನಿ ಸೈನ್ಯವು ಮುನೀರ್ ಅವರಿಗೆ ಮಾಹಿತಿ ನೀಡಿತು. ಇದರ ನಂತರ ಮಾತನಾಡಿದ ಮುನೀರ್, ದಾಳಿ ನಡೆಸಿದ ಭಯೋತ್ಪಾದಕರನ್ನು ಮತ್ತು ಅವರಿಗೆ ಸಹಾಯ ಮಾಡಿದವರನ್ನು ಕ್ಷಮಿಸುವುದಿಲ್ಲ, ಪ್ರತಿಯೊಬ್ಬರಿಗೂ ಶಿಕ್ಷೆಯಾಗಲಿದೆ ಎಂದು ಎಚ್ಚರಿಸಿದರು.
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !