
ವಾಷಿಂಗ್ಟನ್ ಡಿಸಿ (ಅಮೆರಿಕ) – ಇಲ್ಲಿನ ‘ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್’ ಭಾರತದ ೩ ಪ್ರಾಚೀನ ಮತ್ತು ಅತ್ಯಂತ ಮಹತ್ವದ ವಿಗ್ರಹಗಳನ್ನು ಭಾರತ ಸರಕಾರಕ್ಕೆ ಮರಳಿ ನೀಡುವ ನಿರ್ಧಾರವನ್ನು ಘೋಷಿಸಿದೆ. ಈ ಮೂರೂ ವಿಗ್ರಹಗಳು ದಕ್ಷಿಣ ಭಾರತದ ಕಂಚಿನ ಶಿಲ್ಪಕಲೆಯ ಅತ್ಯುತ್ತಮ ಉದಾಹರಣೆಗಳೆಂದು ಪರಿಗಣಿಸಲಾಗಿದೆ. ಈ ವಿಗ್ರಹಗಳು ತಮಿಳುನಾಡಿನ ದೇವಾಲಯಗಳಿಗೆ ಸಂಬಂಧಿಸಿದ್ದವುಗಳಾಗಿವೆ. ಹಿಂತಿರುಗಿಸಲಾಗುವ ವಿಗ್ರಹಗಳಲ್ಲಿ ಚೋಳರ ಕಾಲದ ಶಿವ ನಟರಾಜ ವಿಗ್ರಹ, ಚೋಳರ ಕಾಲದ ಸೋಮಾಸ್ಕಂದ ವಿಗ್ರಹ ಮತ್ತು ವಿಜಯನಗರ ಕಾಲದ ಸಂತ ಸುಂದರರ್ ಮತ್ತು ಪರವೈ ಅವರ ಜಂಟಿ ವಿಗ್ರಹಗಳು ಸೇರಿವೆ.
ಶಿವ ನಟರಾಜ ವಿಗ್ರಹವು ಅಮೆರಿಕದಲ್ಲಿಯೇ ದೀರ್ಘಕಾಲದ ಸಾಲದ ಆಧಾರದ (ಗಿರಿವಿಯ) ಮೇಲೆ ಉಳಿಯಲಿದೆ
ಶಿವ ನಟರಾಜ ವಿಗ್ರಹವು ಭಾರತ ಸರಕಾರ ದೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಅಮೆರಿಕದಲ್ಲಿಯೇ ಉಳಿಯಲಿದೆ ಎಂದು ವಸ್ತುಸಂಗ್ರಹಾಲಯವು ಸ್ಪಷ್ಟಪಡಿಸಿದೆ. ಇದನ್ನು ದೀರ್ಘಕಾಲದ ಸಾಲದ ಆಧಾರದ ಮೇಲೆ ಅಲ್ಲಿಯೇ ಇರಿಸಲಾಗುವುದು. ಇದರರ್ಥ ವಿಗ್ರಹದ ಮಾಲೀಕತ್ವವು ಭಾರತದ್ದೇ ಆಗಿರುತ್ತದೆ; ಆದರೆ ವಸ್ತುಸಂಗ್ರಹಾಲಯದಲ್ಲಿ ಅದರ ಪ್ರದರ್ಶನವು ಮುಂದುವರಿಯುತ್ತದೆ. ಹಾಗೆಯೇ, ಈ ವಿಗ್ರಹವನ್ನು ದೇವಸ್ಥಾನದಿಂದ ತೆಗೆದುಹಾಕಿದ್ದರಿಂದ ಹಿಡಿದು ಭಾರತಕ್ಕೆ ಮರಳಿ ನೀಡುವವರೆಗಿನ ಸಂಪೂರ್ಣ ಇತಿಹಾಸವನ್ನು ಜನರ ಮುಂದೆ ಇಡಲಾಗುವುದು ಎನ್ನಲಾಗಿದೆ.
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump