ಬಾಂಗ್ಲಾದೇಶ: ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳ ಪಿತೂರಿ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಚುನಾವಣೆ ಗೆಲ್ಲಲು ಅತ್ಯಂತ ಅಸಹ್ಯಕರ ಯೋಜನೆಯೊಂದನ್ನು ರೂಪಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ಫೆಬ್ರವರಿ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಅಲ್ಪಸಂಖ್ಯಾತ ಹಿಂದೂ ಸಮಾಜದ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಗುಪ್ತಚರ ಮೂಲಗಳ ಮಾಹಿತಿಯ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅನೇಕ ನಾಯಕರು ಹಿಂದೂ ವಿರೋಧಿ ಭಾಷಣಗಳನ್ನು ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಮತಗಳ ಧ್ರುವೀಕರಣ ಮಾಡುವ ಯೋಜನೆಯಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ ಅಲ್ಲಿ ನಿರಪರಾಧಿ ಹಿಂದೂಗಳ ಹತ್ಯೆಗಳು ಯಾಕೆ ನಡೆಯುತ್ತಿವೆ? ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಹಿಂಸಾಚಾರ ಪ್ರಚೋದಿಸುವ ರಣತಂತ್ರ
ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವಂತೆ, ಕಳೆದ ವಾರ ಕೆಲವು ನಾಯಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ರಣತಂತ್ರವನ್ನು ರೂಪಿಸಲಾಗಿದೆ. ಈ ಸಂಚನ್ನು ಕಾರ್ಯಗತಗೊಳಿಸಲು ಕಟ್ಟರವಾದಿಗಳನ್ನು ಸಹ ಬಳಸಿಕೊಳ್ಳಲಾಗುತ್ತಿದೆ. ಅಧಿಕಾರಿಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮಾಜದ ಸ್ಥಿತಿ ಅತ್ಯಂತ ಆತಂಕಕಾರಿಯಾಗಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಿಂಸಾಚಾರ ಹೆಚ್ಚಾಗುವ ಸಾಧ್ಯತೆಯಿದೆ.
ಚುನಾವಣಾ ಚರ್ಚೆಯ ಹಾದಿ ತಪ್ಪಿಸುವ ಪ್ರಯತ್ನ
ಬಾಂಗ್ಲಾದೇಶದ ವಿದ್ಯಮಾನಗಳನ್ನು ಗಮನಿಸುತ್ತಿರುವ ತಜ್ಞರ ಪ್ರಕಾರ, ಈ ಬಾರಿ ಚುನಾವಣೆ ಅಭಿವೃದ್ಧಿ, ಸುರಕ್ಷತೆ ಅಥವಾ ಆರ್ಥಿಕ ವಿಷಯಗಳ ಮೇಲೆ ನಡೆಯುತ್ತಿಲ್ಲ. ಬದಲಾಗಿ ಸಂಪೂರ್ಣ ಚುನಾವಣಾ ಚರ್ಚೆಯು ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ನಿರೂಪಣೆಗಳ ಸುತ್ತವೇ ಸುತ್ತುತ್ತಿದೆ. ಮೂಲಗಳ ಪ್ರಕಾರ, ಕೆಲವು ನಾಯಕರು ಕಟ್ಟರವಾದಿಗಳನ್ನು
ಪ್ರಚೋದಿಸುತ್ತಾ, ಭಾರತವು ಶೇಖ್ ಹಸೀನಾ ಅವರಿಗೆ ಆಶ್ರಯ ನೀಡಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಬಾಂಗ್ಲಾದೇಶದ ಹಿಂದೂಗಳು ಭಾರತ ಬೆಂಬಲಿಗರಾಗಿದ್ದಾರೆ, ಆದ್ದರಿಂದ ಅವರಿಗೆ ದೇಶದಲ್ಲಿ ಇರಲು ಅಧಿಕಾರವಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ.
ಸುಳ್ಳು ಕಥೆಗಳ ಬಳಕೆ
ಮತ್ತೊಬ್ಬ ಅಧಿಕಾರಿಯ ಪ್ರಕಾರ, ಈ ಪಿತೂರಿಯ ಪ್ರಮುಖ ಭಾಗವೆಂದರೆ ಅಲ್ಪಸಂಖ್ಯಾತ ಹಿಂದೂ ಸಮಾಜದ ವಿರುದ್ಧ ಸುಳ್ಳು ಕಥೆಗಳನ್ನು ಸೃಷ್ಟಿಸುವುದು. ಹಿಂದೂಗಳ ಮೇಲೆ ಕಳ್ಳತನ ಮತ್ತು ಇತರ ಅಪರಾಧಗಳ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ, ಇದರಿಂದ ಸ್ಥಳೀಯ ಜನರು ಅವರ ವಿರುದ್ಧ ಹಿಂಸಾಚಾರಕ್ಕೆ ಇಳಿಯುವಂತೆ ಮಾಡಲಾಗುತ್ತಿದೆ. ಶೇಖ್ ಹಸೀನಾ ಅವರ ವಿಷಯವೂ ಚುನಾವಣಾ ರಾಜಕಾರಣದ ದೊಡ್ಡ ವಿಷಯವಾಗಿದೆ. ಅನೇಕ ಪಕ್ಷಗಳು ಅವರನ್ನು ಭಾರತ ಬೆಂಬಲಿಗ ಮತ್ತು ಬಾಂಗ್ಲಾದೇಶ ವಿರೋಧಿ ಎಂದು ಬಿಂಬಿಸುತ್ತಿವೆ. ಭಾರತವು ಹಸೀನಾ ಅವರಿಗೆ ಆಶ್ರಯ ನೀಡಿದೆ ಎಂದು ಆರೋಪಿಸಲಾಗುತ್ತಿದೆ, ಇನ್ನೊಂದೆಡೆ ಬಾಂಗ್ಲಾದೇಶವು ಅವರ ಹಸ್ತಾಂತರಕ್ಕೆ ಬೇಡಿಕೆಯಿಟ್ಟಿದೆ. ತಜ್ಞರ ಪ್ರಕಾರ, ಈ ರಣತಂತ್ರವು ಎಷ್ಟರ ಮಟ್ಟಿಗೆ ಯಶಸ್ವಿಯಾಗಬಹುದು ಎಂದು ಅಂದಾಜಿಸುವುದು ಕಷ್ಟ; ಆದರೆ ಬಾಂಗ್ಲಾದೇಶದ ಒಂದು ದೊಡ್ಡ ವರ್ಗವು ಪಾಕಿಸ್ತಾನದ ಜೊತೆಗಲ್ಲ, ಬದಲಾಗಿ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಇಚ್ಛಿಸುತ್ತದೆ.
‘ಜಮಾತ್-ಎ-ಇಸ್ಲಾಮಿ’ ಸಂಘಟನೆಗೆ ದೊಡ್ಡ ಲಾಭ
ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬುದು ದೊಡ್ಡ ಆತಂಕದ ವಿಷಯವಾಗಿದೆ. ಅಧಿಕಾರಿಗಳಿಗಳ ಪ್ರಕಾರ, ಬಾಂಗ್ಲಾದೇಶದ ಅನೇಕ ಹಿಂದೂ ಕುಟುಂಬಗಳು ಭಯದ ನೆರಳಿನಲ್ಲಿ ಬದುಕುತ್ತಿವೆ. ಹಿಂಸಾಚಾರ ಹೆಚ್ಚಾದರೆ ದೊಡ್ಡ ಸ್ಥರದಲ್ಲಿ ವಲಸೆ ಆರಂಭವಾಗಬಹುದು, ಇದರಿಂದ ಗಡಿ ಭಾಗಗಳ ಮೇಲೆ ಹೆಚ್ಚಿನ ಒತ್ತಡ ಕಂಡುಬರಲಿದೆ. ‘ಜಮಾತ್’ ಬೆಂಬಲಿಗ ಮಹಮ್ಮದ್ ಯೂನಸ್ ಅಧಿಕಾರಕ್ಕೆ ಬಂದ ನಂತರ ಗಡಿ ಭಾಗಗಳು ಈಗಾಗಲೇ ಸಂವೇದನಾಶೀಲವಾಗಿವೆ.
ಹಿಂದೂಗಳ ಜನಸಂಖ್ಯೆಯಲ್ಲಿ ಇಳಿಕೆ
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳೇನು ಹೊಸದಲ್ಲ. ಅನೇಕ ವರ್ಷಗಳಿಂದ ಇದು ನಡೆಯುತ್ತಲೇ ಬಂದಿದ್ದು, ಕಾಲಾನಂತರದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿಯೂ ಕುಸಿತ ಕಂಡಿದೆ. ಅಧಿಕಾರಿಗಳ ಪ್ರಕಾರ, ಈ ಬಾರಿಯ ಪರಿಸ್ಥಿತಿ ಹೆಚ್ಚು ಗಂಭೀರವಾಗಿದೆ; ಏಕೆಂದರೆ ಇದು ಕೇವಲ ಕಿರುಕುಳವಲ್ಲ, ಬದಲಾಗಿ ಮತ ಬ್ಯಾಂಕ್ ರಾಜಕಾರಣದ ಒಂದು ವ್ಯವಸ್ಥಿತ ಭಾಗವಾಗಿದೆ. ಈ ಬೆಳವಣಿಗೆಗಳು, ದೇಶದಲ್ಲಿ ಇಸ್ಲಾಮಿಕ್ ರಾಷ್ಟ್ರ ಸ್ಥಾಪನೆಗೆ ಬೇಡಿಕೆ ಇಡುತ್ತಿರುವ ಮತ್ತು ಸಂವಿಧಾನದ ಬದಲಿಗೆ ಶರಿಯತ್ ಕಾನೂನು ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿರುವ ನಾಯಕರ ನಡುವೆ ನಡೆಯುತ್ತಿವೆ. ಇಂತಹ ಉದ್ವಿಗ್ನ ವಾತಾವರಣದಲ್ಲಿ ಬಾಂಗ್ಲಾದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ನಿರ್ಮಾಣವಾಗಿದೆ.
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !