|

ಮುಂಬಯಿ, ಜನವರಿ 29 (ವಾರ್ತೆ) – ಹಿಂದೂ ವಿಧಿಜ್ಞ ಪರಿಷತ್ತಿನ ದೂರಿನ ನಂತರ, ಮಹಾರಾಷ್ಟ್ರ ವಕ್ಫ್ ಬೋರ್ಡ್ (ಮಂಡಳಿ) 2002 ರಿಂದ 2018 ರವರೆಗಿನ ವಾರ್ಷಿಕ ಆಡಿಟ್ (ಲೆಕ್ಕಪರಿಶೋಧನೆ) ವರದಿಗಳನ್ನು ಸರಕಾರಕ್ಕೆ ಸಲ್ಲಿಸಿದೆ. ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ ಅವರು ಮಾರ್ಚ್ 2025 ರಲ್ಲಿ ರಾಜ್ಯದ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಗೆ ಈ ಬಗ್ಗೆ ದೂರು ನೀಡಿದ್ದರು. ಈ ಕುರಿತು ಕ್ರಮಕ್ಕಾಗಿ ಅವರು ನಿರಂತರ ಬೆಂಬೆತ್ತುವಿಕೆ ಮಾಡುತ್ತಿದ್ದರು. ಅದರ ನಂತರ, ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯು ಬಾಕಿ ಇರುವ ಆಡಿಟ್ ವರದಿಗಳನ್ನು ಸಲ್ಲಿಸುವಂತೆ ವಕ್ಫ್ ಬೋರ್ಡ್‌ಗೆ ಸೂಚನೆ ನೀಡಿತು. (ಕೇವಲ ನಿರ್ದೇಶನ ನೀಡಿದರೆ ಏನು ಪ್ರಯೋಜನ? ಬೋರ್ಡ್ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಮುಸ್ಲಿಂ ಬಾಂಧವರು ತಮ್ಮ ಹಿತದೃಷ್ಟಿಯಿಂದ ರಚಿಸಲಾದ ಬೋರ್ಡ್‌ನ ಈ ಅಸ್ಪಷ್ಟ ಕೆಲಸದ ವಿರುದ್ಧ ಕ್ರಮಕ್ಕೆ ಯಾಕೆ ಒತ್ತಾಯಿಸುತ್ತಿಲ್ಲ? – ಸಂಪಾದಕರು)
1. ಪ್ರತಿ ಸರಕಾರಿ ಮಂಡಳಿ ಅಥವಾ ನಿಗಮವು ಪ್ರತಿ ವರ್ಷ ತನ್ನ ಆಡಿಟ್ ವರದಿಯನ್ನು ಸರಕಾರಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ.
2. 1995 ರಲ್ಲಿ ವಕ್ಫ್ ಕಾಯ್ದೆ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ವಕ್ಫ್ ಬೋರ್ಡ್ ಪ್ರತಿ ವರ್ಷ ಆಡಿಟ್ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು. ಇದು ನಡೆಯುತ್ತಿಲ್ಲ ಎಂಬುದು ಹಿಂದೂ ವಿಧಿಜ್ಞ ಪರಿಷತ್ತಿನ ಗಮನಕ್ಕೆ ಬಂದ ತಕ್ಷಣ, ಅವರು ದೂರು ನೀಡುವ ಮೂಲಕ ವಕ್ಫ್ ಬೋರ್ಡ್‌ನ ಈ ಅವ್ಯವಸ್ಥೆಯನ್ನು ಸರಕಾರದ ಗಮನಕ್ಕೆ ತಂದರು.
3. ತದನಂತರ, 2002 ರಿಂದ 2018 ರವರೆಗಿನ ಆಡಿಟ್ ವರದಿಗಳನ್ನು ಸರಕಾರಕ್ಕೆ ಸಲ್ಲಿಸಿರುವ ಮಾಹಿತಿಯನ್ನು ಮಹಾರಾಷ್ಟ್ರ ವಕ್ಫ್ ಮಂಡಳಿಯು ಮಾಹಿತಿ ಹಕ್ಕು ಕಾಯ್ದೆಯಡಿ (RTI) ನ್ಯಾಯವಾದಿ ಇಚಲಕರಂಜೀಕರ್ ಅವರಿಗೆ ತಿಳಿಸಿದೆ.

ದೇವಸ್ಥಾನಗಳ ವರದಿಗಳು ವೆಬ್‌ಸೈಟ್‌ನಲ್ಲಿ ಪ್ರಕಟವಾಗುತ್ತವೆ, ಆದರೆ ವಕ್ಫ್ ಬೋರ್ಡ್ ಮಾತ್ರ ವರ್ಷಗಟ್ಟಲೆ ಸರಕಾರಕ್ಕೆ ವರದಿಯನ್ನೇ ಸಲ್ಲಿಸುವುದಿಲ್ಲ! – ಹಿಂದೂ ವಿಧಿಜ್ಞ ಪರಿಷತ್ಒಂದೆಡೆ ಸರಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳು ತಮ್ಮ ಆಡಿಟ್ ವರದಿಗಳನ್ನು ಸ್ವತಃ ತಮ್ಮ ವೆಬ್‌ಸೈಟ್‌ನಲ್ಲಿ ಎಲ್ಲರಿಗಾಗಿ ಪ್ರಕಟಿಸುತ್ತವೆ. ಉದಾಹರಣೆಗೆ ಮುಂಬಯಿನ ಪ್ರಭಾದೇವಿಯಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಕೊಲ್ಲಾಪುರದ 3 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ನಿರ್ವಹಣೆ ಮಾಡುವ ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ. ಇನ್ನೊಂದೆಡೆ ವಕ್ಫ್ ಬೋರ್ಡ್ ರಾಜ್ಯ ಸರಕಾರಕ್ಕೂ ವರದಿ ನೀಡುತ್ತಿಲ್ಲ. ಹೀಗಿರುವಾಗ ವಕ್ಫ್ ಬೋರ್ಡ್‌ನ ವ್ಯವಹಾರಗಳು ಮುಸ್ಲಿಮರಿಗೆ ಅಥವಾ ಜನಸಾಮಾನ್ಯರಿಗೆ ತಿಳಿಯುವುದು ದೂರದ ಮಾತಾಯಿತು. ಇದನ್ನೆಲ್ಲ ನೋಡಿದರೆ ‘ವಕ್ಫ್ ಬೋರ್ಡ್ ಸರಕಾರದ ಅಳಿಯನೇ?’ ಎಂಬ ಪ್ರಶ್ನೆ ಮೂಡುತ್ತದೆ. |
ಸಂಪಾದಕೀಯ ನಿಲುವುಬರೋಬ್ಬರಿ 20 ವರ್ಷಗಳ ನಂತರ ಆಡಿಟ್ ವರದಿ ಸಲ್ಲಿಸುವುದನ್ನು ಏನೆನ್ನಬೇಕು? ಇದರಿಂದ ‘ಮಹಾರಾಷ್ಟ್ರ ವಕ್ಫ್ ಬೋರ್ಡ್ ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ಯಾರಾದರೂ ಹೇಳಿದರೆ, ಅದನ್ನು ತರ್ಕಬದ್ಧವಾಗಿ ಪ್ರತಿರೋಧಿಸಲು ಸಾಧ್ಯವೇ? |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ